ಆಳಾಗುವವ ಅರಸಾಗಬಲ್ಲ ಎಂಬ ಮಾತು ನೆನಪಿಸಿದ ಅರ್ಜುನ್ ತೆಂಡೂಲ್ಕರ್

ಇತ್ತೀಚೆಗಷ್ಟೇ ಮುಗಿದ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಯುವ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದ ಅರ್ಜುನ್ ತೆಂಡೂಲ್ಕರ್, ಲಾರ್ಡ್ಸ್ ಮೈದಾನದಲ್ಲಿ ಸಿಬ್ಬಂದಿ ಜೊತೆಗೂಡಿ ಸೇವೆ ಸಲ್ಲಿಸಿದ್ದಾನೆ. ಲಾರ್ಡ್ಸ್ ಟೆಸ್ಟ್ ಪಂದ್ಯ ವರುಣನ ಕೈಗೆ ಸಿಲುಕಿದ್ದು, ಮೈದಾನದ ಸಿಬ್ಬಂದಿ ಸೇವೆ ಮಹತ್ವ ಎನಿಸಿದೆ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಕಾಲಿರಿಸಿಯಾಗಿದೆ. ವೈಭವದ ಬದುಕಿಗೆ ಆತನಿಗೇನೂ ಕೊರತೆ ಇಲ್ಲ. ಅಪ್ಪ ಸಚಿನ್ ಅರ್ಜುನ್ ವಯಸ್ಸಿನಲ್ಲೇ ಕೋಟ್ಯಾಧಿಪತಿಯಾಗಿ ಹೋಗಿದ್ದರು. ಆದರೆ, ಮೈದಾನ ಹಾಗೂ ಮೈದಾನದ ಹೊರಗಡೆ ಸಾಧ್ಯವಾದಷ್ಟೂ ಸ್ವಚ್ಛ ಹೆಸರು ಗಳಿಸಿರುವ ಸಚಿನ್, ಪುತ್ರನನ್ನೂ ಅದೇ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂಬುದಕ್ಕೆ ಅರ್ಜುನ್, ಲಾರ್ಡ್ಸ್ ಕ್ರೀಡಾಂಗಣದ ಸಿಬ್ಬಂದಿ ಜೊತೆಗೂಡಿ ಕೆಲಸ ಮಾಡಿರುವುದೇ ಸಾಕ್ಷ್ಯ ನುಡಿಯುತ್ತಿದೆ.

ಲಾರ್ಡ್ಸ್ ಕ್ರಿಕೆಟ್ ಮೈದಾನದ ಟ್ವಿಟರ್ ಹ್ಯಾಂಡಲ್, ಸಚಿನ್ ಪುತ್ರನ ಈ ಅನುಕರಣೀಯ ನಡೆಯನ್ನು ಕೊಂಡಾಡಿದೆ. “ಎಂಸಿಸಿ ಯಂಗ್ ಕ್ರಿಕೆಟಿಗರ ಜೊತೆಗೆ ಮಾತ್ರ ಅರ್ಜುನ್ ತೆಂಡೂಲ್ಕರ್ ಅಭ್ಯಾಸ ನಡೆಸುತ್ತಿಲ್ಲ. ಬದಲಿಗೆ, ಕ್ರೀಡಾಂಗಣದ ಸಿಬ್ಬಂದಿಯ ಜೊತೆಗೂಡಿ ಸೇವೆ ಸಲ್ಲಿಸುತ್ತಿದ್ದಾರೆ,’’ ಎಂದು ಟ್ವೀಟ್ ಮಾಡಿದೆ.

ಅಂದಹಾಗೆ, ಇತ್ತೀಚೆಗಷ್ಟೇ ಮುಕ್ತಾಯ ಕಂಡ ಶ್ರೀಲಂಕಾ ಪ್ರವಾಸದಲ್ಲಿ ಆಲ್ರೌಂಡರ್ ಅರ್ಜುನ್, ಬ್ಯಾಟಿಂಗ್‌ನಲ್ಲಿ ವಿಫಲವಾದರೂ ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದ. ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ೩೩ಕ್ಕೆ ೧ ಹಾಗೂ ೩೨ಕ್ಕೆ ೧ ವಿಕೆಟ್ ಪಡೆದಿದ್ದ ಅರ್ಜುನ್, ಶೂನ್ಯಕ್ಕೆ ವಿಕೆಟ್ ಒಪ್ಪಿಸಿಯೂ ಸದ್ದು ಮಾಡಿದ್ದ!

ಇದನ್ನೂ ಓದಿ : ಯುವ ಟೆಸ್ಟ್ | ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್! 

ಇನ್ನು, ಇದೇ ಸರಣಿಯ ಎರಡನೇ ಪಂದ್ಯದಲ್ಲಿ ೧೪ ರನ್ ಗಳಿಸಿದ್ದ ಅರ್ಜುನ್, ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಗಳಿಸಲಾಗದೆ ೩೩ ರನ್‌ಗಳನ್ನು ನೀಡಿದ್ದ. ಅಂತೆಯೇ, ಎರಡನೇ ಇನ್ನಿಂಗ್ಸ್‌ನಲ್ಲಿ ೩೯ ರನ್ ನೀಡಿದ್ದ ಅರ್ಜುನ್ ೧ ವಿಕೆಟ್ ಗಳಿಸಿದ್ದ.

ಲಂಡನ್‌ನಲ್ಲಿ ಡೇನಿಯಲ್ ವ್ಯಾಟ್ ಜೊತೆಗೆ ತೆಗೆಸಿಕೊಂಡಿದ್ದ ಫೊಟೋ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಅಂದಹಾಗೆ, ಈ ಡೇನಿಯಲ್ ಕಳೆದ ವರ್ಷ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಎದುರು ಮದುವೆ ಪ್ರಸ್ತಾವ ಇಟ್ಟು ಸುದ್ದಿಯಾಗಿದ್ದರು. ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ೩೧ ರನ್ ಸೋಲನುಭವಿಸಿದರೆ, ಪ್ರಸಕ್ತ ಲಾರ್ಡ್ಸ್ ಟೆಸ್ಟ್‌ನಲ್ಲಿ ೧೫ ರನ್ ಗಳಿಸಿ ೩ ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನಡೆ ಅನುಭವಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More