ಶೋಕ ಸಾಗರದಲ್ಲಿ ಮುಳುಗಿದ ಸಾಂಬಾ ನಾಡಿನಲ್ಲಿ ಜರ್ಮನ್ನರ ನಾಲ್ಕನೇ ಪಾರುಪತ್ಯ

೨೦೧೪ರ ೨೦ನೇ ಫಿಫಾ ವಿಶ್ವಕಪ್ ನಿಸ್ಸಂಶಯವಾಗಿಯೂ ಸಾಂಬಾ ನಾಡಿನದ್ದು ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ಸೆಮಿಫೈನಲ್‌ನಲ್ಲೇ ಸೋತು ಸೊರಗಿದ ಆತಿಥೇಯ ಬ್ರೆಜಿಲ್ ಶೋಕ ಸಾಗರದಲ್ಲಿ ಮುಳುಗಿತು; ಅದ್ವಿತೀಯ ಪ್ರದರ್ಶನ ನೀಡಿದ ಜರ್ಮನಿ 4ನೇ ಬಾರಿಗೆ ವಿಜಯೋತ್ಸವ ಆಚರಿಸಿಕೊಂಡಿತು

ಈಜಿಪ್ಟ್‌ನ ಜೀವನದಿ ನೈಲ್‌ನ ತಟದಲ್ಲಿ ನಡೆದ ಕಳೆದ ಸಾಲಿನ ವಿಶ್ವಕಪ್‌ ಆಯೋಜನೆಗೆ ಸ್ಥಳೀಯರ ಆಕ್ರೋಶವೂ ಸೇರಿಕೊಂಡಿತ್ತು. ದೇಶ ನಿರುದ್ಯೋಗ, ಬಡತನ, ಆರ್ಥಿಕ ಹಿನ್ನಡೆ ಇತ್ಯಾದಿಗಳಿಂದ ತತ್ತರಿಸುತ್ತಿದೆ ಎಂಬುದು ಈ ವಿಶ್ವಕಪ್ ಆಯೋಜನೆಗೆ ಇದ್ದ ಬಹುದೊಡ್ಡ ವಿರೋಧ. ಇಷ್ಟೆಲ್ಲದರ ಮಧ್ಯೆಯೂ ಸರಿಸುಮಾರು ೩೫ ಸಾವಿರ ಕೋಟಿ ರು. ವೆಚ್ಚದಲ್ಲಿ ಆಯೋಜಿಸಲಾಗಿದ್ದ ಈ ಆವೃತ್ತಿಯಲ್ಲಿ ಬ್ರೆಜಿಲ್ ಸೆಮಿಫೈನಲ್‌ನಲ್ಲಿ ಜರ್ಮನಿ ಎದುರು ೧-೭ ಗೋಲುಗಳಿಂದ ಸೋತಾಗ ಇಡೀ ನಾಡಿಗೆ ನಾಡಿಗೇ ಶೋಕ ಸಾಗರದಲ್ಲಿ ಮುಳುಗಿ ಹೋಯಿತು.

೧೯೫೦ರ ಆವೃತ್ತಿಗೆ ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯ ಹೊತ್ತಿದ್ದ ಬ್ರೆಜಿಲ್ ಈ ೨೦೦೭ರಲ್ಲಿಯೇ ಎರಡನೇ ಬಾರಿಗೆ ಆತಿಥ್ಯದ ಹಕ್ಕು ಪಡೆದಿತ್ತು. ೧೯೩೦ರಲ್ಲಿ ಶುರುವಾದ ಚೊಚ್ಚಲ ವಿಶ್ವಕಪ್‌ನಿಂದ ಹಿಡಿದು ಕಳೆದ ಸಾಲಿನ ವಿಶ್ವಕಪ್‌ವರೆಗಿನ ಎಲ್ಲ ವಿಜೇತ ತಂಡಗಳೂ ಅಂದರೆ, ಉರುಗ್ವೆ, ಇಟಲಿ, ಅರ್ಜೆಂಟೀನಾ, ಬ್ರೆಜಿಲ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಹಾಗೂ ಸ್ಪೇನ್ ಈ ಟೂರ್ನಿಯಲ್ಲಿ ಭಾಗವಹಿಸಿದ್ದುದು ವಿಶೇಷ. ಅಂತೆಯೇ, ವಿಶ್ವಕಪ್ ಇತಿಹಾಸದಲ್ಲಿ ೧೬ ಗೋಲುಗಳನ್ನು ದಾಖಲಿಸಿದ ಮೊದಲ ಆಟಗಾರ ಎಂಬ ಗರಿಮೆಗೆ ಜರ್ಮನ್ ಆಟಗಾರ ಮಿರೋಸ್ಲಾವ್ ಕ್ಲೋಸ್ ಭಾಜನರಾದರು.

ಆದರೆ, ಇವುಗಳ ಪೈಕಿ ಹಾಲಿ ಚಾಂಪಿಯನ್ ಸ್ಪೇನ್ ಗುಂಪು ಹಂತದಲ್ಲೇ ಹೊರಬಿದ್ದದ್ದು ಕೂಡಾ ಗಮನೀಯ. ಇನ್ನು, ಉರುಗ್ವೆ ಹದಿನಾರರ ಘಟ್ಟದಲ್ಲಿ ಎಡವಿದರೆ, ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್ ಸೋಲನುಭವಿಸಿತು. ೨೦೧೩ರ ಫಿಫಾ ಕಾನ್ಫೆಡರೇಷನ್ ಕಪ್ ಗೆದ್ದಿದ್ದ ಬ್ರೆಜಿಲ್ ಅಂತೂ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದಲ್ಲದೆ, ಕಡೆಗೆ ನಾಲ್ಕನೇ ಸ್ಥಾನಕ್ಕೆ ತೃಪ್ತವಾಯಿತು.

ಪ್ರತೀ ವಿಶ್ವಕಪ್‌ನಿಂದ ವಿಶ್ವಕಪ್‌ಗೆ ಪ್ರಶಸ್ತಿ ಗೆಲ್ಲುವ ಧಾವಂತದಿಂದಲೇ ಕೂಡಿರುತ್ತಿದ್ದ ಜರ್ಮನಿ ಈ ಬಾರಿ ನಾಲ್ಕನೇ ವಿಶ್ವ ಕಿರೀಟ ಧರಿಸುವಲ್ಲಿ ಯಶ ಕಂಡಿತು. ಟೂರ್ನಿಗೂ ಮುನ್ನ ಫೇವರಿಟ್ ಎನಿಸಿದ್ದ ಬ್ರೆಜಿಲ್ ಇನ್ನಿಲ್ಲದಂತೆ ನಲುಗಿತ್ತು. ಇತ್ತ, ದಕ್ಷಿಣ ಅಮೆರಿಕದ ಪ್ರಬಲ ತಂಡವಾಗಿದ್ದ ಅರ್ಜೆಂಟೀನಾ ಕೂಡಾ ಫೈನಲ್‌ನಲ್ಲಿ ಜರ್ಮನಿ ಎದುರು ೦-೧ ಗೋಲಿನಿಂದ ಹಿನ್ನಡೆ ಅನುಭವಿಸಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತವಾಯಿತು.

ಹ್ಯಾಟ್ರಿಕ್ ಫೈನಲ್

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿಗೆ ಜರ್ಮನಿ ಹಾಗೂ ಅರ್ಜೆಂಟೀನಾ ಮುಖಾಮುಖಿಯಾಗಿದ್ದವು. ರಿಯೊ ಡಿ ಜನೈರೋದ ಇಸ್ಟಾಡಿಯೊ ಡು ಮರಕಾನಾ ಮೈದಾನದಲ್ಲಿ ೭೪,೭೩೮ ಜನ ಜಮಾಯಿಸಿದ್ದರು. ೧೯೮೬ ಮತ್ತು ೧೯೯೦ರ ಆವೃತ್ತಿಗಳಲ್ಲಿ ಪರಸ್ಪರ ಒಬ್ಬರ ಮೇಲೊಬ್ಬರು ಮೇಲುಗೈ ಸಾಧಿಸಿದ್ದ ಅರ್ಜೆಂಟೀನಿಯಾ ಮತ್ತು ಜರ್ಮನಿ ನಡುವೆ ಎರಡನೇ ಬಾರಿಗೆ ಅರ್ಜೆಂಟೀನಾ ವಿರುದ್ಧ ಜರ್ಮನಿ ಜಯಭೇರಿ ಬಾರಿಸಿತು. ಅಂದಹಾಗೆ, ೧೯೮೬ರಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿತ್ತು.

ವಾಸ್ತವವಾಗಿ, ಈ ಫೈನಲ್ ಪಂದ್ಯವನ್ನು ವಿಶ್ವದ ಅತ್ಯುತ್ತಮ ರಾಷ್ಟ್ರೀಯ ತಂಡ (ಜರ್ಮನಿ) ಹಾಗೂ ವಿಶ್ವದ ಅತ್ಯುತ್ತಮ ಆಟಗಾರ (ಲಯೋನೆಲ್ ಮೆಸ್ಸಿ) ನಡುವಣದ ಕಾದಾಟವೆಂದೇ ಬಣ್ಣಿಸಲಾಗಿತ್ತು. ಹೆಚ್ಚುವರಿ ಸಮಯದಲ್ಲಿ ಮರಿಯೊ ಗೋಯೆಟ್ಜ್ ಬಾರಿಸಿದ ಏಕೈಕ ಗೋಲು ಜರ್ಮನಿಗೆ ವರವಾಯಿತು. ಈ ಪಂದ್ಯಾವಳಿಗೆ ಬಳಸಲಾದ ಚೆಂಡು ಅಭಿಮಾನಿಗಳೇ ಇಟ್ಟಿದ್ದ ಬ್ರಜೂಕಾ ಹೆಸರಿನಿಂದ ಗಮನ ಸೆಳೆದಿತ್ತಲ್ಲದೆ, ಈ ಚೆಂಡಿನ ಮೇಲೆ ನೈಲ್ ನದಿಯ ವಿನ್ಯಾಸವಿತ್ತು.

ನಡೆಯದ ಮೆಸ್ಸಿ ಮ್ಯಾಜಿಕ್

ಇದನ್ನೂ ಓದಿ : ನಾಲ್ಕನೇ ವಿಶ್ವಕಪ್‌ ವಿಜಯದೊಂದಿಗೆ ಅಮೆರಿಕ ನೆಲದಲ್ಲಿ ನಲಿದಾಡಿದ ಸಾಂಬಾ

ಸೆಮಿಫೈನಲ್‌ನಲ್ಲಿ ಕಾದಾಡಿದ್ದ ತಂಡಗಳೇ ಫೈನಲ್‌ನಲ್ಲಿಯೂ ಕಣಕ್ಕಿಳಿದಿದ್ದವು. ಒಂದೇ ಒಂದು ಬದಲಾವಣೆ ಕೂಡಾ ಮಾಡುವ ಸಾಧ್ಯತೆ ಇರಲಿಲ್ಲ. ಆದರೆ, ಜರ್ಮನಿಯ ಮಿಡ್‌ಫೀಲ್ಡರ್ ಸಮಿ ಖೆಡೀರಾ ಅಭ್ಯಾಸದ ವೇಳೆ ಕಣಕಾಲಿಗೆ ಗಾಯ ಮಾಡಿಕೊಂಡದ್ದರಿಂದ ಕ್ರಿಸ್ಟೋಫರ್ ಕ್ರೆಮರ್‌ಗೆ ಸ್ಥಾನ ಕಲ್ಪಿಸಲಾಯಿತು.

ಕೆಲವೊಂದು ಗೋಲಿನ ಅವಕಾಶಗಳನ್ನು ಇತ್ತಂಡಗಳೂ ಕೈಚೆಲ್ಲಿದ ನಂತರ ನೀಡಲಾದ ಹೆಚ್ಚುವರಿ ಗೋಲಿನಲ್ಲಿ ಮರಿಯೋ ಮಿಂಚು ಹರಿಸಿದರು. ೧೧೩ನೇ ನಿಮಿಷದಲ್ಲಿ ಅರ್ಜೆಂಟೀನಾ ಗೋಲಿಯನ್ನು ಮರಿಯೋ ವಂಚಿಸಿದ್ದರು. ಮರಕಾನಾದಲ್ಲಿ ಮೆಸ್ಸಿ ಮ್ಯಾಜಿಕ್‌ಗೆ ಕಾದಿದ್ದವರೆಲ್ಲಾ ಕನಲುವಂತೆ ಮಾಡಿದ್ದರು ಮರಿಯೊ.

ಅಂದಹಾಗೆ, ಈ ಪಂದ್ಯಾವಳಿಯಲ್ಲಿ ಟೂರ್ನಿಯಾದ್ಯಂತ ಆಕರ್ಷಕ ಪ್ರದರ್ಶನ ನೀಡಿದ್ದ ಕೊಲಂಬಿಯಾದ ಯುವ  ಆಟಗಾರ ಜೇಮ್ಸ್ ರಾಡ್ರಿಗಸ್ ಗೋಲ್ಡನ್ ಬೂಟ್ ಪಡೆದರು. ಈ ಸಾಧನೆ ಮಾಡಿದ ಮೊಟ್ಟಮೊದಲ ಕೊಲಂಬಿಯಾ ಆಟಗಾರ ಕೂಡಾ ಇವರೇ. ಟೂರ್ನಿಯಲ್ಲಿ ೬ ಗೋಲುಗಳನ್ನು ಅವರು ದಾಖಲಿಸಿದರೆ, ಜರ್ಮನಿಯ ಥಾಮಸ್ ಮುಲ್ಲರ್ (೫) ಮತ್ತು ಲಯೋನೆಲ್ ಮೆಸ್ಸಿ ೪ ಗೋಲುಗಳನ್ನು ದಾಖಲಿಸಿದರು.

ಗಿನ್ನೆಸ್ ದಾಖಲೆಗಳ ವಿಶೇಷ

೨೦ನೇ ಫಿಫಾ ವಿಶ್ವಕಪ್‌ ಹಲವಾರು ಕಾರಣಗಳಿಂದ ವಿಶೇಷವಾಗಿ ದಾಖಲೆಗಳ ದೃಷ್ಟಿಯಲ್ಲಿ ಮಹತ್ವಪೂರ್ಣವೆನಿಸಿದೆ. ಸಾಂಬಾ ನಾಡಿನಲ್ಲಿ ಜರುಗಿದ ಈ ಪಂದ್ಯಾವಳಿಯಲ್ಲಿ ಒಟ್ಟು ೧೭೧ ಗೋಲುಗಳು ದಾಖಲಾಗಿದ್ದವು. ಆ ಪೈಕಿ ಕೆಲವು ಪ್ರಮುಖ ಅಂಕಿ ಅಂಶಗಳತ್ತ ಒಂದು ನೋಟ ಇಲ್ಲಿದೆ

  • ೧೬: ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಮಿರೋಸ್ಲಾವ್ ಕ್ಲೋಸ್ (ಜರ್ಮನಿ)
  • ೦೮: ಫಿಫಾ ವಿಶ್ವಕಪ್ ಚರಿತ್ರೆಯಲ್ಲಿ ಅತಿಹೆಚ್ಚು ಬಾರಿ ಫೈನಲ್ ತಲುಪಿದ ಸಾಧನೆ ಮೆರೆದ ರಾಷ್ಟ್ರ (ಜರ್ಮನಿ)
  • ೧೬: ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲುಗಳ ರಕ್ಷಣೆ ಮಾಡಿದ್ದು ಟಿಮ್ ಹೊವಾರ್ಡ್ (ಅಮೆರಿಕ ಮತ್ತು ಬೆಲ್ಜಿಯಂ ನಡುವಣದ ಪಂದ್ಯ)
  • ೪೩: ಫಿಫಾ ವಿಶ್ವಕಪ್‌ನಲ್ಲಿ ಆಡಿದ ಅತಿ ಹಿರಿಯ ಫುಟ್ಬಾಲ್ ಪಟು ಫ್ರಾಯ್ಡ್ ಮಾಂಡ್ರಗಾನ್ (೪೩ ವರ್ಷ ೩ ದಿನಗಳು)
  • ೧೭೧: ಫಿಫಾ ವಿಶ್ವಕಪ್‌ನಲ್ಲಿ ದಾಖಲಾದ ಗರಿಷ್ಠ ಗೋಲುಗಳ ಸಂಖ್ಯೆ (೧೯೯೮ರ ಫ್ರಾನ್ಸ್‌ನ ಸಾಧನೆ ಸರಿಗಟ್ಟಿದ ೨೦ನೇ ವಿಶ್ವಕಪ್)
  • ೦೬: ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲುಗಳಿಂದ ಸೋತ ರಾಷ್ಟ್ರ (ಬ್ರೆಜಿಲ್) (ಬ್ರೆಜಿಲ್ ೧-೭ ಜರ್ಮನಿ)
  • ೨೨೪: ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲುಗಳನ್ನು ದಾಖಲಿಸಿದ ರಾಷ್ಟ್ರ (ಜರ್ಮನಿ)
  • ೬೧೮,೭೨೫: ಅರ್ಜೆಂಟೀನಾ ಮತ್ತು ಜರ್ಮನಿ ಫೈನಲ್ ಪಂದ್ಯದ ವೇಳೆ ನಿಮಿಷವೊಂದಕ್ಕೆ ಆಗುತ್ತಿದ್ದ ಟ್ವೀಟ್‌ಗಳು
ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More