ಅಮೆರಿಕ ಓಪನ್ ಟೆನಿಸ್: ಪ್ರೀಕ್ವಾರ್ಟರ್‌ನಲ್ಲಿ ಸೋತು ಹೊರಬಿದ್ದ ಶರಪೋವಾ

೨೦೦೬ರ ಯುಎಸ್ ಓಪನ್ ಚಾಂಪಿಯನ್ ಮರಿಯಾ ಶರಪೋವಾ, ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲಿನ ಶರಪೋವಾ ಅಜೇಯ ಓಟಕ್ಕೆ ಸ್ಪೇನ್ ಆಟಗಾರ್ತಿ ಸುವಾರೆಜ್ ನವಾರೊ ತೆರೆ ಎಳೆದು ಕ್ವಾರ್ಟರ್‌ಫೈನಲ್ ತಲುಪಿದರು

ಫ್ಲಶಿಂಗ್ ಮೆಡೋಸ್‌ನಲ್ಲಿನ ಹೊನಲು ಬೆಳಕಿನಲ್ಲಿ ಸತತ ೨೩ ಗೆಲುವಿನೊಂದಿಗೆ ಸಾಗಿದ್ದ ರಷ್ಯನ್ ಟೆನಿಸ್ ರೂಪಸಿ ಮರಿಯಾ ಶರಪೋವಾ ಓಟಕ್ಕೆ ತೆರೆಬಿದ್ದಿದೆ. ಈ ಋತುವನ್ನೂ ಒಳಗೊಂಡಂತೆ ಕಳೆದ ಮೂರು ಋತುಗಳಲ್ಲಿಯೂ ಜಯದ ಅಲೆಯಲ್ಲಿ ತೇಲಿದ್ದ ಶರಪೋವಾ ಸೋಮವಾರ (ಸೆ. ೩) ತಡರಾತ್ರಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಅಂತಿಮ ಹದಿನಾರರ ಹಂತದ ಪಂದ್ಯದಲ್ಲಿ ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು.

ಸ್ಪೇನ್ ಆಟಗಾರ್ತಿ ಕಾರ್ಲಾ ನವಾರೊ ಶರಪೋವಾ ವಿರುದ್ಧ ೬-೪, ೬-೩ ನೇರ ಸೆಟ್‌ಗಳ ಆಟದಲ್ಲಿ ಗೆಲುವು ಸಾಧಿಸಿ ೩೦ನೇ ಹುಟ್ಟುಹಬ್ಬದ ಸವಿಯನ್ನು ದುಪ್ಪಟ್ಟುಗೊಳಿಸಿದರು. ಒಂದು ವಿಧದಲ್ಲಿ ಶರಪೋವಾ ಸ್ವಪ್ರಮಾದದಿಂದಲೇ ಕಾರ್ಲಾ ವಿರುದ್ಧ ಸೋತರು. ಎಂಟು ಡಬಲ್ ಫಾಲ್ಟ್‌ಗಳಲ್ಲದೆ, ಪಂದ್ಯದಾದ್ಯಂತ ೩೮ ಅನಗತ್ಯ ತಪ್ಪುಗಳಿಂದ ಕಾರ್ಲಾ ಗೆಲುವಿಗೆ ಸ್ವತಃ ಶರಪೋವಾ ರಹದಾರಿ ನಿರ್ಮಿಸಿಕೊಟ್ಟರು.

31ರ ಹರೆಯದ ಶರಪೋವಾ, ನಿಷೇಧಿತ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಹದಿನೈದು ತಿಂಗಳು ಅಮಾನತು ಶಿಕ್ಷೆ ಅನುಭವಿಸಿದ ನಂತರದಲ್ಲಿ ಯಾವುದೇ ಗ್ರಾಂಡ್‌ಸ್ಲಾಮ್ ಗೆಲ್ಲಲಾಗದೆ ಚಪಡಿಸುತ್ತಿದ್ದಾರೆ. ಈ ಮಧ್ಯೆ, ಐದು ಗ್ರಾಂಡ್‌ಸ್ಲಾಮ್‌ಗಳ ಒಡತಿ ಶರಪೋವಾಳ ಯುಎಸ್ ಓಪನ್‌ ಪಂದ್ಯಾವಳಿಯ ಅಮೋಘ ಜೈತ್ರಯಾತ್ರೆಗೂ ತೆರೆಬಿದ್ದಿದೆ.

ಇದನ್ನೂ ಓದಿ : ಕನೆಪಿ ಹೋರಾಟಕ್ಕೆ ತೆರೆ ಎಳೆದ ಸೆರೆನಾ ಅಂತಿಮ ಎಂಟರ ಘಟ್ಟಕ್ಕೆ ದಾಂಗುಡಿ

ಮ್ಯಾಡಿಸನ್ ಕೀಸ್ ಗೆಲುವಿನ ಓಟ

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕನ್ ಆಟಗಾರ್ತಿ ಮ್ಯಾಡಿಸನ್ ಕೀಸ್ ಹಾಗೂ ಜಪಾನ್‌ನ ನೊವೊಮಿ ಒಸಾಕ ಗೆಲುವಿನ ಓಟ ಮುಂದುವರಿಸಿದರು. ೨೦ರ ಹರೆಯದ ಸಹ ಆಟಗಾರ್ತಿ ಅರಿನಾ ಸಬಲೆಂಕಾ ವಿರುದ್ಧದ ಹದಿನಾರರ ಘಟ್ಟದ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿದ ಒಸಾಕ ೬-೩, ೨-೬, ೬-೪ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಕೊನೆಯ ಗೇಮ್‌ನಲ್ಲಿ ಸಬಲೆಂಕಾ ಮೂರು ಬ್ರೇಕ್ ಪಾಯಿಂಟ್ಸ್‌ಗಳ ನೆರವಿನೊಂದಿಗೆ ೫-೫ ಸಮಬಲ ಸಾಧಿಸಿದ ಸಬಲೆಂಕಾ ಗೆಲುವು ಸಾಧಿಸುವ ಅವಕಾಶವಿತ್ತಾದರೂ, ಅಪಾಯದ ಸುಳಿವರಿತ ಒಸಾಕ, ಒಡನೆಯೇ ಎಚ್ಚೆತ್ತುಕೊಂಡರು. ಮೇಲಾಗಿ, ಸಬಲೆಂಕಾ ಡಬಲ್ ಫಾಲ್ಟ್ ಆಕೆಯ ಚೊಚ್ಚಲ ಗ್ರಾಂಡ್‌ಸ್ಲಾಮ್‌ ಕ್ವಾರ್ಟರ್‌ಫೈನಲ್ ಹಾದಗೆ ಪೂರಕವಾಯಿತು.

ಇನ್ನು, ವನಿತೆಯರ ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಅಮೆರಿಕ ಓಪನ್ ರನ್ನರ್‌ಅಪ್ ಮ್ಯಾಡಿಸನ್ ಕೀಸ್, ಕ್ರೊವೇಷ್ಯಾ ಆಟಗಾರ್ತಿ ಕೂಡಾ ಮೂರು ಸೆಟ್‌ಗಳ ಆಟದಲ್ಲಿ ಗೆಲುವು ಸಾಧಿಸಿದರು. ಹದಿನಾಲ್ಕನೇ ಶ್ರೇಯಾಂಕಿತೆ ಮ್ಯಾಡಿಸನ್ ಕೀಸ್, ಕ್ರೊವೇಷ್ಯಾದ ಅಲೆಕ್ಸಾಂಡ್ರಾ ಕ್ರುನಿಕ್ ವಿರುದ್ಧ ೪-೬, ೬-೧, ೬-೨ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ಬಳಿಕ ಎರಡೂ ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿದ ಕೀಸ್ ಸುಲಭ ಗೆಲುವಿನೊಂದಿಗೆ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More