ಮನದನ್ನೆ ಆಶಿಕಾ ಕೈಹಿಡಿದು ವೈವಾಹಿಕ ಬದುಕಿಗೆ ಕಾಲಿಟ್ಟ ಮಯಾಂಕ್ ಅಗರ್ವಾಲ್

ಕರ್ನಾಟಕದ ಸ್ಫೋಟಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಸೋಮವಾರ (ಜೂ.೪) ವೈವಾಹಿಕ ಬದುಕಿಗೆ ಕಾಲಿಟ್ಟರು. ಆಶಿಕಾ ಸೂದ್ ಅವರೊಂದಿಗೆ ಈ ವರ್ಷದ ಆರಂಭದಲ್ಲಿ ವಿವಾಹ ನಿಶ್ಚಯ ಮಾಡಿಕೊಂಡಿದ್ದ ಈ ಪ್ರತಿಭಾನ್ವಿತ ಬ್ಯಾಟ್ಸ್‌ಮನ್, ಇದೀಗ ನೂತನ ಬದುಕಿಗೆ ಕಾಲಿರಿಸಿದ್ದಾರೆ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಐಪಿಎಲ್‌ನಲ್ಲಿ ಪ್ರತಿನಿಧಿಸುವ ಕರ್ನಾಟಕ ತಂಡದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ತಮ್ಮ ಸುದೀಘ ಕಾಲದ ಗೆಳತಿ ಆಶಿತಾ ಸೂದ್ ಅವರನ್ನು ವರಿಸಿದರು. ಮಯಾಂಕ್ ಮದುವೆ ಸಮಾರಂಭಕ್ಕೆ ಸಾಕ್ಷಿಯಾದವರ ಪೈಕಿ ಒಬ್ಬರಾದ ಕರ್ನಾಟಕದ ಮತ್ತೋರ್ವ ಕ್ರಿಕೆಟಿಗ ಕೆ ಎಲ್ ರಾಹುಲ್ ಸಹಕ್ರಿಕೆಟಿಗನ ಮದುವೆ ಸಂಭ್ರಮದ ಫೋಟೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಶಿತಾ ಅವರಲ್ಲಿ ಆಕರ್ಷಿತರಾಗಿದ್ದ ಮಯಾಂಕ್ ಇದೇ ವರ್ಷದ ಆರಂಭದಲ್ಲಿ ಅವರಲ್ಲಿ ವಿವಾಹ ಪ್ರಸ್ತಾಪ ಮುಂದಿಟ್ಟಿದ್ದರು. ಅಲ್ಲಿಂದಾಚೆಗೆ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಹಾಕಿಕೊಂಡಿತ್ತು. ಅಂತಹ ಫೋಟೋ ಒಂದರಲ್ಲಿ ಮಯಾಂಕ್, "ಇದರೊಂದಿಗೆ ಮುಂದಿನ ದಿನಗಳಲ್ಲಿ ಜೀವನದ ಸಂಗಾತಿಯಾಗುವುದನ್ನು ಕನವರಿಸುತ್ತಿದ್ದೇವೆ. ಆ ದಿನದ ಸಂಭ್ರಮವನ್ನು ಈಗಿನಿಂದಲೇ ಆಚರಿಸಿಕೊಳ್ಳೋಣ,'' ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ : ಡಾನ್ ಬ್ರಾಡ್ಮನ್‌, ಸಚಿನ್‌ಗೂ ಸೆಡ್ಡು ಹೊಡೆದರೇ ಮಾಯಾವಿ ಮಯಾಂಕ್?

ಬಲಗೈ ಬ್ಯಾಟ್ಸ್‌ಮನ್ ಮಯಾಂಕ್, ಈ ಋತುವಿನ ಐಪಿಎಲ್‌ನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ೧೧ ಪಂದ್ಯಗಳನ್ನಾಡಿದ ಅವರು, ಒಂದು ಬಾರಿ ೩೦ ರನ್ ಗಳಿಸಿದ್ದನ್ನೂ ಸೇರಿದಂತೆ ಕಲೆಹಾಕಿದ್ದು ಕೇವಲ ೧೨೦ ರನ್‌ಗಳನ್ನಷ್ಟೆ. ಇಷ್ಟಾದರೂ, ರಣಜಿ ಸೇರಿದ ದೇಶೀಯ ಕ್ರಿಕೆಟ್‌ನಲ್ಲಿ ೨ ಸಹಸ್ರಕ್ಕೂ ಹೆಚ್ಚು ರನ್ ಕಲೆಹಾಕಿ ದಾಖಲೆ ಬರೆದಿದ್ದರು. ಇಷ್ಟಾದರೂ, ಅವರು ರಾಷ್ಟ್ರೀಯ ತಂಡವನ್ನು ಸೇರಲು ಸಾಧ್ಯವಾಗಿರಲಿಲ್ಲ.

ಆದರೆ, ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಮಯಾಂಕ್, ಜುಲೈ ೧೬ ಮತ್ತು ೧೯ರಿಂದ ಶುರುವಾಗಲಿರುವ ಎರಡು ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆಸಮಿತಿಯ ಗಮನ ಸೆಳೆಯಲು ತೀರ್ಮಾನಿಸಿದ್ದಾರೆ. ಕರ್ನಾಟಕದ ಮತ್ತೋರ್ವ ಪ್ರತಿಭಾನ್ವಿತ ಆಟಗಾರ ಕರುಣ್ ನಾಯರ್ ಇಂಗ್ಲೆಂಡ್ ಎ ತಂಡದ ವಿರುದ್ಧದ ಈ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More