ಶೂಟಿಂಗ್‌ನಲ್ಲಿ ಮತ್ತೊಂದು ಬಂಗಾರದ ಪದಕ ತಂದಿತ್ತ ಸಂಜೀವ್ ರಜಪೂತ್‌

ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ೧೧ನೇ ಕಾಮನ್ವೆಲ್ತ್ ಕ್ರೀಡಾಕೂಟದ ಸಮಾರೋಪಕ್ಕೆ ಕ್ಷಣಗಣನೆ ಶುರುವಾಗಿರುವಂತೆ ಭಾರತ ಕೂಡ ಪದಕ ಗಳಿಕೆಯಲ್ಲಿ ದಾಖಲೆ ಬರೆದಿದೆ. ಶನಿವಾರ ಮೇರಿ ಕೋಮ್ ಸ್ವರ್ಣ ಗೆದ್ದ ಬೆನ್ನಿಗೇ ಶೂಟಿಂಗ್‌ನಲ್ಲಿ ಸಂಜೀತ್ ರಜಪೂತ್ ಭಾರತಕ್ಕೆ ೨೦ನೇ ಚಿನ್ನ ತಂದಿತ್ತರು

೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ೨೦ ಚಿನ್ನದ ಪದಕ ಗೆದ್ದ ಸಾಧನೆಗೆ ಸಂಜೀತ್ ರಜಪೂತ್ ಕೂಡ ಬೆಂಬಲ ನೀಡಿದರು. ಆದರೆ, ಪ್ರಸ್ತುತ ಕೂಟದಲ್ಲಿ ಭಾರತ ಮತಷ್ಟು ಚಿನ್ನ ಗೆಲ್ಲುವ ಅವಕಾಶವನ್ನು ನಿರ್ಮಿಸಿಕೊಂಡಿದೆ. ಮುಖ್ಯವಾಗಿ, ಮಹಿಳೆಯರ ಸಿಂಗಲ್ಸ್ ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ ನಿಕ್ಕಿಯಾಗಿದೆ. ಭಾರತದ ಸ್ಟಾರ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ ವಿ ಸಿಂಧು ಮೊದಲೆರಡು ಸ್ಥಾನಕ್ಕಾಗಿ ಸೆಣಸುತ್ತಿದ್ದಾರೆ. ಇತ್ತ, ಪುರುಷರ ವಿಭಾಗದಲ್ಲಿಯೂ ಭಾರತ ಸ್ವರ್ಣ ಗೆಲ್ಲುವ ಲಕ್ಷಣಗಳು ನಿಚ್ಚಳವಾಗಿದೆ.

ವಿಶ್ವದ ನಂ.೧ ಆಟಗಾರ ಕಿಡಾಂಬಿ ಶ್ರೀಕಾಂತ್ ಫೈನಲ್‌ಗೆ ತಲುಪಿದ್ದು, ಅಂತಿಮ ಸುತ್ತಿನಲ್ಲಿ ಮಲೇಷ್ಯಾ ಆಟಗಾರ ಚೆನ್ ಲಾಂಗ್ ವೀ ವಿರುದ್ಧ ಕಾದಾಡಲಿದ್ದಾರೆ. ಅಂದಹಾಗೆ, ಸೆಮಿಫೈನಲ್‌ನಲ್ಲಿ ವೀ, ಭಾರತದ ಮತ್ತೋರ್ವ ಸಿಂಗಲ್ಸ್ ಆಟಗಾರ ಎಚ್ ಎಸ್ ಪ್ರಣಯ್ ವಿರುದ್ಧ ಗೆಲುವು ಪಡೆದರು. ಇನ್ನು, ಟೇಬಲ್ ಟೆನಿಸ್‌ನಲ್ಲಿ ಮಣಿಕಾ ಬಾತ್ರಾ ಫೈನಲ್ ತಲುಪಿದ್ದು, ಹಾಕಿಯಲ್ಲಿ ವನಿತೆಯರ ಪದಕ ಕನಸು ಭಗ್ನವಾಗಿದೆ. ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿಂದು, ರಿತು ರಾಣಿ ಸಾರಥ್ಯದ ಭಾರತ ವನಿತಾ ತಂಡ ಇಂಗ್ಲೆಂಡ್ ವನಿತೆಯರ ಎದುರು ೦-೬ ಗೋಲುಗಳಿಂದ ಸೋತು ಬರಿಗೈಯಲ್ಲಿ ತವರಿನ ಹಾದಿ ಹಿಡಿದಿದೆ.

ಇನ್ನು, ಶನಿವಾರ ಬೆಲ್ಮಾಂಟ್ ಶೂಟಿಂಗ್ ಸೆಂಟರ್‌ನಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಸಂಜೀವ್ ರಜಪೂತ್ ಪುರುಷರ ೫೦ ಮೀಟರ್ ರೈಫಲ್ ೩ ಪೊಸಿಷನ್‌ನಲ್ಲಿ ಸ್ವರ್ಣ ಸಾಧಕನೆನಿಸಿದರು. ೩೭ರ ಹರೆಯದ ಸಂಜೀವ್ ಅರ್ಹತಾ ಸುತ್ತಿನಲ್ಲಿ ೧೧೮೦ ಪಾಯಿಂಟ್ಸ್ ಕಲೆಹಾಕಿ ಮೊದಲ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು. ಪದಕ ಸುತ್ತಿನಲ್ಲಿಯೂ ನಿಖರ ಗುರಿಯಿಂದ ೪೫೪.೫ ಪಾಯಿಂಟ್ಸ್ ಪೇರಿಸಿದ ಸಂಜೀವ್, ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು. ಆದರೆ, ಇದೇ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೋರ್ವ ಶೂಟರ್ ಚೈನ್ ಸಿಂಗ್ ಫೈನಲ್‌ನಲ್ಲಿ ೪೧೯.೧ ಪಾಯಿಂಟ್ಸ್ ಗಳಿಸಿ ಐದನೇ ಸ್ಥಾನ ಪಡೆದರು.

ಇದನ್ನೂ ಓದಿ : ಗೋಲ್ಡ್‌ಕೋಸ್ಟ್‌ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ ಮಾಲೆ ತೊಡಿಸಿದ ಶ್ರೇಯಸಿ

ಅರ್ಹತಾ ಸುತ್ತಿನಲ್ಲಿ ರಜಪೂತ್ ಮೊಣಕಾಲೂರಿ ಗುರಿ ಇಡುವ ಸ್ಪರ್ಧೆಯಲ್ಲಿ ೩೯೧ ಪಾಯಿಂಟ್ಸ್ ಗಳಿಸಿದರೆ, ಬೋರಲು ಬಿದ್ದು ಗುರಿ ಇಡುವ ವಿಭಾಗದಲ್ಲಿ ೩೯೯ ಮತ್ತು ನಿಂತುಕೊಂಡು ೩೯೦ ಸ್ಕೋರ್ ಮಾಡಿದರು. ಈ ಮೂರೂ ವಿಭಾಗಗಳಲ್ಲಿ ಚೈನ್ ಸಿಂಗ್ ೩೮೯, ೩೯೮ ಮತ್ತು ೩೭೯ ಸ್ಕೋರ್‌ನೊಂದಿಗೆ ಒಟ್ಟಾರೆ ೧,೧೬೬ ಪಾಯಿಂಟ್ಸ್ ಗಳಿಸಿದ ಚೈನ್ ಸಿಂಗ್ ದ್ವಿತೀಯ ಸ್ಥಾನ ಗಳಿಸಿದ್ದರು. ಆದರೆ, ಫೈನಲ್‌ನಲ್ಲಿ ಎದುರಾದ ತೀವ್ರ ಪೈಪೋಟಿಯಿಂದಾಗಿ ಅವರು ಪದಕ ಗೆಲ್ಲಲು ಅಸಮರ್ಥರಾದರು.

ಇನ್ನುಳಿದಂತೆ, ಈ ವಿಭಾಗದಲ್ಲಿ ಕೆನಡಾದ ಗ್ರೆಜೆಗೋರ್ಜ್ ಸಿಖ್ ೪೪೮.೪ ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಪದಕ ಜಯಿಸಿದರೆ, ಇಂಗ್ಲೆಂಡ್‌ನ ಡೀನ್ ಬೇಲ್ ೪೪೧.೨ ಪಾಯಿಂಟ್ಸ್ ಗಳಿಸಿ ಕಂಚಿಗೆ ಕೊರಳೊಡ್ಡಿದರು. ಅಂದಹಾಗೆ, ಈ ಹಿಂದೆ ೨೦೧೪ರ ಗ್ಲಾಸ್ಗೊ ಕಾಮನ್ವೆಲ್ತ್ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ರಜಪೂತ್, ಅದಕ್ಕೂ ಹಿಂದಿನ ೨೦೦೬ರ ಮೆಲ್ಬೋರ್ನ್ ಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತರಾಗಿದ್ದರು. ಹೀಗಾಗಿ, ಈ ಬಾರಿ ಅವರು ಚಿನ್ನಕ್ಕೆ ಗುರಿ ಇಟ್ಟು ಮೊದಲ ಕಾಮನ್ವೆಲ್ತ್ ಸ್ವರ್ಣ ಪದಕದ ಸಂಭ್ರವ ಆಚರಿಸಿಕೊಂಡಂತಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More