ರಿಲೇ ತಂಡದ ಚಿನ್ನ-ಬೆಳ್ಳಿ ಸಾಧನೆಯ ಮಧ್ಯೆ ಕಾಡಿದ ಭಾರತ ಹಾಕಿ ತಂಡದ ಸೋಲು

ಏಷ್ಯಾ ಕ್ರೀಡಾಕೂಟದ ಹನ್ನೆರಡನೇ ದಿನದಂದು ಭಾರತ ಅಥ್ಲೆಟಿಕ್ಸ್‌ನಲ್ಲಿ ಮಿಂಚು ಹರಿಸಿದರೂ, ಹಾಲಿ ಚಾಂಪಿಯನ್ ಪಿ ಆರ್ ಶ್ರೀಜೇಶ್ ಸಾರಥ್ಯದ ಹಾಕಿ ತಂಡದ ಸೋಲು ಭಾರತದ ಪಾಳೆಯವನ್ನು ತಲ್ಲಣಿಸುವಂತೆ ಮಾಡಿತು. ಕನ್ನಡತಿ ಪೂವಮ್ಮ ಇದ್ದ ವನಿತಾ ರಿಲೇ ತಂಡ ಚಿನ್ನದ ಪದಕವನ್ನು ಉಳಿಸಿಕೊಂಡಿತು

ಜಿನ್ಸನ್ ಜಾನ್ಸನ್ ಪುರುಷರ ೧೫೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದುಕೊಟ್ಟ ನಂತರದಲ್ಲಿ ಭಾರತ ರಿಲೇ ತಂಡದ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿತು. ಇದಕ್ಕೂ ಮುನ್ನ ಸೀಮಾ ಪುನಿಯಾ ಡಿಸ್ಕ್ ಎಸೆತದಲ್ಲಿ ಕಂಚು ಗೆದ್ದರೆ, ೧೫೦೦ ಮೀಟರ್ ಓಟದ ವನಿತೆಯರ ವಿಭಾಗದಲ್ಲಿ ಚಿತ್ರಾ ಉನ್ನಿಕೃಷ್ಣನ್ ತೃತೀಯ ಸ್ಥಾನ ಗಳಿಸಿದರು. ಇದರೊಂದಿಗೆ ಕೂಟದ ಹನ್ನೆರಡನೇ ದಿನದಂದು ೧೩ ಸ್ವರ್ಣ, ೨೧ ಬೆಳ್ಳಿ, ೨೫ ಕಂಚು ಸೇರಿದ ೫೯ ಪದಕಗಳನ್ನು ಭಾರತ ತನ್ನ ತೆಕ್ಕೆಗೆ ತಂದುಕೊಂಡಿತು.

ಗುರುವಾರವಷ್ಟೇ (ಆ.೩೦) ಮುಗಿದ ಏಷ್ಯಾ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಹಿಂದೆಂದೂ ಗಳಿಸದ ಶ್ರೇಷ್ಠ ಸಾಧನೆ ಮೆರೆಯಿತು. ಕಳೆದ ಆರು ದಿನಗಳ ಈ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಭಾರತ ೭ ಚಿನ್ನ, ೧೦ ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗಳಿಸಿತು. ಚೀನಾ (೧೨ ಚಿನ್ನ, ೧೨ ಬೆಳ್ಳಿ ೯ ಕಂಚು) ಮತ್ತು ಬಹ್ರೇನ್ (೧೨ ಚಿನ್ನ, ೬ ಬೆಳ್ಳಿ ಹಾಗೂ ೭ ಕಂಚು) ನಂತರದ ಸ್ಥಾನವನ್ನು ಗಳಿಸಿದ್ದು ಗಮನಾರ್ಹ.

೧೯೭೮ ಮತ್ತು ೨೦೦೨ರ ಏಷ್ಯಾಡ್‌ ಕೂಟಗಳಲ್ಲಿಯೂ ಭಾರತ ಇಷ್ಟೇ ಚಿನ್ನದ ಸಾಧನೆ ಮಾಡಿತ್ತು.ಈ ಎರಡೂ ಕೂಟಗಳಲ್ಲಿ ೧೭ ಪದಕಗಳನ್ನು ಗಳಿಸಿತ್ತಾದರೂ, ಈ ಬಾರಿ ಒಟ್ಟು ೧೯ ಪದಕಗಳನ್ನು ಗೆದ್ದು ಸಾಧನೆ ಮೆರೆದಿದೆ. ಇನ್ನು, ೧೯೫೧ರ ಉದ್ಘಾಟನಾ ಕೂಟದಲ್ಲಿ ಭಾರತ ಅಥ್ಲೆಟಿಕ್ಸ್ ವಿಭಾಗದಲ್ಲಿ ೧೦ ಚಿನ್ನ ಸೇರಿದಂತೆ ೩೧ ಪದಕಗಳನ್ನು ಜಯಿಸಿತ್ತು. ೧೯೮೨ರಲ್ಲಿ ಭಾರತ ಅಥ್ಲೆಟಿಕ್ಸ್‌ನಲ್ಲಿ ೨೦ ಪದಕಗಳನ್ನು ಜಯಿಸಿತಾದರೂ, ಕೇವಲ ನಾಲ್ಕು ಚಿನ್ನಗಳಷ್ಟೇ ಬಂದಿತ್ತು. ಉಳಿದಂತೆ ಎಂಟು ಬೆಳ್ಳಿ ಮತ್ತು ಎಂಟು ಕಂಚು ಸೇರಿದ್ದವು.

ವನಿತೆಯರ ಅಜೇಯ ಓಟ

ವನಿತೆಯರ ೪/೪೦೦ ಮೀಟರ್ ಓಟದಲ್ಲಿ ಭಾರತ ಸತತ ಐದನೇ ಬಾರಿಗೆ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ದಾಖಲೆ ಬರೆಯಿತು. ೨೦೦೨ರ ಏಷ್ಯಾಡ್ ಕೂಟದಿಂದ ಸತತ ಐದು ಚಿನ್ನದ ಪದಕಗಳನ್ನು ಗೆದ್ದ ಸಾಧನೆಗೆ ಭಾರತ ವನಿತಾ ರಿಲೇ ತಂಡ ಭಾಜನವಾಯಿತು. ೪೦೦ ಮೀಟರ್ ವೈಯಕ್ತಿಕ ವಿಭಾಗದಲ್ಲಿ ಹಿಮಾ ದಾಸ್ ಬೆಳ್ಳಿ ಗೆದ್ದಿದ್ದರು.

ಇಂದಿನ ರಿಲೇ ತಂಡದ ಓಟವನ್ನು ಹಿಮಾ ಆರಂಭಿಸಿದರು. ಬಳಿಕ ಕನ್ನಡತಿ ಪೂವಮ್ಮ ಚಿನ್ನದ ಓಟಕ್ಕೆ ಮತ್ತಷ್ಟು ವೇಗ ತುಂಬಿದರು. ಪೂವಮ್ಮ ಅವರಿಂದ ಬೇಟನ್ ಪಡೆದ ಗುಜರಾತ್ ಮೂಲದ ಸರಿತಾ ಕೂಡಾ ತನ್ನ ಲ್ಯಾಪ್‌ ಮುಗಿವವರೆಗೂ ತನ್ನ ಹಿಂದಿನವರ ವೇಗವನ್ನೇ ಕಾಯ್ದುಕೊಂಡರು. ಇನ್ನುಳಿದಂತೆ ವಿಸ್ಮಯಾ ವಿಜಯದ ಗೆರೆಯನ್ನು ಫಲಪ್ರದವಾಗಿ ಮುಗಿಸಿದರು. ಭಾರತ ವನಿತಾ ರಿಲೇ ತಂಡ ೩:೨೮.೭೨ ಸೆ. ಗಳಲ್ಲಿ ಗುರಿಮುಟ್ಟಿತಾದರೂ, ಕೂಟ ದಾಖಲೆಯನ್ನು (೨:೨೮.೬೮ ಸೆ.) ಕೊಂಚದರಲ್ಲೇ ಕೈಚೆಲ್ಲಿತು.

ಇದನ್ನೂ ಓದಿ : ಹಲವು ದಾಖಲೆಗಳ ಪುಡಿಗಟ್ಟಿ ಬಂಗಾರ ಬಾಚಿದ ಸ್ಪ್ರಿಂಟರ್ ಜಿನ್ಸನ್ ಜಾನ್ಸನ್

ಪುರುಷರ ರಜತ ಸಾಧನೆ

. ASIAN GAMES 2018 JAKARTA, PALEMBANG . . 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 . Todays Medal Winners for India . MEN'S 4*400 RELAY Silver Medal Muhammed Anas Yahiya Dharun Ayyasamy Arokia Rajiv Muhammed Kunhu . WOMEN'S 4*400 RELAY Gold Medal Hima Das M.R.Poovamma Vismaya Koroth Saritaben Gayakwad . JINSON JOHNSON Gold Medal Men's 1500mts . . P.U.CHITHRA Bronze Medal Women's 5000 mts. . SEEMA PUNIA Bronze Medal Women's Discuss Throw . 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 . #asiangames2018 #asiangames #indianmedalwinners #jinsonjohnson #himadas #poovamma #vismayakoroth #saritabengayakwad #muhammedanas #arokiarajiv #muhammedkunhu #dharunayyasamy #p.u.chithra #seemapunia #superlativeperformance #indianathletesarecapable #makingindiaproud🇮🇳

A post shared by Madhu (@madhumitha69) on

ರಿಲೇ ಪುರುಷರ ತಂಡದಲ್ಲಿ ಭಾರತ ಬೆಳ್ಳಿ ಸಾಧನೆ ಮೆರೆದ್ದು ಕೂಡಾ ದಿನದ ವಿಶೇಷ. ಕುನ್ಹು ಮುಹಮದ್, ಧರುನ್ ಅಯ್ಯಸಾಮಿ, ಮುಹಮದ್ ಅನಾಸ್, ಆರೋಕ್ಯ ರಾಜೀವ್ ಇದ್ದ ಭಾರತ ಪುರುಷರ ರಿಲೇ ತಂಡ ಎರಡನೇ ಸ್ಥಾನ ಪಡೆಯಿತು. ನಿಗದಿತ ಗುರಿಯನ್ನು ೩:೦೧.೮೫ ಸೆ.ಗಳಲ್ಲಿ ಕ್ರಮಿಸಿ ರಜತ ಪದಕ ಪಡೆದರು. ಇನ್ನುಳಿದಂತೆ ಕತಾರ್ ತಂಡ ೩:೦೦.೫೬ ಸೆ.ಗಳಲ್ಲಿ ಏಷ್ಯಾಡ್ ದಾಖಲೆಯೊಂದಿಗೆ ಚಿನ್ನ ಪಡೆಯಿತು.

ಶುರುವಿನಲ್ಲಿ ಕುನ್ಹು ಮುಹಮದ್ ಓಡಿದರೆ, ಅವರ ನಂತರದಲ್ಲಿ ಧರುನ್ ಅಯ್ಯಸಾಮಿ ಓಡಲು ಶುರು ಮಾಡಿದರು. ಇನ್ನು, ಮೂರನೇ ಓಟಗಾರ ಅನಾಸ್ ಅವರ ಕೈಗೆ ಬೇಟನ್ ತಲುಪುತ್ತಲೇ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿಯುವ ಅಪಾಯದಲ್ಲಿತ್ತು. ಶಕ್ತಿಮೀರಿ ಓಡಿದ ಅನಾಸ್ ಕೊನೆಯ ಓಟಗಾರ ಅರೋಕ್ಯ ರಾಜೀವ್‌ಗೆ ಬೇಟನ್ ಇತ್ತ ನಂತರದಲ್ಲಿ ರಾಜೀವ್ ಭಾರತ ತಂಡದ ಎರಡನೇ ಸ್ಥಾನವನ್ನು ಅಧಿಕೃತಗೊಳಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More