ರೋಜರ್ಸ್ ಕಪ್ ಟೆನಿಸ್: ವಿಂಬಲ್ಡನ್ ಚಾಂಪಿಯನ್ ನೊವಾಕ್‌ಗೆ ಆಘಾತ

ಕಳೆದ ತಿಂಗಳು ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟು ಹದಿಮೂರನೇ ಗ್ರಾಂಡ್‌ಸ್ಲಾಮ್ ಗೆದ್ದಿದ್ದ ನೊವಾಕ್ ಜೊಕೊವಿಚ್ ರೋಜರ್ಸ್ ಕಪ್ ಟೂರ್ನಿಯಲ್ಲಿ ಆಘಾತ ಕಂಡಿದ್ದಾರೆ. ಪ್ರೀಕ್ವಾರ್ಟರ್‌ನಲ್ಲಿ ಸಿಸಿಪಾಸ್ ಎದುರು ನೊವಾಕ್ ಸೋಲನುಭವಿಸಿ ಹೊರಬಿದ್ದರು

ಗ್ರೀಸ್ ದೇಶದ ಯುವ ಆಟಗಾರ ಸ್ಟೆಫಾನಸ್ ಸಿಸಿಪಾಸ್ ವೃತ್ತಿಬದುಕಿನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಪಾಯಕಾರಿ ಆಟಗಾರ ಹಾಗೂ ವಿಶ್ವದ ಮಾಜಿ ನಂ ೧ ಟೆನಿಸಿಗ ಸರ್ಬಿಯಾದ ಜೊಕೊವಿಚ್ ವಿರುದ್ಧ ದಿಟ್ಟ ಆಟವಾಡಿದ ಸಿಸಿಪಾಸ್, ೬-೩, ೬-೭ (೫/೭) ಹಾಗೂ ೬-೩ ಸೆಟ್‌ಗಳಿಂದ ಗೆಲುವು ಸಾಧಿಸಿ ಅಂತಿಮ ಎಂಟರ ಘಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.

ಇದೇ ಭಾನುವಾರ (ಆ.೧೨) ೨೦ನೇ ವಸಂತಕ್ಕೆ ಕಾಲಿರಿಸಿದ ಸಿಸಿಪಾಸ್, ಟೊರಾಂಟೋದಲ್ಲಿ ನಾಲ್ಕು ಬಾರಿ ಪ್ರಶಸ್ತಿ ಜಯಿಸಿದ್ದ ನೊವಾಕ್‌ಗೆ ಸೋಲುಣಿಸಿದರು. ಸ್ವಾರಸ್ಯಕರ ಸಂಗತಿ ಎಂದರೆ, ಇದೇ ಮೊದಲ ಬಾರಿಗೆ ಸಿಸಿಪಾಸ್ ಮತ್ತು ಜೊಕೊವಿಚ್ ಮುಖಾಮುಖಿಯಾಗಿದ್ದರು. “ನನ್ನ ವೃತ್ತಿಬದುಕಿನಲ್ಲೇ ಇದೊಂದು ಅತ್ಯುತ್ತಮ ಪಂದ್ಯ,’’ ಎಂದು ಜೊಕೊವಿಚ್ ಮಣಿಸುತ್ತಿದ್ದಂತೆ ಸಿಸಿಪಾಸ್ ಉದ್ಗರಿಸಿದರು.

೨೭ರ ಹರೆಯದ ಸಿಸಿಪಾಸ್, ಎರಡು ತಾಸುಗಳ ಸೆಣಸಾಟದಲ್ಲಿ ಜೊಕೊವಿಚ್‌ಗೆ ಸೋಲುಣಿಸುವುದರೊಂದಿಗೆ ಮೊಟ್ಟಮೊದಲ ಬಾರಿಗೆ ಮಾಸ್ಟರ್ಸ್ ೧೦೦೦ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಿದಂತಾಗಿದೆ. ಮೊದಲ ಸೆಟ್‌ನಲ್ಲಿಯೇ ಜೊಕೊವಿಚ್ ಹಿನ್ನಡೆ ಕಾಣುವಂತೆ ಮಾಡಿದ ಸಿಸಿಪಾಸ್, ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದು ಸ್ವತಃ ಜೊಕೊವಿಚ್ ಕೂಡಾ ತಲ್ಲಣಿಸುವಂತೆ ಮಾಡಿತು.

ಇದನ್ನೂ ಓದಿ : ರೋಜರ್ಸ್ ಕಪ್ ಟೆನಿಸ್: ನಡಾಲ್, ಜೊಕೊವಿಚ್ ಗೆಲುವಿನ ಅಭಿಯಾನ

ಇನ್ನು, ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ರಷ್ಯಾದ ಡೆನಿಲ್ ಮೆಡ್ವೆದೆವ್ ವಿರುದ್ಧ ೬-೩, ೬-೨ ನೇರ ಸೆಟ್‌ಗಳ ಗೆಲುವು ಸಾಧಿಸಿ ಎಂಟರ ಘಟ್ಟಕ್ಕೆ ಧಾವಿಸಿದರು. ೫೨ ನಿಮಿಷಗಳ ಕಾದಾಟದಲ್ಲಿ ಜ್ವೆರೇವ್ ಏಕಪಕ್ಷೀಯ ಪ್ರದರ್ಶನದೊಂದಿಗೆ ಡೆನಿಲ್ ಎದುರು ಜಯಭೇರಿ ಬಾರಿಸಿದರು.

ಇನ್ನು, ಬಲ್ಗೇರಿಯಾದ ಐದನೇ ಶ್ರೇಯಾಂಕಿತ ಗ್ರಿಗೊರ್ ಡಿಮಿಟ್ರೊವ್ ಪುರುಷರ ವಿಭಾಗದ ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಅಮೆರಿಕದ ಫ್ರಾನ್ಸೆಸ್ ಟಿಯಾಫೋ ಎದುರು ರೋಚಕ ಗೆಲುವು ಸಾಧಿಸಿದರು. ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಡಿಮಿಟ್ರೊವ್, ೭-೬ (೭/೧), ೩-೬, ೭-೬ (೭/೪) ಸೆಟ್‌ಗಳ ಅಂತರದಲ್ಲಿ ಜಯಶಾಲಿಯಾದರು. ಮುಂದಿನ ಸುತ್ತಿನಲ್ಲಿ ಡಿಮಿಟ್ರೊವ್, ವಿಂಬಲ್ಡನ್ ರನ್ನರ್‌ ಕೆವಿನ್ ಆ್ಯಂಡರ್ಸನ್ ವಿರುದ್ಧ ಕಾದಾಡಲಿದ್ದಾರೆ.

ಅಂತೆಯೇ, ಪುರುಷರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಆರನೇ ಶ್ರೇಯಾಂಕಿತ ಆಟಗಾರ ಮರಿನ್ ಸಿಲಿಕ್ ಗೆಲುವಿನ ಅಭಿಯಾನ ಮುಂದುವರೆಸಿದರು. ಅರ್ಜೆಂಟಿನಾದ ೧೧ನೇ ಶ್ರೇಯಾಂಕಿತ ಡೀಗೊ ಶ್ವಾರ್ಟ್ಜ್‌ಮನ್ ವಿರುದ್ಧ ೬-೩, ೬-೨ ನೇರ ಸೆಟ್‌ಗಳ ಗೆಲುವಿನೊಂದಿಗೆ ಸಿಲಿಕ್ ಮುಂದಿನ ಹಂತಕ್ಕೆ ಪ್ರವೇಶ ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More