ವಿಶ್ವ ಶೂಟಿಂಗ್: ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸೌರಭ್ ಚೌಧರಿ

೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡ ಸೌರಭ್ ಚೌಧರಿ, ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದರು. ಇದೇ ವಿಭಾಗದಲ್ಲಿ ಅರ್ಜುನ್ ಸಿಂಗ್ ಚೀಮಾ ಕಂಚಿನ ಪದಕವನ್ನು ತನ್ನದಾಗಿಸಿಕೊಂಡು ಗಮನ ಸೆಳೆದರು

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಏಷ್ಯಾ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಮೆರೆದ ಹದಿನಾರರ ಬಾಲಕ ಸೌರಭ್ ಚೌಧರಿ ಚೊಂಗ್ವಾನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಚಾರಿತ್ರಿಕ ಸಾಧನೆ ಮೆರೆದಿದ್ದಾರೆ. ೨೪೫.೫ ಪಾಯಿಂಟ್ಸ್ ಸ್ಕೋರ್ ಮಾಡಿದ ಚೌಧರಿ, ತನ್ನದೇ ದಾಖಲೆಯನ್ನು ಪುನರ್ರಚಿಸಿದರು.

ಇದಕ್ಕೂ ಮುನ್ನ ಸೌರಭ್ ಚೌಧರಿಯ ಶ್ರೇಷ್ಠ ಸಾಧನೆ ಎಂದರೆ ೨೪೩.೭ ಪಾಯಿಂಟ್ಸ್‌. ಇದಲ್ಲದೆ, ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚೌಧರಿ ೦.೧ ಪಾಯಿಂಟ್ ಅಂತರದಿಂದ ಹಿರಿಯ ಶೂಟರ್‌ಗಳ ದಾಖಲೆಗಿಂತಲೂ ಮುಂದಿದ್ದಾರೆ. ಗುರುವಾರ ನಡೆದ ಸ್ಪರ್ಧೆಯಲ್ಲಂತೂ ೨.೪ ಪಾಯಿಂಟ್ಸ್‌ಗಳಿಂದ ಹಿರಿಯರ ದಾಖಲೆಯನ್ನು ಸೌರಭ್ ಹಿಂದಿಕ್ಕಿದರು.

ಹಿರಿಯರ ಶೂಟಿಂಗ್ ವಿಭಾಗದಲ್ಲಿ ಉಕ್ರೇನ್‌ನ ಗುರಿಕಾರ ಓಲೆಹ್ ಒಮೆಲ್ಚುಕ್ ಇದೇ ಮೇ ತಿಂಗಳಿನಲ್ಲಿ ೨೪೩.೬ ಪಾಯಿಂಟ್ಸ್ ಸ್ಕೋರ್ ಮಾಡಿ ದಾಖಲೆ ಬರೆದಿದ್ದರು. ಇನ್ನು, ಇದೇ ಪುರುಷರ ೧೦ ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತದ ಮತ್ತೋರ್ವ ಶೂಟರ್ ಅರ್ಜುನ್ ಚೀಮಾ ೨೧೮ ಪಾಯಿಂಟ್ಸ್ ಗಳಿಸುವುದರೊಂದಿಗೆ ಕಂಚಿನ ಪದಕ ಪಡೆದರು.

ಇದನ್ನೂ ಓದಿ : ಜಕಾರ್ತ ಏಷ್ಯಾಡ್‌ನಲ್ಲಿ ಚಿನ್ನದ ಸೌರಭ ಬೀರಿದ ಹದಿನಾರರ ಕಿಶೋರ 

ಚಿನ್ನದ ಪದಕಕ್ಕಾಗಿ ನಡೆದ ಕೊನೆಯ ಹಂತದ ಗುರಿ ಇಡುವ ಸ್ಪರ್ಧೆಯಲ್ಲಿ ಮೊದಲಿಗೆ ೯ ಪಾಯಿಂಟ್ಸ್ ಗಳಿಸಿದರೂ, ಬಳಿಕ ೧೦ ಪಾಯಿಂಟ್ಸ್‌ ಗಳಿಸುವುದರೊಂದಿಗೆ ಮತ್ತೆ ಮೇಲುಗೈ ಸಾಧಿಸಿದರು. ಇನ್ನೊಂದೆಡೆ ಅರ್ಜುನ್, ೧೦ ಪಾಯಿಂಟ್ಸ್‌ ಗಳಿಸುವಲ್ಲಿ ಸ್ಥಿರ ಪ್ರದರ್ಶನ ನೀಡಿದರಾದರೂ, ೧೦.೪ ಪಾಯಿಂಟ್ಸ್‌ಗಳಾಚೆಗೆ ಯಶ ಕಾಣಲಿಲ್ಲ. ಅಂತಿಮವಾಗಿ ಅವರು ಕಂಚಿನ ಪದಕಕ್ಕೆ ತೃಪ್ತವಾಗುವಂತಾಯಿತು. ಉಳಿದಂತೆ, ಕೊರಿಯಾದ ಗುರಿಕಾರ ಹೊಜಿನ್ ಲಿಮ್ (೨೪೩.೧ ಪಾಯಿಂಟ್ಸ್) ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದರಲ್ಲದೆ, ಸೌರಭ್‌ಗಿಂತ ೨.೪ ಪಾಯಿಂಟ್ಸ್ ಹಿನ್ನಡೆ ಅನುಭವಿಸಿದರು.

ಏತನ್ಮಧ್ಯೆ, ಇದೇ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಜೂನಿಯರ್ ತಂಡ ೧೭೩೦ ಪಾಯಿಂಟ್ಸ್ ಕಲೆಹಾಕುವುದರೊಂದಿಗೆ ಬೆಳ್ಳಿ ಪದಕ ಜಯಿಸಿತು. ಸೌರಭ್, ಅರ್ಜುನ್ ಹಾಗೂ ಅನ್ಮೋಲ್ ಅವರಿದ್ದ ತ್ರಿವಳಿ ಶೂಟರ್‌ಗಳು ಎರಡನೇ ಸ್ಥಾನ ಗಳಿಸಿದರು. ಈ ಮಧ್ಯೆ, ಅಭಿಷೇಕ್ ೧೧೮ ಪಾಯಿಂಟ್ಸ್ ಗಳಿಸಿ ಮೊದಲ ಸುತ್ತಲ್ಲೇ ಪದಕ ಸ್ಪರ್ಧೆಯಿಂದ ನಿರ್ಗಮಿಸಿದರು. ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ಅವರು ೫೮೩ ಪಾಯಿಂಟ್ಸ್ ಗಳಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More