ಏಷ್ಯಾಡ್ ಕುರಶ್‌ನಲ್ಲಿ ಬೆಳ್ಳಿ ಜೊತೆ ಕಂಚಿನ ಪದಕ ತಂದಿತ್ತ ಪಿಂಕಿ, ಯಲ್ಲಪ್ಪ

ಜನಪದ ಕುಸ್ತಿ ಪ್ರಕಾರವಾಗಿರುವ ಕುರಶ್‌ನಲ್ಲಿ ಭಾರತ ಚೊಚ್ಚಲ ಯತ್ನದಲ್ಲೇ ಎರಡು ಪದಕ ಬಾಚಿದೆ. ಇದೇ ಮೊದಲ ಬಾರಿಗೆ ಏಷ್ಯಾ ಕ್ರೀಡಾಕೂಟಕ್ಕೆ ಸೇರ್ಪಡೆಯಾಗಿರುವ ಈ ಕ್ರೀಡೆಯಲ್ಲಿ ಪಿಂಕಿ ಬಲ್ಹಾರ ಮತ್ತು ಮಲಪ್ರಭ ಯಲ್ಲಪ್ಪ ಜಾಧವ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸಿದರು

೧೯ರ ಹರೆಯದ ಪಿಂಕಿ ಚಿನ್ನ ಗೆಲ್ಲುವ ಹಾದಿಯಲ್ಲಿ ಎಡವಿದರು. ವನಿತೆಯರ ೫೨ ಕೆಜಿ ವಿಭಾಗದ ಈ ಫೋಕ್ (ಜನಪದ) ಕುಸ್ತಿಯಲ್ಲಿ ಪ್ರಶಸ್ತಿ ಫೇವರಿಟ್ ಉಜ್ಬೇಕಿಸ್ತಾನದ ಗುಲ್ನಾರ್ ಸುಲಯ್ಮನೊವ್ ವಿರುದ್ಧ ೦-೧೦ರಿಂದ ಸೋಲನುಭವಿಸಿದರು. ಫೈನಲ್ ಹಣಾಹಣಿಯಲ್ಲಿ ಏಕಪಕ್ಷೀಯ ಪ್ರದರ್ಶನ ನೀಡಿದ ಸುಲಯ್ಮನೊವ್ ಭಾರತೀಯ ರೆಸ್ಲರ್ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸಿದರು.

ಇದಕ್ಕೂ ಮುನ್ನ ನಡೆದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಪಿಂಕಿ ಚೈನೀಸ್ ತೈಪೆಯ ಟ್ಸೊ ಚಿಯಾವೆನ್ ವಿರುದ್ಧ ೫-೦ಯಿಂದ ಗೆಲುವು ಪಡೆದಿದ್ದರು. ಇನ್ನು, ಕ್ವಾರ್ಟರ್‌ಫೈನಲ್‌ನಲ್ಲಿ ಸುಸಾಂತಿ ಟೆರಿ ಕುಸುಮಾವರ್ದನಿ ವಿರುದ್ಧವೂ ಪಾರಮ್ಯ ಮೆರೆದ ಪಿಂಕಿ ೩-೦ ಅಂತರದಿಂದ ಗೆಲುವು ಸಾಧಿಸಿದರು. ಅಂತೆಯೇ ನಾಲ್ಕರ ಘಟ್ಟದ ಬೌಟ್‌ನಲ್ಲಿ ಉಜ್ಬೇಕಿಸ್ತಾನದ ಅಬ್ದುಮಜಿಡೊವಾ ಒಯ್ಸುಲುವ್ ವಿರುದ್ಧ ಪಿಂಕಿ ೧-೦ ಅಂತರದಿಂದ ಜಯಿಸಿದರು.

ಪಿಂಕಿ ಕಾದಾಟಕ್ಕೂ ಮುನ್ನ ನಡೆದ ಪುರುಷರ ವಿಭಾಗದಲ್ಲಿ ಯಲ್ಲಪ್ಪ ಸೆಮಿಫೈನಲ್‌ ಸೆಣಸಾಟದಲ್ಲಿ ೦-೧೦ರಿಂದ ಸುಲಾಯ್ಮನೊವಾ ವಿರುದ್ಧ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತರಾದರು. ಒಟ್ಟಾರೆ, ಕೂಟಕ್ಕೆ ಪರಿಚಿತವಾದ ಮೊದಲ ಯತ್ನದಲ್ಲೇ ಭಾರತ ಎರಡು ಪದಕಗಳನ್ನು ಗೆದ್ದುಕೊಂಡಿರುವುದು ಗಮನಾರ್ಹ.

ಇದನ್ನೂ ಓದಿ : ಏಷ್ಯಾಡ್‌ ಕುಸ್ತಿಯಲ್ಲಿ ಭಾರತಕ್ಕೆ ಚಾರಿತ್ರಿಕ ಚಿನ್ನ ತಂದಿತ್ತ ವಿನೇಶ್ ಫೋಗಟ್

ಕರುಶ್ ಕ್ರೀಡೆ ಏನು, ಎತ್ತ?

ಫ್ರೀಸ್ಟೈಲ್ ಮತ್ತು ಗ್ರೀಕೊ ರೋಮನ್ ಇವು ಆಧುನಿಕ ಕುಸ್ತಿಯ ಎರಡು ಪ್ರಕಾರಗಳು. ಕರುಶ್ ಕ್ರೀಡೆ ಕೂಡಾ ಹೆಚ್ಚೂ ಕಮ್ಮಿ ಕುಸ್ತಿಯಂತಿದ್ದರೂ, ಇದು ಜಾನಪದ ಇಲ್ಲವೇ ಹಳೆಯ ಕುಸ್ತಿ ಪ್ರಕಾರವೆನಿಸಿದೆ. ಈ ಕ್ರೀಡೆಯಲ್ಲಿ ಇಬ್ಬರೂ ಸ್ಪರ್ಧಿಗಳು ತಮ್ಮ ಸೊಂಟಪಟ್ಟಿಗೆ ಟವೆಲ್‌ಗಳಿಂದ ಬಿಗಿದುಕೊಂಡಿರುತ್ತಾರೆ. ಪ್ರತಿಸ್ಪರ್ಧಿಗಳನ್ನು ಕೆಡವಲು ಈ ಸೊಂಟಪಟ್ಟಿಯ ಟವೆಲ್‌ಗಳೇ ಗೆಲುವಿನ ಅಸ್ತ್ರಗಳಾಗಿರುವುದರಿಂದ ಸ್ಪರ್ಧಿಗಳು ಇದನ್ನಷ್ಟೇ ಬಳಸಬೇಕಿರುತ್ತದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More