ವಿಶ್ವ ಚದುರಂಗದಲ್ಲಿ ಅಪೂರ್ವ ಇತಿಹಾಸ ನಿರ್ಮಿಸಿದ ಚೆನ್ನೈ ಕಿಶೋರ ಪ್ರಜ್ಞಾನಂದ

ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದನ್ ಅವರನ್ನು ಜಗತ್ತಿಗೆ ನೀಡಿದ ಚೆನ್ನೈ, ಇದೀಗ ಪ್ರಜ್ಞಾನಂದ ಎಂಬ ಬಾಲಕನನ್ನು ವಿಶ್ವ ಚೆಸ್ ಜಗತ್ತಿಗೆ ಪರಿಚಯಿಸಿದೆ. ೧೨ರ ಹರೆಯದ ಈ ಕಿಶೋರ ಜಗತ್ತಿನ ಎರಡನೇ ಕಿರಿಯ ಗ್ರಾಂಡ್‌ಮಾಸ್ಟರ್ ಎನಿಸಿಕೊಂಡು ಚರಿತ್ರೆಯ ಪುಟ ಸೇರಿದ್ದಾನೆ

ಚೆಸ್ ಆಟದಲ್ಲಿನ ನಡೆ-ನುಡಿಗಳನ್ನು ಕರಗತ ಮಾಡಿಕೊಂಡಿರುವ ಆತನಿಗಿನ್ನೂ ೧೨ ವರ್ಷ, ೧೦ ತಿಂಗಳು ಮತ್ತು ೧೪ ದಿನಗಳಷ್ಟೆ. ಕೇವಲ ಮೂರು ತಿಂಗಳ ಅಂತರದಲ್ಲಿ ವಿಶ್ವದ ಮೊಟ್ಟಮೊದಲ ಕಿರಿಯ ಗ್ರಾಂಡ್‌ಮಾಸ್ಟರ್ ಎನಿಸಿಕೊಳ್ಳುವುದರಿಂದ ವಂಚಿತನಾಗಿದ್ದಾನೆ. ಇಷ್ಟಾದರೂ, ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸೇರಿದಂತೆ ಆನಂದ್ ವಿರುದ್ಧ ಎರಡು ಬಾರಿ ಜಯಿಸಿದ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ದಾಖಲೆಯನ್ನೂ ಶನಿವಾರ (ಜೂನ್ ೨೩) ಮುರಿದು ಚೆಸ್ ಜಗತ್ತಿನಲ್ಲಿ ನೂತನ ದಾಖಲೆ ಬರೆಯುವುದರಲ್ಲಿ ಪ್ರಜ್ಞಾನಂದ ಯಶ ಕಂಡಿದ್ದಾನೆ.

ಅಂದಹಾಗೆ, ವಿಶ್ವದ ಮೊಟ್ಟಮೊದಲ ಕಿರಿಯ ಗ್ರಾಂಡ್‌ಮಾಸ್ಟರ್ ಎಂಬ ದಾಖಲೆ ಬರೆದದ್ದು ಉಕ್ರೇನ್‌ನ ಗ್ರಾಂಡ್‌ಮಾಸ್ಟರ್ ಸರ್ಗೆ ಕರ್ಜಾಕಿನ್. ೧೯೯೦ರಲ್ಲಿ ಈ ಸಾಧನೆ ಮಾಡಿದಾಗ ಕರ್ಜಾಕಿನ್‌ಗೆ ಕೇವಲ ೧೨ ವರ್ಷ ಮತ್ತು ೭ ತಿಂಗಳಷ್ಟೆ.ಇಟಲಿಯ ಒರ್ಟಿಸಿಯಲ್ಲಿ ನಡೆಯುತ್ತಿರುವ ಗ್ರಿಡೇನ್ ಓಪನ್‌ನಲ್ಲಿ ಸ್ಪರ್ಧಿಸುತ್ತಿರುವ ಪದ್ಮನಾಭ ಸ್ಥಳೀಯ ಆಟಗಾರ ಹಾಗೂ ಗ್ರಾಂಡ್‌ಮಾಸ್ಟರ್ ಲೂಕಾ ಮೊರೊನಿ ಜೂನಿಯರ್ ವಿರುದ್ಧ ೮ನೇ ಸುತ್ತಿನಲ್ಲಿ ಗೆಲುವು ಸಾಧಿಸಿದರು.

ಪಂದ್ಯದ ಶುರುವಿನಲ್ಲೇ ಸಿಕ್ಕ ಅವಕಾಶವನ್ನು ಕೈಚೆಲ್ಲದ ಪ್ರಜ್ಞಾನಂದ ಕ್ರಮಣಕಾರಿ ಆಟದೊಂದಿಗೆ ಲೂಕಾ ವಿರುದ್ಧ ಜಯ ಸಾಧಿಸಿದರೆಂಬ 'ಟೈಮ್ಸ್ ಆಫ್ ಇಂಡಿಯಾ' ವರದಿಯನ್ನು 'ದ ನ್ಯೂಸ್ ಮಿನಿಟ್' ಉದ್ಧರಿಸಿದೆ. ಭಾರತೀಯ ಬಾಲಕನೊಡ್ಡಿದ ಒತ್ತಡವನ್ನು ಭರಿಸಲಾಗದೆ ಗಲಿಬಿಲಿಗೊಂಡ ಲೂಕಾ, ಆಟದ ಮಧ್ಯಂತರದಲ್ಲೇ ಪಂದ್ಯವನ್ನು ಬಿಟ್ಟುಕೊಟ್ಟರು. ಅಂದಹಾಗೆ, ಈ ಟೂರ್ನಿಯಲ್ಲಿ ಪ್ರಜ್ಞಾನಂದ ಕೇವಲ ಲೂಕಾ ವಿರುದ್ಧವಷ್ಟೇ ಅಲ್ಲ, ಸ್ಪರ್ಧೆಯಲ್ಲಿದ್ದ ಇನ್ನೂ ಕೆಲ ಪ್ರಮುಖ ಆಟಗಾರರ ವಿರುದ್ಧವೂ ಜಯ ಸಾಧಿಸಿ ಗಮನ ಸೆಳೆದಿದ್ದಾನೆ.

ಇಟಾಲಿಯನ್ ಗ್ರಾಂಡ್‌ಮಾಸ್ಟರ್ ಇರಾನ್‌ನ ಆರ್ಯನ್ ಘೊಲಾಮಿ ವಿರುದ್ಧವೂ ಪ್ರಜ್ಞಾನಂದ ಗೆಲುವು ಪಡೆದ. ಆದರೆ, ಇದಿಷ್ಟಕ್ಕೇ ಪ್ರಜ್ಞಾನಂದನಿಗೆ ಪ್ರಶಸ್ತಿ ತಂದುಕೊಡಲಾಗಿಲ್ಲ. ಇದಕ್ಕಾಗಿ ಆತ ೨೪೮೨ ಇಎಲ್‌ಒ ರೇಟಿಂಗ್‌ಗಿಂತ ಮೇಲಿನ ಸಾಧಕರ ಜತೆಗೆ ಸೆಣಸಬೇಕಾಗುತ್ತದೆ. ಹಾಲೆಂಡ್‌ನ ಪ್ರುಜೆಸ್ಸೆರ್ಸ್ ರೋಲಂಡ್ ೨೫೧೪ ರೇಟಿಂಗ್ ಹೊಂದಿದ್ದರಾದರೂ, ಅವರ ವಿರುದ್ಧ ಪ್ರಜ್ಞಾನಂದ ಡ್ರಾ ಸಾಧಿಸಲಷ್ಟೇ ಶಕ್ತನಾದ. ಪ್ರಸ್ತುತ ಟೂರ್ನಿಯಲ್ಲಿ ಕ್ರೊವೇಷಿಯಾದ ಗ್ರಾಂಡ್‌ಮಾಸ್ಟರ್ ಸರಿಕ್ ಇವಾನ್ ಮುನ್ನಡೆಯಲ್ಲಿದ್ದರೆ, ಪ್ರಜ್ಞಾನಂದ ದ್ವಿತೀಯ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : ವಿವಾದ ಎಬ್ಬಿಸಿದ ೨೦೧೮ರ ವಿಶ್ವ ಚದುರಂಗ ಲೋಗೋದ ಕಾಮಸೂತ್ರ ಚಿತ್ರ

ದಿಗ್ಗಜರ ಮೀರಿದ ಬಾಲಕ

ಚೆನ್ನೈನ ಪ್ರಜ್ಞಾನಂದ ೨೦೧೭ರಲ್ಲಿ ಜೂನಿಯರ್ ಗ್ರಾಂಡ್‌ಮಾಸ್ಟರ್ ಪ್ರಶಸ್ತಿ ಗೆದ್ದಿದ್ದ. ೨೫೦೦ ಎಲೊ ರೇಟಿಂಗ್‌ನಾಚೆಗೂ ಸಾಗಿರುವ ಈ ಬಾಲಕನ ಸದ್ಯದ ಚೆಸ್ ಸಾಧನೆ ವಿಶ್ವನಾಥನ್ ಆನಂದ್ ಅವರನ್ನೂ ಮೀರಿಸುವಂತಿದೆ. ಅಂದಹಾಗೆ, ವಿಶ್ವನಾಥನ್ ಆನಂದ್ ಗ್ರಾಂಡ್‌ಮಾಸ್ಟರ್ ಎನಿಸಿಕೊಂಡಾಗ ಅವರ ವಯಸ್ಸು ೧೮ ವರ್ಷಗಳಾಗಿತ್ತು. ಅಂತೆಯೇ, ನಾರ್ವೆಯ ಹಾಗೂ ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಗ್ರಾಂಡ್‌ಮಾಸ್ಟರ್ ಎನಿಸಿಕೊಂಡದ್ದು ಕೇವಲ ೧೩ ವರ್ಷ ಮತ್ತು ೪ ತಿಂಗಳಲ್ಲಿ. ಪ್ರಜ್ಞಾನಂದನ ಸಾಧನೆ ಇವರಿಬ್ಬರಿಗಿಂತಲೂ ಮಿಗಿಲಾಗಿರುವುದು ಗಮನಾರ್ಹ.

ಚೆಸ್ ಇತಿಹಾಸದಲ್ಲಿ ಕಿರಿಯ ಗ್ರಾಂಡ್‌ಮಾಸ್ಟರ್‌ಗಳು

  • ಸರ್ಗೆ ಕರ್ಜಾಕಿನ್ (ಉಕ್ರೇನ್) ೧೨ ವರ್ಷ, ೭ ತಿಂಗಳು
  • ಆರ್ ಪ್ರಜ್ಞಾನಂದ (ಭಾರತ), ೧೨ ವರ್ಷ, ೧೦ ತಿಂಗಳು
  • ನಾಡ್ರಿಬೆಕ್ ಅಬ್ದುಸಟ್ಟಾರೊವ್ (ಉಜ್ಬೇಕಿಸ್ತಾನ) ೧೩ ವರ್ಷ, ೧ ತಿಂಗಳು
  • ಪರಿಮರ್ಜನ್ ನೇಗಿ (ಭಾರತ), ೧೩ ವರ್ಷ, ೪ ತಿಂಗಳು
    ಮ್ಯಾಗ್ನಸ್ ಕಾರ್ಲ್‌ಸನ್ (ನಾರ್ವೆ) ೧೩ ವರ್ಷ, ೪ ತಿಂಗಳು
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More