ವೃತ್ತಿಬದುಕಿನಲ್ಲೇ ಅತಿ ಹೀನಾಯ ಸೋಲು ಕಂಡ ಸೆರೆನಾ ವಿಲಿಯಮ್ಸ್

23 ಗ್ರಾಂಡ್‌ಸ್ಲಾಮ್‌ ವಿಜೇತೆ ಸೆರೆನಾ ವಿಲಿಯಮ್ಸ್ ವೃತ್ತಿಬದುಕಿನಲ್ಲೇ ಅತಿ ಹೀನಾಯ ಸೋಲನುಭವಿಸಿದ್ದಾರೆ. ಸ್ಯಾನ್ ಜೋಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಯುವ ಆಟಗಾರ್ತಿ, ಇಂಗ್ಲೆಂಡ್‌ನ ಜೊಹಾನ್ನ ಕೊಂಟಾ ಎದುರು ೧-೬, ೦-೬ ಸೆಟ್‌ಗಳಲ್ಲಿ ಕೃಷ್ಣಸುಂದರಿ ಸೋತು ಸೊರಗಿದರು

ಮುಂಬರುವ ವರ್ಷದ ಕಡೆಯ ಗ್ರಾಂಡ್‌ಸ್ಲಾಮ್ ಟೂರ್ನಿ ಅಮೆರಿಕ ಓಪನ್‌ಗೆ ಸಜ್ಜಾಗಲು ಎರಡು ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದ ಸೆರೆನಾ, ಮೊದಲ ಹಂತದಲ್ಲೇ ಮುಗ್ಗರಿಸಿದ್ದಾರೆ. ಮಂಗಳವಾರ (ಜುಲೈ ೩೧) ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಯುವ ಆಟಗಾರ್ತಿಯ ಎದುರು ಅತ್ಯಂತ ಕಳಪೆ ಆಟವಾಡಿದ ವಿಶ್ವದ ಮಾಜಿ ನಂ ೧ ಆಟಗಾರ್ತಿ ಸೆರೆನಾ, ದಯನೀಯ ಸೋಲನುಭವಿಸಿದರು.

ಬ್ರಿಟನ್‌ನ ನಂ ೧ ಆಟಗಾರ್ತಿ ಜೊಹಾನ್ನ ಕೊಂಟಾ ಆಟದೆದುರು ತೀವ್ರ ಮಂಕಾದ ಸೆರೆನಾ, ಕೊನೆಯಲ್ಲಂತೂ ೧೨ ಗೇಮ್‌ಗಳಲ್ಲಿ ಸೋಲನುಭವಿಸಿ ನೆರೆದಿದ್ದ ಪ್ರೇಕ್ಷಕರನ್ನು ದಂಗುಬಡಿಸಿದರು. ಪ್ರಮುಖ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜೊಹಾನ್ನ ಕೊಂಟಾ ಕೇವಲ ೫೧ ನಿಮಿಷಗಳಲ್ಲೇ ಸೋಲಿಗೆ ಶರಣಾದರು.

ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ೨೦೧೭ರ ಟೆನಿಸ್ ಋತುವಿನಿಂದ ಬಹುಪಾಲಲು ವಂಚಿತವಾದ ೩೬ರ ಹರೆಯದ ಸೆರೆನಾ, ಜೊಹಾನ್ನ ವಿರುದ್ಧ ಕಿಂಚಿತ್ತೂ ಹೋರಾಟ ನಡೆಸದೆಯೇ ಕಳಪೆ ಆಟದೊಂದಿಗೆ ಸೋಲನುಭವಿಸಿದರು. ಮೊದಲ ಸೆಟ್‌ನಲ್ಲಿ ಕೇವಲ ಒಂದು ಗೇಮ್ ಗೆದ್ದ ಸೆರೆನಾ, ಎರಡನೇ ಸೆಟ್‌ನಲ್ಲಂತೂ ಒಂದೇ ಒಂದು ಗೇಮ್ ಅನ್ನು ಗೆಲ್ಲಲೂ ವಿಫಲವಾದರು.

#MubadalaSVC #SerenaWilliams #VenusWilliams 🎾

A post shared by @ sb_no_bs on

ಇದನ್ನೂ ಓದಿ : ಯುಎಸ್ ಓಪನ್‌ಗೆ ಸೂಕ್ತ ತಯಾರಿ ನಡೆಸಲು ಅಣಿಯಾದ ಸೆರೆನಾ ವಿಲಿಯಮ್ಸ್

“ನನಗೆ ಗೊತ್ತಿಲ್ಲ. ನನ್ನ ಮನಸ್ಸಿನಲ್ಲಿ ಅನೇಕ ಸಂಗತಿಗಳು ಝೇಂಕರಿಸುತ್ತಿವೆ. ನನ್ನ ಈ ಆಘಾತಕಾರಿ ಸೋಲಿನ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಬಯಸೆನು. ಒಟ್ಟಾರೆ, ಇಡೀ ಪಂದ್ಯದಾದ್ಯಂತ ನನಗೆ ನನ್ನ ಆಟ ಕಳಪೆಯಿಂದ ಕೂಡಿತ್ತೆಂಬುದು ಮನವರಿಕೆಯಾಯಿತು,’’ ಎಂದು ಪಂದ್ಯ ಮುಗಿದ ಬಳಿಕ ಸೆರೆನಾ ಪ್ರತಿಕ್ರಿಯಿಸಿದರು. ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಪಡೆದಿದ್ದ ಸೆರೆನಾ, ಕೇವಲ ಒಂಬತ್ತು ವಿನ್ನರ್‌ಗಳನ್ನು ಬಾರಿಸಲಷ್ಟೇ ಶಕ್ತರಾದರು. ಎಲ್ಲಕ್ಕಿಂತ ಮಿಗಿಲಾಗಿ ಆರು ಬಾರಿ ಸರ್ವ್ ಕಳೆದುಕೊಂಡ ಸೆರೆನಾ, ೨೫ ಅನಗತ್ಯ ತಪ್ಪು ಹೊಡೆತಗಳನ್ನೆಸಗಿದರು.

ಕಳೆದ ತಿಂಗಳು ಪ್ರತಿಷ್ಠಿತ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಆಕರ್ಷಕ ಪ್ರದರ್ಶನ ನೀಡಿ ಫೈನಲ್ ತಲುಪಿದ್ದ ಸೆರೆನಾ ವಿಲಿಯಮ್ಸ್, ಪ್ರಶಸ್ತಿ ಸುತ್ತಿನಲ್ಲಿ ಜರ್ಮನ್ ಆಟಗಾರ್ತಿ ಏಂಜಲಿಕ್ ಕೆರ್ಬರ್ ಎದುರು ನೇರ ಸೆಟ್‌ಗಳಲ್ಲಿ ಸೋಲನುಭವಿಸಿ ಆಘಾತ ಅನುಭವಿಸಿದ್ದರು. ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಯುಎಸ್ ಓಪನ್‌ ಗೆಲ್ಲುವ ಛಲಕ್ಕೆ ಬಿದ್ದಿರುವ ಸೆರೆನಾ, ಅದಕ್ಕಾಗಿ ತೀವ್ರ ತಯಾರಿ ನಡೆಸುತ್ತಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More