ಟೇಬಲ್ ಟೆನಿಸ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ಶರತ್-ಮಣಿಕಾ ಬಾತ್ರಾ

ಭಾರತದ ನಂ ೧ ಟೇಬಲ್ ಟೆನಿಸ್ ಪಟುಗಳಾದ ಅಚಂತಾ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಹದಿನೆಂಟನೇ ಏಷ್ಯಾಡ್‌ ಸಿಂಗಲ್ಸ್‌ನಲ್ಲಿ ಐತಿಹಾಸಿಕ ಕಂಚು ಗೆದ್ದರು. ಇತ್ತ, ಸ್ಕ್ವಾಶ್ ವಿಭಾಗದಲ್ಲಿ ಪುರುಷರ ತಂಡ ಕೂಡಾ ಕಂಚಿಗೆ ತೃಪ್ತಿಪಟ್ಟಿತು. ೧೩ನೇ ದಿನಾಂತ್ಯಕ್ಕೆ ಭಾರತ ೧೩ ಚಿನ್ನ ಸೇರಿ ೬೫ನೇ ಪದಕ ಗಳಿಸಿತು

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕೂಟದಲ್ಲಿ ಐತಿಹಾಸಿಕ ಸಾಧನೆ ಮೆರೆದಿದ್ದ ಮಣಿಕಾ ಬಾತ್ರಾ ಏಷ್ಯಾಡ್‌ನಲ್ಲಿಯೂ ಮಿಂಚು ಹರಿಸಿದೆ. ಶುಕ್ರವಾರ (ಆ.೩೧) ನಡೆದ ಪುರುಷರ ಹಾಗೂ ವನಿತೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಮಣಿಕಾ ಬಾತ್ರಾ ಮತ್ತು ಅಚಂತಾ ಶರತ್ ಕಮಲ್ ಸೋಲನುಭವಿಸಿದರು.

ವಿಶ್ವದ ೩೩ನೇ ಶ್ರೇಯಾಂಕಿತ ಆಟಗಾರ ಶರತ್ ಕಮಲ್ ಚೈನೀಸ್ ತೈಪೆಯ ೧೪ನೇ ಶ್ರೇಯಾಂಕಿತ ಆಟಗಾರ ಚಿನ್-ಯುವಾನ್ ಚುವಾಂಗ್ ವಿರುದ್ಧ ೭-೧೧, ೧೧-೯, ೧೦-೧೨, ೧೬-೧೪, ೯-೧೧ರಿಂದ ಪರಾಭವಗೊಂಡರೆ, ವನಿತೆಯರ ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ ವಿಶ್ವದ ಐದನೇ ಶ್ರೇಯಾಂಕಿತೆ ವಾಂಗ್ ಮನ್ಯು ವಿರುದ್ಧ ೨-೧೧, ೮-೧೧, ೮-೧೧, ೧೧-೬, ೪-೧೧ರಿಂದ ಪರಾಜಿತೆಯಾದರು.

ಟೀಂ ವಿಭಾಗದಲ್ಲಿ ಜಪಾನ್ ಎದುರು ಎರಡು ಮಹತ್ವಪೂರ್ಣ ಪಂದ್ಯಗಳನ್ನು ಗೆದ್ದು ಭಾರತಕ್ಕೆ ಏಷ್ಯಾಡ್‌ನಲ್ಲಿ ೬೦ ವರ್ಷಗಳ ನಂತರ ಎರಡು ಕಂಚು ಗೆದ್ದುಕೊಳ್ಳಲು ನೆರವಾದ ಸತಿಯಾನ್, ಕೆಂಟಾ ಮಾಟ್ಸುಡಾಯಿರಾ ವಿರುದ್ಧ ನಿಲ್ಲದಾದರು. ಅಂದಹಾಗೆ, ಈ ಏಷ್ಯಾಡ್‌ನಲ್ಲಿ ಭಾರತದ ಟೇಬಲ್ ಟೆನಿಸ್ ಅಮೋಘ ಸಾಧನೆ ಮೆರೆಯಿತು. ಪುರುಷರ ವಿಭಾಗದಲ್ಲಿ ಕಂಚು ಬಂದರೆ, ಮಿಶ್ರ ಡಬಲ್ಸ್‌ನಲ್ಲಿ ಶರತ್ ಮತ್ತು ಮಣಿಕಾ ಕಂಚು ಗೆದ್ದಿದ್ದರು.

ಇದನ್ನೂ ಓದಿ : ಜಪಾನ್‌ ಸವಾಲು ಹತ್ತಿಕ್ಕಲು ವಿಫಲವಾಗಿ ರಜತಕ್ಕೆ ತೃಪ್ತವಾದ ರಾಣಿ ಪಡೆ

ಸ್ಕ್ವಾಶ್‌ನಲ್ಲಿ ಕಂಚು

ಹಾಲಿ ಚಾಂಪಿಯನ್ ಭಾರತ ಹದಿನೆಂಟನೇ ಏಷ್ಯಾಡ್‌ನಲ್ಲಿ ಚಿನ್ನ ಉಳಿಸಿಕೊಳ್ಳಲು ವಿಫಲವಾಯಿತು. ಇಂದು ನಡೆದ ಹಾಂಕಾಂಗ್ ವಿರುದ್ಧ ೦-೨ರಿಂದ ಸೋಲನುಭವಿಸಿದ ಭಾರತ ಪುರುಷರ ಸ್ಕ್ವಾಶ್ ತಂಡ ತೃತೀಯ ಸ್ಥಾನಕ್ಕೆ ತೃಪ್ತವಾಯಿತು. ಸೌರವ್ ಘೋಸಲ್, ಹರೀಂದರ್ ಪಾಲ್ ಸಿಂಗ್ ಸಂಧು, ರಮಿತ್ ಟಂಡನ್ ಹಾಗೂ ಮಹೇಶ್ ಮಂಗೋಂಕರ್ ಹಾಂಕಾಂಗ್‌ನ ಆಕ್ರಮಣಕಾರಿ ಆಟಕ್ಕೆ ಪ್ರತಿಹೇಳಲಾಗದೆ ಸೋಲಪ್ಪಿದರು.

ಕೂಟದ ಹದಿಮೂರನೇ ದಿನಾಂತ್ಯಕ್ಕೆ ಭಾರತ, ೧೩ ಸ್ವರ್ಣ, ೨೩ ಬೆಳ್ಳಿ ಹಾಗೂ ೨೯ ಕಂಚು ಸೇರಿದ ಒಟ್ಟು ೬೫ ಪದಕಗಳನ್ನು ಗೆದ್ದುಕೊಂಡು ಆ ಮೂಲಕ ಕಳೆದ ಸಾಲಿನ ಇಂಚಾನ್ ಕೂಟದ ಸಾಧನೆಗಿಂತಲೂ ಮುಂದೆ ಹೋಯಿತು. ಶನಿವಾರ (ಸೆ.೧) ಬಾಕ್ಸಿಂಗ್ ಮತ್ತು ವನಿತೆಯರ ಸ್ಕ್ವಾಶ್‌ ಟೀಂ ಇವೆಂಟ್‌ನಲ್ಲಿ ಭಾರತ ಫೈನಲ್ ಆಡಲಿದ್ದು, ಎರಡು ಚಿನ್ನದ ಪದಕಗಳನ್ನು ನಿರೀಕ್ಷಿಸಲಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More