ಗೋಲ್ಡ್‌ ಕೋಸ್ಟ್‌ನಲ್ಲಿ ನಿರಾಸೆ ಮೂಡಿಸಿದ ಮನೋಜ್‌; ತನ್ವಾರ್‌ಗೆ ಕಂಚು

೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ನಿರೀಕ್ಷೆ ಮೂಡಿಸಿದ್ದ ಮನೋಜ್ ಕುಮಾರ್ ನಿರಾಸೆ ಮೂಡಿಸಿದರು. ಶುಕ್ರವಾರ (ಏ.೧೩) ಭಾರತದ ಐವರು ಬಾಕ್ಸರ್‌ಗಳು ಫೈನಲ್ ತಲುಪಿದರಾದರೂ, ಮೂವರು ಕಂಚಿನ ಪದಕಕ್ಕೆ ತೃಪ್ತರಾದರು. ತನ್ವಾರ್ ಮತ್ತು ಮೊಹಮದ್ ಕೂಡ ಕಂಚಿಗೆ ತೃಪ್ತರಾದರು

ಗೋಲ್ಡ್ ಕೋಸ್ಟ್‌ ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ನಾಮನ್ ತನ್ವಾರ್ ಕಂಚಿಗೆ ತೃಪ್ತರಾದರು. ೯೧ ಕೆಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದ ಅವರು ಆಸ್ಟ್ರೇಲಿಯಾದ ಜೇಸನ್ ವಾಟಿಲೆ ವಿರುದ್ಧ ಸೋಲನುಭವಿಸಿದರು. ಇತ್ತ, ೫೬ ಕೆಜಿ ವಿಭಾಗದ ಮತ್ತೊಂದು ಸೆಮಿಫೈನಲ್ ಬೌಟ್‌ನಲ್ಲಿ ಮೊಹಮದ್ ಹುಸಾಮುದ್ದೀನ್ ಕೂಡ ಇಂಗ್ಲೆಂಡ್‌ನ ಮತ್ತೋರ್ವ ಬಾಕ್ಸರ್ ಪೀಟರ್ ಮೆಕ್‌ಗ್ರೇಲ್ ವಿರುದ್ಧ ೦-೫ ಅಂತರದಿಂದ ಸೋಲನುಭವಿಸಿ ತೃತೀಯ ಸ್ಥಾನ ಪಡೆದರು.

ತಾಂಜೇನಿಯಾದ ಹರುನಾ ಹ್ಯಾಂಡೊ ವಿರುದ್ಧದ ೯೧ ಕೆಜಿ ವಿಭಾಗದ ಬೌಟ್‌ನಲ್ಲಿ ತನ್ವಾರ್ ಅವಿರೋಧವಾಗಿ ಜಯಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿನ ಈ ಹಣಾಹಣಿಯಲ್ಲಿ ತಾಂಜೇನಿಯಾ ಬಾಕ್ಸರ್ ವಿರುದ್ಧ ತನ್ವಾರ್ (೩೦-೨೬, ೩೦-೨೫, ೩೦-೨೬, ೩೦-೨೪, ೩೦-೨೧೪) ಗೆಲುವು ಪಡೆದು ಸೆಮಿಫೈನಲ್ ತಲುಪಿದ್ದರು. ಮಂಗಳವಾರ (ಏ.೧೨) ಸಮೋವಾದ ಫ್ರಾಂಕ್ ಮಸೊಯಿ ವಿರುದ್ಧ ೫-೦ ಅಂತರದಲ್ಲಿ ಗೆದ್ದಿದ್ದ ತನ್ವಾರ್, ಇಂದಿನ ಸೆಮಿಫೈನಲ್‌ಗೆ ಅರ್ಹತೆ ಗಳಿಸಿದ್ದರು. ಮೊದಲ ಬಾರಿಗೆ ಕಾಮನ್ವೆಲ್ತ್ ಕೂಟದಲ್ಲಿ ಸ್ಪರ್ಧಿಸಿದ್ದ ತನ್ವಾರ್, ಪದಕ ಗೆಲ್ಲುವಲ್ಲಿ ಯಶ ಕಂಡರು.

ಇನ್ನು, ಮಂಗಳವಾರ ಕ್ವಾರ್ಟರ್‌ಫೈನಲ್ ಕಾದಾಟದಲ್ಲಿ ಜಾಂಬಿಯಾದ ಮುಲೆಂಗಾ ಎವರಿಸ್ಟೊ ವಿರುದ್ಧ ೫-೦ ಅಂತರದಲ್ಲಿ ಹುಸಾಮುದ್ದೀನ್ ಗೆಲುವು ಪಡೆದು ಸೆಮಿಫೈನಲ್‌ಗೆ ಧಾವಿಸಿದ್ದರು. ಶಕ್ತಿಶಾಲಿ ಹಾಗೂ ಸಿಡಿಲಿನ ಪಂಚ್‌ಗಳಿಂದ ಗಮನ ಸೆಳೆದಿದ್ದ ಹುಸಾಮುದ್ದೀನ್ ೫-೦ ಅಂತರದಲ್ಲಿ ಅವಿರೋಧವಾಗಿ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿದ್ದರು. ಆದರೆ, ಇಂದಿನ ಉಪಾಂತ್ಯದ ಗುದ್ದಾಟದಲ್ಲಿ ಇಂಗ್ಲೆಂಡ್‌ನ ಮ್ಯಾಕ್‌ಗ್ರೇಲ್ ಎದುರು ಅವರು ಅಷ್ಟೇ ನೀರಸವಾಗಿ ಸೆಣಸಿ ತೃತೀಯ ಸ್ಥಾನಕ್ಕೆ ಕುಸಿದರು. ಇತ್ತ, ಪುರುಷರ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನುಭವಿ ಬಾಕ್ಸರ್ ಮನೋಜ್ ಕುಮಾರ್ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದರು. ಇಂಗ್ಲೆಂಡ್‌ನ ಪ್ಯಾಟ್ ಮೆಕ್‌ಕಾರ್ಮ್ಯಾಕ್ ಎದುರು ಹಿನ್ನಡೆ ಅನುಭವಿಸಿದರು.

ಇದನ್ನೂ ಓದಿ : ಮೇರಿ ಫೈನಲ್‌ಗೆ; ಸೆಮಿ ತಲುಪಿದ ವಿಕಾಸ್, ಸೋಲಂಕಿಯಿಂದ ಪದಕ ಖಚಿತ

ಸತೀಶ್, ವಿಕಾಸ್ ಭರವಸೆ: ಬಾಕ್ಸಿಂಗ್ ವಿಭಾಗದಲ್ಲಿ ಬಂದ ಮೂರೂ ಪದಕಗಳು ಕಂಚಾದರೂ, ಸತೀಶ್ ಕುಮಾರ್ ಹಾಗೂ ವಿಕಾಸ್ ಕೃಷ್ಣನ್ ಫೈನಲ್ ತಲುಪಿ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ೭೫ ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಸ್ಟೀವ್ ಡೊನೆಲಿಯನ್ನು ಸತೀಶ್ ಮಣಿಸಿದರೆ, ತದನಂತರದ ಇನ್ನೊಂದು ಸೆಮಿಫೈನಲ್ ಬೌಟ್‌ನಲ್ಲಿ ಸತೀಶ್ ಕುಮಾರ್ (+೯೧ ಕೆಜಿ) ಸೇಶೆಲ್ಸ್‌ನ ಕೆಡ್ಡಿ ಆಗ್ನೆಸ್ ವಿರುದ್ಧ ಜಯ ಪಡೆದರು. ಶನಿವಾರ (ಏ.೧೪) ನಡೆಯಲಿರುವ ಫೈನಲ್‌ನಲ್ಲಿ ಈ ಇಬ್ಬರೂ ರಿಂಗ್‌ಗಿಳಿಯಲಿದ್ದು, ಬಂಗಾರ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More