ಮಹಿಳಾ ತಂಡದ ಕೋಚ್ ಹುದ್ದೆಯ ೨೦ ಮಂದಿ ಅಭ್ಯರ್ಥಿಗಳ ರೇಸ್‌ನಲ್ಲಿ ಕನ್ನಡಿಗ ಜೋಷಿ

ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕರ್ನಾಟಕದ ಸ್ಟಾರ್ ಸ್ಪಿನ್ನರ್ ಸುನೀಲ್ ಜೋಶಿ ಭಾರತ ವನಿತಾ ತಂಡದ ಕೋಚ್ ಹುದ್ದೆಗೇರಲು ಅಣಿಯಾಗಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ೨೦ ಮಂದಿ ಅಭ್ಯರ್ಥಿಗಳ ಸಂದರ್ಶನದಲ್ಲಿ ಒಬ್ಬರಾಗಿರುವ ಜೋಷಿಗೆ, ರಮೇಶ್ ಪೊವಾರ್ ಪ್ರಬಲ ಸ್ಪರ್ಧಿಯಾಗಿದ್ದಾರೆ

ಕನ್ನಡಿಗ ಸುನಿಲ್ ಜೋಷಿ ವನಿತಾ ಕ್ರಿಕೆಟ್ ತಂಡದ ತರಬೇತುದಾರನಾಗುವ ಉತ್ಸುಕತೆಯಲ್ಲಿದ್ದಾರೆ. ಮುಂಬೈನಲ್ಲಿ ಶುಕ್ರವಾರ (ಆ.೯) ನಡೆಯಲಿರುವ ಸಂದರ್ಶನದಲ್ಲಿ ೨೦ ಮಂದಿ ತರಬೇತುದಾರನ ಸ್ಥಾನಾಕಾಂಕ್ಷಿಗಳ ಪೈಕಿ ಜೋಷಿ ಕೂಡ ಒಬ್ಬರಾಗಿದ್ದಾರೆ. ಜೋಷಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ ಮುಂಬೈನ ರಮೇಶ್ ಪೊವಾರ್.

ಜೋಷಿ ಹಾಗೂ ಪೊವಾರ್ ಜೊತೆಗೆ ಭಾರತದ ಮಾಜಿ ವಿಕೆಟ್‌ ಕೀಪರ್ ಅಜಯ್ ರಾತ್ರಾ ಹಾಗೂ ವಿಜಯ್ ಯಾದವ್, ವನಿತಾ ತಂಡದ ಮಾಜಿ ನಾಯಕಿ ಮಮತಾ ಮಾಬೆನ್ ಹಾಗೂ ಸುಮನ್ ಶರ್ಮಾ, ಸಹಾಯಕ ಕೋಚ್ ಪೂರ್ಣಿಮಾ ರಾವು, ಮರಿಯಾ ಫಾಹೆಯಂಥವರು ಕೋಚ್ ರೇಸ್‌ನಲ್ಲಿರುವ ಪ್ರಮುಖರು. ಈ ಪೈಕಿ ಮರಿಯಾ, ನ್ಯೂಜಿಲೆಂಡ್ ಪರ ಎರಡು ಟೆಸ್ಟ್, ೫೧ ಏಕದಿನ ಪಂದ್ಯಗಳನ್ನಾಡಿದ್ದಾರೆ. ಪ್ರಸಕ್ತ ಗುಂಟೂರಿನ ಎಸಿಎ ಅಕಾಡೆಮಿಯಲ್ಲಿ ೩೪ರ ಹರೆಯದ ಮರಿಯಾ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂದಹಾಗೆ, ಎಡಗೈ ಸ್ಪಿನ್ನರ್ ಜೋಷಿ, ಭಾರತದ ಪರ ೧೫ ಟೆಸ್ಟ್ ಪಂದ್ಯಗಳನ್ನಾಡಿದ್ದು, ೬೯ ಏಕದಿನ ಪಂದ್ಯಗಳನ್ನಾಡಿದ್ದಾರೆ. ಒಮನ್ ಹಾಗೂ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ್ದಾರೆ. ೧೬೦ ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಜೋಷಿ, ಜಮ್ಮು ಹಾಗೂ ಕಾಶ್ಮೀರ, ಅಸ್ಸಾಂ ಹಾಗೂ ಹೈದರಾಬಾದ್ ತಂಡಗಳನ್ನೂ ಮುನ್ನಡೆಸಿದ್ದಾರೆ.

ಇದನ್ನೂ ಓದಿ : ಎಂ ಎಸ್ ಧೋನಿ ನಿವೃತ್ತಿ ಊಹಾಪೋಹಕ್ಕೆ ತೆರೆ ಎಳೆದ ಕೋಚ್ ರವಿಶಾಸ್ತ್ರಿ

ಸಿಒಎ ಸದಸ್ಯ ಡಯಾನ ಎಡುಲ್ಜಿ, ಬಿಸಿಸಿಐ ಕ್ರಿಕೆಟ್ ಆಪರೇಟರ್ ಜಿ ಎಂ ಸಾಬಾ ಕರೀಮ್ ಹಾಗೂ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ನಾಳೆ ನಡೆಯಲಿರುವ ಕೋಚ್ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಅರೋಥೆ ನಿರ್ಗಮನದ ನಂತರ ಬಿಸಿಸಿಐ ವನಿತಾ ಕೋಚ್ ತಂಡಕ್ಕೆ ಸಂದರ್ಶನ ಕರೆದಿದೆ. ಅರೋಥೆ ದಕ್ಷ ಮಾರ್ಗದರ್ಶನದಲ್ಲಿ ಮಿಥಾಲಿ ರಾಜ್, ಸ್ಮೃತಿ ಮಂದಾನ, ಕನ್ನಡತಿ ವೇದಾ ಕೃಷ್ಣಮೂರ್ತಿ, ಹರ್ಮನ್‌ಪ್ರೀತ್ ಕೌರ್‌ರಂಥವರ ಸಾಹಸದಲ್ಲಿ ವಿಶ್ವಕಪ್ ಫೈನಲ್‌ಗೆ ಭಾರತ ತಂಡ ಲಗ್ಗೆ ಹಾಕಿತ್ತು.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More