ಟೀಂ ಇಂಡಿಯಾ ಜತೆಗೆ ಅನುಷ್ಕಾ ಶರ್ಮಾ ಪೋಸಿಗೆ ಟ್ವೀಟಿಗರ ತರಾಟೆ

ಮುದ್ದು ಮಡದಿ ಅನುಷ್ಕಾ ಶರ್ಮಾ ವಿಷಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸುಖಾ ಸುಮ್ಮನೆ ಟೀಕೆಗೆ ಗುರಿಯಾಗಿದ್ದಾರೆ. ಪ್ರಸಕ್ತ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಭಾರತೀಯ ಉನ್ನತ ಆಯೋಗ ಆತಿಥ್ಯ ನೀಡಿದ್ದು, ತಂಡದ ಜತೆಗಿರುವ ಅನುಷ್ಕಾ ವಿವಾದ ಎಬ್ಬಿಸಿದ್ದಾರೆ

ವಿರುಷ್ಕಾ ದಂಪತಿ ಮತ್ತೆ ಸುದ್ದಿಯಲ್ಲಿದೆ. ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಲಂಡನ್‌ನ ರಾಯಭಾರ ಕಚೇರಿ ಏರ್ಪಡಿಸಿದ್ದ ಆತಿಥ್ಯದ ನಂತರ ಟೀಂ ಇಂಡಿಯಾ ಜತೆಗೆ ತೆಗೆಯಲಾಗಿರುವ ಫೋಟೋದಲ್ಲಿ ಅನುಷ್ಕಾ ಶರ್ಮಾ ಕೂಡಾ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಟೀಮ್ ಇಂಡಿಯಾ ನಾಯಕನಾಗಿರುವುದನ್ನೇ ಅನುಷ್ಕಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಲಾಗಿದೆ.

ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯ ಸರಣಿಯ ಮೊದಲ ಮೂರು ಪಂದ್ಯಗಳು ಮುಗಿಯುವವರೆಗಾದರೂ, ತಂಡದ ಯಾವುದೇ ಸದಸ್ಯನ ಪತ್ನಿ, ಗೆಳತಿಯರು ತಂಡದೊಟ್ಟಿಗೆ ಇರಕೂಡದೆಂದು ಬಿಸಿಸಿಐ ಕಡ್ಡಾಯವಾಗಿ ಹೇಳಿದೆಯಾದರೂ, ವಿರುಷ್ಕಾ ಬಿಸಿಸಿಐ ಆದೇಶವನ್ನೂ ಉಲ್ಲಂಘಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ಕೆಲವು ಟ್ವೀಟಿಗರು ಎತ್ತಿದ್ದಾರೆ.

ಆದಾಗ್ಯೂ, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಭಾರತ ಉನ್ನತ ಆಯೋಗದ ಕಚೇರಿಯ ಮುಂಭಾಗದಲ್ಲಿ ಟೀಮ್ ಇಂಡಿಯಾ ತೆಗೆಸಿಕೊಂಡಿರುವ ಫೋಟೋ ಪೋಸ್ಟ್ ಆಗುತ್ತಲೇ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ದ್ವಿಪಕ್ಷೀಯ ಸರಣಿಯ ವೇಳೆ ಕ್ರಿಕೆಟಿಗರ ಜತೆಗೆ ಅವರ ಪತ್ನಿಯರು ಹಾಗೂ ಗೆಳತಿಯರು ಕೂಡಾ ಪ್ರವಾಸ ಕೈಗೊಳ್ಳುತ್ತಿರುವುದು ಇದೇ ಮೊದಲನೇಲ್ಲ. ಆದರೆ, ವೃಥಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಇಚ್ಛಿಸದ ಬಿಸಿಸಿಐ, ಸಾಧ್ಯವಾದಷ್ಟೂ ಕ್ರಿಕೆಟಿಗರ ಜತೆಗೆ ಮಹಿಳೆಯರು ಇರಕೂಡದೆಂದು ಫರ್ಮಾನು ಹೊರಡಿಸಿದ ಸಂದರ್ಭಗಳೂ ಇವೆ.

ಇದನ್ನೂ ಓದಿ : ಪೋಸ್ಟ್ ಆದ ಕ್ಷಣಾರ್ಧದಲ್ಲೇ ಭರ್ಜರಿ ಲೈಕ್ ಪಡೆದ ವಿರುಷ್ಕಾ ಅಪ್ಪುಗೆಯ ಚಿತ್ರ

ಅಂದಹಾಗೆ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆಯೂ ಕ್ರೀಡಾಂಗಣದ ಸ್ಟ್ಯಾಂಡ್‌ನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. ಎಜ್‌ಬ್ಯಾಸ್ಟನ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ವೆಡ್ಡಿಂಗ್ ರಿಂಗ್ ಅನ್ನು ಅನುಷ್ಕಾಳತ್ತ ತೋರಿ ಸಂಭ್ರಮಿಸಿದ ಚಿತ್ರ ಕೂಡಾ ವೈರಲ್ ಆಗಿತ್ತು.

ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಅಮೋಘ ಪ್ರದರ್ಶನ ನೀಡಿದರಾದರೂ, ತಂಡ ೩೧ ರನ್‌ಗಳಿಂದ ಸೋಲನುಭವಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ೧೯೪ ರನ್ ಗೆಲುವಿನ ಗುರಿ ಪಡೆದಿದ್ದ ಭಾರತಕ್ಕೆ ಬೆನ್ ಸ್ಟೋಕ್ಸ್ ಮಾರಕರಾಗಿದ್ದರು. ಸದ್ಯ, ಐದು ಪಂದ್ಯ ಸರಣಿಯ ಎರಡನೇ ಪಂದ್ಯ ಗುರುವಾರದಿಂದ ಆರಂಭವಾಗಲಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More