ಅಮೆರಿಕನ್ ಓಪನ್: ತಂಗಿ ಸೆರೆನಾ ಎದುರು ಸೋತು ನಿರ್ಗಮಿಸಿದ ವೀನಸ್

ತಂಗಿಯ ಆಕ್ರಮಣಕಾರಿ ಆಟದ ಎದುರು ಮತ್ತೊಮ್ಮೆ ನಿರುತ್ತರವಾದ ವೀನಸ್ ವಿಲಿಯಮ್ಸ್ ಯುಎಸ್ ಓಪನ್ ವನಿತೆಯರ ಸಿಂಗಲ್ಸ್‌ನಿಂದ ಹೊರಬಿದ್ದರು. ಹೆಚ್ಚೇನೂ ಪ್ರಯಾಸವಿಲ್ಲದೆ ೨೩ ಗ್ರಾಂಡ್‌ಸ್ಲಾಮ್ ವಿಜೇತೆ ಸೆರೆನಾ ೪ನೇ ಸುತ್ತಿಗೆ ನಡೆದರೆ, ನಡಾಲ್ ಪ್ರಯಾಸದ ಗೆಲುವು ಸಾಧಿಸಿ ಪ್ರೀಕ್ವಾರ್ಟರ್ ತಲುಪಿದರು

ದಾಖಲೆಯ ೨೪ನೇ ಗ್ರಾಂಡ್‌ಸ್ಲಾಮ್‌ಗಾಗಿ ಸೆಣಸುತ್ತಿರುವ ಸೆರೆನಾ ವಿಲಿಯಮ್ಸ್, ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಅಂತಿಮ ಹದಿನಾರರ ಘಟ್ಟ ತಲುಪಿದ್ದಾರೆ. ತನ್ನ ಹಿರಿಯ ಸೋದರಿ ವೀನಸ್ ವಿಲಿಯಮ್ಸ್ ವಿರುದ್ಧ ಮತ್ತೊಮ್ಮೆ ಪ್ರಭುತ್ವಕಾರಿ ಗೆಲುವು ಸಾಧಿಸಿದ ಸೆರೆನಾ, ೬-೧, ೬-೨ ಸೆಟ್‌ಗಳಲ್ಲಿ ವಿಜೃಂಭಿಸಿದರು.

ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್‌ನಲ್ಲಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ತೃತೀಯ ಸುತ್ತಿನ ಪಂದ್ಯದಲ್ಲಿ ೭೧ ನಿಮಿಷಗಳ ಕಾದಾಟ ಒಂದು ಬಗೆಯಲ್ಲಿ ಏಕಪಕ್ಷೀಯವಾಗಿತ್ತು. ಮಾರ್ಗರೆಟ್ ಕೊರ್ಟ್ (೨೪ ಗ್ರಾಂಡ್‌ಸ್ಲಾಮ್) ದಾಖಲೆಯನ್ನು ಸರಿಗಟ್ಟುವ ಹಾದಿಯಲ್ಲಿ ಸೆರೆನಾ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದ್ದು, ಮುಂದಿನ ಹಂತದಲ್ಲಿ ಇಸ್ಟೋನಿಯಾದ ಕಯಿಯಾ ಕನೆಪಿ ವಿರುದ್ಧ ಕಾದಾಡಲಿದ್ದಾರೆ.

೩೬ರ ಹರೆಯದ ಸೆರೆನಾ ಮೊದಲ ಸೆಟ್‌ ಅನ್ನು ಆಕ್ರಮಣಕಾರಿಯಾಗಿ ಗೆದ್ದುಕೊಂಡರು. ಎರಡು ವರ್ಷ ಹಿರಿಯಳಾದ ವೀನಸ್ ತಂಗಿಯ ಪ್ರಖರ ಆಟದೆದುರು ನಿಲ್ಲಲಾಗದೆ ಕೇವಲ ಒಂದು ಗೇಮ್‌ನಲ್ಲಷ್ಟೇ ಗೆಲುವು ಸಾಧಿಸಿ ಸುಲಭವಾಗಿಯೇ ಸೆಟ್ ಬಿಟ್ಟುಕೊಟ್ಟರು. ಇತ್ತ, ಎರಡನೇ ಸೆಟ್‌ನಲ್ಲಿ ಕೊಂಚ ವೈದ್ಯಕೀಯ ಚಿಕಿತ್ಸೆ ಪಡೆದ ಸೆರೆನಾ, ಇಲ್ಲಿಯೂ ಕೂಡಾ ಹೆಚ್ಚು ಪ್ರಯಾಸವಿಲ್ಲದೆ ಗೆಲುವು ಸಾಧಿಸಿದರು.

ಇನ್ನು, ಯುಎಸ್ ಓಪನ್‌ನ ಆರಂಭದಲ್ಲೇ ವಿಶ್ವದ ನಂ ೧ ಆಟಗಾರ್ತಿ ಸಿಮೋನಾ ಹ್ಯಾಲೆಪ್‌ಗೆ ಆಘಾತಕಾರಿ ಸೋಲುಣಿಸಿದ್ದ ಕನೆಪಿ ವನಿತೆಯರ ಸಿಂಗಲ್ಸ್ ವಿಭಾಗದ ಇನ್ನೊಂದು ತೃತೀಯ ಸುತ್ತಿನಲ್ಲಿ ಇಸ್ಟೋನಿಯಾದವರೇ ಆದ ರೆಬೆಕ್ಕಾ ಪೀಟರ್ಸನ್ ವಿರುದ್ಧ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್ ಅನ್ನು ೬-೩ರಿಂದ ಗೆದ್ದ ಕನೆಪಿ, ಎರಡನೇ ಸೆಟ್‌ನಲ್ಲಿ ಪೀಟರ್ಸನ್ ಒಡ್ಡಿದ ಕಠಿಣ ಪ್ರತಿರೋಧವನ್ನು ೭-೬ (೭/೩)ರಿಂದ ಹತ್ತಿಕ್ಕಿದರು.

ಇದನ್ನೂ ಓದಿ : ಅಮೆರಿಕನ್ ಓಪನ್ ಟೆನಿಸ್: ಜೊಕೊವಿಚ್, ಫೆಡರರ್ ಗೆಲುವಿನ ಓಟ

ನಡಾಲ್‌ಗೆ ರೋಚಕ ಗೆಲುವು

He’s in fire 🔥 🔥👏👏👌 @rafaelnadal Vs Mayer . . . *FOLLOW @Tennistico IF YOU LOVE TENNIS* 💕. . 🎥SEND US YOUR TENNIS VIDEOS🎥 . . . . . . . . . . . #tennis #tenniscourt #tennisracket #tennislife #instatennis #tennisvideo #tennisogram #tennistico #tennistraining #tennisfan #tennisworld #tennisaddict #tennisaddiction #tennis🎾 #tennistime #tennisball #tennislove #tennisplayer #rogerfederer #federer #djokovic #novakdjokovic #andymurray #rafaelnadal #tennisday #tennisnews #tennisclub . . . . . 📝 Disclaimer: we don’t claim copyright of any materials unless we mention. All rights are belong to the subsequent content owners. We only share/re-post to promote Tennis, therefore the ultimate beneficiaries would be the content owners. . . 📩 If you want us to remove any posts, please DM with the URL with the proof of your ownership of the material. Thank you for your co-operation. Peace ✌️.

A post shared by Tennistico (@tennistico) on

ಇನ್ನು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್ ಆಟಗಾರ ರಾಫೆಲ್ ನಡಾಲ್, ಅತ್ಯಂತ ಪ್ರಯಾಸದ ಆದರೆ, ರೋಚಕ ಗೆಲುವಿನೊಂದಿಗೆ ಮುಂದಿನ ಹಂತಕ್ಕೆ ನಡೆದರು. ರಷ್ಯನ್ ಆಟಗಾರ ಕರೆನ್ ಕಚಾನೊವ್ ವಿರುದ್ಧದ ನಾಲ್ಕು ಸೆಟ್‌ಗಳ ಸುದೀರ್ಘ ಸಮಯದ ಹಣಾಹಣಿಯಲ್ಲಿ ನಡಾಲ್, ೫-೭, ೭-೫, ೭-೬ (೯/೭), ೭-೬ (೭/೩) ಅಂತರದಿಂದ ಜಯ ಸಾಧಿಸಿದರು.

ವಿಶ್ವದ ನಂ ೧ ಆಟಗಾರ ನಡಾಲ್, ಮೂರನೇ ಸೆಟ್‌ನಲ್ಲಿ ಸರ್ವೀಸ್‌ನಲ್ಲಿ ವಿಫಲವಾದರೂ, ಟೈಬ್ರೇಕರ್‌ನಲ್ಲಿ ಸೆಟ್ ಗೆಲ್ಲುವಲ್ಲಿ ಯಶಸ್ವಿಯಾದರು. ಹದಿನೆಂಟನೇ ಗ್ರಾಂಡ್‌ಸ್ಲಾಮ್‌ಗಾಗಿ ಸೆಣಸುತ್ತಿರುವ ನಡಾಲ್, ೨೨ ಏಸಸ್ ಮತ್ತು ೬೬ ವಿನ್ನರ್‌ಗಳೊಂದಿಗೆ ರಷ್ಯನ್ ಆಟಗಾರನನ್ನು ಮಣಿಸಿದರು. ನಾಲ್ಕನೇ ಯುಎಸ್ ಓಪನ್‌ ಮೇಲೆ ಕಣ್ಣಿಟ್ಟಿರುವ ನಡಾಲ್, ಇದೀಗ ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ಜಾರ್ಜಿಯಾ ಆಟಗಾರ ನಿಕೊಲಸ್ ಬಸಿಲಾಶ್ವಿಲಿ ವಿರುದ್ಧ ಸೆಣಸಲಿದ್ದಾರೆ.

ವಾವ್ರಿಂಕಾ ಹೋರಾಟಕ್ಕೆ ತೆರೆ

#stanwawrinka #usopen #btmediagroup

A post shared by BT Media (@btmediaconsulting) on

ಸ್ವಿಡ್ಸರ್ಲೆಂಡ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಅವರ ಯುಎಸ್ ಓಪನ್ ಅಭಿಯಾನ ಕೊನೆಕಂಡಿದೆ. ಕೆನಡಾ ಆಟಗಾರ ಮಿಲಾಸ್ ರೋನಿಕ್ ವಿರುದ್ಧದ ಸೆಣಸಾಟದಲ್ಲಿ ವಾವ್ರಿಂಕಾ, ೬-೭ (೬/೮), ೪-೬, ೩-೬ ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ಮೊದಲ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಕಳೆದುಕೊಂಡ ವಾವ್ರಿಂಕಾ, ತದನಂತರದ ಎರಡೂ ಸೆಟ್‌ನಲ್ಲಿಯೂ ರೋನಿಕ್ ಆಟಕ್ಕೆ ಮರುಳಾದರು.

೨೦೧೪ರಲ್ಲಿ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದ ಮೂರು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತ ವಾವ್ರಿಂಕಾ ವಿರುದ್ಧ ರೋನಿಕ್ ಹದಿನಾಲ್ಕು ಏಸ್‌ಗಳಿಂದ ವಿಜೃಂಭಿಸಿದರೆ, ವಾವ್ರಿಂಕಾ ಗಳಿಸಿದ್ದು ಕೇವಲ ೬ ಏಸ್‌ಗಳನ್ನಷ್ಟೆ. ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ರೋನಿಕ್, ಅಮೆರಿಕದ ಜಾನ್ ಇಸ್ನೆರ್ ವಿರುದ್ಧ ಸೆಣಸಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ತೃತೀಯ ಸುತ್ತಿನಲ್ಲಿ ಇಸ್ನೆರ್, ಸರ್ಬಿಯಾದ ಡುಸಾನ್ ಲಜೋವಿಕ್ ವಿರುದ್ಧ ೭-೬ (೧೦/೮), ೬-೭ (೬/೮), ೬-೩, ೭-೫ ಸೆಟ್‌ಗಳಲ್ಲಿ ಗೆಲುವು ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More