ಏಷ್ಯಾ ಕಪ್ ಕ್ರಿಕೆಟ್: ದುಬೈಗೆ ಬಂದಿಳಿದ ಭಾರತ ತಂಡಕ್ಕೆ ಭವ್ಯ ಸ್ವಾಗತ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಶನಿವಾರದಿಂದ (ಸೆ.೧೫) ಆರಂಭವಾಗಲಿರುವ ಪಂದ್ಯಾವಳಿಗಾಗಿ ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಶುಕ್ರವಾರ ದುಬೈಗೆ ಕಾಲಿಟ್ಟಿದ್ದು, ಭವ್ಯ ಸ್ವಾಗತ ಸಿಕ್ಕಿದೆ. ಆರು ಬಾರಿಯ ಚಾಂಪಿಯನ್ ಭಾರತ ಪ್ರಶಸ್ತಿ ಫೇವರಿಟ್‌ಗಳಲ್ಲಿ ಒಂದಾಗಿದೆ

ಏಷ್ಯಾ ಕ್ರಿಕೆಟ್ ಪಂದ್ಯಾವಳಿಯಲ್ಲೇ ಅತ್ಯಂತ ಯಶಸ್ವಿ ತಂಡ ಎನಿಸಿರುವ ಭಾರತ ತಂಡವು ಸದ್ಯ ಏಳನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಗುರುವಾರ (ಸೆ.೧೩) ದುಬೈಗೆ ಪ್ರಯಾಣ ಬೆಳೆಸಿದ ಭಾರತ ತಂಡಕ್ಕೆ ಭವ್ಯ ಸ್ವಾಗತ ಸಿಕ್ಕಿದ್ದು, ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಪ್ರಸ್ತುತ ಟೂರ್ನಿಯಲ್ಲಿಯೂ ಫೇವರಿಟ್‌ ಎನಿಸಿದೆ. ಆದರೆ, ಈ ಬಾರಿ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ತಂಡಗಳು ಭಾರತಕ್ಕೆ ಪ್ರಬಲ ಪೈಪೋಟಿ ಒಡ್ಡುವ ಸಾಧ್ಯತೆಗಳಿವೆ.

ಅಂದಹಾಗೆ, ೧೯೮೪ರಲ್ಲಿ ಶುರುವಾದ ಏಷ್ಯಾ ಕಪ್ ಪಂದ್ಯಾವಳಿಯು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತ ಬರುತ್ತಿದೆ. ಶುರುವಿನಲ್ಲಿ ೫೦ ಓವರ್‌ಗಳ ಪ್ರಕಾರವಾಗಿದ್ದ ಪಂದ್ಯಾವಳಿಯು ೨೦೧೬ರಿಂದ ಟಿ೨೦ ಮಾದರಿಯಲ್ಲೂ ನಡೆಯುತ್ತ ಬರುತ್ತಿದೆ. ಕಳೆದ ಆವೃತ್ತಿಯಲ್ಲಿ ಟಿ೨೦ ಮಾದರಿಯಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ೫೦ ಓವರ್‌ಗಳ ಟೂರ್ನಿಯಾಗಿದ್ದು, ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಏಷ್ಯಾದ ತಂಡಗಳಿಗೆ ಅತಿ ಮಹತ್ವದ್ದೆನಿಸಿದೆ.

ಇದನ್ನೂ ಓದಿ : ಕಡೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ನಿದಾಸ್ ಟ್ರೋಫಿ ತಂದಿತ್ತ ಕಾರ್ತಿಕ್

ಭಾರತ-ಶ್ರೀಲಂಕಾ ಪಾರಮ್ಯ

ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಶ್ರೀಲಂಕಾ ಪ್ರಾಬಲ್ಯ ಸಾಧಿಸಿವೆ. ೧೯೮೪ರ ಚೊಚ್ಚಲ ಆವೃತ್ತಿಯಲ್ಲೇ ಗೆಲುವು ಸಾಧಿಸಿದ ಭಾರತ ತಂಡ, ೧೯೮೮, ೧೯೯೦/೯೧, ೧೯೯೫, ೨೦೧೦, ೨೦೧೬ರಲ್ಲಿ ಚಾಂಪಿಯನ್ ಆಗಿದೆ. ೧೯೯೭, ೨೦೦೪, ೨೦೦೮ರಲ್ಲಿ ರನ್ನರ್‌ಅಪ್ ಆಗಿದೆ. ಇತ್ತ, ೧೯೮೬, ೧೯೯೭, ೨೦೦೪, ೨೦೦೮, ೨೦೧೪ರಲ್ಲಿ ಚಾಂಪಿಯನ್ ಆಗಿರುವ ಶ್ರೀಲಂಕಾ, ೧೯೮೪, ೧೯೮೮, ೧೯೯೦/೯೧, ೧೯೯೫, ೨೦೦೦, ೨೦೧೦ರಲ್ಲಿ ರನ್ನರ್ ಅಪ್ ಆಗಿದೆ.

ಇನ್ನು, ಪಾಕಿಸ್ತಾನ ತಂಡ ೨೦೦೦, ೨೦೧೨ರಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದರೆ, ೧೯೮೬ ಮತ್ತು ೨೦೧೪ರಲ್ಲಿ ಚಾಂಪಿಯನ್ ಆಗಿವೆ. ಇನ್ನುಳಿದಂತೆ ಎರಡು ಬಾರಿ ಫೈನಲ್ ತಲುಪಿರುವ ಬಾಂಗ್ಲಾದೇಶ, ಎರಡರಲ್ಲಿಯೂ ಪ್ರಶಸ್ತಿ ಗೆಲ್ಲಲಾಗದೆ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತವಾಗಿದೆ. ೨೦೧೨, ೨೦೧೬ರಲ್ಲಿ ಬಾಂಗ್ಲಾದೇಶ ಫೈನಲ್ ತಲುಪಿತ್ತು. ೨೦೧೨ರಲ್ಲಿ ಪಾಕಿಸ್ತಾನ ವಿರುದ್ಧ ೨ ರನ್‌ಗಳಿಂದ ಪ್ರಶಸ್ತಿ ವಂಚಿತವಾದ ಬಾಂಗ್ಲಾದೇಶ, ಕಳೆದ ಆವೃತ್ತಿಯಲ್ಲಿ ಭಾರತ ತಂಡದ ವಿರುದ್ಧ ೮ ವಿಕೆಟ್ ಸೋಲನುಭವಿಸಿತ್ತು.

ಬಾಂಗ್ಲಾ-ಶ್ರೀಲಂಕಾ ಸೆಣಸಾಟ

View this post on Instagram

#AsiaCup2018 #AsiaCup #Fixture

A post shared by cricket97 (@cricket97bd) on

ದುಬೈನಲ್ಲಿ ನಡೆಯುತ್ತಿರುವ ಈ ಬಾರಿಯ ಏಷ್ಯಾ ಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೆಣಸುತ್ತಿವೆ. ಫೈನಲ್ ಸೇರಿದಂತೆ ಟೂರ್ನಿಯ ಎಲ್ಲ ಪಂದ್ಯಗಳೂ ಸಂಜೆ ೫.೦೦ ಗಂಟೆಗೆ ನಡೆಯಲಿದ್ದು, ಎ ಗುಂಪಿನಲ್ಲಿ ಭಾರತ, ಹಾಂಕಾಂಗ್, ಪಾಕಿಸ್ತಾನ ತಂಡಗಳಿದ್ದರೆ, ಬಿ ಗುಂಪಿನಲ್ಲಿ ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳಿವೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More