ಕನಿಷ್ಠ ಗೋಲುಗಳ ಇತಿಹಾಸ ಬರೆದ ಇಟಲಿಯಲ್ಲಿ ಪಶ್ಚಿಮ ಜರ್ಮನಿಗೆ ಮೂರನೇ ಪಟ್ಟ!

ಮೂರು ಬಾರಿಯ ಚಾಂಪಿಯನ್ ಇಟಲಿ ಆತಿಥ್ಯದಲ್ಲಿ ನಡೆದ ೧೯೯೦ರ ಹದಿನಾಲ್ಕನೇ ವಿಶ್ವಕಪ್ ಪಶ್ಚಿಮ ಜರ್ಮನಿಯ ಪಾಲಾಯಿತು. ೧೯೫೪, ೧೯೭೪ರಲ್ಲಿ ಪ್ರಶಸ್ತಿ ಸವಿ ಸವಿದಿದ್ದ ಪಶ್ಚಿಮ ಜರ್ಮನಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಆ ಮೂಲಕ ಬ್ರೆಜಿಲ್, ಇಟಲಿಯ ಸಾಧನೆಯನ್ನು ಸರಿಗಟ್ಟಿತು

ಜೂನ್ ೮ರಿಂದ ಜುಲೈ ೮ರವರೆಗೆ ೩೧ ದಿನಗಳ ಕಾಲ ನಡೆದ ಹದಿನಾಲ್ಕನೇ ಫಿಫಾ ವಿಶ್ವಕಪ್ ಪಂದ್ಯಾವಳಿ ಎರಡನೇ ಬಾರಿಗೆ ಇಟಲಿಯಲ್ಲಿ ನಡೆಯಿತು. ಈ ಹಿಂದೆ ೧೯೩೪ರಲ್ಲಿ ನಡೆದ ಎರಡನೇ ಫಿಫಾ ವಿಶ್ವಕಪ್‌ಗೆ ಇಟಲಿ ಆತಿಥ್ಯ ಹೊತ್ತಿತ್ತು. ಅಂದಹಾಗೆ, ಹೀಗೆ ಎರಡು ಬಾರಿ ಆತಿಥ್ಯ ಹೊತ್ತ ರಾಷ್ಟ್ರಗಳ ಪೈಕಿ ಫ್ರಾನ್ಸ್ (೧೯೩೮, ೧೯೯೮), ಮೆಕ್ಸಿಕೋ (೧೯೭೦, ೧೯೮೬), ಜರ್ಮನಿ (೧೯೭೪, ೨೦೦೬) ಮತ್ತು ಬ್ರೆಜಿಲ್ (೧೯೫೦, ೨೦೧೪) ಸ್ಥಾನ ಪಡೆದಿವೆ.

ಇನ್ನು, ಈ ಹದಿನಾಲ್ಕನೇ ಫಿಫಾ ವಿಶ್ವಕಪ್ ಚರಿತ್ರೆಯಲ್ಲೇ ಅತ್ಯಂತ ನಿಕೃಷ್ಟ ಗೋಲುಗಳ ದಾಖಲೆ ಹೊಂದಿದೆ. ೨೪ ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಪಂದ್ಯವೊಂದಕ್ಕೆ ದಾಖಲಾದ ಗೋಲಿನ ಸರಾಸರಿ ಕೇವಲ ೨.೨೧ ಮಾತ್ರವೇ. ಈ ನಿಕೃಷ್ಟ ಗೋಲಿನ ದಾಖಲೆ ಇಲ್ಲೀವರೆಗೂ ಹಾಗೆ ಉಳಿದಿದೆ. ಗೋಲುಗಳ ಬರದಿಂದಾಗಿ ಇದೇ ಮೊದಲ ಬಾರಿಗೆ ಎರಡೂ ಸೆಮಿಫೈನಲ್ ಪಂದ್ಯಗಳು ಶೂಟೌಟ್‌ನಲ್ಲಿ ನಿರ್ಧರಿತವಾಗುವಂತಾಯಿತು. ಏತನ್ಮಧ್ಯೆ, ಈ ಪಂದ್ಯಾವಳಿಯಲ್ಲಿ ಹದಿನಾರು ರೆಡ್ ಕಾರ್ಡ್‌ಗಳನ್ನು ಬಳಸಲಾಯಿತು. ಇನ್ನೊಂದೆಡೆ, ಇದೇ ಮೊದಲ ಬಾರಿಗೆ ಪಂದ್ಯಕ್ಕೂ ಮುನ್ನ 'ಫೇರ್-ಪ್ಲೇ ಫ್ಲಾಗ್' ಇಲ್ಲವೇ 'ಫೇರ್ ಪ್ಲೇ ಪ್ಲೀಸ್' ಅನ್ನು ಪರಿಚಯಿಸುವ ಮೂಲಕ ಪಾರದರ್ಶಕ ಆಟಕ್ಕೆ ಪ್ರೋತ್ಸಾಹಿಸಲಾಯಿತು.

ಇದನ್ನೂ ಓದಿ : ಫಿಫಾ ವಿಶ್ವಕಪ್‌ಗೆ ಮೊದಲೇ ಫುಟ್ಬಾಲ್ ಜ್ವರ ದಯಪಾಲಿಸಿದ ಸುನೀಲ್ ಛೆಟ್ರಿ ಪಡೆ!

ಫೈನಲ್‌ ಟಚ್

ಇನ್ನು, ಈ ಪಂದ್ಯಾವಳಿಯಲ್ಲಿ ಕಡಿಮೆ ಗೋಲುಗಳು ದಾಖಲಾದರೂ, ಟೆಲಿವಿಷನ್‌ನಲ್ಲಿ ಹೊಸದೊಂದು ದಾಖಲೆಯನ್ನೇ ಬರೆಯಿತು. ಬರೋಬ್ಬರಿ ೨೬.೨೯ ಬಿಲಿಯನ್ ಜನತೆ ಹದಿನಾಲ್ಕನೇ ವಿಶ್ವಕಪ್ ಪಂದ್ಯಾವಳಿಯನ್ನು ಟೆಲಿವಿಷನ್‌ನಲ್ಲಿ ಕಣ್ತುಂಬಿಕೊಂಡಿತ್ತು. ೧೯೯೪ ಮತ್ತು ೨೦೦೨ರ ವಿಶ್ವಕಪ್‌ವರೆಗೆ ಈ ದಾಖಲೆ ಹಾಗೆಯೇ ಉಳಿದಿತ್ತು.

ರೋಮ್‌ನ ಸ್ಟೇಡಿಯೊ ಒಲಿಂಪಿಕೊ ಮೈದಾನದಲ್ಲಿ ಜರುಗಿದ ಫೈನಲ್‌ನಲ್ಲಿ ೧-೦ ಗೋಲಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಪಶ್ಚಿಮ ಜರ್ಮನಿ ಗೆಲುವು ಪಡೆಯಿತು. ೭೩, ೬೦೩ ಮಂದಿ ಸೇರಿದ್ದ ಸ್ಟೇಡಿಯೊ ಒಲಿಂಪಿಕೊದಲ್ಲಿ ವಿಜಯದ ಗೋಲು ಬಾರಿಸಿದ ಆಂಡ್ರಿಯಾಸ್ ಬ್ರೀಹ್ಮ್ ಪಶ್ಚಿಮ ಜರ್ಮನಿಯ ಹೀರೋ ಆದರು.

ಇನ್ನೊಂದೆಡೆ ಈ ಹಿಂದಿನ ವಿಶ್ವಕಪ್‌ನಲ್ಲಿ ಇದೇ ಅರ್ಜೆಂಟೀನಾ ಎದುರು ನಿರಾಸೆ ಅನುಭವಿಸಿದ್ದ ಪಶ್ಚಿಮ ಜರ್ಮನಿ ರೋಮ್‌ನಲ್ಲಿ ವಿಜಯೀಭವವಾಗಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆಯೊಂದಿಗೆ ಮಿಂಚಿತು. ಈ ಸಾಧನೆಯೊಂದಿಗೆ ಇಟಲಿ, ಬ್ರೆಜಿಲ್ ಜತೆಗೆ ಮೂರರ ಕ್ಲಬ್‌ಗೆ ಪದಾರ್ಪಣೆಗೈದಿತು. ಇತ್ತ, ಟೂರ್ನಿಯಲ್ಲಿ ಆರು ಗೋಲು ಬಾರಿಸಿದ ಇಟಲಿ ಆಟಗಾರ ಸಾಲ್ವಟೋರ್ ಶಿಲಾಕಿ ಗೋಲ್ಡನ್ ಬೂಟ್‌ ಗೌರವಕ್ಕೆ ಪಾತ್ರರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More