ಚೇತೇಶ್ವರ ಪೂಜಾರ ಅಜೇಯ ಶತಕದಲ್ಲಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಭಾರತ

ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ (132) ದಾಖಲಿಸಿದ ಅಜೇಯ ಶತಕದ ನೆರವಿನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ೨೭ ರನ್ ಮುನ್ನಡೆ ಸಾಧಿಸಿತು. ಸ್ಪಿನ್ನರ್ ಮೊಯೀನ್ ಅಲಿ (೬೩ಕ್ಕೆ ೫) ಚಮತ್ಕಾರಿ ಬೌಲಿಂಗ್‌ ಮಧ್ಯೆಯೂ ಪೂಜಾರ ಶತಕ ಇನ್ನಿಂಗ್ಸ್ ಮುನ್ನಡೆ ತಂದಿತ್ತಿತು

ನಿರೀಕ್ಷೆಗೂ ಮೀರಿದ ಬೌಲಿಂಗ್ ಪ್ರದರ್ಶಿಸಿದ ಮೊಯೀನ್ ಅಲಿ ಅತಿಥೇಯರ ಇನ್ನಿಂಗ್ಸ್ ಅನ್ನು ದಿಕ್ಕುತಪ್ಪಿಸಿದಾಗ ಭಾರತದ ನೆರವಿಗೆ ಧಾವಿಸಿದ ಚೇತೇಶ್ವರ ಪೂಜಾರ ಬಲು ದೊಡ್ಡ ಗಂಡಾಂತರದಿಂದ ತಂಡವನ್ನು ಪಾರುಮಾಡಿದರು. ತಂಡದ ಎಲ್ಲ ವಿಕೆಟ್‌ಗಳು ಪತನವಾದರೂ, ಕಡೆಯವರೆಗೂ ಹೆಬ್ಬಂಡೆಯಂತೆ ಕ್ರೀಸ್‌ಗೆ ಕಚ್ಚಿನಿಂತ ಪೂಜಾರ, ಸೌಥಾಂಪ್ಟನ್ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ನೆರವಾದರು.

ದಿ ರೋಸ್ ಬೌಲ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ ಗಳಿಸಿದ 246 ರನ್‌ ಗಳಿಸಿಗೆ ಪ್ರತಿಯಾಗಿ ಭಾರತ ತಂಡವು ೮೪.೫ ಓವರ್‌ಗಳಲ್ಲಿ ೨೭೩ ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ೪ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೬ ರನ್ ಮಾಡಿತ್ತು. ಅಲೆಸ್ಟೈರ್ ಕುಕ್ (೨) ಮತ್ತು ಕೀಟನ್ ಜೆನ್ನಿಂಗ್ಸ್ ೪ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಅಸ್ಥಿರ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಎಷ್ಟು ರನ್ ಕಲೆಹಾಕುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಏಕೆಂದರೆ, ೨೦೦ ಇಲ್ಲವೇ ಅದಕ್ಕಿಂತ ಹೆಚ್ಚಿನ ರನ್‌ ಗಳಿಸಿದರೂ, ಸ್ಪರ್ಧಾತ್ಮಕ ಪಿಚ್‌ನಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಒಟ್ಟಾರೆ, ನಾಲ್ಕನೇ ಟೆಸ್ಟ್ ಕೂಡಾ ಕುತೂಹಲದತ್ತ ಸಾಗಲಿದೆ.

ವಿಕೆಟ್ ನಷ್ಟವಿಲ್ಲದೆ ೧೯ ರನ್‌ಗಳೊಂದಿಗೆ ಎರಡನೇ ದಿನದಾಟ ಮುಂದುವರೆಸಿದ ಭಾರತ, ಬೆಳಿಗ್ಗೆ ಎಂಟನೇ ಓವರ್‌ನಲ್ಲಿ ದಾಳಿಗಿಳಿದ ಸ್ಟುವರ್ಟ್‌ ಬ್ರಾಡ್ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದರು. ಈ ವೇಳೆ ಕ್ರೀಸ್‌ಗಿಳಿದ ಪೂಜಾರ ಸಹನೆಯಿಂದ ಬ್ಯಾಟಿಂಗ್ ಮಾಡಿದರು. ಅವರಿಗೆ ಎಡಗೈ ಬ್ಯಾಟ್ಸ್‌ಮನ್‌ ಶಿಖರ್ ಧವನ್ (23; 53 ಎಸೆತ, 3 ಬೌಂಡರಿ) ಕೂಡಾ ಉತ್ತಮ ಜತೆಯಾಟದ ಭರವಸೆ ನೀಡಿದರು.

ಆದರೆ ಬ್ರಾಡ್ ಮತ್ತೊಮ್ಮೆ ಭಾರತಕ್ಕೆ ಎರವಾದರು. 18ನೇ ಓವರ್‌ನಲ್ಲಿ ಧವನ್ ಹೋರಾಟಕ್ಕೆ ತೆರೆ ಎಳೆದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ, ಆಕರ್ಷಕ ಬ್ಯಾಟಿಂಗ್‌ನಿಂದ ಪ್ರೇಕ್ಷಕರ ಗ್ಯಾಲರಿಯಿಂದ ಚಪ್ಪಾಳೆ ಗಿಟ್ಟಿಸುತ್ತಾ ಸಾಗಿದರು. ಇದೇ ವೇಳೆ ಅವರು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ  ಆರು ಸಾವಿರ ರನ್‌ಗಳ ಮೈಲುಗಲ್ಲು ಮುಟ್ಟಿದ ಸಾಧನೆಗೂ ಭಾಜನರಾದರು. ಆದರೆ, ಈ ಸಾಧನೆಯ ನಂತರ ಕೊಹ್ಲಿ ಹೆಚ್ಚುಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. 42ನೇ ಓವರ್‌ನಲ್ಲಿ ಅವರು ಸ್ಯಾಮ್‌ ಕರನ್ ಎಸೆತಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಅಲೆಸ್ಟೇರ್‌ಗೆ ಕುಕ್‌ಗೆ ಕ್ಯಾಚಿತ್ತರಲ್ಲದೆ, ಕೇವಲ 4 ರನ್‌ಗಳ ಅಂತರದಿಂದ ಅರ್ಧಶತಕದಿಂದ ವಂಚಿತರಾದರು. ಆದಾಗ್ಯೂ ಪೂಜಾರ ಮತ್ತು ಕೊಹ್ಲಿ ಮೂರನೇ ವಿಕೆಟ್‌ಗೆ 93 ರನ್‌ ಸೇರಿಸಿದರು.

ಇದನ್ನೂ ಓದಿ : ಆತಿಥೇಯರ ವಿರುದ್ಧ ಮೊದಲ ದಿನವೇ ನಿಯಂತ್ರಣ ಸಾಧಿಸಿದ ವಿರಾಟ್ ಬಳಗ

ಸ್ಪಿನ್ ಮಾಂತ್ರಿಕನ ಕೈಚಳಕ

#indiavsengland #test #moeenali #viratkohli #indvseng

A post shared by Cricket SuperFans (@cricketsuperfans_) on

ಕೊಹ್ಲಿ ನಿರ್ಗಮನದ ನಂತರದಲ್ಲಿ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಮೊಯೀನ್ ಅಲಿಯ ಸ್ಪಿನ್ ಚಮತ್ಕಾರ ಭಾರತದ ಬ್ಯಾಟ್ಸ್‌ಮನ್‌ಗಳನ್ನು ವಂಚಿಸಿತು. ಇಷ್ಟಾದರೂ, ಪೂಜಾರ ಮಾತ್ರ ಸ್ಪಿನ್‌ಗಾಗಲೀ ಇಲ್ಲವೇ ವೇಗದ ದಾಳಿಗಾಗಲಿ ವಿಚಲಿತವಾಗದೆ ಹೋರಾಟ ಮುಂದುವರೆಇಸಿದರು. 210 ಎಸೆತಗಳನ್ನು ಎದುರಿಸಿದ ಅವರು 101 ರನ್‌ಗಳೊಂದಿಗೆ ಶತಕ ಪೂರೈಸಿದರು. ಈ ವೇಳೆಗೆ 11 ಬೌಂಡರಿಗಳನ್ನು ಬಾರಿಸಿದ ಅವರು, ಅಂತಿಮವಾಗಿ ೨೫೭ ಎಸೆತಗಳಲ್ಲಿ ೧೬ ಬೌಂಡರಿಗಳೊಂದಿಗೆ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೭೬.೪ ಓವರ್‌ಗಳಲ್ಲಿ ೨೪೬/೧೦ (ಮೊಯೀನ್ ಅಲಿ ೪೦, ಸ್ಯಾಮ್ ಕರನ್ ೭೮; ಜಸ್ಪ್ರೀತ್ ಬುಮ್ರಾ ೪೬ಕ್ಕೆ ೩, ಇಶಾಂತ್ ಶರ್ಮಾ ೨೬ಕ್ಕೆ ೨, ಮೊಹಮದ್ ಶಮಿ ೫೧ಕ್ಕೆ ೨, ಆರ್ ಅಶ್ವಿನ್ ೪೦ಕ್ಕೆ ೨) ಭಾರತ ಮೊದಲ ಇನ್ನಿಂಗ್ಸ್: ೮೪.೫ ಓವರ್‌ಗಳಲ್ಲಿ ೨೭೩/೧೦ (ಚೇತೇಶ್ವರ ಪೂಜಾರ ೧೩೨*, ವಿರಾಟ್ ಕೊಹ್ಲಿ ೪೬; ಮೊಯೀನ್ ಅಲಿ ೬೩ಕ್ಕೆ ೫, ಸ್ಟುವರ್ಟ್ ಬ್ರಾಡ್ ೬೩ಕ್ಕೆ ೩); ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: ೪ ಓವರ್‌ಗಳಲ್ಲಿ ೬/೦ (ಅಲೆಸ್ಟೈರ್ ಕುಕ್ ೨ ಬ್ಯಾಟಿಂಗ್, ಕೀಟನ್ ಜೆನ್ನಿಂಗ್ಸ್ ೪ ಬ್ಯಾಟಿಂಗ್)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More