ವಿಶ್ವ ಶೂಟಿಂಗ್: ಹಿರಿಯರ ವಿಭಾಗಕ್ಕೆ ಇನ್ನೊಂದು ಬೆಳ್ಳಿ ತಂದ ಗುರ್‌ಪ್ರೀತ್

ಗುರ್‌ಪ್ರೀತ್ ಸಿಂಗ್ ವಿಶ್ವ ಕಿರಿಯರ ಶೂಟಿಂಗ್‌ನಲ್ಲಿ ಭಾರತದ ಪದಕ ಪಟ್ಟಿಗೆ ಮತ್ತೊಂದು ಬೆಳ್ಳಿ ಪದಕವನ್ನು ಸೇರ್ಪಡೆಗೊಳಿಸಿದರು. ಹಿರಿಯರ ವಿಭಾಗದ ಸ್ಟಾಂಡರ್ಡ್ ಪಿಸ್ತೂಲ್ ಶೂಟಿಂಗ್‌ನಲ್ಲಿ ೨ನೇ ಸ್ಥಾನ ಗಳಿಸಿದ ಗುರ್‌ಪ್ರೀತ್, ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಭಾರತ ೧೧ ಸ್ವರ್ಣ ಸೇರಿ ೨೭ನೇ ಪದಕ ಜಯಿಸಿತು

ಭಾರತದ ಕಿರಿಯ ಶೂಟರ್‌ಗಳು ದಕ್ಷಿಣ ಕೊರಿಯಾದ ಚಾಂಗ್ವನ್‌ನಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ. ಹದಿನಾರರ ಹರೆಯದ ವಿಜಯ್‌ವೀರ್ ಸಿಧು ಮತ್ತು ಉದಯ್‌ವೀರ್ ಸಿಧು ಜೂನಿಯರ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಲ್ಲದೆ, ೨೫ ಮೀಟರ್ ಸ್ಟಾಂಡರ್ಡ್ ಪಿಸ್ತೂಲ್ ಈವೆಂಟ್‌ನಲ್ಲಿಯೂ ರಾಜ್‌ಕನ್ವರ್ ಸಿಂಗ್ ಸಂಧು ಜೊತೆಗೂಡಿ ಚಿನ್ನಕ್ಕೆ ಗುರಿ ಇಟ್ಟರು.

ಈ ಎರಡು ಚಿನ್ನದ ಪದಕಗಳ ಬಳಿಕ ಗುರ್‌ಪ್ರೀತ್ ಸಿಂಗ್ ಬೆಳ್ಳಿ ಪದಕ ಜಯಿಸಿದರು. ಅವರ ಈ ಸಾಧನೆಯೊಂದಿಗೆ ಚಾಂಪಿಯನ್‌ಶಿಪ್‌ನಲ್ಲಿ ಭಾರತ ೧೧ ಸ್ವರ್ಣ, ಒಂಬತ್ತು ಬೆಳ್ಳಿ ಹಾಗೂ ಏಳು ಕಂಚಿನ ಪದಕ ಸೇರಿದ ಒಟ್ಟು ೨೭ ಪದಕು ಗಳಿಸಿದಂತಾಗಿದೆ. ಸ್ಪರ್ಧಾವಳಿಯಲ್ಲಿಯೇ ಭಾರತದ ಶ್ರೇಷ್ಠ ಪ್ರದರ್ಶನ ಇದೆಂಬುದು ಗಮನಾರ್ಹ.

ಅಂದಹಾಗೆ, ವಿಜಯ್‌ವೀರ್ ಸಿಧು ಗುರುವಾರ (ಸೆ.೧೩) ೨೫ ಮೀಟರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ೫೭೨ ಸ್ಕೋರ್‌ನೊಂದಿಗೆ ನಾಲ್ಕನೇ ಸ್ಥಾನ ಗಳಿಸಿದ್ದರು. ಕೊರಿಯಾದ ಲೀ ಗುನ್‌ಹೆಯೊಕ್ (೫೭೦), ಚೀನಾದ ಹಾವೊಜಿ ಝು (೫೬೫) ಅವರಿಗಿಂತ ಸಿಧು ಮುನ್ನಡೆ ಸಾಧಿಸಿದ್ದರು.

ಇದನ್ನೂ ಓದಿ : ವಿಶ್ವ ಶೂಟಿಂಗ್: ಬಂಗಾರದ ಪದಕಕ್ಕೆ ಗುರಿ ಇಟ್ಟ ಅವಳಿ ಸೋದರರು

ಇನ್ನು, ಟೀಂ ಈವೆಂಟ್‌ನಲ್ಲಿ ಸಿಧು, ಸಂಧು (೫೬೪) ಹಾಗೂ ಸಿಂಗ್ (೫೫೯) ಜೋಡಿಯು ೧೬೯೫ ಪಾಯಿಂಟ್ಸ್ ಕಲೆಹಾಕಿತು. ಕೊರಿಯಾ ತಂಡ (೧೬೯೩) ಮತ್ತು ಜೆಕ್ ರಿಪಬ್ಲಿಕ್ ತಂಡ (೧೬೭೪) ಪಾಯಿಂಟ್ಸ್‌ ಕಲೆಹಾಕಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ತೃಪ್ತವಾಯಿತು. ವೈಯಕ್ತಿಕ ವಿಭಾಗದಲ್ಲಿ ಸಿಂಗ್ ನಾಲ್ಕನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು.

ಏತನ್ಮಧ್ಯೆ, ಹಿರಿಯರ ಸ್ಪರ್ಧೆಯಲ್ಲಿ ಗುರ್‌ಪ್ರೀತ್, ಎರಡನೇ ಸ್ಥಾನ ಗಳಿಸುವಲ್ಲಿ ಸಫಲವಾದರು. ಕಾಮನ್ವೆಲ್ತ್ ಕ್ರೀಡಾಕೂಟದ ಸ್ವರ್ಣ ಪದಕ ವಿಜೇತ ಗುರ್‌ಪ್ರೀತ್, ೫೭೯ ಪಾಯಿಂಟ್ಸ್ ಗಳಿಸಿದರು. ಉಕ್ರೇನ್‌ನ ಪಾವ್ಲೊ ಕೊರೊಸ್ಟಿಲೊವ್ (೫೮೧) ಚಿನ್ನದ ಪದಕ ಪಡೆದರೆ, ಸ್ಥಳೀಯ ಶೂಟರ್ ಕಿಮ್ ಜುನ್‌ಹಾಂಗ್ ಕಂಚಿನ ಪದಕಕ್ಕೆ ತೃಪ್ತರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More