ಇಂಡೋ-ಪಾಕ್ ಏಷ್ಯಾ ಕಪ್ ಕ್ರಿಕೆಟ್ | ಸೆಪ್ಟೆಂಬರ್ ೧೯ಕ್ಕೆ ಕದನ ಕೌತುಕ

ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಸೆಪ್ಟೆಂಬರ್ ೧೯ಕ್ಕೆ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ೧೫ರಂದು ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ-ಶ್ರೀಲಂಕಾ ಸೆಣಸಲಿವೆ

ಹಾಲಿ ಚಾಂಪಿಯನ್ ಭಾರತ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡದ ವಿರುದ್ಧ ಸುದೀರ್ಘ ಸಮಯದ ನಂತರ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲು ಏಷ್ಯಾ ಕಪ್ ವೇದಿಕೆಯಾಗಿದೆ. ದುಬೈನಲ್ಲಿ ನಡೆಯಲಿರುವ ಕ್ವಾಲಿಫೈಯರ್ ಪಂದ್ಯದ ಬಳಿಕ ಎರಡನೇ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು ಎದುರುಗೊಳ್ಳಲಿದೆ.

ಏಷ್ಯಾ ಕಪ್ ಪಂದ್ಯಾವಳಿಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡಗಳು ಈಗಾಗಲೇ ಅರ್ಹತೆ ಗಳಿಸಿದ್ದು, ಉಳಿದ ಸ್ಥಾನಗಳಿಗೆ ಆತಿಥೇಯ ಯುಎಇ, ಸಿಂಗಪುರ, ಓಮನ್, ನೇಪಾಳ, ಮಲೇಷಿಯಾ ಹಾಗೂ ಹಾಂಗ್ ಕಾಂಗ್ ತಂಡಗಳು ಅರ್ಹತಾ ಸುತ್ತಿನೊಂದಿಗೆ ಪ್ರಧಾನ ಹಂತಕ್ಕೆ ಕಾಲಿಡಲಿವೆ. ಅಂದಹಾಗೆ, ಈ ಪಾಕ್ ವಿರುದ್ಧದ ಪಂದ್ಯದವರೆಗೂ ಭಾರತ ಬಿಡುವಿಲ್ಲದ ಕ್ರಿಕೆಟ್‌ ಆಡಲಿದೆ ಎಂಬುದು ಗಮನಾರ್ಹ.

ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಅರ್ಹತಾ ತಂಡವಿದ್ದರೆ, ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ತಂಡಗಳು ಸ್ಥಾನ ಗಳಿಸಿವೆ. ಸೆಪ್ಟೆಂಬರ್ ೧೫ರಂದು ನಡೆಯಲಿರುವ ಟೂರ್ನಿ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೆಣಸಲಿವೆ. ಇನ್ನು, ಪ್ರಶಸ್ತಿ ಸುತ್ತಿನ ಪಂದ್ಯ ಸೆಪ್ಟೆಂಬರ್ ೨೮ರಂದು ದುಬೈನಲ್ಲಿ ನಡೆಯಲಿದೆ.

ಪ್ರತೀ ಗುಂಪಿನನಲ್ಲಿ ಮೊದಲ ಸ್ಥಾನ ಪಡೆದ ತಂಡಗಳು ಸೂಪರ್ ನಾಲ್ಕರ ಘಟ್ಟಕ್ಕೆ ಅರ್ಹತೆ ಗಳಿಸಲಿದ್ದು, ಈ ಹಂತದಲ್ಲಿನ ಮೊದಲೆರಡು ತಂಡಗಳು ಸೆಪ್ಟೆಂಬರ್ ೨೮ರಂದು ನಡೆಯಲಿರುವ ಕೊನೇ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.

ಏಷ್ಯಾ ಕಪ್ ವೇಳಾಪಟ್ಟಿ

ಗುಂಪು ಹಂತ: ಬಾಂಗ್ಲಾದೇಶ - ಶ್ರೀಲಂಕಾ (ಸೆ. ೧೫) | ಪಾಕಿಸ್ತಾನ - ಕ್ವಾಲಿಫೈಯರ್ (ಸೆ. ೧೬) | ಶ್ರೀಲಂಕಾ - ಆಫ್ಘಾನಿಸ್ತಾನ (ಸೆ. ೧೭) | ಭಾರತ - ಕ್ವಾಲಿಫೈಯರ್ (ಸೆ. ೧೮) | ಭಾರತ - ಪಾಕಿಸ್ತಾನ (ಸೆ. ೧೯) | ಬಾಂಗ್ಲಾದೇಶ - ಆಫ್ಘಾನಿಸ್ತಾನ (ಸೆ. ೨೦)

ಸೂಪರ್ ೪: ಗುಂಪು ಎ ವಿಜೇತ ತಂಡ - ಬಿ ಗುಂಪಿನ ರನ್ನರ್‌ಅಪ್ (ಸೆ. ೨೧) | ಗುಂಪು ಬಿ ವಿಜೇತ ತಂಡ - ಗುಂಪು ಎ ರನ್ನರ್‌ಅಪ್ (ಸೆ. ೨೧) | ಗುಂಪು ಎ ವಿಜೇತ ತಂಡ - ಗುಂಪು ಎ ರನ್ನರ್ ಅಪ್ (ಸೆ. ೨೩) | ಗುಂಪು ಬಿ ವಿಜೇತ ತಂಡ - ಗುಂಪು ಬಿ ರನ್ನರ್‌ ಅಪ್ (ಸೆ. ೨೩) | ಗುಂಪು ಎ ವಿಜೇತ ತಂಡ - ಗುಂಪು ಬಿ ವಿಜೇತ ತಂಡ (ಸೆ. ೨೫) | ಗುಂಪು ಎ ರನ್ನರ್‌ಅಪ್ - ಗುಂಪು ಬಿ ರನ್ನರ್ ಅಪ್ (ಸೆ. ೨೬)

ಫೈನಲ್: ದುಬೈನಲ್ಲಿ ಸೆ. 28

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More