ನೌಕಾಯಾನ ಸ್ಪರ್ಧೆಯಲ್ಲಿ ರಜತ ಪದಕ ಸೇರಿ ಮೂರು ಪದಕ ಪಡೆದ ಭಾರತ

೪೯ ಎಫ್ಎಕ್ಸ್ ಮಹಿಳಾ ಸ್ಪರ್ಧೆಯಲ್ಲಿ ವರ್ಷಾ ಗೌತಮ್ ಮತ್ತು ಶ್ವೇತಾ ಶೆರ್ವೇಗರ್ ಜಯಿಸಿದ ರಜತ ಪದಕವನ್ನೂ ಒಳಗೊಂಡಂತೆ ಭಾರತ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ 3 ಪದಕ ತನ್ನದಾಗಿಸಿಕೊಂಡಿತು. ಹರ್ಷಿತಾ ತೋಮಾರ್ ಓಪನ್ ಲೇಸರ್ ೪.೭ ವಿಭಾಗದಲ್ಲಿ ಕಂಚು ಗೆದ್ದರು

ಸೇಯ್ಲಿಂಗ್ (ನೌಕಾಯಾನ) ಸ್ಪರ್ಧೆಯಲ್ಲಿಯೂ ಭಾರತ ತನ್ನ ಸಾಮರ್ಥ್ಯ ಮೆರೆಯಿತು. ಶ್ವೇತಾ ಮತ್ತು ವರ್ಷಾ ಜೋಡಿಯ ಬಳಿಕ ಹರ್ಷಿತಾ ತೋಮಾರ್ ಕಂಚು ಗೆದ್ದ ಬಳಿಕ ವರುಣ್ ಥಕ್ಕರ್ ಅಶೋಕ್ ಹಾಗೂ ಚೆನ್ನಪ್ಪ ಗಣಪತಿ ಕೆಲಪಂಡಾ ೪೯ ಪುರುಷರ ಈವೆಂಟ್‌ನಲ್ಲಿ ಕಂಚು ಗೆದ್ದರು. ೧೫ ರೇಸ್‌ನಲ್ಲಿ ವರುಣ್ ಮತ್ತು ಚೆನ್ನಪ್ಪ ೫೩ ಸ್ಕೋರ್ ಮಾಡಿದರು.

ಇಂಡೋನೇಷ್ಯಾ ರಾಷ್ಟ್ರೀಯ ಸೇಯ್ಲಿಂಗ್ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ೨೦ರ ಹರೆಯದ ವರ್ಷಾ ಮತ್ತು ೨೭ರ ಹರೆಯದ ಶ್ವೇತಾ, ೧೫ ರೇಸ್‌ಗಳಲ್ಲಿ ೪೦ ಸ್ಕೋರ್ ಮಾಡಿ ದ್ವಿತೀಯ ಸ್ಥಾನ ಗಳಿಸಿದರು. ಹದಿನಾರರ ಹರೆಯದ ಹರ್ಷಿತಾ, ೧೨ ರೇಸ್‌ಗಳಲ್ಲಿ ೬೨ ಸ್ಕೋರ್‌ನೊಂದಿಗೆ ತೃತೀಯ ಸ್ಥಾನ ಗಳಿಸಿದರು. ಸೇಯ್ಲಿಂಗ್ ವಿಭಾಗದಲ್ಲಿ ಭಾರತ ಗಳಿಸಿದ ಮೂರು ಪದಕಗಳೊಂದಿಗೆ ಭಾರತvu ಕೂಟದಲ್ಲಿ ೧೩ ಸ್ವರ್ಣ, ೨೧ ಬೆಳ್ಳಿ ಹಾಗೂ ೨೭ ಕಂಚು ಸೇರಿದ ಒಟ್ಟು ೬೧ ಪದಕಗಳನ್ನು ಗಳಿಸಿದೆ.

“ರಾಷ್ಟ್ರಕ್ಕಾಗಿ ಪದಕ ಗೆಲ್ಲುವಂತಾದ ಈ ಕ್ಷಣವೇ ಅನುಪಮ ಅನುಭೂತಿ ನೀಡುತ್ತಿದೆ. ಇದನ್ನು ನಾನು ವರ್ಣಿಸಲಾಗುತ್ತಿಲ್ಲ. ನಿಜವಾಗಿಯೂ ಇದು ಬಹುದೊಡ್ಡ ಅನುಭವ ನೀಡಿದೆ,’’ ಎಂದು ಮಾಜಿ ಈಜುಗಾರ್ತಿ ಹರ್ಷಿತಾ ಪದಕ ಗೆದ್ದ ಖುಷಿ ಹಂಚಿಕೊಂಡರು.

ಇದನ್ನೂ ಓದಿ : ಏಷ್ಯಾ ಕ್ರೀಡಾಕೂಟ | ತರಬೇತುದಾರರ ಪಾತ್ರ ಕುರಿತು ಪ್ರಶ್ನಿಸಿದ ಸ್ಕ್ವಾಶ್ ತಂಡ

ಏತನ್ಮಧ್ಯೆ, ೪.೭ ಓಪನ್ ಲೇಸರ್‌ನಲ್ಲಿ ಗೋವಿಂದ್ ಬೈರಾಗಿ ನಾಲ್ಕನೇ ಸ್ಥಾನ ಗಳಿಸಿದರು. ಅಂತೆಯೇ, ನೇತ್ರಾ ಕುಮಾನನ್ ಲೇಸರ್ ರ್ಯಾಡಿಯಲ್ ಸೇಯ್ಲಿಂಗ್ ಈವೆಂಟ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More