ಚೊಚ್ಚಲ ಕಾಮನ್ವೆಲ್ತ್ ಗೋಲ್ಡ್‌ಗಾಗಿ ಸೈನಾ ವಿರುದ್ಧ ಸಿಂಧು ಹೋರಾಟ

ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮತ್ತೊಂದು ಕೌತುಕ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೂಟದ ಕೊನೆಯ ದಿನವಾದ ಭಾನುವಾರ (ಏ.೧೪) ಸಿಂಧು ಚೊಚ್ಚಲ ಕಾಮನ್ವೆಲ್ತ್ ಸ್ವರ್ಣಕ್ಕಾಗಿ ಪ್ರಚಂಡ ಫಾರ್ಮ್‌ನಲ್ಲಿರುವ ಸೈನಾ ನೆಹ್ವಾಲ್ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ

ಭಾರತೀಯ ಬ್ಯಾಡ್ಮಿಂಟನ್‌ಪ್ರಿಯರ ಕೌತುಕ ಮೇರೆ ಮೀರುವಂತೆ ಮಾಡಿದ್ದಾರೆ ಸ್ಟಾರ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ ವಿ ಸಿಂಧು. ಅನುಭವಿ ಹಾಗೂ ಆಕ್ರಮಣಕಾರಿ ಪ್ರದರ್ಶನ ನೀಡುವಷ್ಟು ಶಕ್ತಿಶಾಲಿಯಾದ ಈ ಇಬ್ಬರ ಹೋರಾಟವನ್ನು ಕಣ್ತುಂಬಿಕೊಳ್ಳಲು ಇಬ್ಬರ ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ. ಶನಿವಾರ (ಏ.೧೪) ನಡೆದ ಎರಡು ಪ್ರತ್ಯೇಕ ಸಿಂಗಲ್ಸ್ ಪಂದ್ಯಗಳಲ್ಲಿ ಸಿಂಧು ಮತ್ತು ಸೈನಾ ಗೆಲುವು ಸಾಧಿಸಿ ಪದಕ ಸುತ್ತಿಗೆ ಧಾವಿಸಿದರು.

ಕೆನಡಾ ಆಟಗಾರ್ತಿ ಮಿಶೆಲಿ ಲಿ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ೨೧-೧೮, ೨೧-೮ರಿಂದ ಜಯ ಪಡೆದರೆ, ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಸ್ಕಾಟ್ಲೆಂಡ್ ಆಟಗಾರ್ತಿ ಕಿರ್ಸ್ಟಿ ಗಿಲ್ಮೋರ್ ಒಡ್ಡಿದ ಪ್ರಬಲ ಪ್ರತಿರೋಧವನ್ನು ೨೧-೧೪, ೧೮-೨೧, ೨೧-೧೭ರಿಂದ ಗೆಲುವು ಸಾಧಿಸಿದರು ಸೈನಾ. ಅಂದಹಾಗೆ, ಪ್ರಸ್ತುತ ಕೂಟದಲ್ಲಿ ಸಿಂಧು ಮತ್ತು ಸೈನಾ ಅಜೇಯ ಯಾತ್ರೆ ಮುಂದುವರಿಸಿದ್ದು, ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿ ಇನ್ನಷ್ಟು ರೋಚಕವಾಗಿರುವ ಸಾಧ್ಯತೆಗಳನ್ನು ಹೆಚ್ಚಿಸಿದೆ.

ಅಂದಹಾಗೆ, ಮಿಶ್ರ ಟೀಂ ವಿಭಾಗದಲ್ಲಿ ಭಾರತದ ಪರ ಸೈನಾ ಹೋರಾಟ ನಡೆಸಿದರಾದರೂ, ಸಿಂಧು ಮಾತ್ರ ಯಾವುದೇ ಪಂದ್ಯದಲ್ಲಿಯೂ ಭಾಗವಹಿಸಿರಲಿಲ್ಲ. ಅವರು ಸಿಂಗಲ್ಸ್ ಪಂದ್ಯಗಳಲ್ಲಷ್ಟೇ ಸೆಣಸಿದ್ದಾರೆ. ಹೀಗಾಗಿ, ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಸೈನಾ ಸಾಕಷ್ಟು ಬಳಲಿದ್ದು, ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಇದರ ಲಾಭ ಪಡೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ ಒಡ್ಡುವ ಪ್ರತಿರೋಧದ ತಂತ್ರ ಹೇಗಿರುತ್ತದೆ ಎಂಬುದು ಮಾತ್ರ ಕುತೂಹಲ ಕೆರಳಿಸಿದೆ.

ಶ್ರೀಕಾಂತ್-ಚಾಂಗ್ ವೀ ಕಾದಾಟ: ಇತ್ತ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ.೧ ಆಟಗಾರ ಕಿಡಾಂಬಿ ಶ್ರೀಕಾಂತ್ ಕೂಡ ಫೈನಲ್ ತಲುಪಿದ್ದು, ಭಾನುವಾರ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಮಲೇಷ್ಯಾ ಆಟಗಾರ ಲೀ ಚಾಂಗ್ ವೀ ವಿರುದ್ಧ ಸೆಣಸಲಿದ್ದಾರೆ. ಶ್ರೀಕಾಂತ್ ಇಂದು ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್‌ನ ರಾಜೀವ್ ಔಸೆಫ್ ವಿರುದ್ಧ ೨೧-೧೦, ೨೧-೧೭ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆದರು. ಇತ್ತ, ಇನ್ನೊಂದು ಸೆಮಿಫೈನಲ್‌ನಲ್ಲಿ ಚಾಂಗ್ ವೀ, ಭಾರತದ ಯುವ ಆಟಗಾರ ಎಚ್ ಎಸ್ ಪ್ರಣಯ್ ವಿರುದ್ಧದ ಮೂರು ಗೇಮ್‌ಗಳ ಆಟದಲ್ಲಿ ೨೧-೧೬, ೯-೨೧, ೨೧-೧೪ರಿಂದ ಗೆಲುವು ಪಡೆದರು.

ಪ್ರಣಯ್‌ಗೆ ನಿರಾಸೆ: ಮಲೇಷ್ಯಾ ಆಟಗಾರನ ವಿರುದ್ಧ ಸೋಲನುಭವಿಸಿದರೂ, ಕಂಚು ಗೆಲ್ಲುವ ಅವಕಾಶ ಪ್ರಣಯ್‌ಗೆ ಇತ್ತಾದರೂ, ಮತ್ತೊಂದು ಮೂರು ಗೇಮ್‌ಗಳ ಆಟದಲ್ಲಿ ಅವರು ಸೋಲನುಭವಿಸಿದರು. ಭಾರತೀಐ ಮೂಲದ ಇಂಗ್ಲೆಂಡ್ ಆಟಗಾರ ರಾಜೀವ್ ಔಸೆಫ್ ವಿರುದ್ಧದ ಹಣಾಹಣಿಯಲ್ಲಿ ಮೊದಲ ಗೇಮ್ ಅನ್ನು ೨೧-೧೭೬ರಿಂದ ಪ್ರಣಯ್ ಗೆದ್ದು ಆರಂಭಿಕ ಮುನ್ನಡೆ ಸಾಧಿಸಿದ ಹೊರತಾಗಿಯೂ, ತದನಂತರದ ಎರಡೂ ಗೇಮ್‌ಗಳಲ್ಲಿ ಅವರು ವಿಫಲವಾದರು.

ಮೊದಲ ಗೇಮ್‌ನ ವೈಫಲ್ಯದಿಂದ ಕಂಗೆಡೆದ ಔಸೆಫ್, ಎರಡನೇ ಗೇಮ್‌ನಲ್ಲಿ ಭೀಕರ ಆಟವಾಡಿದರು. ಅವರಿಗೆ ತಕ್ಕಂತೆ ಪ್ರಣಯ್ ಕೂಡ ಅಬ್ಬರದ ಸ್ಮ್ಯಾಶ್ ಮತ್ತು ಕರಾರುವಾಕ್ ಶಾಟ್‌ಗಳಿಂದ ಪ್ರತಿರೋಧ ಒಡ್ಡಿದರು. ಅತೀವ ಜಿದ್ದಾಜಿದ್ದಿಗೆ ತಿರುಗಿದ ಈ ಗೇಮ್‌ನಲ್ಲಿ ಪ್ರಣಯ್ ೨೩-೨೫ರಿಂದ ಹಿನ್ನಡೆ ಅನುಭವಿಸಿದರು. ಇನ್ನು, ಕೊನೆಯ ಹಾಗೂ ನಿರ್ಣಾಯಕ ಗೇಮ್‌ನಲ್ಲಂತೂ ಪ್ರಣಯ್ ನೀರಸ ಆಟವಾಡಿದರು. ಕೇವಲ ೯ ಪಾಯಿಂಟ್ಸ್‌ಗಳನ್ನಷ್ಟೇ ಗಳಿಸಲು ಶಕ್ತರಾದ ಅವರು ಅಂತಿಮವಾಗಿ ೯-೨೧ರಿಂದ ಇಂಗ್ಲೆಂಡ್ ಆಟಗಾರನ ಎದುರು ಪರಾಭವಗೊಂಡರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More