ಅಫ್ರಿದಿ ಸಿಕ್ಸರ್ ದಾಖಲೆ ಸರಿಗಟ್ಟಿದ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್!

ಪಾಕಿಸ್ತಾನ ಮಾಜಿ ಆಲ್ರೌಂಡ್ ಆಟಗಾರ ಶಾಹೀದ್ ಅಫ್ರಿದಿಯ ಸಾರ್ವಕಾಲಿಕ ಸಿಕ್ಸರ್‌ಗಳ ದಾಖಲೆಯನ್ನು ಸ್ವಯಂಘೋಷಿತ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಸರಿಗಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದ ಗೇಲ್ ಈ ದಾಖಲೆ ಬರೆದರು

ಬಿಡುಬೀಸಿನ ಆಟಕ್ಕೆ ಹೆಸರಾದ ವಿಂಡೀಸ್ ಆಟಗಾರ ಕ್ರಿಸ್ ಗೇಲ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಬರೆದ್ದಾರೆ. ವೃತ್ತಿಬದುಕಿನಲ್ಲಿ ಬೌಂಡರಿಗಿಂತಲೂ ಬೌಂಡರಿ ಗೆರೆ ದಾಟಿಸಿದ್ದೇ ಗೇಲ್ ಹೆಚ್ಚುಗಾರಿಕೆಯಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್ ಶಾಹೀದ್ ಅಫ್ರಿದಿ ಅವರ ದಾಖಲೆಯನ್ನು ಗೇಲ್ ಸರಿಗಟ್ಟಿದ್ದಾರೆ.

ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಸೇಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್‌ನಲ್ಲಿ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಗೇಲ್ ಈ ದಾಖಲೆ ಬರೆದರು. ೬೬ ಎಸೆತಗಳಲ್ಲಿ ೭೩ ರನ್ ಸಿಡಿಸಿದ ಗೇಲ್, ಆ ಮೂಲಕ ಪಾಕಿಸ್ತಾನದ ಮಾಜಿ ಆಟಗಾರ ಅಫ್ರಿದಿ ದಾಖಲೆಯನ್ನು ಸರಿಗಟ್ಟಿದರು. ಅಂದಹಾಗೆ, ಗೇಲ್ ಈ ವಿಶ್ವದಾಖಲೆಗೆ ೪೪೩ ಪಂದ್ಯಗಳನ್ನು ತೆಗೆದುಕೊಂಡರೆ, ಅಫ್ರಿದಿ ೫೨೪ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.

ಸದ್ಯ, ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಗೇಲ್ ಅಫ್ರಿದಿ ದಾಖಲೆಯನ್ನೂ ಮೀರಿ ಮುನ್ನಡೆಯುತ್ತಾರೆ ಎಂಬುದು ನಿಶ್ಚಿತವಾದಂತಾಗಿದೆ. ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್‌ನಲ್ಲಿಯೂ ಕಾಣಿಸಿಕೊಳ್ಳಲಿರುವ ಗೇಲ್, ಮತ್ತಾವ ದಾಖಲೆ ಬರೆಯುತ್ತಾರೋ ಸದ್ಯಕ್ಕಂತೂ ತಿಳಿಯದಾಗಿದೆ. ಒಟ್ಟಾರೆ, ತಾವೇ ಕರೆದುಕೊಳ್ಳುವಂತೆ ಯೂನಿವರ್ಸಲ್ ಬಾಸ್ ಬ್ಯಾಟಿಂಗ್ ಮಹಿಮೆ ಅವ್ಯಾಹತವಾಗಿ ಸಾಗಿದೆ.

Chris Gayle with his wife Allysa Berridge & Daughter !! ❤🔥 #chrisgayle

A post shared by Cricket Universe (@cricuniverse) on

ಇದನ್ನೂ ಓದಿ : ಕನ್ನಡಿಗ ಕೆ ಆಲ್ ರಾಹುಲ್ ರೌರವ ಆಟಕ್ಕೆ ಯೂನಿವರ್ಸಲ್ ಬಾಸ್ ದಿಲ್ ಖುಷ್!

ಗೇಲ್ ಗರಿಷ್ಠ ಸಿಕ್ಸರ್‌ಗಳ ಮಧ್ಯೆಯೂ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ೧-೨ರಿಂದ ಆತಿಥೇಯರು ಕೈಚೆಲ್ಲಿದರು. ಗೇಲ್ ಬಿಟ್ಟರೆ ಮೇಲಿನ ಕ್ರಮಾಂಕಿತ ಆಟಗಾರರ ವೈಫಲ್ಯವು ತಂಡದ ಸೋಲಿಗೆ ಕಾರಣವಾಯಿತು. ಅಂದಹಾಗೆ, ಅಫ್ರಿದಿಯ ಸರ್ವಾಧಿಕ ಅಂತಾರಾಷ್ಟ್ರೀಯ ಸಿಕ್ಸರ್‌ಗಳ ದಾಖಲೆಯನ್ನು ಸರಿಗಟ್ಟಿರುವ ಗೇಲ್, ಇದೇ ಬಾಂಗ್ಲಾದೇಶ ವಿರುದ್ಧ ಮಂಗಳವಾರದಿಂದ (ಆ.೩೧) ಶುರುವಾಗಲಿರುವ ಮೂರು ಟಿ೨೦ ಪಂದ್ಯ ಸರಣಿಯ ಮೊದಲ ಪಂದ್ಯದಲ್ಲಿಯೇ ಮುರಿಯುವ ಸಾಧ್ಯತೆ ಇದೆ.

೩೮ರ ಹರೆಯದ ಗೇಲ್, ಅಫ್ರಿದಿ ಆಡಿದ ಪಂದ್ಯಗಳಿಗೆ ಹೋಲಿಸಿದರೆ ೮೧ ಪಂದ್ಯಗಳ ಹಿನ್ನಡೆಯಲ್ಲಿದ್ದಾರೆ. ಆದರೆ, ಅಫ್ರಿದಿಗಿಂತಲೂ ಹೆಚ್ಚುವರಿ ಐದು ಇನ್ನಿಂಗ್ಸ್‌ಗಳೊಂದಿಗೆ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವದ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಪೈಕಿ ಅಗ್ರಮೇವ ಸ್ಥಾನದಲ್ಲಿರುವ ಗೇಲ್, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆ ಬರೆಯುವುದನ್ನು ಖಚಿತಪಡಿಸಿದ್ದಾರೆ.

#MostSixesInODI #ChrisGayle #SahidAfridi

A post shared by YUSUF KHAN (@ykhan9711) on

ಅಂದಹಾಗೆ, ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಪ್ರತಿಭಾನ್ವಿತ ಆಲ್ರೌಂಡರ್ ಶಾಹೀದ್ ಅಫ್ರಿದಿ ಏಕದಿನ ಪಂದ್ಯಾವಳಿಯಲ್ಲಿ ೩೫೧ ಸಿಕ್ಸರ್ ಬಾರಿಸಿದ್ದರೆ, ಟಿ೨೦ಯಲ್ಲಿ ೭೩ ಮತ್ತು ಸಾಂಪ್ರದಾಯಿಕ ಟೆಸ್ಟ್ ಪ್ರಕಾರದಲ್ಲಿ ೫೨ ಸಿಕ್ಸರ್ ದಾಖಲಿಸಿದ್ದಾರೆ. ಇತ್ತ, ಗೇಲ್ ಏಕದಿನ ಕ್ರಿಕೆಟ್‌ನಲ್ಲಿ ೨೭೫ ಸಿಕ್ಸರ್ ಬಾರಿಸಿದರೆ, ಟಿ೨೦ಯಲ್ಲಿ ೧೦೩ ಮತ್ತು ಐದು ದಿನಗಳ ಪಂದ್ಯದಲ್ಲಿ ೯೮ ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದಾರೆ. ಇನ್ನು, ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಒಟ್ಟಾರೆ ೫೦೪ ಅಂತಾರಾಷ್ಟ್ರೀಯ ಪಂದ್ಯಗಳಿಂದ ೩೪೨ ಸಿಕ್ಸರ್ ಸಿಡಿಸಿದ್ದು, ಸರ್ವಾಧಿಕ ಸಿಕ್ಸರ್‌ ಸರದಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More