ವಿಂಬಲ್ಡನ್ | ಹಾಲಿ ಚಾಂಪಿಯನ್ ಫೆಡರರ್‌ಗೆ ಕ್ವಾರ್ಟರ್‌ನಲ್ಲಿ ಸೋಲಿನ ಆಘಾತ

ವಿಶ್ವದ ಮಾಜಿ ನಂ ೧ ಆಟಗಾರ ನೊವಾಕ್ ಜೊಕೊವಿಚ್ ಮೂರು ವರ್ಷಗಳ ಬಳಿಕ ಗ್ರಾಂಡ್‌ಸ್ಲಾಮ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಧಾವಿಸಿದ್ದಾರೆ. ಆದರೆ, ಹಾಲಿ ಚಾಂಪಿಯನ್ ಹಾಗೂ ಇಪ್ಪತ್ತು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ರೋಜರ್ ಫೆಡರರ್ ಎಂಟರ ಘಟ್ಟದಲ್ಲಿ ಸೋತು ನಿರ್ಗಮಿಸಿದರು

ನೊವಾಕ್ ಜೊಕೊವಿಚ್ ಅವರ ನಿಖರ ಗುರಿ ಹಾಗೂ ಪ್ರಖರ ಶಾಟ್‌ಗಳ ಎದುರು ತಡಬಡಾಯಿಸಿದ ಜಪಾನ್ ಆಟಗಾರ ಕೀ ನಿಶಿಕೊರಿ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಿಂದ ನಿರ್ಗಮಿಸಿದರು.. ಸರ್ಬಿಯ ಆಟಗಾರನ ಎದುರು ಏಕಾಗ್ರರಹಿತ ಆಟವಾಡಿದ ನಿಶಿಕೊರಿ, ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ೧-೩ ಅಂತರದಿಂದ ಪರಾಭವ ಕಂಡು ಪ್ರತಿಷ್ಠಿತ ಟೂರ್ನಿಯಿಂದ ಹೊರನಡೆದರು.

ಬುಧವಾರ (ಜುಲೈ ೧೧) ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಹನ್ನೆರಡು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ವಿಜೇತ ನೊವಾಕ್ ಜೊಕೊವಿಚ್ ೬-೩, ೩-೬, ೬-೨, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ನಾಲ್ಕರ ಘಟ್ಟಕ್ಕೆ ದಾಪುಗಾಲಿಟ್ಟರು. ಪಂದ್ಯದಾದ್ಯಂತ ಬಹುತೇಕ ಅನಗತ್ಯ ತಪ್ಪುಗಳನ್ನೆಸಗಿದ ನಿಶಿಕೊರಿ ಅದಕ್ಕೆ ತಕ್ಕ ಬೆಲೆ ತೆತ್ತರು.

ನಿಶಿಕೊರಿಯನ್ನು ಮಣಿಸುವುದರೊಂದಿಗೆ ಈ ಬಾರಿಯ ವಿಂಬಲ್ಡನ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದಾರೆ. ಮೊದಲ ಸೆಟ್ ಅನ್ನು ಗೆದ್ದ ಜೊಕೊವಿಚ್ ಎದುರು ನಾಲ್ಕು ಬ್ರೇಕ್ ಪಾಯಿಂಟ್ಸ್ ಗಳಿಸುವುದರೊಂದಿಗೆ ನಿಶಿಕೊರಿ ಎರಡನೇ ಸೆಟ್ ಜಯಿಸಿ ಸಮಬಲ ಸಾಧಿಸಿದರು. ಆದರೆ, ಆನಂತರದ ಎರಡೂ ಸೆಟ್‌ಗಳಲ್ಲಿ ಜೊಕೊವಿಚ್ ಶ್ರೇಷ್ಠ ಆಟವಾಡಿ ನಿಶಿಕೊರಿಗೆ ಸೋಲುಣಿಸಿದರು.

ಇದನ್ನೂ ಓದಿ : ವಿಂಡಲ್ಡನ್ ಒಂಬತ್ತರ ಕಠಿಣ ಪರೀಕ್ಷೆಗೆ ಅಣಿಯಾದ ರೋಜರ್ ಫೆಡರರ್

ಪುಟಿದೆದ್ದ ಜೊಕೊ

ಟೂರ್ನಿ ಶುರುವಾಗುವ ಮುನ್ನ ತಾನು ಈ ಬಾರಿಯ ವಿಂಬಲ್ಡನ್ ಗೆಲ್ಲುವ ಫೇವರಿಟ್ ಅಲ್ಲ ಎಂದು ತಿಳಿಸಿದ್ದ ಜೊಕೊವಿಚ್ ಸ್ವತಃ ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ವೃತ್ತಿಬದುಕಿನಲ್ಲಿ ೩೨ನೇ ಗ್ರಾಂಡ್‌ಸ್ಲಾಮ್ ಸೆಮಿಫೈನಲ್ ತಲುಪಿರುವ ಜೊಕೊವಿಚ್, ಇದೀಗ ಹದಿಮೂರನೇ ಗ್ರಾಂಡ್‌ಸ್ಲಾಮ್ ಗೆಲ್ಲುವ ಅವಕಾಶ ಸೃಷ್ಟಿಸಿಕೊಂಡಿದ್ದಾರೆ. ಶುಕ್ರವಾರ (ಜುಲೈ ೧೩) ನಡೆಯಲಿರುವ ಸೆಮಿಫೈನಲ್‌ನಲ್ಲಿ ಅವರು, ರಾಫೆಲ್ ನಡಾಲ್ ಇಲ್ಲವೇ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಕಾದಾಡಲಿದ್ದಾರೆ.

ಮೊಣಕೈ ನೋವಿನಿಂದಾಗಿ ಕಳೆದೊಂದು ವರ್ಷದಿಂದಲೂ ತಿಣುಕುತ್ತಿರುವ ಜೊಕೊವಿಚ್, ನಿಶಿಕೊರಿ ವಿರುದ್ಧ ಸೆಣಸಾಡುವ ಮುನ್ನ ಕೈಲ್ ಎಡ್ಮುಂಡ್ ಹಾಗೂ ಕರೆನ್ ಕಚಾನೊವ್‌ರಂಥ ದೊಡ್ಡ ಸರ್ವ್‌ಗಳ ಸವಾಲುಗಾರರನ್ನು ಮಣಿಸಿದ್ದರು. ಇದುವೇ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ೨೦೧೧, ೨೦೧೪ ಮತ್ತು ೨೦೧೫ರಲ್ಲಿ ಆಲ್ ಇಂಗ್ಲೆಂಡ್ ಕ್ಲಬ್ ಚಾಂಪಿಯನ್‌ಶಿಪ್ ಗೆದ್ದಿರುವ ನೊವಾಕ್ ಇದೀಗ ಮತ್ತೊಂದು ವಿಂಬಲ್ಡನ್ ಕಿರೀಟ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಫೆಡರರ್‌ಗೆ ಸೋಲು

ಬುಧವಾರ ನಡೆದ ಪುರುಷರ ಮತ್ತೊಂದು ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ವಿಸ್ ಮಾಸ್ಟರ್ ರೋಜರ್ ಫೆಡರರ್, ಪ್ರಯಾಸದ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದರು. ದಕ್ಷಿಣ ಆಫ್ರಿಕಾದ ಯುವ ಆಟಗಾರ ಕೆವಿನ್ ಆ್ಯಂಡರ್ಸನ್ ಜತೆಗಿನ ಜಿದ್ದಾಜಿದ್ದಿ ಕಾದಾಟದ ಐದು ಸೆಟ್‌ಗಳಲ್ಲಿ ೬-೨, ೭-೬ (೭/೬) ೫-೭, ೪-೬, ೧೧-೧೩ರಿಂದ ಫೆಡರರ್ ಸೋತು ನಿರ್ಗಮಿಸಿದರು.

ಕೋರ್ಟ್ ಒಂದರಲ್ಲಿ ನಡೆದ ಸ್ಪರ್ಧೆ ತೀವ್ರ ಆಸಕ್ತಿದಾಯಕವಾಗಿತ್ತು. ನೇರ ಸೆಟ್‌ಗಳ ಗೆಲುವಿನ ಲೆಕ್ಕಾಚಾರದಲ್ಲಿದ್ದ ಫೆಡರರ್, ಬಸವಳಿಯುವಂತೆ ಮಾಡಿದ ಆ್ಯಂಡರ್ಸನ್, ಪಂದ್ಯವನ್ನು ಐದನೇ ಸೆಟ್‌ಗೆ ವಿಸ್ತರಿಸಿದರು. ಮೊದಲ ನಾಲ್ಕು ಸೆಟ್‌ಗಳಲ್ಲಿ ತಲಾ ಎರಡೆರಡು ಸೆಟ್‌ಗಳನ್ನು ಗೆದ್ದ ಇಬ್ಬರಿಗೂ ಐದನೇ ಸೆಟ್ ನಿರ್ಣಾಯಕವಾಗಿತ್ತು. ಆದರೆ, ಈ ಸೆಟ್‌ ಗೆಲ್ಲಲು ಆ್ಯಂಡರ್ಸನ್ ಹಾಗೂ ಫೆಡರರ್ ನಡೆಸಿದ ಹೋರಾಟವಂತೂ ಹೆಜ್ಜೆ ಹೆಜ್ಜೆಗೂ ಕೌತುಕ ಕೆರಳಿಸಿತು.

Stunning! Absolutely Stunning! @kandersonatp walked out onto court No. 1 surely hoping to achieve what he had achieved but always with the doubt of facing #defendingchampion best grass-court player in the world. And what a way to rewrite the entire episode of @wimbledon. @tsongaofficiel must have been very proud by Anderson's performance reminding everyone of #wimbledon2011 at the same stage. @kandersonatp had knocked out @rogerfederer from being 2 sets and a match point down to crawl to an absolutely magnificent victory in five sets. What a performance it was from both the players. The match started with #federer doing his routine workout taking first two sets comfortably on his first #courtno1 match of this year. Into the third as well, he took an advantage with a match point in his grasp, but #anderson had other intensions. He denied #federer an easy victory and broken his standing record of consecutive 85 game streak of service hold. And then he broke Federer in the fourth to level up th match. In the fifth set, it was an enchanting performance by those two. Federer, as always, playing with his composed and sublime touch and Anderson, with his courageous aggression, attacking Federer with unique strategies. With no one giving any chance to other, Federer failed to hold his nerve, surprisingly, producing is first ever double fault of the tournament giving Anderson the break in 23rd game of the fifth set. Anderson held his nerves and his serve to defeat Federer after being two sets down. Take a bow @kandersonatp. What a match today! @wimbledon needed such astonishing performance this year to perpetuate the greatness this grass court tournament brings. #wimbledon #andersonvfederer #kevinanderson #rogerfederer #stunned #atp #inpursuitofgreatness

A post shared by thesportsbuff (@thesportsbuff) on

ಗೇಮ್‌ನಿಂದ ಗೇಮ್‌ಗೆ ನಡೆದ ಮಾರಾಮಾರಿ ಹೊಯ್ದಾಟದಲ್ಲಿ ಅನುಭವಿ ಆಟಗಾರ ಫೆಡರರ್ ಕೂದಲೆಳೆಯ ಅಂತರದಲ್ಲಿ ಮುಗ್ಗರಿಸಿದರು. ಸರಿಸುಮಾರು ಐದು ತಾಸುಗಳಿಗೂ ಹೆಚ್ಚು ಸುದೀರ್ಘವಾಗಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಕೆಚ್ಚೆದೆಯ ಆಟವಾಡಿ ಮೊದಲ ಬಾರಿಗೆ ವಿಂಬಲ್ಡನ್‌ನಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು. ಸಾಕಷ್ಟು ಆಡಿ ಬಸವಳಿದಿದ್ದ ಫೆಡರರ್ ಡಬಲ್ ಫಾಲ್ಟ್ ಎಸಗಿ ಸ್ವಪ್ರಮಾದವೆಸಗಿದರು. ಇದರೊಂದಿಗೆ ಬ್ರೇಕ್ ಪಾಯಿಂಟ್ಸ್ ಪಡೆದ ಕೆವಿನ್ ಅಸಾಮಾನ್ಯ ರೀತಿಯಲ್ಲಿ ಸೆಟ್ ಗೆದ್ದು ಸೆಮಿಫೈನಲ್ ತಲುಪಿದರು.

ಹದಿನಾರನೇ ಬಾರಿಗೆ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೆಣಸಿದ ಫೆಡರರ್ ವೀರೋಚಿತ ಸೋಲನುಭವಿಸಿದರು. ಇದೀಗ, ಶುಕ್ರವಾರ (ಜುಲೈ ೧೩) ನಡೆಯಲಿರುವ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಕೆನಡಾದ ಮಿಲಾಸ್ ರಾನಿಕ್ ಇಲ್ಲವೇ ಅಮೆರಿಕದ ಜಾನ್ ಇಸ್ನೆರ್ ವಿರುದ್ಧ ಕೆವಿನ್ ಆ್ಯಂಡರ್ಸನ್ ಸೆಣಸಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More