ಎಜ್‌ಬ್ಯಾಸ್ಟನ್ ಪಂದ್ಯದ ಹೀರೋ ಬೆನ್ ಸ್ಟೋಕ್ಸ್ ಲಾರ್ಡ್ಸ್ ಟೆಸ್ಟ್‌ಗೆ ಅಲಭ್ಯ

ಭಾರೀ ವಿವಾದ ಕೆರಳಿಸಿದ್ದ ಕಳೆದ ವರ್ಷದ ನೈಟ್ ಕ್ಲಬ್ ಗಲಭೆ ಪ್ರಕರಣದ ವಿಚಾರಣೆಯ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಗುರುವಾರದಿಂದ (ಆಗಸ್ಟ್ ೯) ಲಾರ್ಡ್ಸ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ಭಾರತಕ್ಕೆ ಇದು ವರವಾಗುವುದೇ?

೨೭ರ ಹರೆಯದ ಬೆನ್ ಸ್ಟೋಕ್ಸ್, ೨೮ರ ಹರೆಯದ ರಿಯಾನ್ ಅಲಿ, ೨೭ರ ಹರೆಯದ ರಿಯಾನ್ ಹೇಲ್ ಬ್ರಿಸ್ಟಲ್‌ನಲ್ಲಿನ ಗಲಭೆ ಪ್ರಕರಣವನ್ನು ಅಲ್ಲಗಳೆದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ೨೫ರಂದು ಕ್ಲಿಫ್ಟನ್ ಟ್ರಿಯಾಂಗಲ್‌ನಲ್ಲಿ ನಡೆದ ನೈಟ್ ಕ್ಲಬ್ ಗಲಭೆ ಪ್ರಕರಣ ಸ್ಟೋಕ್ಸ್ ಸೇರಿದಂತೆ ಈ ಮೂವರನ್ನು ಸುತ್ತುವರೆದಿದ್ದು, ಪೊಲೀಸರು ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

೧೯೮೬ರ ಸಾರ್ವಜನಿಕ ಸುರಕ್ಷತಾ ಕಾಯ್ದೆ ವಿಭಾಗ ೩ (೧) ಹಾಗೂ (೭) ನಿಯಮಗಳನ್ನು ಈ ಮೂವರೂ ಉಲ್ಲಂಘಿಸಿದ್ದಾರೆ ಎಂದು ದೂರಲಾಗಿದೆ. ಅಂದಹಾಗೆ, ಈ ನೈಟ್ ಕ್ಲಬ್ ಗಲಭೆಯಲ್ಲಿ ಸ್ಟೋಕ್ಸ್ ಕಣ್ಣಿನ ಪಾಪೆಗೆ ಪೆಟ್ಟಾಗಿತ್ತು ಕೂಡಾ. ಈ ಘಟನೆಯ ವೇಳೆ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ಕೂಡಾ ಸ್ಥಳದಲ್ಲಿ ಹಾಜರಿದ್ದರು.

ನ್ಯಾಯಾಧೀಶ ಪೀಟರ್ ಬ್ಲೇರ್ ವಿಚಾರಣೆಯ ನೇತೃತ್ವ ವಹಿಸಿದ್ದು, ಕೋರ್ಟ್ ರೂಂ ಒಂದರಲ್ಲಿ ನಡೆಯಲಿರುವ ಈ ವಿಚಾರಣೆ ಕನಿಷ್ಠ ಐದರಿಂದ ಏಳು ದಿನಗಳ ಕಾಲ ನಡೆಯುವ ಸಂಭವವಿದೆ. ಹೀಗಾಗಿ, ಭಾರತ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಸ್ಟೋಕ್ಸ್ ಅಲಭ್ಯವಾಗಲಿದ್ದಾರೆ. ಇದೇ ನೈಟ್ ಕ್ಲಬ್ ಪ್ರಕರಣದಲ್ಲಿ ಸ್ಟೋಕ್ಸ್, ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯಿಂದಲೂ ವಂಚಿತರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಸರಣಿಯನ್ನು ೦-೪ರಿಂದ ಕೈಚೆಲ್ಲಿದ್ದು ಕೂಡಾ ಗಮನಾರ್ಹ.

Super Stokes Man !! 😁😁 . . . @stokesy #BenStokes #TeamStokes

A post shared by Benjamin Andrew Stokes (@benstokes.fp) on

ಇದನ್ನೂ ಓದಿ : ಕೊಹ್ಲಿ ಪಡೆಯನ್ನು ಕಟ್ಟಿಹಾಕಿ ಚಾರಿತ್ರಿಕ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಕಂಡ ಇಂಗ್ಲೆಂಡ್

ನ್ಯೂಜಿಲೆಂಡ್, ಪಾಕಿಸ್ತಾನ ಟೆಸ್ಟ್ ಸರಣಿಗಳಲ್ಲಿ ಆಡಿದ್ದ ಸ್ಟೋಕ್ಸ್ ಪ್ರಭಾವಿ ಪ್ರದರ್ಶನ ನೀಡಿದ್ದರು. ಶನಿವಾರ (ಆಗಸ್ಟ್ ೪) ಮುಕ್ತಾಯ ಕಂಡ ಭಾರತ ವಿರುದ್ಧದ ಎಜ್‌ಬ್ಯಾಸ್ಟನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ೩೧ ರನ್ ಗಳಿಸುವಲ್ಲಿ ಸ್ಟೋಕ್ಸ್ ಮಿಂಚಿನ ದಾಳಿ ಮಹತ್ವದ ಪಾತ್ರ ವಹಿಸಿತ್ತು. ಪ್ರಮುಖ ನಾಲ್ಕು ವಿಕೆಟ್ ಪಡೆದಿದ್ದ ಸ್ಟೋಕ್ಸ್ ಇಂಗ್ಲೆಂಡ್‌ ಆಡಿದ ಒಂದು ಸಾವಿರ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.

ಈ ಮಧ್ಯೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ದಾವಿದ್ ಮ್ಯಾಲನ್‌ ಅವರನ್ನು ಇಂಗ್ಲೆಂಡ್ ಆಯ್ಕೆಸಮಿತಿ ಲಾರ್ಡ್ಸ್ ಟೆಸ್ಟ್‌ನಿಂದ ಕೈಬಿಟ್ಟಿದೆ. ಇತ್ತೀಚಿನ ಇನ್ನಿಂಗ್ಸ್‌ಗಳಲ್ಲಿ ಕೇವಲ ೩೦ ರನ್‌ಗಳನ್ನು ಗಳಿಸಲೂ ಮ್ಯಾಲನ್ ವಿಫಲವಾಗಿದ್ದಾರೆ. ಈ ಋತುವಿನಲ್ಲಿ ಅವರು ಕಲೆಹಾಕಿರುವುದು ಕೇವಲ ೭೪ ರನ್‌ಗಳನ್ನಷ್ಟೆ. ಮೇಲಾಗಿ, ವಿರುದ್ಧದ ಪಂದ್ಯದಲ್ಲಿ ಕೆಲವೊಂದು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಮುಖ್ಯವಾಗಿ, ಮೊದಲ ಇನ್ನಿಂಗ್ಸ್‌ನಲ್ಲಿ ೨೧ ರನ್ ಗಳಿಸಿದ್ದ ಕೊಹ್ಲಿ ಕ್ಯಾಚ್ ಕೈಚೆಲ್ಲಿದ್ದರು. ಇದರ ಲಾಭ ಪಡೆದಿದ್ದ ಭಾರತದ ಕಪ್ತಾನ ೧೪೯ ರನ್ ಗಳಿಸಿದ್ದನ್ನು ಸ್ಮರಿಸಬಹುದು.

ಎರಡನೇ ಟೆಸ್ಟ್‌ಗೆ ತಂಡ ಇಂತಿದೆ

ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಜಾನಿ ಬೇರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಅಲೆಸ್ಟೈರ್ ಕುಕ್, ಕೀಟನ್ ಜೆನ್ನಿಂಗ್ಸ್, ಸ್ಯಾಮ್ ಕರನ್, ಓಲ್ಲೀ ಪೋಪ್, ಕ್ರಿಸ್ ವೋಕ್ಸ್, ಜೇಮಿ ಪೋರ್ಟರ್ ಹಾಗೂ ಅದಿಲ್ ರಶೀದ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More