ಏಷ್ಯಾಡ್ ಬೆಳ್ಳಿ ಪದಕಕ್ಕೆ ಗುರಿ ಇಟ್ಟು ಇತಿಹಾಸ ಬರೆದ ಹದಿನೈದರ ಬಾಲಕ!

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ಶೂಟಿಂಗ್‌ನಲ್ಲಿ ಮತ್ತೊಂದು ಪದಕ ಜಯಿಸಿದೆ. ಕೇವಲ ಹದಿನೈದರ ಹರೆಯದ ಶಾರ್ದೂಲ್ ವಿಹಾನ್, ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್‌ನಲ್ಲಿ ರಜತ ಸಾಧನೆ ಮೆರೆದು ಚರಿತ್ರೆಯ ಪುಟ ಸೇರಿದ್ದಾನೆ

ಹದಿನೈದರ ಹರೆಯದಲ್ಲೇ ಏಷ್ಯಾ ಕ್ರೀಡಾಕೂಟದಲ್ಲಿ ಪದಕ ವಿಜೇತನೆಂಬ ಗರಿಮೆಗೆ ಭಾಜನವಾಗಿರುವ ಈ ಪೋರ ಒಂಬತ್ತನೇ ತರಗತಿಯ ವಿದ್ಯಾರ್ಥಿ. ಯುವ ಗುರಿಕಾರರಾದ ಲಕ್ಷಯ್ ಶೆರಾನ್ ಮತ್ತು ಸೌರಭ್ ಚೌಧರಿಯಂತೆ ಈ ಬಾರಿಯ ಏಷ್ಯಾಡ್‌ನಲ್ಲಿ ಭಾರತದ ಕಿರಿಯ ಶೂಟರ್‌ಗಳು ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಶಾರ್ದೂಲ್‌ನ ಈ ಚಾರಿತ್ರಿಕ ಸಾಧನೆಯಿಂದ ಭಾರತ ಕೂಟದ ಐದನೇ ದಿನವಾದ ಬುಧವಾರದಂದು (ಆ.೨೩) ಒಂದು ಬೆಳ್ಳಿ, ಎರಡು ಕಂಚು ಪದಕಗಳನ್ನು ಗೆದ್ದುಕೊಂಡಿತು.

ಗುರುವಾರ (ಆ.೨೩) ನಡೆದ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್‌ನಲ್ಲಿ ಶಾರ್ದೂಲ್, ೭೩ ಸ್ಕೋರ್‌ನೊಂದಿಗೆ ಎರಡನೇ ಸ್ಥಾನ ಪಡೆದರು. ೩೪ರ ಹರೆಯದ ಕೊರಿಯಾ ಶೂಟರ್ ಶಿನ್ ಹುಯಾನ್‌ವೂ ಕೇವಲ ಒಂದು ಪಾಯಿಂಟ್ಸ್ ಅಂತರದಿಂದ ಅಂದರೆ ೭೪ ಸ್ಕೋರ್‌ನೊಂದಿಗೆ ಚಿನ್ನದ ಪದಕ ಜಯಿಸಿದರು. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ ೪ ಸ್ವರ್ಣ, ೪ ಬೆಳ್ಳಿ ಹಾಗೂ 10 ಕಂಚಿನ ಪದಕಗಳೊಂದಿಗೆ ಒಟ್ಟು ಹದಿನೆಂಟು ಪದಕಗಳನ್ನು ಜಯಿಸಿದಂತಾಗಿದೆ.

ಇನ್ನುಳಿದಂತೆ ಈ ವಿಭಾಗದಲ್ಲಿ ಕತಾರ್‌ನ ಅಲ್ ಮರ್ರಿ ಹಮದ್ ಅಲಿ ೫೩ ಸ್ಕೋರ್‌ನೊಂದಿಗೆ ಮೂರನೇ ಸ್ಥಾನ ಗಳಿಸಿದರು. ಜಾಕಬರೆಂಗ್ ಶೂಟಿಂಗ್‌ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಶುರುವಿನಿಂದಲೇ ನಿಖರ ಗುರಿಯಿಂದ ಗಮನ ಸೆಳೆದ ಶಾರ್ದೂಲ್, ಕೊರಿಯಾ ಶೂಟರ್‌ಗೆ ಪ್ರಬಲ ಪೈಪೋಟಿ ನೀಡಿದರು. ಆದರೆ, ಕಡೆಗೂ ಹಿರಿಯ ಗುರಿಕಾರನನ್ನು ಮಣಿಸಲು ವಿಫಲವಾಗಿ ಎರಡನೇ ಸ್ಥಾನ ಅಲಂಕರಿಸಿದರು.

ಶಾರ್ದೂಲ್ ಜಯಿಸಿದ ಬೆಳ್ಳಿ ಪದಕದೊಂದಿಗೆ ಭಾರತ, ಕೂಟದಲ್ಲಿ ಹದಿನೇಳನೇ ಪದಕ ಜಯಿಸಿದಂತಾಗಿದೆ. ದಿನದ ಆರಂಭದಲ್ಲಿ ವನಿತೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಯುವ ಆಟಗಾರ್ತಿ ಅಂಕಿತಾ ರೈನಾ, ವೀರೋಚಿತ ಸೋಲನುಭವಿಸಿ ಕಂಚು ಪದಕಕ್ಕೆ ತೃಪ್ತವಾಗಿದ್ದರು.

ಇದನ್ನೂ ಓದಿ : ಬೆಳ್ಳಿಗೆ ಗುರಿ ಇಟ್ಟ ಹತ್ತೊಂಬತ್ತರ ಹರೆಯದ ಲಕ್ಷಯ್; ಮಾನವ್‌ಜಿತ್‌ಗೆ ನಿರಾಸೆ

ಯಾರೀ ಶಾರ್ದೂಲ್?

  • ವಯಸ್ಸು: ೧೫ (೨೦೧೩ರಲ್ಲಿ ಜನನ)
  • ಮೂಲ: ಮೀರತ್, ಉತ್ತರ ಪ್ರದೇಶ
  • ಸ್ಪರ್ಧೆಗೆ ಇಳಿದದ್ದು: ೨೦೧೫ರಲ್ಲಿ
  • ವ್ಯಾಸಂಗ: ೯ನೇ ತರಗತಿ
  • ಹಿಂದಿನ ಸಾಧನೆ: ನವದೆಹಲಿಯಲ್ಲಿ ನಡೆದಿದ್ದ ೨೦೧೭ರ ೬೧ನೇ ರಾಷ್ಟ್ರೀಯ ಶಾಟ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ೪ ಸ್ವರ್ಣ ಗೆದ್ದ ಸಾಧನೆ
  • ವಿಶ್ವ ಸಾಧನೆ: ೨೦೧೭ರ ಮಾಸ್ಕೋದಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರನೇ ಸ್ಥಾನ
  • ಮಾಸ್ಟರ್ ಕಣ್ಣು: ಬಲ
  • ಹವ್ಯಾಸ: ವಿಡಿಯೋಗೇಮ್ಸ್ ಹಾಗೂ ಸೈಕ್ಲಿಂಗ್
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More