ಚತುಷ್ಕೋನ ಸರಣಿಯಲ್ಲಿ ಭಾರತ ಬಿ ತಂಡ ಮುನ್ನಡೆಸಲಿರುವ ಮನೀಶ್ ಪಾಂಡೆ

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಚಮತ್ಕಾರಿ ಬೌಲಿಂಗ್ ಪ್ರದರ್ಶಿಸುತ್ತಿರುವ ಯಜುವೇಂದ್ರ ಚಾಹಲ್, ಟೆಸ್ಟ್ ಪ್ರಕಾರದಲ್ಲೂ ಪ್ರಖರವಾಗಲು ಭಾರತ ಎ ತಂಡಕ್ಕೆ ಕಾಲಿಟ್ಟಿದ್ದಾರೆ. ಇದೇ ವೇಳೆ, ಕನ್ನಡಿಗ ಮನೀಶ್ ಪಾಂಡೆ ಚತುಷ್ಕೋನ ಸರಣಿಯಲ್ಲಿ ಭಾರತ ಬಿ ತಂಡವನ್ನು ಮುನ್ನಡೆಸಲಿದ್ದಾರೆ

ಸೋಮವಾರ (ಜು.೨೩) ೨೮ನೇ ವಸಂತಕ್ಕೆ ಕಾಲಿರಿಸಿದ ಯಜುವೇಂದ್ರ ಚಾಹಲ್, ಶೀಘ್ರವೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಉತ್ಸುಕತೆಯಲ್ಲಿದ್ದಾರೆ. ಕೇವಲ ಸೀಮಿತ ಓವರ್‌ಗಳಲ್ಲಷ್ಟೇ ತನ್ನ ಕೈಚಳಕ ತೋರುತ್ತಿರುವ ಚಾಹಲ್, ಐದು ದಿನಗಳ ಸಾಂಪ್ರದಾಯಿಕ ಕ್ರಿಕೆಟ್‌ ಪ್ರಕಾರದಲ್ಲಿಯೂ ಉಜ್ವಲ ಪ್ರದರ್ಶನ ನೀಡಲು ಆಯ್ಕೆ ಸಮಿತಿ ಅವರನ್ನು ಮೊದಲ ಹಂತದಲ್ಲಿ ಭಾರತ ಎ ತಂಡದಲ್ಲಿ ಆಡಲು ಅನುವು ಮಾಡಿಕೊಟ್ಟಿದೆ.

ಮುಂಬರುವ ಆಗಸ್ಟ್ ೪ರಿಂದ ಶುರುವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ದಿನಗಳ ಎರಡು ಪಂದ್ಯಕ್ಕೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಚಾಹಲ್ ಹೆಸರನ್ನು ಆಯ್ಕೆ ಸಮಿತಿ ಸೇರ್ಪಡೆಗೊಳಿಸಿದೆ. ೨೦೧೬ರ ಡಿಸೆಂಬರ್‌ನಲ್ಲಿ ರಣಜಿ ಪಂದ್ಯಾವಳಿಯಲ್ಲಿ ಹರ್ಯಾಣ ವಿರುದ್ಧ ಆಡಿದ ನಂತರದಲ್ಲಿ ಯಾವುದೇ ಪ್ರಥಮ ದರ್ಜೆ ಕ್ರಿಕೆಟ್ ಆಡದ ಚಾಹಲ್, ಇದೀಗ ಭಾರತ ಎ ತಂಡದ ಪರ ಆಡಲಿದ್ದಾರೆ.

ಚಾಹಲ್ ಸೇವೆ ಕೇವಲ ಸೀಮಿತ ಓವರ್‌ಗಳ ಪಂದ್ಯಗಳಿಗೆ ಸೀಮಿತವಾಗದೆ ಟೆಸ್ಟ್ ಪ್ರಕಾರಕ್ಕೂ ಬೇಕೆಂಬ ನಾಯಕ ವಿರಾಟ್ ಕೊಹ್ಲಿಯ ಒತ್ತಾಯದ ಮೇರೆಗೆ, ಕೋಲ್ಕತಾದಲ್ಲಿ ಸಭೆ ಸೇರಿದ್ದ ಆಯ್ಕೆ ಸಮಿತಿ ಲೆಗ್ ಸ್ಪಿನ್ನರ್ ಚಾಹಲ್ ಹೆಸರನ್ನು ಭಾರತ ಎ ತಂಡದಲ್ಲಿ ಸೇರ್ಪಡೆಗೊಳಿಸಿತು. ಮೊದಲ ಪಂದ್ಯ ಬೆಳಗಾವಿಯಲ್ಲಿ ಆಗಸ್ಟ್ ೪ರಿಂದ ೭ರವರೆಗೆ ನಡೆಯಲಿದ್ದರೆ, ಎರಡನೇ ಪಂದ್ಯ ಆಗಸ್ಟ್ ೧೦ರಿಂದ ೧೩ರವರೆಗೆ ಬೆಂಗಳೂರಿನಲ್ಲಿ ಜರುಗಲಿದೆ.

ಮನೀಶ್-ಶ್ರೇಯಸ್‌ಗೆ ಸಾರಥ್ಯ

ದಕ್ಷಿಣ ಆಫ್ರಿಕಾ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ವಿರುದ್ಧ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಗೂ ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ಬಿ ತಂಡವನ್ನು ಕನ್ನಡಿಗ ಮನೀಶ್ ಪಾಂಡೆ ಮುನ್ನಡೆಸಲಿದ್ದರೆ, ಭಾರತ ಎ ತಂಡದ ಸಾರಥ್ಯವನ್ನು ಶ್ರೇಯಸ್ ಅಯ್ಯರ್‌ಗೆ ವಹಿಸಲಾಗಿದೆ. ಈ ಸೀಮಿತ ಓವರ್‌ಗಳ ಸರಣಿಗೆ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಆಟಗಾರರಿಗೆ ಆಯ್ಕೆಸಮಿತಿ ಅವಕಾಶ ಕಲ್ಪಿಸಿದೆ.

ಮುಂಬೈ ಇಂಡಿಯನ್ಸ್ ಪರ ಆಕರ್ಷಕ ಪ್ರದರ್ಶನ ನೀಡಿದ ಲೆಗ್‌ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಎಡಗೈ ಸ್ಪಿನ್ನರ್‌ಗಳಾದ ಕುಲ್ವಂತ್ ಖೆಜ್ರೋಲಿಯಾ ಹಾಗೂ ಎಡಗೈ ಸ್ಪಿನ್ನರ್ ಧರ್ಮೇಂದ್ರ ಜಡೇಜಾಗೆ ಭಾರತ ಬಿ ತಂಡದಲ್ಲಿ ಸ್ಥಾನ ನೀಡಲಾಗಿದೆ.

ದುಲೀಪ್ ಟ್ರೋಫಿಗೆ ತಂಡ

ಆಗಸ್ಟ್ ೧೭ರಿಂದ ಆರಂಭವಾಗಲಿರುವ ಹೊನಲು ಬೆಳಕಿನ ದುಲೀಪ್ ಟ್ರೋಫಿ ಪಂದ್ಯಾವಳಿಗೂ ತಂಡವನ್ನು ಪ್ರಕಟಿಸಲಾಗಿದೆ. ಇಂಡಿಯಾ ರೆಡ್, ಬ್ಲೂ ಹಾಗೂ ಗ್ರೀನ್ ತಂಡಗಳನ್ನು ಆಯ್ಕೆಮಾಡಲಾಗಿದೆ. ವಿದರ್ಭ ರಣಜಿ ಟ್ರೋಫಿ ವಿಜೇತ ಫೈಜ್ ಫಜಲ್ ಬ್ಲೂ ತಂಡವನ್ನು ಮುನ್ನಡೆಸಲಿದ್ದರೆ, ಹಿರಿಯ ಆಟಗಾರ ಪಾರ್ಥೀವ್ ಪಟೇಲ್ ಇಂಡಿಯಾ ಗ್ರೀನ್ ಮತ್ತು ಇಂಡಿಯಾ ರೆಡ್ ತಂಡದ ಸಾರಥ್ಯವನ್ನು ಅಭಿನವ್ ಮುಕುಂದ್ ವಹಿಸಿದ್ದಾರೆ.

ಇದನ್ನೂ ಓದಿ : ಸೆಂಚೂರಿಯನ್‌ನಲ್ಲಿ ಸೋಲುವ ಮುನ್ನ ಮನೀಶ್‌ಗೆ ಪಾಠ ಮಾಡಿದ ಧೋನಿ!

ತಂಡಗಳು ಇಂತಿವೆ

ಭಾರತ ಎ (ದಕ್ಷಿಣ ಆಫ್ರಿಕಾ ಎ ವಿರುದ್ಧದ ಪಂದ್ಯಗಳಿಗೆ): ಶ್ರೇಯಸ್ ಅಯ್ಯರ್ (ನಾಯಕ), ಆರ್ ಸಮರ್ಥ್, ಮಯಾಂಕ್ ಅಗರ್ವಾಲ್, ಅಭಿಮನ್ಯು ಈಶ್ವರನ್, ಹನುಮಾ ವಿಹಾರಿ, ಅಂಕಿತ್ ಬಾವ್ನೆ, ಕೊನಾ ಭರತ್ (ವಿಕೆಟ್‌ಕೀಪರ್), ಅಕ್ಷರ್ ಪಟೇಲ್ (ಮೊದಲ ಪಂದ್ಯ) / ಶಾಬಾಜ್ ನದೀಮ್ (ಎರಡನೇ ಪಂದ್ಯ), ಯಜುವೇಂದ್ರ ಚಾಹಲ್, ಜಯಂತ್ ಯಾದವ್, ರಜನೀಶ್ ಗುರ್ಬಾನಿ, ನವದೀಪ್ ಸೈನಿ, ಅಂಕಿತ್ ರಜಪೂತ್, ಮೊಹಮದ್ ಸಿರಾಜ್.

ಚತುಷ್ಕೋನ ಸರಣಿಗೆ ತಂಡ

ಇಂಡಿಯಾ ಎ: ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಆರ್ ಸಮರ್ಥ್, ಸೂರ್ಯಕುಮಾರ್ ಯಾದವ್, ಹನುಮಾ ವಿಹಾರಿ, ನಿತೀಶ್ ರಾಣಾ, ಸಿದ್ಧೇಶ್ ಲ್ಯಾಡ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಮಯಾಂಕ್ ಮಾರ್ಕಂಡೆ, ಕೆ ಗೌತಮ್, ಕೃನಾಲ್ ಪಾಂಡ್ಯ, ದೀಪಕ್ ಚಾಹರ್, ಮೊಹಮದ್ ಸಿರಾಜ್, ಶಿವಂ ಮಾವಿ ಹಾಗೂ ಖಲೀಲ್ ಅಹಮದ್.

ಇಂಡಿಯಾ ಬಿ: ಮನೀಶ್ ಪಾಂಡೆ (ನಾಯಕ), ಮಯಾಂಕ್ ಅಗರ್ವಾಲ್, ಎ ಆರ್ ಈಶ್ವರನ್, ಶುಭ್ಮನ್ ಗಿಲ್, ದೀಪಕ್ ಹೂಡಾ, ರಿಕಿ ಭುಯಿ, ವಿಜಯ್ ಶಂಕರ್, ಇಶಾನ್ ಕಿಶಾನ್ (ವಿಕೆಟ್‌ ಕೀಪರ್), ಶ್ರೇಯಸ್ ಗೋಪಾಲ್, ಜಯಂತ್ ಯಾದವ್, ಡಿ ಎ ಜಡೇಜಾ, ಸಿದ್ಧಾರ್ಥ್ ಕೌಲ್, ಪ್ರಸಿದ್ಧ್ ಕೃಷ್ಣ, ಕುಲವಂತ್ ಖೆಜ್ರೋಲಿಯಾ ಹಾಗೂ ನವದೀಪ್ ಸೈನಿ.

ದುಲೀಪ್ ಟ್ರೋಫಿಗೆ ತಂಡಗಳು

ಇಂಡಿಯಾ ಬ್ಲೂ: ಫೈಜ್ ಫಜಲ್ (ನಾಯಕ), ಅಭಿಷೇಕ್ ರಮನ್, ಅನ್ಮೋಲ್‌ಪ್ರೀತ್ ಸಿಂಗ್, ಗಣೇಶ್ ಸತೀಶ್, ಎನ್ ಗಂಗ್ಟಾ, ಧ್ರುವ ಶೋರೆ, ಕೆ ಎಸ್ ಭರತ್ (ವಿಕೆಟ್‌ ಕೀಪರ್), ಅಕ್ಷಯ್ ವಖಾರೆ, ಸೌರವ್ ಕುಮಾರ್, ಸ್ವಪ್ನಿಲ್ ಸಿಂಗ್, ಬಸಿಲ್ ಥಂಪಿ, ಬಿ ಅಯ್ಯಪ್ಪ, ಜೈದೇವ್ ಉನದ್ಕಟ್, ಧವಳ್ ಕುಲಕರ್ಣಿ.

ಇಂಡಿಯಾ ರೆಡ್: ಅಭಿನವ್ ಮುಕುಂದ್ (ನಾಯಕ), ಆರ್ ಆರ್ ಸಂಜಯ್, ಅಶುತೋಷ್ ಸಿಂಗ್, ಬಾಬಾ ಅಪರಾಜಿತ್, ವೃತಿಕ್ ಚಟರ್ಜಿ, ಬಿ ಸಂದೀಪ್, ಅಭಿಷೇಕ್ ಗುಪ್ತಾ (ವಿಕೆಟ್‌ ಕೀಪರ್), ಎಸ್ ನದೀಮ್, ಮಿಹಿರ್ ಹಿರ್ವಾನಿ, ಪರ್ವೇಜ್ ರಸೂಲ್, ಆರ್ ಗುರ್ಬಾನಿ, ಎ ಮಿಥುನ್, ಇಶಾನ್ ಪೊರೆಲ್, ವೈ ಪೃಥ್ವಿರಾಜ್.

ಇಂಡಿಯಾ ಗ್ರೀನ್: ಪಾರ್ಥೀವ್ ಪಟೇಲ್ (ನಾಯಕ & ವಿಕೆಟ್‌ ಕೀಪರ್), ಪ್ರಶಾಂತ್ ಚೋಪ್ರಾ, ಪ್ರಿಯಾಂಕ್ ಪಾಂಚಾಲ್, ಸುದೀಪ್ ಚಟರ್ಜಿ, ಗುರುಕೀರತ್ ಮನ್, ಬಾಬಾ ಅಪರಾಜಿತ್, ವಿ ಪಿ ಸೋಲಂಕಿ, ಜಲಜ್ ಸಕ್ಸೇನಾ, ಕರಣ್ ಶರ್ಮಾ, ವಿಕಾಸ್ ಮಿಶ್ರಾ, ಕೆ ವಿಘ್ನೇಶ್, ಅಂಕಿತ್ ರಜಪೂತ್, ಅಶೋಕ್ ದಿಂಡಾ ಮತ್ತು ಅತೀತ್ ಶೇಥ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More