ಏಷ್ಯಾಡ್ ಫೈನಲ್‌ನಲ್ಲಿ ಹಾಂಕಾಂಗ್‌ಗೆ ಮಣಿದ ಭಾರತ ಸ್ಕ್ವಾಶ್ ತಂಡಕ್ಕೆ ಬೆಳ್ಳಿ

ಪುರುಷರ ಹಾದಿಯಲ್ಲೇ ನಡೆದ ಮಹಿಳಾ ಸ್ಕ್ವಾಶ್ ತಂಡ ಹಾಂಕಾಂಗ್ ಎದುರು ನಿರೀಕ್ಷಿತ ಸೋಲನುಭವಿಸಿ ಎರಡನೇ ಸ್ಥಾನಕ್ಕೆ ತೃಪ್ತವಾಯಿತು. ಇನ್ನು, ಬ್ರಿಡ್ಜ್ ವಿಭಾಗದಲ್ಲಿ ಪ್ರಣಬ್ ಬರ್ಧನ್ ಮತ್ತು ಶಿವನಾಥ್ ಸರ್ಕಾರ್ ಹದಿನೆಂಟನೇ ಏಷ್ಯಾಡ್‌ನಲ್ಲಿ ಭಾರತಕ್ಕೆ ಹದಿನೈದನೇ ಚಿನ್ನದ ಪದಕ ದೊರಕಿಸಿಕೊಟ್ಟರು

ಭಾರತದ ನಂ.೧ ಸ್ಕ್ವಾಶ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಹಾಗೂ ಸುನನ್ಯಾ ಕುರುವಿಲ್ಲಾ ವನಿತೆಯರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಸೋಲನುಭವಿಸಿದ್ದು ಭಾರತದ ಎದುರು ಹಾಂಕಾಂಗ್ ಗೆಲುವು ಸಾಧಿಸಲು ಸಾಧ್ಯವಾಯಿತು. ಮೂರು ದಿನಗಳಲ್ಲಿ ಹಾಂಕಾಂಗ್ ಎದುರು ಭಾರತ ವನಿತಾ ಸ್ಕ್ವಾಶ್ ತಂಡ ಅನುಭವಿಸಿದ ಎರಡನೇ ಸೋಲಿದು.

ಶುಕ್ರವಾರ (ಆ.೩೧) ನಡೆದ ಸೆಮಿಫೈನಲ್ ಸೆಣಸಾಟದಲ್ಲಿ ಹಾಲಿ ಚಾಂಪಿಯನ್ ಮಲೇಷ್ಯಾ ವಿರುದ್ಧ ಗೆಲುವು ಸಾಧಿಸಿದ ಭಾರತ ವನಿತಾ ತಂಡ, ಬೆಳ್ಳಿ ಪದಕವನ್ನು ಖಚಿತಪಡಿಸಿತ್ತು. ಪುರುಷರ ಹಾಗೂ ವನಿತೆಯರ ವಿಭಾಗಗಳೆರಡರಲ್ಲೂ ಬೆಳ್ಳಿ ಪದಕ ಜಯಿಸಿದ ಭಾರತ ತಂಡ, ಏಷ್ಯಾಡ್‌ನಲ್ಲಿ ಶ್ರೇಷ್ಠ ಸಾಧನೆ ಮೆರೆಯಿತು. ಅಂದಹಾಗೆ, ನಾಲ್ಕು ವರ್ಷಗಳ ಹಿಂದಿನ ಇಂಚಾನ್ ಕೂಟದಲ್ಲಿಯೂ ಭಾರತ ಸೆಮಿಫೈನಲ್ ತಲುಪಿತ್ತು.

ಶನಿವಾರ (ಸೆ.೧) ಭಾರತ ವನಿತಾ ತಂಡ ಬೆಳ್ಳಿ ಗೆಲ್ಲುವುದರೊಂದಿಗೆ ಕೂಟದಲ್ಲಿ ಒಟ್ಟು ಐದು ಪದಕಗಳೊಂದಿಗೆ ಹದಿನೆಂಟನೇ ಏಷ್ಯಾಡ್‌ನಲ್ಲಿನ ತನ್ನ ಹೋರಾಟವನ್ನು ಮುಗಿಸಿತು. ಇದಕ್ಕೂ ಮುನ್ನ ಪುರುಷರ ತಂಡ ಕಂಚು ಗೆದ್ದರೆ, ವೈಯಕ್ತಿಕ ವಿಭಾಗದಲ್ಲಿ ಮೂರು ಕಂಚು ಪದಕಗಳನ್ನು ಭಾರತ ಜಯಿಸಿತ್ತು.

ಇದನ್ನೂ ಓದಿ : ಏಷ್ಯಾ ಕ್ರೀಡಾಕೂಟ | ತರಬೇತುದಾರರ ಪಾತ್ರ ಕುರಿತು ಪ್ರಶ್ನಿಸಿದ ಸ್ಕ್ವಾಶ್ ತಂಡ
ಇದನ್ನೂ ಓದಿ : ಟೇಬಲ್ ಟೆನಿಸ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ಶರತ್-ಮಣಿಕಾ ಬಾತ್ರಾ
ಇದನ್ನೂ ಓದಿ : ಏಷ್ಯಾ ಕ್ರೀಡಾಕೂಟ | ತರಬೇತುದಾರರ ಪಾತ್ರ ಕುರಿತು ಪ್ರಶ್ನಿಸಿದ ಸ್ಕ್ವಾಶ್ ತಂಡ
ಇದನ್ನೂ ಓದಿ : ಟೇಬಲ್ ಟೆನಿಸ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ಶರತ್-ಮಣಿಕಾ ಬಾತ್ರಾ

ಇನ್ನು, ಮೊದಲ ಸಿಂಗಲ್ಸ್‌ನಲ್ಲಿ ವಿಶ್ವದ ೮೮ನೇ ಶ್ರೇಯಾಂಕಿತೆ ಕುರುವಿಲ್ಲಾ ೫೧ನೇ ಶ್ರೇಯಾಂಕಿತೆ ಟ್ಸಿ ಲಾಕ್ ಹೊ ಅವರೊಂದಿಗೆ ಕಾದಿದರು. ಗುಂಪು ಹಂತದಲ್ಲಿ ಇದೇ ಟ್ಸಿ ಲಾಕ್ ವಿರುದ್ಧ ಗೆಲುವು ಸಾಧಿಸಿದ್ದ ಕುರುವಿಲ್ಲಾ, ಈ ಬಾರಿ ಆಕೆಯೆದುರು ನಿಲ್ಲದಾದರು. ಮತ್ತೊಂದು ಮಹತ್ವಪೂರ್ಣ ಸಿಂಗಲ್ಸ್‌ನಲ್ಲಿ ಜೋಶ್ನಾ ಚಿನ್ನಪ್ಪ ಮತ್ತು ದೀಪಿಕಾ ಪಳ್ಳೀಕಲ್ ಕೂಡಾ ಸೋಲನುಭವಿಸಿದರು. ಕುರುವಿಲ್ಲಾ ೮-೧೧, ೬-೧೧, ೧೨-೧೦, ೩-೧೧ರಿಂದ ಸೋತರು. ಇನ್ನು, ದೀಪಿಕಾ ಪಳ್ಳೀಕಲ್ ಆನ್ನೀ ವಿರುದ್ಧ ೩-೧೧, ೯-೧೧, ೫-೧೧ರ ಮೂರು ಗೇಮ್‌ಗಳ ಆಟದಲ್ಲಿ ಪರಾಭವಗೊಂಡರು.

ಬ್ರಿಡ್ಜ್‌ನಲ್ಲಿ ಬಂಗಾರ

ಪುರುಷರ ಡಬಲ್ಸ್ ವಿಭಾಗದಲ್ಲಿ ಬರ್ಧನ್ ಮತ್ತು ಶಿವನಾಥ್ ಸರ್ಕಾರ್ ಗೆಲುವು ಸಾಧಿಸಿ ಚಿನ್ನ ಗೆದ್ದರು. ೬೦ರ ಹರೆಯದ ಪ್ರಣಬ್ ಮತ್ತು ೫೬ರ ಹರೆಯದ ಶಿವನಾಥ್ ೩೮೪ ಸ್ಕೋರ್ ಮಾಡಿದರು. ಚೀನಾ ಜೋಡಿ ಲಿಕ್ಸಿನ್ ಯಾಂಗ್ ಹಾಗೂ ಗ್ಯಾಂಗ್ ಚೆನ್ ೩೭೮ ಸ್ಕೋರ್‌ನೊಂದಿಗೆ ಬೆಳ್ಳಿ ಗಳಿಸಿದರು. ಇನ್ನು, ಇಂಡೋನೇಷ್ಯಾ ಜೋಡಿ ಹೆಂಕಿ ಲಾಸುಟ್ ಮತ್ತು ಫ್ರೆಡ್ಡಿ ಎಡ್ಡಿ ಮನೊಪ್ಪೊ ೩೭೪ ಸ್ಕೋರ್‌ನೊಂದಿಗೆ ಕಂಚು ಜಯಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More