ಅಜರ್‌-ಗುಟ್ಟಾ ಗಾಸಿಪ್ ನೆನಪಿಸಿದ ರವಿಶಾಸ್ತ್ರಿ-ನಿಮ್ರತ್ ಡೇಟಿಂಗ್ ವರದಿ!

ಬಾಲಿವುಡ್ ನಟಿ ನಿಮ್ರತ್ ಕೌರ್ ಮತ್ತು ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಡೇಟಿಂಗ್‌ನಲ್ಲಿದ್ದಾರೆ ಎಂಬ ಮಾಧ್ಯಮಗಳ ವರದಿಗಳು ನಿರಾಧಾರ ಎಂದು ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಈ ಹಿಂದೆ ಮಾಜಿ ನಾಯಕ ಮೊಹಮದ್ ಅಜರುದ್ದೀನ್-ಜ್ವಾಲಾ ಗುಟ್ಟಾಗೂ ಸಂಪರ್ಕ ಕಲ್ಪಿಸಲಾಗಿತ್ತು

ತನಗಿಂತಲೂ ೨೦ ವರ್ಷ ಕಿರಿಯ ವಯಸ್ಸಿನ ಯುವತಿಯೊಂದಿಗೆ ಭಾರತ ತಂಡದ ತರಬೇತುದಾರ ರವಿಶಾಸ್ತ್ರಿ ಡೇಟಿಂಗ್‌ನಲ್ಲಿದ್ದಾರೆ ಎಂಬ ಸಂಗತಿ ಕೇವಲ ಕಪೋಲ ಕಲ್ಪಿತ ಎಂದು ಮುಂಬೈನ ಮಾಜಿ ಬ್ಯಾಟ್ಸ್‌ಮನ್ ಸ್ಪಷ್ಟಪಡಿಸಿದ್ದಾರೆ. ಮುಂಬೈನ ‘ಮಿಡ್ ಡೇ’ಗೆ ನೀಡಿದ ಸಂದರ್ಶನದಲ್ಲಿ ಈ ಕಲ್ಪಿತ ವರದಿಯು ‘ಒಂದು ದೊಡ್ಡ ಸಗಣಿ ಹುಡುಕಿದಂತೆ’ ಎಂದು ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.

‘ಮುಂಬೈ ಮಿರರ್’ನಲ್ಲಿ ಸೋಮವಾರ (ಸೆ. ೨) ರವಿಶಾಸ್ತ್ರಿ ಮತ್ತು ನಿಮ್ರತ್ ಕೌರ್ ಕಳೆದ ಎರಡು ವರ್ಷಗಳಿಂದಲೂ ಪರಸ್ಪರ ಡೇಟಿಂಗ್‌ನಲ್ಲಿದ್ದಾರೆಂದು ವರದಿಯಾಗಿತ್ತು. ಓರ್ವ ಗೆಳೆಯರೊಬ್ಬರಿಂದ ರವಿಶಾಸ್ತ್ರಿ ಮತ್ತು ನಿಮ್ರತ್ ಪರಸ್ಪರ ಪರಿಚಿತರಾಗಿದ್ದರು. ಆ ಬಳಿಕ ಎರಡು ವರ್ಷಗಳಿಂದಲೂ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂದು ವರದಿ ಹೇಳಿತ್ತು. ಈ ಮಧ್ಯೆ ಜರ್ಮನ್ ಕಾರು ಕಂಪೆನಿಯೊಂದರ ಅನಾವರಣದ ಸಂದರ್ಭದಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದರು.

ಈ ವರದಿ ಕುರಿತು ಮಂಗಳವಾರ (ಸೆ ೪) ಮತ್ತೊಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ, “ನಮ್ಮಿಬ್ಬರ ನಡುವಿನ ಸಂಬಂಧ ಕಲ್ಪಿಸಿರುವ ವರದಿ ಬಹುದೊಡ್ಡ ಕಸ ಇಲ್ಲವೇ ಸಗಣಿಯಂತೆ. ಇದುವೇ ಎಲ್ಲವನ್ನೂ ಹೇಳುತ್ತದೆ,’’ ಎಂದಿದ್ದರು. ರವಿಶಾಸ್ತ್ರಿ ಅವರೊಂದಿಗೆ ತನ್ನನ್ನು ತಳುಕು ಹಾಕಿರುವ ಕುರಿತು ಸ್ವತಃ ೩೬ರ ಹರೆಯದ ನಿಮ್ರತ್ ಕೌರ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದರು.

Follow 👉(@Bhutiyagram ) ______________________________________ Follow Here @Bhutiyagram FOLLOW @Bhutiyagram YIHB 💬💬💬 Comment Your Thoughts Below ⬇⬇⬇⬇⬇⬇ ... ... 📱📲 Turn on post notifications ✔✔✔ ▬▬▬▬▬▬▬▬▬▬▬▬▬▬▬▬ Follow 👇👇👇👇 @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram @bhutiyagram ▬▬▬▬▬▬▬▬▬▬▬▬▬ ... ... ▬▬▬▬▬▬▬▬▬▬▬▬▬▬▬▬▬▬▬▬▬▬▬▬▬ Comment | Tag | Like | Share ▬▬▬▬▬▬▬▬▬▬▬▬▬▬▬▬▬▬▬▬▬▬▬▬▬ ... ... #bhutiyagram #factshai💬💬 Comment Your Thoughts Below ⬇⬇⬇⬇⬇⬇ ... ... 📱📲 Turn on post notifications ✔✔✔ ▬▬▬▬▬▬▬▬▬▬▬▬▬▬▬▬▬▬▬▬▬▬▬▬▬ ... ... ▬▬▬▬▬▬▬▬▬▬▬▬▬▬▬▬▬▬▬▬▬▬▬▬▬ Comment | Tag | Like | Share ▬▬▬▬▬▬▬▬▬▬▬▬▬▬▬▬▬▬▬▬▬▬▬▬▬ ... ... #memes #meme #desi #desimemes #desimeme #dankmemes #indianmemes #india #indian #indianpictures #delhi #delhigram #delhite #mumbai #indianmeme #kolkata #ahmedabad #gujarat #gujju #vadodara #banglore #chandigarh #bollywood#ravishastri #nimratkaur #dating

A post shared by B H U T I Y A G R A M ©️ (@bhutiyagram) on

ಇದನ್ನೂ ಓದಿ : ವಿರಾಟ್ ಕೊಹ್ಲಿ ನಂತರ ಬಾಲಿವುಡ್ ಬೆಡಗಿ‌ಗೆ ಮಾರುಹೋದರೇ ಕೆ ಎಲ್ ರಾಹುಲ್?

೫೬ರ ಹರೆಯದ ರವಿಶಾಸ್ತ್ರಿ, ೧೦ ವರ್ಷಗಳ ಹಿಂದೆ ತಮ್ಮ ಪತ್ನಿ ರಿತುಗೆ ವಿಚ್ಛೇದನ ನೀಡಿದ್ದಾರೆ. ಮೊದಲು ಅವರ ಹೆಸರು ಬಾಲಿವುಡ್‌ನ ಅಮೃತಾ ಸಿಂಗ್ ಜತೆಗೂ ತಳುಕು ಹಾಕಿಕೊಂಡಿತ್ತು. ಕಡೆಗೆ ಇಬ್ಬರ ಸಂಬಂಧ ಮುರಿದುಬಿದ್ದಿತ್ತು. ಅಂದಹಾಗೆ, ರವಿಶಾಸ್ತ್ರಿ ಜತೆಗೆ ಗುರುತಿಸಿಕೊಂಡಿರುವ ನಿಮ್ರತ್, ‘ಏರ್‌ಲಿಫ್ಟ್’ ಚಿತ್ರದ ಮೂಲಕ ಸುದ್ದಿಯಾಗಿದ್ದರು. ಈ ಚಿತ್ರದ ನಾಯಕ ಖ್ಯಾತ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್.

“ಸರಿಸುಮಾರು ಎರಡು ವರ್ಷಗಳಿಂದ ರವಿಶಾಸ್ತ್ರಿ ಮತ್ತು ನಿಮ್ರತ್ ಕೌರ್ ಡೇಟಿಂಗ್‌ನಲ್ಲಿದ್ದಾರೆ ಎಂಬ ಸಂಗತಿ ನಮ್ಮ ಕಿವಿಗೆ ಬಿದ್ದಿದೆ. ೨೦೧೫ರಿಂದ ಪ್ರತೀ ವರ್ಷವೂ ಜರ್ಮನ್ ಮೂಲದ ಐಷಾರಾಮಿ ಕಾರೊಂದರ ಅನಾವರಣ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇಬ್ಬರ ನಡುವಣದ ಡೇಟಿಂಗ್ ಗಾಸಿಪ್‌ಗಳಿಗೆ ಪೂರಕವಾಗಿದೆ,’’ ಎಂದು ‘ಮುಂಬೈ ಮಿರರ್’ ವರದಿ ಹೇಳಿತ್ತು.

ಅಜರುದ್ದೀನ್-ಜ್ವಾಲಾ ಪ್ರಕರಣ

ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರುಗಳಲ್ಲಿ ಒಬ್ಬರಾದ ಮೊಹಮದ್ ಅಜರುದ್ದೀನ್ ಹಾಗೂ ಭಾರತದ ನಂ ೧ ಮಹಿಳಾ ಡಬಲ್ಸ್ ಆಟಗಾರ್ತಿಯರಲ್ಲಿ ಒಬ್ಬರಾದ ಜ್ವಾಲಾ ಗುಟ್ಟಾ ನಡುವೆ ಇಂಥದ್ದೇ ಡೇಟಿಂಗ್ ಪುಕಾರು ಎದ್ದಿತ್ತು. ೧೯೯೬ರಲ್ಲಿ ಬಾಲಿವುಡ್ ನಟಿ ಸಂಗೀತಾ ಬಿಜಲಾನಿಯನ್ನು ಮದುವೆಯಾಗಿದ್ದ ಅಜರುದ್ದೀನ್, ನಾಲ್ಕು ವರ್ಷಗಳ ನಂತರ ಆಕೆಗೆ ವಿಚ್ಛೇದನ ನೀಡಿದ್ದರು. ಅಂದಹಾಗೆ, ಅಜರುದ್ದೀನ್‌ಗೆ ಸಂಗೀತಾ ಬಿಜಲಾನಿ ಎರಡನೇ ಪತ್ನಿ ಎಂಬುದು ಗಮನಾರ್ಹ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More