ಪೊಟ್ರೊ ಮಣಿಸಿದ ನೊವಾಕ್ ಜೊಕೊವಿಚ್‌ಗೆ ಯುಎಸ್ ಓಪನ್ ಕಿರೀಟ

ಮೊದಲ ಸೆಟ್‌ನಲ್ಲೇ ಡೆಲ್ ಪೊಟ್ರೊ ಸರ್ವ್ ಮುರಿಯುವಲ್ಲಿ ಸಫಲವಾದ ನೊವಾಕ್, ಉತ್ತಮ ಆರಂಭದೊಂದಿಗೆ ೬-೫, ೭-೬, ೬-೩ ನೇರ ಸೆಟ್‌ಗಳಲ್ಲಿ ಜಯ ಸಾಧಿಸಿ ಯುಎಸ್ ಓಪನ್ ಗೆದ್ದರು. ಇದರೊಂದಿಗೆ ೧೪ ಗ್ರಾಂಡ್‌ಸ್ಲಾಮ್ ಗೆದ್ದ ಅಮೆರಿಕದ ಪೀಟ್ ಸಾಂಪ್ರಾಸ್ ದಾಖಲೆಯನ್ನು ನೊವಾಕ್ ಸರಿಗಟ್ಟಿದರು

ಅರ್ಜೆಂಟೀನಾ ಆಟಗಾರ ಡೆಲ್ ಪೊಟ್ರೊ ಅವರ ಎರಡನೇ ಗ್ರಾಂಡ್‌ಸ್ಲಾಮ್ ಬಯಕೆಯನ್ನು ನೊವಾಕ್ ಜೊಕೊವಿಚ್ ಹೊಸಕಿ ಹಾಕಿದರು. ಭಾನುವಾರ (ಸೆ. ೯) ತಡರಾತ್ರಿ ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಹದಿಮೂರು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ಜೊಕೊವಿಚ್, ೬-೩, ೭-೬ (೭/೪) ಮತ್ತು ೬-೩ ನೇರ ಸೆಟ್‌ಗಳಲ್ಲೇ ಗೆಲುವು ಸಾಧಿಸಿದರು.

ಈ ಗೆಲುವಿನೊಂದಿಗೆ ಅತಿಹೆಚ್ಚು ಗ್ರಾಂಡ್‌ಸ್ಲಾಮ್ ಗೆದ್ದವರ ಪಟ್ಟಿಯಲ್ಲಿ ಮತ್ತೊಂದು ದಾಖಲೆ ಬರೆದರು. ಅಮೆರಿಕದ ಮಾಜಿ ಆಟಗಾರ ಪೀಟ್ ಸಾಂಪ್ರಾಸ್ ಅವರ ಹದಿಮೂರು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ದಾಖಲೆಯನ್ನು ನೊವಾಕ್ ಸರಿಗಟ್ಟಿದರು. ಗರಿಷ್ಠ ಗ್ರಾಂಡ್‌ಸ್ಲಾಮ್ ಗೆದ್ದವರ ಪೈಕಿ ಸ್ವಿಟ್ಸರ್ಲೆಂಡ್‌ನ ರೋಜರ್ ಫೆಡರರ್ (೨೦), ರಾಫೆಲ್ ನಡಾಲ್ (೧೭) ನಂತರದ ಸ್ಥಾನವನ್ನು ಸಾಂಪ್ರಾಸ್ ಹಾಗೂ ನೊವಾಕ್ ಅಲಂಕರಿಸಿದ್ದಾರೆ.

ಪೊಟ್ರೊ ವಿರುದ್ಧದ ಗೆಲುವಿನೊಂದಿಗೆ ಜೊಕೊವಿಚ್, ವಿಶ್ವ ಎಟಿಪಿ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದರು. ಸದ್ಯದ ಅವರ ಫಾರ್ಮ್ ಅನ್ನು ನೋಡುವುದಾದರೆ, ಈ ವರ್ಷಾಂತ್ಯಕ್ಕೆ ಮತ್ತೆ ಅಗ್ರಸ್ಥಾನಕ್ಕೆ ಜಿಗಿಯುವ ಸಂಭವವಿದೆ ಎಂಬುದಂತೂ ನಿಚ್ಚಳವಾಗಿದೆ. ೩೨ರ ಹರೆಯದ ನೊವಾಕ್, ಗಾಯಾಳು ಪೊಟ್ರೊ ಅವರಲ್ಲಿನ ಹೋರಾಟಗಾರನನ್ನು ಯಶಸ್ವಿಯಾಗಿ ಹತ್ತಿಕ್ಕಿ ಮೂರನೇ ಬಾರಿಗೆ ಯುಎಸ್ ಓಪನ್ ಗೆದ್ದ ಸಾಧನೆ ಮೆರೆದರು.

ಡಬಲ್ ಸಾಧಕನಿಗೆ ಬಂಪರ್!

ಇದನ್ನೂ ಓದಿ : ಸೆಂಟರ್‌ ಕೋರ್ಟ್‌ನಲ್ಲಿ ನಾಲ್ಕನೇ ವಿಂಬಲ್ಡನ್ ಜಯಿಸಿ ಸಂಭ್ರಮಿಸಿದ ಜೊಕೊವಿಚ್

ಮೊಣಕೈ ಗಾಯದ ಸಮಸ್ಯೆಯಿಂದಾಗಿ ಸರಿಸುಮಾರು ಒಂದೂವರೆ ವರ್ಷದಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದ ನೊವಾಕ್, ಫೀನಿಕ್ಸ್‌ನಂತೆ ಪುಟಿದೆದ್ದು ಈ ಋತುವಿನಲ್ಲಿ ಒಂದರ ಹಿಂದೊಂದರಂತೆ ಎರಡು ಗ್ರಾಂಡ್‌ಸ್ಲಾಮ್ ಗೆದ್ದ ಸಾಧನೆ ಮೆರೆದರು. ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದ ನೊವಾಕ್, ಅದರ ಹಿಂದೆಯೇ ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಅನ್ನೂ ತನ್ನದಾಗಿಸಿಕೊಂಡರು. ಯುಎಸ್ ಓಪನ್ ಪ್ರಶಸ್ತಿಯೊಂದಿಗೆ ಅವರು ೨.೯೪ ಮಿಲಿಯನ್ ಪೌಂಡ್ (ಅಂದಾಜು ₹ ೨೭.೪೧ ಕೋಟಿ) ಮೊತ್ತವನ್ನೂ ಪಡೆದರು.

ವಿಶ್ವದ ನಂ ೧ ಆಟಗಾರ ಜೊಕೊವಿಚ್, ೨೦೧೧, ೨೦೧೫ರಲ್ಲಿಯೂ ಯುಎಸ್ ಓಪನ್ ಜಯಿಸಿದ್ದರು. ಆ ಮೂಲಕ ಫ್ಲಶಿಂಗ್ ಮೆಡೋಸ್‌ನಲ್ಲಿ ಅವರು ಹ್ಯಾಟ್ರಿಕ್ ಸಾಧನೆ ಮೆರೆದಂತಾಗಿದೆ. ಇನ್ನು, ಜೊಕೊವಿಚ್ ಗೆಲುವಿನೊಂದಿಗೆ ಕಳೆದ ಗ್ರಾಂಡ್‌ಸ್ಲಾಮ್‌ಗಳ ೫೦ ಪಂದ್ಯಗಳಲ್ಲಿ ವಿಶ್ವ ಟೆನಿಸ್‌ನ ‘ಬಿಗ್ ಫೋರ್’ ಎಂದೇ ಕರೆಯಲಾಗುವ ಫೆಡರರ್, ನಡಾಲ್, ಜೊಕೊವಿಚ್ ಮತ್ತು ಆ್ಯಂಡಿ ಮರ್ರೆ ಜಯಿಸಿದಂತಾಗಿದೆ.

ಮಳೆಯ ನಂತರ ಹರ್ಷದ ಹೊನಲು

ಆರ್ಥರ್ ಆಶ್ ಟೆನಿಸ್ ಕ್ರೀಡಾಂಗಣದ ಮೇಲ್ಚಾವಣಿಯು ಬಿರುಮಳೆಯಿಂದಾಗಿ ಸ್ತಬ್ಧವಾಗಿತ್ತು. ಯುಎಸ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ ಮಳೆಯಿಂದಾಗಿ ಮಂದಗತಿ ಮತ್ತು ಒಂದು ವಿಧದ ಜಡತೆಯಿಂದ ಕೂಡಿತ್ತು. ನ್ಯೂಯಾರ್ಕ್‌ನಲ್ಲಿ ಎಂಟನೇ ಫೈನಲ್ ಆಡಿದ ಜೊಕೊವಿಚ್, ಮೊದಲ ಸೆಟ್‌ನ ಆರಂಭದಲ್ಲಿ ತುಸು ಮಂದತಿ ತೋರಿದರೂ, ಪೊಟ್ರೊ ಸರ್ವ್ ಮುರಿಯುವುದರೊಂದಿಗೆ ೫-೩ ಮುನ್ನಡೆ ಪಡೆದರು. ತದನಂತರ ಸೊಗಸಾದ ಸುದೀರ್ಘ ರ್ಯಾಲಿಯಿಂದ ಕೂಡಿದ್ದ ೨೨ ಶಾಟ್‌ಗಳ ಆಟಕ್ಕೆ ೨೯ರ ಹರೆಯದ ಪೊಟ್ರೊ ಫೋರ್‌ ಹ್ಯಾಂಡ್ ಶಾಟ್‌ ನೆಟ್‌ಗೆ ಬಡಿಯುತ್ತಿದ್ದಂತೆ ಜೊಕೊವಿಚ್ ೧-೦ ಮುನ್ನಡೆ ಗಳಿಸಿದರು.

ಎರಡನೇ ಸೆಟ್‌ನಲ್ಲಿಯೂ ಜೊಕೊವಿಚ್ ೩-೧ರೊಂದಿಗೆ ಮುನ್ನಡೆ ಸಾಧಿಸುತ್ತಾ ಸಾಗಿದರು. ಇತ್ತ, ಪೊಟ್ರೊ ಕೂಡಾ ತಿರುಗಿಬಿದ್ದು ಬ್ರೇಕ್ ಪಾಯಿಂಟ್ಸ್ ಪಡೆಯುವುದರೊಂದಿಗೆ ಅಂತರವನ್ನು ೩-೩ಕ್ಕೆ ಸಮಗೊಳಿಸಿದರು. ಎಂಟನೇ ಗೇಮ್‌ನಲ್ಲಿ ಇನ್ನೂ ಮೂರು ಪಾಯಿಂಟ್ಸ್ ಗಳಿಸುವ ಅವಕಾಶವಿತ್ತಾದರೂ, ಜೊಕೊ ಚಾಣಾಕ್ಷ ಆಟ ಅದಕ್ಕೆ ಆಸ್ಪದ ಮಾಡಿಕೊಡಲಿಲ್ಲ. ೨೦ ನಿಮಿಷಗಳ ಈ ಗೇಮ್‌ ಇಬ್ಬರು ಆಟಗಾರರ ಅಮೋಘ ಆಟಕ್ಕೆ ಸಾಕ್ಷಿಯಾಯಿತು. ಅದರೆ, ೯೫ ನಿಮಿಷಗಳ ಈ ರೋಚಕ ಸೆಟ್ ಟೈಬ್ರೇಕರ್‌ನಲ್ಲಿ ಜೊಕೊವಿಚ್ ವಶವಾಯಿತು. ಸ್ಟ್ಯಾಂಡ್‌ನಲ್ಲಿ ಕುಳಿತು ಪಂದ್ಯ ನೋಡುತ್ತಿದ್ದ ಹಾಲಿವುಡ್ ಸೂಪರ್‌ಸ್ಟಾರ್ ಮೆರಿಲ್ ಸ್ಟ್ರೀಪ್ ಚಪ್ಪಾಳೆ ತಟ್ಟಿ ಇಬ್ಬರನ್ನೂ ಅಭಿನಂದಿಸಿದರು.

ಇತ್ತ, ಮೂರನೇ ಸೆಟ್ ಕೂಡ ೩-೧ರಿಂದ ಜೊಕೊಮಯವಾಗಿತ್ತು. ೧೯೪೯ರಲ್ಲಿ ಪ್ಯಾಂಕೊ ಗೊನಾಲೆಸ್ ಮೊದಲ ಎರಡು ಸೆಟ್‌ಗಳ ಹಿನ್ನಡೆ ನಂತರವೂ ಪುಟಿದೆದ್ದು ಗೆಲುವು ಸಾಧಿಸಿದ್ದನ್ನು ಪುನರಾವರ್ತಿಸುವ ಇರಾದೆಯಿಂದಿದ್ದ ಪೊಟ್ರೊ ಯೋಜನೆ ಕೈಗೂಡಲಿಲ್ಲ. ಆದಾಗ್ಯೂ, ಬಡಪೆಟ್ಟಿಗೆ ಸೋಲೊಪ್ಪಿಕೊಳ್ಳದ ಪೊಟ್ರೊ ಮರುಹೋರಾಟ ನಡೆಸಿ ಇನ್ನೆರಡು ಗೇಮ್‌ಗಳನ್ನು ಗೆಲ್ಲುವುದರೊಂದಿಗೆ ಅಂತರವನ್ನು ೩-೩ಕ್ಕೆ ಸಮಗೊಳಿಸಿದರು. ಇತ್ತ, ಜೊಕೊ ಪ್ರತಿಹೋರಾಟ ನಡೆಸಿದ್ದಲ್ಲದೆ, ೨೪ ಶಾಟ್‌ಗಳ ಸುದೀರ್ಘ ರ್ಯಾಲಿಯಲ್ಲಿ ಜೊಕೊವಿಚ್ ಹೋರಾಟವನ್ನು ಹತ್ತಿಕ್ಕಿ ೫-೩ ಮುನ್ನಡೆ ಗಳಿಸಿದರಲ್ಲದೆ, ಅಂತಿಮವಾಗಿ ಸೆಟ್ ಅನ್ನು ವಶಕ್ಕೆ ಪಡೆದು ಸಾಂಪ್ರಾಸ್ ದಾಖಲೆಯನ್ನು ಸರಿಗಟ್ಟಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More