ಕ್ರಿಕೆಟಿಗ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್ ಒಂದಕ್ಕೆ ₹ ೮೨.೫ ಲಕ್ಷ ಸಂಭಾವನೆ

ಕ್ರಿಕೆಟ್ ಜಗತ್ತಿನ ಸ್ಟಾರ್ ಆಟಗಾರರಲ್ಲಿ ಒಬ್ಬರಾದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಮಾರುಕಟ್ಟೆ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಚಿತ್ರವೊಂದರ ಪೋಸ್ಟ್‌ಗೆ ಕೊಹ್ಲಿ ವಿಧಿಸುವ ಶುಲ್ಕ ೧೨,೦೦೦ ಡಾಲರ್ (ಅಂದಾಜು ₹ ೮೨.೫ ಲಕ್ಷ) ಎನ್ನಲಾಗಿದೆ

ಮೂರು ಪ್ರಕಾರದ ಕ್ರಿಕೆಟ್‌ನಲ್ಲಿ ವಿಶ್ವದ ಪ್ರಮುಖ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನ ಶ್ರೀಮಂತರ ಪಟ್ಟಿಯಲ್ಲಿ ೧೭ನೇ ಸ್ಥಾನದಲ್ಲಿದ್ದಾರೆ. ಇನ್‌ಸ್ಟಾಗ್ರಾಂ ವೇಳಾಪಟ್ಟಿಯನ್ನು ನಿಯಂತ್ರಿಸುವ ಹಾಪರ್‌ಎಚ್‌ಕ್ಯು.ಕಾಮ್ ತಿಳಿಸಿರುವಂತೆ, ಹಿಂಬಾಲಕರ ಸಂಖ್ಯೆಯನ್ನು ಆಧರಿಸಿ ಕೊಹ್ಲಿ ಗಳಿಕೆ ದೊಡ್ಡದಿದೆ ಈ ಪ್ರಮಾಣದಲ್ಲಿದೆ ಎಂದು ಹೇಳಲಾಗಿದೆ.

ಸದ್ಯ, ಸಾಮಾಜಿಕ ಜಾಲತಾಣದಲ್ಲಿ ೨೩.೨ ಮಿಲಿಯನ್ ಹಿಂಬಾಲಕರನ್ನು ಒಳಗೊಂಡಿರುವ ಕೊಹ್ಲಿ, ಪ್ರತೀ ಪ್ರಾಯೋಜಕತ್ವದ ಪೋಸ್ಟ್‌ಗೆ ೧೨೦, ೦೦೦ ಡಾಲರ್‌ ಶುಲ್ಕ ವಿಧಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಅಮೆರಿಕದ ಬಾಸ್ಕೆಟ್‌ಬಾಲ್ ಸ್ಟಾರ್ ಸ್ಟೀಫನ್ ಕರ್ರಿ (ಪ್ರತಿ ಪೋಸ್ಟ್‌ಗೆ ೧೧೦,೦೦೦ ಡಾಲರ್), ಬಾಕ್ಸಿಂಗ್ ದಂತಕತೆ ಫ್ಲಾಯ್ಡ್ ಮೇವೆದರ್ (ಪ್ರತಿ ಪೋಸ್ಟ್‌ಗೆ ೧೦೭,೦೦೦ ಡಾಲರ್) ಅವರನ್ನೂ ಕೊಹ್ಲಿ ಹಿಂದಿಕ್ಕಿದ್ದಾರೆ.

ಆದರೆ, ಇನ್‌ಸ್ಟಾಗ್ರಾಂನಲ್ಲಿನ ಪ್ರತಿ ಪೋಸ್ಟ್‌ಗೆ ಅತಿಹೆಚ್ಚು ಮೊತ್ತ ಗಳಿಸುವವರ ಪಟ್ಟಿಯಲ್ಲಿ ಅಮೆರಿಕ ರೂಪದರ್ಶಿ ಕೈಲಿ ಜೆನ್ನರ್ ಮುಂಚೂಣಿಯಲ್ಲಿದ್ದಾರೆ. ಇವರು ಪ್ರತಿ ಪೋಸ್ಟ್‌ಗೆ ವಿಧಿಸುವ ಶುಲ್ಕ ೧ ಮಿಲಿಯನ್ ಡಾಲರ್. ಆದರೆ, ಅಥ್ಲೀಟ್‌ಗಳ ವಿಷಯಕ್ಕೆ ಬರುವುದಾದರೆ ಜುವೆಂಟಸ್‌ನ ಕ್ರಿಶ್ಚಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಮೊಟ್ಟ ಮೊದಲ ಸೋಲಿನ ಬರೆ ಎಳೆದ ಇಂಗ್ಲೆಂಡ್

ಪೋರ್ಚುಗಲ್ ಮೂಲದ ಈ ಫುಟ್ಬಾಲ್ ಆಟಗಾರ ಪ್ರತೀ ಪೋಸ್ಟ್‌ಗೆ ೭೫೦,೦೦೦ ಡಾಲರ್ ಶುಲ್ಕ ವಿಧಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ಪೋಸ್ಟ್‌ನ ಶ್ರೀಮಂತ ಪಟ್ಟಿಯಲ್ಲಿ ಇವರಿಗೆ ಒಟ್ಟಾರೆ ಮೂರನೇ ಸ್ಥಾನವಿದೆ. ರೊನಾಲ್ಡೊ ೧೩೬.೯ ಮಿಲಿಯನ್ ಹಿಂಬಾಲಕರನ್ನು ಒಳಗೊಂಡಿದ್ದಾರೆ. ಇನ್ನು, ಬ್ರೆಜಿಲ್ ಹಾಗೂ ಪ್ಯಾರಿಸ್ ಸೇಂಟ್ ಜರ್ಮೇನ್‌ನ ನೇಮಾರ್ (ಪ್ರತಿ ಪೋಸ್ಟ್‌ಗೆ ೬೦೦,೦೦೦ ಡಾಲರ್) ಎರಡನೇ ಸ್ಥಾನದಲ್ಲಿದ್ದು, ಒಟ್ಟಾರೆ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

ಇತ್ತ, ಬಾರ್ಸಿಲೋನಾ ಸಹ ಆಟಗಾರ ಲಯೋನೆಲ್ ಮೆಸ್ಸಿ (ಪ್ರತಿ ಪೋಸ್ಟ್‌ಗೆ ೫೦೦,೦೦೦ ಡಾಲರ್) ನೇಮಾರ್ ನಂತರದ ಸ್ಥಾನದಲ್ಲಿದ್ದರೆ, ಒಟ್ಟಾರೆ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಇನ್ನು, ಇಂಗ್ಲೆಂಡ್‌ ಫುಟ್ಬಾಲ್ ತಂಡದ ಮಾಜಿ ಆಟಗಾರ ಡೇವಿಡ್ ಬೆಕ್‌ಹ್ಯಾಮ್ (ಪ್ರತಿ ಪೋಸ್ಟ್‌ಗೆ ೩೦೦,೦೦೦ ಡಾಲರ್), ಗರೆತ್ ಬಾಲಿ (ಪ್ರತಿ ಪೋಸ್ಟ್‌ಗೆ ೧೮೫,೦೦೦ ಡಾಲರ್), ಜ್ಲಾಟನ್ ಇಬ್ರಾಹಿಮೋವಿಚ್ (ಪ್ರತಿ ಪೋಸ್ಟ್‌ಗೆ ೧೭೫,೦೦೦ ಡಾಲರ್), ಲೂಯಿಸ್ ಸ್ವಾರೆಜ್ (ಪ್ರತಿ ಪೋಸ್ಟ್‌ಗೆ ೧೫೦,೦೦೦ ಡಾಲರ್), ಮತ್ತು ಕಾನರ್ ಮೆಕ್‌ಗ್ರೆಗರ್ (ಪ್ರತಿ ಪೋಸ್ಟ್‌ಗೆ ೧೨೫,೦೦೦ ಡಾಲರ್), ಕ್ರಮವಾಗಿ ನಾಲ್ಕು, ಐದು, ಆರು, ಏಳು ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More