ಜಕಾರ್ತ ಏಷ್ಯಾಡ್: ಮೊದಲ ದಿನವೇ ಪದಕ ಪಟ್ಟಿಗೆ ಅಣಿಯಾದ ಭಾರತ

ಪ್ರತಿಷ್ಠಿತ ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ಮೊದಲ ದಿನವೇ ಪದಕ ಬೇಟೆಗೆ ಮುಂದಾಗಲಿದೆ. ಹದಿನೈದು ದಿನಗಳ ಕೂಟದ ಮೊದಲ ದಿನದ ವೇಳಾಪಟ್ಟಿಯಲ್ಲಿ ಭಾರತ, ಹಾಕಿ, ಕುಸ್ತಿ, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳಲ್ಲಿ ಕಣಕ್ಕಿಳಿಯುತ್ತಿದ್ದು ಶೂಟಿಂಗ್‌ನಲ್ಲೂ ಪದಕ ಬೇಟೆಗೆ ಸಜ್ಜಾಗಿದೆ

ಏಷ್ಯಾ ಕ್ರೀಡಾಕೂಟದ ಮೊದಲ ದಿನದ ವೇಳಾಪಟ್ಟಿ ಭಾರತಕ್ಕೆ ದೊಡ್ಡದಾಗಿದೆ. ಮಹಿಳಾ ಹಾಕಿ ತಂಡ, ೧೦ ಮೀಟರ್ ರೈಫಲ್ ಮತ್ತು ಪಿಸ್ತೂಲು ಶೂಟಿಂಗ್, ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಹಾಗೂ ಬಜರಂಗ್ ಪುನಿಯಾ ಕಣಕ್ಕಿಳಿಯಲಿದ್ದಾರೆ. ಇನ್ನು ಎಚ್ ಎಸ್ ಪ್ರಣಯ್ ಹಾಗೂ ಕಿಡಾಂಬಿ ಶ್ರೀಕಾಂತ್ ಜತೆಗೆ ಪುರುಷರ ಬ್ಯಾಡ್ಮಿಂಟನ್ ತಂಡ ಆರಂಭಿಕ ಸುತ್ತಿನಲ್ಲಿ ಮಾಲ್ಡೀವ್ಸ್ ವಿರುದ್ಧ ಸ್ಪರ್ಧೆಗಿಳಿಯಲಿದೆ. ಸುಶೀಲ್ ಕುಮಾರ್ ಮತ್ತು ಬಜರಂಗ್ ಪುನಿಯಾ ಮಧ್ಯಾಹ್ನದಂದು ಕಣಕ್ಕಿಳಿಯಲಿದ್ದರೆ, ಆತಿಥೇಯ ಇಂಡೋನೇಷಿಯಾ ವಿರುದ್ಧ ವನಿತಾ ಹಾಕಿ ತಂಡ ಕಾದಾಡಲಿದೆ.

ಮೊದಲ ದಿನದ ವೇಳಾಪಟ್ಟಿ ಇಂತಿದೆ

ಬೆಳಗ್ಗೆ ೬.೩೦

ಶೂಟಿಂಗ್: ಪುರುಷರ ಟ್ರ್ಯಾಪ್ ಅರ್ಹತಾ ಸುತ್ತು

ಬೆಳಗ್ಗೆ ೭.೦೦

ಶೂಟಿಂಗ್: ವನಿತೆಯರ ಟ್ರ್ಯಾಪ್ ಅರ್ಹತಾ ಸುತ್ತು

ಬೆಳಗ್ಗೆ ೭.೩೦ರ ನಂತರ

ಟೇಕ್ವಾಂಡೊ: ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ ಹಾಗೂ ಟೀಂ ವಿಭಾಗ

ಬೆಳಿಗ್ಗೆ ೮.೦೦ರಿಂದ

ಟೆನಿಸ್: ಪುರುಷರ ಸಿಂಗಲ್ಸ್ (೬೪ನೇ ಸುತ್ತು) ಮಹಿಳೆಯರ ಸಿಂಗಲ್ಸ್ (೬೪ರ ಸುತ್ತು), ಮಿಶ್ರ ಡಬಲ್ಸ್ (೩೨ನೇ ಸುತ್ತು)

ಬೆಳಿಗ್ಗೆ ೮.೦೦ರಿಂದ

ಶೂಟಿಂಗ್: ೧೦ ಮೀಟರ್ ಏರ್ ರೈಫಲ್ ಮಿಶ್ರ ಟೀಂ ಅಬಾರ್ಹತಾ ಸುತ್ತು

ಬೆಳಿಗ್ಗೆ ೮.೦೦

ಫೆನ್ಸಿಂಗ್: ಪುರುಷರ ಎಪಿ ವೈಯಕ್ತಿಕ

ವನಿತೆಯರ ಸಬ್ರಿ ವೈಯಕ್ತಿಕ

ಬೆಳಿಗ್ಗೆ ೮.೦೦

ಈಜು: ಪುರುಷರ ೨೦೦ ಮೀಟರ್ ಹೀಟ್, ಪುರುಷರ ೨೦೦ ಮೀಟರ್ ಬಟರ್‌ಫ್ಲೈ, ಪುರುಷರ ೧೦೦ ಮೀಟರ್ ಬ್ಯಾಕ್ ಸ್ಟ್ರೋಕ್, ವನಿತೆಯರ ೧೫೦೦ ಮೀಟರ್ ಫ್ರೀಸ್ಟೈಲ್, ಮಹಿಳೆಯರ ೧೦೦ ಮೀಟರ್ ಬ್ರೆಸ್ಟ್‌ಸ್ಟ್ರೋಕ್, ವನಿತೆಯರ ೨೦೦ ಮೀಟರ್ ಬ್ಯಾಕ್ ಸ್ಟ್ರೋಕ್, ವನಿತೆಯರ ೪/೧೦೦ ಮೀಟರ್ ಫ್ರೀಸ್ಟೈಲ್ ರಿಲೇ

ಬೆಳಿಗ್ಗೆ ೮.೦೦

ವುಶು: ಪುರುಷರ ಚಾಂಗ್‌ಕ್ವಾನ್ ಫೈನಲ್

ಬೆಳಿಗ್ಗೆ ೯.೦೦

ವುಶು: ವನಿತೆಯರ ತಾಜಿಕಾನ್ ಪಂದ್ಯಗಳು

ಬೆಳಿಗ್ಗೆ ೯.೦೦ರಿಂದ

ವನಿತೆಯರ ಬ್ಯಾಸ್ಕೆಟ್‌ಬಾಲ್ ೫/೫ ಪ್ರಾಥಮಿಕ ಸುತ್ತು: ಭಾರತ / ಚೈನೀಸ್ ತೈಪೆ

ಬೆಳಿಗ್ಗೆ ೯.೦೦ರಿಂದ

ಇದನ್ನೂ ಓದಿ : ಏಷ್ಯಾ ಕ್ರೀಡಾಕೂಟ | ತರಬೇತುದಾರರ ಪಾತ್ರ ಕುರಿತು ಪ್ರಶ್ನಿಸಿದ ಸ್ಕ್ವಾಶ್ ತಂಡ

ರೋಯಿಂಗ್: ಪುರುಷರ ಸಿಂಗಲ್ ಸ್ಕಲ್ಸ್ ಹೀಟ್, ವನಿತೆಯರ ಸಿಂಗಲ್‌ ಸ್ಕಲ್ಸ್, ಪುರುಷರ ಡಬಲ್ ಸ್ಕಲ್ಸ್, ವನಿತೆಯರ ಡಬಲ್ ಸ್ಕಲ್ಸ್, ಪುರುಷರ ಜೋಡಿ, ವನಿತೆಯರ ಜೋಡಿ ಸ್ಪರ್ಧೆ, ಪುರುಷರ ಲೈಟ್‌ವೇಟ್ ನಾಲ್ವರ ಸ್ಪರ್ಧೆ, ವನಿತೆಯರ ಲೈಟ್‌ವೇಟ್ ನಾಲ್ವರ ಸ್ಕಲ್ಸ್ ಸ್ಪರ್ಧೆ

ಬೆಳಿಗ್ಗೆ ೯.೦೦ರಿಂದ

ವಾಲಿಬಾಲ್: ವನಿತೆಯರ ಪ್ರಾಥಮಿಕ ಸುತ್ತು

ಬೆಳಿಗ್ಗೆ ೯.೩೦ರಿಂದ

ಸೆಪಕ್‌ಟಕ್ರಾ: ಪುರುಷರ ಮತ್ತು ವನಿತೆಯರ ಟೀಂ ರೆಗು ಪ್ರಾಥಮಿಕ ಸುತ್ತಿನ ಪಂದ್ಯಗಳು

ಬೆಳಿಗ್ಗೆ ೧೦.೦೦

ಶೂಟಿಂಗ್: ೧೦ ಮೀಟರ್ ಏರ್ ಪಿಸ್ತೂಲು ಮಿಶ್ರ ಟೀಂ ಅರ್ಹತಾ ಸುತ್ತು

ಬೆಳಿಗ್ಗೆ ೧೦.೦೦

ವುಶು: ವನಿತೆಯರ ಪಂದ್ಯಗಳು

ಬೆಳಿಗ್ಗೆ ೧೧.೦೦

ವುಶು: ವನಿತೆಯರ ಜಿಯಾಂಶು ಪಂದ್ಯಗಳು

ಮಧ್ಯಾಹ್ನ ೧೨.೦೦

ಶೂಟಿಂಗ್: ೧೦ ಮೀಟರ್ ಏರ್ ರೈಫಲ್ ಮಿಶ್ರ ಟೀಂ ಫೈನಲ್ಸ್

ಮಧ್ಯಾಹ್ನ ೧೨.೦೦ರಿಂದ

ಕುಸ್ತಿ: ಪ್ರೀ-ಕ್ವಾರ್ಟರ್‌ಫೈನಲ್, ಕ್ವಾರ್ಟರ್‌ಫೈನಲ್, ಸೆಮಿಫೈನಲ್, ರಿಪೀಚೆಜ್ ಪಂದ್ಯಗಳು; ಪುರುಷರ ೫೭ ಕೆಜಿ ಫ್ರೀಸ್ಟೈಲ್; ೬೫ ಕೆಜಿ ಫ್ರೀಸ್ಟೈಲ್; ೭೪ ಕೆಜಿ ಪುರುಷರ ಫ್ರೀಸ್ಟೈಲ್; ೮೬ ಕೆಜಿ ಪುರುಷರ ಫ್ರೀಸ್ಟೈಲ್; ೯೭ ಕೆಜಿ ಪುರುಷರ ಫ್ರೀಸ್ಟೈಲ್.

ಮಧ್ಯಾಹ್ನ ೧.೦೦

ಪುರುಷರ ಟೀಂ ಬ್ಯಾಡ್ಮಿಂಟನ್: ಭಾರತ / ಮಾಲ್ಡೀವ್ಸ್

ಮಧ್ಯಾಹ್ನ ೩.೦೦

ವನಿತೆಯರ ಹ್ಯಾಂಡ್‌ಬಾಲ್ ಪ್ರಾಥಮಿಕ ಸುತ್ತು: ಭಾರತ / ಚೀನಾ

ಮಧ್ಯಾಹ್ನ ೩.೨೦

ಶೂಟಿಂಗ್: ೧೦ ಮೀಟರ್ ಏರ್ ಪಿಸ್ತೂಲು ಮಿಶ್ರ ಟೀಂ ಫೈನಲ್ಸ್

ಸಂಜೆ ೪.೩೦ರಿಂದ

ಈಜು: ಪುರುಷರ ೨೦೦ ಮೀಟರ್ ಫ್ರೀಸ್ಟೈಲ್ ಫೈನಲ್, ಪುರುಷರ ೨೦೦ ಮೀಟರ್ ಬಟರ್‌ಫ್ಲೈ, ಪುರುಷರ ೧೦೦ ಮೀಟರ್ ಬ್ಯಾಕ್‌ಸ್ಟ್ರೋಕ್, ವನಿತೆಯರ ೧೫೦೦ ಮೀಟರ್ ಫ್ರೀಸ್ಟೈಲ್, ವನಿತೆಯರ ೧೦೦ ಮೀಟರ್ ಬ್ಯಾಕ್‌ಸ್ಟ್ರೋಕ್, ವನಿತೆಯರ ೨೦೦ ಮೀಟರ್ ಬ್ಯಾಕ್‌ಸ್ಟ್ರೋಕ್, ವನಿತೆಯರ ೪/೧೦೦ ಮೀಟರ್ ಫ್ರೀಸ್ಟೈಲ್ ರಿಲೇ.

ಸಂಜೆ ೫.೩೦

ವುಶು: ಪುರುಷರ ೭೦ ಕೆಜಿ ಸಾಂಡಾ ಸ್ಪರ್ಧೆ, ೩೨ನೇ ಸುತ್ತಿನ ಪಂದ್ಯಗಳು

ಸಂಜೆ ೬.೦೦ರಿಂದ

ಕುಸ್ತಿ: ಫೈನಲ್ಸ್ ಮತ್ತು ಕಂಚು ಪದಕದ ಪಂದ್ಯಗಳು: ಪುರುಷರ ೫೭, ೬೫, ೭೪, ೮೬ ಮತ್ತು ೯೭ ಕೆಜಿ ಫ್ರೀಸ್ಟೈಲ್ ಪಂದ್ಯಗಳು.

ಸಂಜೆ ೭.೦೦

ವನಿತಾ ಹಾಕಿ: ಪ್ರಾಥಮಿಕ ಸುತ್ತು: ಭಾರತ / ಇಂಡೋನೇಷಿಯಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More