ರಾಹಿಯ ಐತಿಹಾಸಿಕ ಸ್ವರ್ಣ ಸಾಧನೆ ಮಧ್ಯೆ ಕಂಚಿನ ಮೆರುಗು ನೀಡಿದ ವುಶು

ರಾಹಿ ಸರ್ನೋಬತ್ ಶೂಟಿಂಗ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಂಡ ಬಳಿಕ ಭಾರತ ಬುಧವಾರದಂದು (ಆ.೨೨) ವುಶು ಕ್ರೀಡೆಯೊಂದರಲ್ಲೇ ನಾಲ್ಕು ಕಂಚಿನ ಪದಕ ಜಯಿಸಿತು. ಇದರೊಂದಿಗೆ ಏಷ್ಯಾಡ್‌ನಲ್ಲಿ ಭಾರತ ೪ ಸ್ವರ್ಣ, ೩ ಬೆಳ್ಳಿ ಹಾಗೂ ೮ ಕಂಚು ಸೇರಿದ ಒಟ್ಟು ೧೫ ಪದಕಗಳನ್ನು ಗಳಿಸಿದಂತಾಗಿದೆ

ಪ್ರತಿಯೊಬ್ಬರ ನಿರೀಕ್ಷೆಯನ್ನೂ ಬುಡಮೇಲು ಮಾಡಿದ ಗುರಿಕಾರ್ತಿ ರಾಹಿ ಸರ್ನೋಬತ್ ವನಿತೆಯರ ೨೫ ಮೀ. ಶೂಟಿಂಗ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟ ಬಳಿಕ ಬುಧವಾರದಂದು (ಆ.೨೨) ಭಾರತ ಒಂದೇ ಕ್ರೀಡೆಯಲ್ಲಿ ನಾಲ್ಕು ಕಂಚಿನ ಪದಕ ಜಯಿಸಿದ್ದು ಏಷ್ಯಾಡ್ ಕ್ರೀಡಾಕೂಟದ ವಿಶೇಷ. ಒಟ್ಟು ಐದು ಪದಕಗಳ ಗಳಿಕೆಯೊಂದಿಗೆ ಒಟ್ಟು ನಾಲ್ಕು ಸ್ವರ್ಣ, ಮೂರು ಬೆಳ್ಳಿ ಹಾಗೂ ಎಂಟು ಕಂಚಿನ ಪದಕ ಸೇರಿ ಒಟ್ಟು ಹದಿನೈದು ಪದಕಗಳನ್ನು ಭಾರತ ಜಯಿಸಿದೆ.

ಶೂಟಿಂಗ್‌ನಲ್ಲಿ ೨ ಸ್ವರ್ಣ, ೩ ಬೆಳ್ಳಿ, ೨ ಕಂಚು, ಕುಸ್ತಿಯಲ್ಲಿ ೨ ಸ್ವರ್ಣ, ೧ ಬೆಳ್ಳಿ, ೩ ಕಂಚು ಮತ್ತು ಸೆಪಕ್‌ಟಕ್ರಾದಲ್ಲಿ ೧ ಕಂಚು ಹಾಗೂ ವುಶು ವಿಭಾಗದಲ್ಲಿ ೪ ಕಂಚು ಪದಕಗಳನ್ನು ಭಾರತ ಗೆದ್ದುಕೊಂಡಿದೆ. ಆದರೆ, ಇಂದು ನಡೆದ ಗ್ರೀಕೊ ರೋಮನ್ ಕುಸ್ತಿ ವಿಭಾಗದಲ್ಲಿ ಭಾರತದ ಯಾವೊಬ್ಬ ಸ್ಪರ್ಧಿಯೂ ಪದಕ ಸುತ್ತಿಗೆ ಧಾವಿಸಲಿಲ್ಲ. ಅಂದಹಾಗೆ, ಕೂಟದ ಪದಕ ಪಟ್ಟಿಯಲ್ಲಿ ಚೀನಾ ೩೭ ಚಿನ್ನ ಸೇರಿದಂತೆ ೮೨ ಪದಕಗಳೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಹರ್‌ಪ್ರೀತ್ ಸಿಂಗ್ ಕಂಚು ಪದಕಕ್ಕಾಗಿನ ಬೌಟ್‌ನಲ್ಲಿ ವೈಫಲ್ಯ ಅನುಭವಿಸಿದರು.

ಅಂದಹಾಗೆ, ಕುಸ್ತಿ ವಿಭಾಗದ ಸ್ಪರ್ಧೆಗಳು ಬುಧವಾರವೇ ಮುಕ್ತಾಯ ಕಂಡಿದ್ದು, ಭಾರತ ಇನ್ನುಳಿದ ಕ್ರೀಡೆಯಲ್ಲಿ ಪದಕ ಗಳಿಕೆಗೆ ಮುಂದಾಗಬೇಕಿದೆ. ಅಂದಹಾಗೆ, ಬುಧವಾರ ಶೂಟಿಂಗ್‌ ಹೊರತುಪಡಿಸಿ ಭಾರತದ ಪದಕ ಗಳಿಕೆಗೆ ಆಸರೆಯಾದದ್ದು, ವುಶು. ಈ ಕ್ರೀಡೆಯ ಸಾಂಡಾ ವಿಭಾಗದಲ್ಲಿ ಭಾರತ ಗೆಲುವು ಸಾಧಿಸಿತು. ಸ್ವಾರಸ್ಯಕರ ಸಂಗತಿ ಎಂದರೆ, ಈ ವುಶು ವಿಭಾಗದಲ್ಲಿ ಯಾವ ಸ್ಪರ್ಧಿಯೂ ಫೈನಲ್ ತಲುಪಲು ಸಾಧ್ಯವಾಗದೆ ಹೋದರೂ, ಸೆಮಿಫೈನಲ್‌ನಲ್ಲಿನ ಸೋಲಿನಿಂದ ನಾಲ್ಕು ಪದಕಗಳು ಬಂದದ್ದು ವಿಶೇಷ.

ರೊಶಿಬಿನಾ ದೇವಿ (೬೦ ಕೆಜಿ), ಸಂತೋಷ್ ಕುಮಾರ್ (ಪುರುಷರ ೫೬ ಕೆಜಿ), ಸೂರ್ಯ ಸಿಂಗ್ (೬೦ ಕೆಜಿ) ಮತ್ತು ನರೇಂದರ್ ಜ್ರೆವಾಲ್ (೬೫ ಕೆಜಿ) ಕಂಚಿನ ಪದಕ ಗೆಲ್ಲುವ ಮೂಲಕ ಏಷ್ಯಾಡ್‌ನಲ್ಲಿ ಭಾರತದ ಪದಕ ಗಳಿಕೆ ೧೫ಕ್ಕೆ ಹೆಚ್ಚಿತು. ಅಂದಹಾಗೆ, ವುಶು ವಿಭಾಗದಲ್ಲಿ ಭಾರತದ ಈ ಹಿಂದಿನ ಶ್ರೇಷ್ಠ ಸಾಧನೆ ಎಂದರೆ ೨೦೧೦ರ ಗುವಾಂಗ್‌ಜೌ ಕೂಟದಲ್ಲಿ ಒಂದು ಬೆಳ್ಳಿ ಮತ್ತು ಕಂಚಿನ ಪದಕ.

ಟೆನಿಸ್‌ನಲ್ಲಿ ಪದಕ ಖಚಿತ

ಟೆನಿಸ್‌ನಲ್ಲಿ ಯುವ ಆಟಗಾರ್ತಿ ಅಂಕಿತಾ ರೈನಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದು, ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ. ಬೆನ್ನಲ್ಲೇ ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ ಕೂಡಾ ಉಪಾಂತ್ಯಕ್ಕೆ ಧಾವಿಸಿದ್ದು, ಟೆನಿಸ್‌ನಲ್ಲಿ ಕನಿಷ್ಠ ಎರಡು ಕಂಚಿನ ಪದಕಗಳು ಲಭ್ಯವಾಗಿವೆ. ಹಾಂಕಾಂಗ್ ಆಟಗಾರ್ತಿ ಎಡುಸಿ ಚಾಂಗ್ ವಿರುದ್ಧ ೬-೪, ೬-೧ ನೇರ ಸೆಟ್‌ಗಳಲ್ಲಿ ರೈನಾ ಗೆಲುವು ಸಾಧಿಸಿದರೆ, ಬೋಪಣ್ಣ ಜೋಡಿ ಚೈನೀಸ್ ತೈಪೆ ಜೋಡಿ ಯಾಂಗ್ ಸೀಹ್ ಮತ್ತು ಯಾಂಗ್ ಸುಂಗ್ - ಹುವಾ ಎದುರು ೬-೩, ೫-೭, ೧೦-೧ ಸೆಟ್ ಗೆಲುವು ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More