ಶ್ರೇಷ್ಠ ಸಾಧನೆ ಮಧ್ಯೆಯೂ ಕಂಚಿನ ಪದಕಕ್ಕೆ ತೃಪ್ತಿಪಟ್ಟ ಸೀಮಾ ಪುನಿಯಾ

ಹಾಲಿ ಚಾಂಪಿಯನ್ ಸೀಮಾ ಪುನಿಯಾ ವನಿತೆಯರ ಡಿಸ್ಕ್ ಎಸೆತದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಗುರುವಾರ (ಆ.೩೦) ನಡೆದ ಡಿಸ್ಕ್ ಎಸೆತದಲ್ಲಿ ೩೫ರ ಹರೆಯದ ಹಾಲಿ ಚಾಂಪಿಯನ್ ಸೀಮಾ, ೬೨.೨೬ ಮೀಟರ್ ಸಾಧನೆ ಆರು ವರ್ಷಗಳಲ್ಲೇ ಶ್ರೇಷ್ಠ ಸಾಧನೆ ಎನಿಸಿದರೂ, ತೃತೀಯ ಸ್ಥಾನಕ್ಕೆ ಕುಸಿದರು

ಈ ಬಾರಿಯ ಏಷ್ಯಾಡ್‌ನ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಡುತ್ತಾರೆಂಬ ನಿರೀಕ್ಷೆ ಮೂಡಿಸಿದ್ದ ಸೀಮಾ ಪುನಿಯಾ, ಕೇವಲ ಮೂರನೇ ಸ್ಥಾನಕ್ಕೆ ಕುಸಿದರು. ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ಸೀಮಾ ಪುನಿಯಾ, ಕಳೆದ ಆರು ವರ್ಷಗಳಲ್ಲೇ ಶ್ರೇಷ್ಠ ಸಾಧನೆಯಿಂದ ಗಮನ ಸೆಳೆದರಾದರೂ, ಈ ಸಾಧನೆ ಅವರ ಬಂಗಾರದ ಪದಕಕ್ಕೆ ಪೂರಕವಾಗಿ ಬರಲಿಲ್ಲ.

ಏಷ್ಯನ್ ಚಾಂಪಿಯನ್ ಚೀನಾದ ಚೆನ್ ಯಾಂಗ್ ೬೫.೧೨ ಮೀಟರ್ ಸಾಧನೆಯಿಂದ ಬಂಗಾರದ ಪದಕ ಪಡೆದರು. ಕೊನೆಯ ಯತ್ನದಲ್ಲಿ ಚೆನ್ ಯಾಂಗ್ ಚಿನ್ನ ಗೆದ್ದು ಮಿಂಚು ಹರಿಸಿದರು. ಸೀಮಾ ಪುನಿಯಾಗಿಂತ ೨.೮೬ ಮೀಟರ್ ಹೆಚ್ಚುವರಿ ಸಾಧನೆಯಿಂದ ಚೀನಾದ ಡಿಸ್ಕ್ ಎಸೆತಗಾರ್ತಿ ಮೊದಲ ಸ್ಥಾನ ಗಳಿಸಿದರು.

ಏಷ್ಯಾದ ನಂ.೧ ಡಿಸ್ಕ್ ಎಸೆತಗಾರ್ತಿ ಚೆನ್, ಈ ಸ್ಪರ್ಧೆಯಲ್ಲಿ ಸದಾ ಮುಂಚೂಣಿ ಸ್ಥಾನ ಕಾಯ್ದುಕೊಂಡಿದ್ದಾರೆ. ೨೭ರ ಹರೆಯದ ಆಕೆಯ ಶ್ರೇಷ್ಠ ಸಾಧನೆ ೬೭.೦೩ ಮೀಟರ್. ಪ್ರತಿಯೊಂದು ಯತ್ನದಲ್ಲಿಯೂ ಮುನ್ನಡೆ ಕಾಯ್ದುಕೊಳ್ಳುತ್ತಿದ್ದ ಆಕೆಗೆ ಸಹ ಸ್ಪರ್ಧಿ ಫೆಂಗ್ ಬಿನ್ ಪ್ರಬಲ ಪೈಪೋಟಿ ಒಡ್ಡಿದರು. ಫೆಂಗ್ ಬಿನ್ ೬೪.೨೫ ಮೀಟರ್ ಸಾಧನೆಯಿಂದ ಬೆಳ್ಳಿ ಪದಕ ಪಡೆದರು.

ಇದನ್ನೂ ಓದಿ : ಹಾಲಿ ಚಾಂಪಿಯನ್ ಭಾರತದ ಕೈಯಿಂದ ಬಂಗಾರ ಕಿತ್ತುಕೊಂಡ ಮಲೇಷ್ಯಾ!

ಚೀನಿ ಸ್ಪರ್ಧಿಗಳಿಗೆ ಸರಿಸಾಟಿ ಪ್ರದರ್ಶನ ನೀಡಲು ಸಾಕಷ್ಟು ಹೆಣಗಿದ ಸೀಮಾ, ಮೂರನೇ ಯತ್ನದಲ್ಲಿ ೬೨.೨೬ ಮೀಟರ್ ದೂರಕ್ಕೆ ಡಿಸ್ಕ್ ಎಸೆದರು. ಇದು ೨೦೧೪ರ ಇಂಚಾನ್ ಕೂಟದಲ್ಲಿ ಆಕೆಯ ೬೧.೦೩ ಮೀಟರ್ ಸಾಧನೆಗಿಂತಲೂ ಮುನ್ನಡೆಯಲ್ಲಿತ್ತು. ಆದರೆ, ಚೆನ್ ಮೊದಲ ಯತ್ನದಲ್ಲೇ ೫೯.೬೧ ಮೀಟರ್‌ ದೂರ ಡಿಸ್ಕ್ ಎಸೆದರೆ, ಸೀಮಾ ೫೮.೫೧ ಮೀಟರ್ ದೂರಕ್ಕಷ್ಟೇ ಡಿಸ್ಕ್ ಎಸೆಯಲು ಶಕ್ತರಾದರು.

ಜಕಾರ್ತ ಕೂಟದಲ್ಲಿ ಕಂಚು ಗೆಲ್ಲುವುದರೊಂದಿಗೆ ಸೀಮಾ ಎರಡು ಏಷ್ಯಾಡ್ ಪದಕಗಳನ್ನು ಗೆದ್ದಂತಾಗಿದೆ. ಅಂತೆಯೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕು ಪದಕಗಳನ್ನು ಗೆದ್ದಿರುವ ಸೀಮಾ ಭಾರತೀಯ ಮಹಿಳಾ ಡಿಸ್ ಎಸೆತಗಾರ್ತಿಯರಲ್ಲೇ ನಂ ೧ ಎನಿಸಿದ್ದಾರೆ. ಇನ್ನು, ಹರ್ಯಾಣದ ಸಂದೀಪ್ ಕುಮಾರಿ ಕೂಡಾ ಸ್ಪರ್ಧಿಸಿದರಾದರೂ, ೫೮.೪೧ ಮೀಟರ್ ಸಾಧನೆಯಿಂದ ವೈಯಕ್ತಿಕ ಶ್ರೇಷ್ಠ ಸಾಧನೆ ಮೆರೆದರೂ, ಪದಕ ಗೆಲ್ಲಲಾಗಲಿಲ್ಲ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More