ಜರ್ಮನ್ ಪುಟಿದೇಳುವಂತೆ ಮಾಡಿದ ಮಾರ್ಕೋ-ಕ್ರೂಸ್ ಜುಗಲ್‌ಬಂದಿ

ವಿಶ್ವಕಪ್ ಗುಂಪಿನ ಹಂತದಿಂದಲೇ ಹೊರಬೀಳುವ ಅಪಾಯದಲ್ಲಿದ್ದ ಹಾಲಿ ಚಾಂಪಿಯನ್ ಜರ್ಮನಿಗೆ ಮರುಹುಟ್ಟು ನೀಡಿದ್ದು ಮಾರ್ಕೋ ರೀಸ್ ಹಾಗೂ ಟೋನಿ ಕ್ರೂಸ್ ಜುಗಲ್‌ಬಂದಿ ಆಟ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ೨-೧ ಗೋಲಿನಿಂದ ಜರ್ಮನಿ ಪುಟಿದೆದ್ದಿತು

ಮೊದಲ ಪಂದ್ಯದಲ್ಲಿ ಜರ್ಮನಿ ಎದುರು ಅನುಭವಿಸಿದ ಸೋಲಿಗಿಂತಲೂ ಭೀಕರವಾಗಿ ಎರಡನೇ ಪಂದ್ಯದಲ್ಲಿ ಸೋಲಿನ ಅಂಚಿಗೆ ಸಿಲುಕಿದ್ದ ಜರ್ಮನ್ನರನ್ನು ಕೈಹಿಡಿದದ್ದು ಟೋನಿ ಕ್ರೂಸ್. ನಂಬಲಸಾಧ್ಯ ರೀತಿಯಲ್ಲಿ ಪಂದ್ಯ ನಿಲುಗಡೆಗೆ ಐದು ನಿಮಿಷವಿದೆ ಎನ್ನುವಾಗ ಕ್ರೂಸ್ ಬಾರಿಸಿದ ಗೋಲು ಸ್ವೀಡನ್ ವಿರುದ್ಧ ೨-೧ ಗೋಲುಗಳ ಗೆಲುವು ತಂದುಕೊಟ್ಟಿತಲ್ಲದೆ, ಜರ್ಮನಿ ರಷ್ಯಾ ಆವೃತ್ತಿಯಲ್ಲಿ ಉಳಿದುಕೊಳ್ಳಲು ನೆರವಾಯಿತು.

ಶನಿವಾರ (ಜೂನ್ ೨೩) ಸೋಚಿಯ ಪಿಶ್ತ್ ಕ್ರೀಡಾಂಗಣದಲ್ಲಿ ನಡೆದ ಎಫ್ ಗುಂಪಿನ ಪಂದ್ಯವು ವೈಚಿತ್ರ್ಯಗಳ ಗೂಡಾಗಿತ್ತು. ಪಂದ್ಯದ ಕೊನೇ ಘಟ್ಟದಲ್ಲಿ ಅಂದರೆ, ೮೨ನೇ ನಿಮಿಷದಲ್ಲಿ ಜೆರೋಮ್ ಬೋಟೆಂಗ್ ಕೆಂಪು ಕಾರ್ಡ್ ಪಡೆದು ಮೈದಾನವನ್ನು ತೊರೆದಾಗ ೧೦ ಮಂದಿಗೆ ಸೀಮಿತವಾದ ಜರ್ಮನಿ ಪುಟಿದೆದ್ದ ಪರಿಯೂ ಪವಾಡದಂತಿತ್ತು. ಜತೆಗೆ, ಪಂದ್ಯದ ಮೊದಲಾರ್ಧದಲ್ಲಿ ೦-೧ ಗೋಲಿನ ಹಿನ್ನಡೆಯ ಮಧ್ಯೆಯೂ ಅತೀವ ಒತ್ತಡವನ್ನು ಮೆಟ್ಟಿನಿಂತದ್ದು ಕೂಡಾ ಚಾಂಪಿಯನ್ನರ ಆಟಕ್ಕೆ ಕನ್ನಡಿಯಾಯಿತು.

ಓಲಾ ಸೃಷ್ಟಿಸಿದ ತಲ್ಲಣ

ಶತಾಯ ಗತಾಯ ಗೆಲ್ಲಲೇಬೇಕಿದ್ದ ಪಂದ್ಯಕ್ಕೆ ಸೂಕ್ತ ತಯಾರಿಯೊಂದಿಗೆ ಅಂಗಣಕ್ಕಿಳಿದಿದ್ದ ಜೊವಾಕಿಮ್ ಲೌ ಮಾರ್ಗದರ್ಶನದ ಜರ್ಮನಿ ಪಾಳೆಯದಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದ್ದು ಓಲಾ ಟಾಯ್ವೊನೆನ್. ಪಂದ್ಯದ ಮೊದಲ ಮೂವತ್ತು ನಿಮಿಷಗಳವರೆಗೆ ಇತ್ತಂಡಗಳ ಮಧ್ಯೆ ಗೆಲುವಿಗಾಗಿ ಇನ್ನಿಲ್ಲದ ಹೋರಾಟ ಕಂಡಿತಾದರೂ, ಮೊದಲಿಗೆ ಗೋಲಿನ ಅವಕಾಶ ಗಳಿಸಿದ್ದು ಸ್ವೀಡನ್. ಕ್ಲಾಸನ್ ಮೇಲಿನಿಂದ ಲಿಫ್ಟ್ ಮಾಡಿದ ಚೆಂಡನ್ನು ಎದೆಗೆ ತಾಗಿಸಿಕೊಂಡ ಓಲಾ, ಗೋಲಿ ಥಾಮಸ್ ನೆಯುರ್‌ ಅವರನ್ನು ವಂಚಿಸಿ ಸ್ವೀಡನ್‌ಗೆ ಗೋಲು ತಂದಿತ್ತರು. ಓಲಾ ಬಾರಿಸಿದ ಈ ಗೋಲು ಜರ್ಮನಿಯಲ್ಲಿ ಭಯದ ವಾತಾವರಣ ಸೃಷ್ಟಿಸಿತು.

ಮಾರ್ಕೊ ಸಮಬಲದ ಗೋಲು

🇸🇪 1-2 🇩🇪 TAG A FRIEND🗣✅

A post shared by B R E A T H E FOOTY (@breathefooty_) on

ಮೊದಲಾರ್ಧದಲ್ಲಿ ೦-೧ ಗೋಲಿನಿಂದ ಹಿನ್ನಡೆ ಅನುಭವಿಸಿದ ಜರ್ಮನ್ ಆಟಗಾರರಿಗೆ ಗೋಲು ಗಳಿಸದೆ ಗತ್ಯಂತರವೇ ಇರಲಿಲ್ಲ. ಸತತವಾಗಿ ಸ್ವೀಡನ್ ಗೋಲುಪೆಟ್ಟಿಗೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾದ ಅದಕ್ಕೆ ಮೂರೇ ನಿಮಿಷದ ಅಂತರದಲ್ಲಿ ಅವಕಾಶದ ಬಾಗಿಲು ತೆರೆಯಿತು. ಮಿಡ್‌ಫೀಲ್ಡರ್ ಮಾರ್ಕೊ ರಿಯಸ್ ಸಹ ಆಟಗಾರ ಮರಿಯೋ ಗೋಮೆಜ್ ನೆರವಿನೊಂದಿಗೆ ಎಡಬದಿಯಿಂದ ಚೆಂಡನ್ನು ಹಿಡಿತಕ್ಕೆ ಪಡೆದು ಚೆಂಡನ್ನು ಗೋಲು ಆವರಣದ ಮಧ್ಯಕ್ಕೆ ದೂಡಿಕೊಂಡುಬಂದು ಸ್ವೀಡನ್ ಗೋಲಿ ಅಗಸ್ಟಿನ್‌ಸನ್ ಅವರನ್ನು ವಂಚಿಸಿ ಜರ್ಮನಿಗೆ ಗೋಲು ತಂದುಕೊಟ್ಟರು. ಈ ಸಮಬಲದ ಗೋಲಿನಿಂದ ಜರ್ಮನ್ ಪಾಳೆಯದಲ್ಲಿ ತುಸು ಆಶಾವಾದ ಮೂಡಿತು.

ಇದನ್ನೂ ಓದಿ : ಫಿಫಾ ವಿಶ್ವಕಪ್ | ರೋಚಕ ಘಟ್ಟದಲ್ಲಿ ಕೋಸ್ಟರಿಕಾ ಕುಟುಕಿ ಸಂಭ್ರಮಿಸಿದ ಸಾಂಬಾ

ಜೆರೋಮ್‌ಗೆ ರೆಡ್ ಕಾರ್ಡ್!

ಸಮಬಲದ ಗೋಲು ದಾಖಲಾಗುತ್ತಿದ್ದಂತೆಯೇ ಇತ್ತಂಡಗಳ ನಡುವೆ ಗೋಲಿಗಾಗಿ ಇನ್ನಷ್ಟು ಆರ್ಭಟ ನಡೆಯಿತು. ಇದೇ ಧಾವಂತದಲ್ಲಿ ಜರ್ಮನ್ ಡಿಫೆಂಡರ್ ಜೆರೋಮ್ ಬೋಟಿಂಗ್, ಸ್ವೀಡನ್ ಆಟಗಾರ ಬೆರ್ಗ್ ಅವರನ್ನು ಹಿಂಬದಿಯಿಂದ ನೂಕಿದ ಕಾರಣ ರೆಫರಿ ರೆಡ್ ಕಾರ್ಡ್ ನೀಡಿದರು. ಈಗಾಗಲೇ ಹಳದಿ ಕಾರ್ಡ್ ಪಡೆದಿದ್ದ ಅವರು ರೆಡ್ ಕಾರ್ಡ್ ದರ್ಶನವಾಗುತ್ತಿದ್ದಾಗಲೇ ಮೈದಾನದಿಂದ ಹೊರನಡೆಯಬೇಕಾಯಿತು. ಉಳಿದ ಹತ್ತು ಮಂದಿ ಆಟಗಾರರಿಗೆ ಈ ಹಂತದಿಂದ ಇನ್ನಷ್ಟು ಆತಂಕ ಮನೆಮಾಡಿತು.

ಕ್ರೂಸ್ ವಿಸ್ಮಯ!

🔱 @toni.kr8s - полузащитник , 95 минута 🇩🇪🇩🇪🇩🇪🇩🇪 это было не реально круто 🔥 я вообще ваха 😂😂 , вот за что я люблю немецкую сборную, они всегда борются до последнего и побеждают💪🏽 как я 😂💪🏽 Это просто фантастика! Кроос, что ты делаешь?! 🇩🇪😍 Мои фавориты: Германия 🇩🇪 Португалия 🇵🇹 #realmadrid #real #tonykroos #salah #martial #картавыйчм #neymar #costa #bayern #ibra #mu #manchesterunited #marcelo #чм #чм2018 #video #ramos #sergioramos #рамос #неймар #messi #football #бавария #реал #марсело #салах #барса #месси#футбол #офутболе

A post shared by 🔱Trainer at INVICTUS FITNESS (@karina______t) on

ಪಂದ್ಯ ಮುಗಿಯುವ ಕ್ಷಣಗಳಾದರೂ ಮೇಲುಗೈ ಸಾಧಿಸುವ ಇಬ್ಬರ ಧಾವಂತ ತೀರಿರಲಿಲ್ಲ. ಆದರೆ, ಇನ್ನೇನು ಸೀಟಿ ಊದಬೇಕೆಂಬಷ್ಟರಲ್ಲಿ ಕ್ರೂಸ್ ಸೋಚಿ ಮೈದಾನದಲ್ಲಿ ವಿಸ್ಮಯ ತರಿಸಿದರು. ಪಂದ್ಯ ಡ್ರಾ ಆಗಿದ್ದರೂ, ಜರ್ಮನಿ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತಿತ್ತು. ಆದರೆ, ಡುರ್ಮಾಜ್ ದಯಪಾಲಿಸಿದ ಫ್ರೀ ಕಿಕ್ ಅನ್ನು ಮನೋಜ್ಞವಾಗಿ ಗುರಿ ಮುಟ್ಟಿಸಿದ ಟೋನಿ ಕ್ರೂಸ್ ನಂಬಲಸಾಧ್ಯ ಗೋಲು ಬಾರಿಸಿ ಜರ್ಮನಿಯ ಏದುಸಿರನ್ನು ತಹಬದಿಗೆ ತಂದರು!

ಮುಖ್ಯಾಂಶಗಳು

  • ಪ್ರಥಮಾರ್ಧದಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿದ ಎರಡನೇ ದಾಖಲೆಯನ್ನು ಜರ್ಮನಿ ಬರೆಯಿತು. ೧೯೭೪ರಲ್ಲಿ ಸ್ವೀಡನ್ ವಿರುದ್ಧ ಪ್ರಥಮಾರ್ಧದಲ್ಲಿ ೦-೧ ಗೋಲಿನಿಂದ ಹಿನ್ನಡೆ ಅನುಭವಿಸಿದ್ದ ಜರ್ಮನಿ, ಆನಂತರದಲ್ಲಿ ೪-೨ರಿಂದ ಗೆಲುವು ಪಡೆದಿತ್ತು
  • ೯೪ ನಿಮಿಷ ಹಾಗೂ ೪೨ ಸೆಕೆಂಡುಗಳಲ್ಲಿ ಟೋನಿ ಕ್ರೂಸ್ ಬಾರಿಸಿದ ಗೋಲು  ಹೆಚ್ಚುವರಿ ಸಮಯವನ್ನೂ ಸೇರಿದಂತೆ ವಿಶ್ವಕಪ್‌ನಲ್ಲಿ ಜರ್ಮನಿ ಕೊನೇ ಕ್ಷಣದಲ್ಲಿ ಬಾರಿಸಿದ ಗೋಲೆನಿಸಿತು
  • ಕಳೆದ ೨೩ ಲೀಗ್ ೧ ಪಂದ್ಯಗಳಲ್ಲಿ ಗೋಲು ಗಳಿಸಲು ವಿಫಲವಾಗಿದ್ದ ಸ್ವೀಡನ್‌ನ ಓಲಾ ೧೯ ಬಾರಿ ಗೋಲುಗಳ ಯತ್ನದಲ್ಲಿ ಇದೇ ಮೊದಲ ಬಾರಿಗೆ ಗೋಲು ಬಾರಿಸಿದರು
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More