ಏಷ್ಯಾ ಕಪ್: ಐವರು ಗರಿಷ್ಠ ರನ್‌ಧಾರಿಗಳಲ್ಲಿ ಮಿನುಗುವ ಜಯಸೂರ್ಯ

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಇತಿಹಾಸದಲ್ಲಿ ಗರಿಷ್ಠ ರನ್ ಕಲೆಹಾಕಿದ ಐವರು ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲೂ ಶ್ರೀಲಂಕಾ ಪ್ರಭುತ್ವ ಮೆರೆದಿದೆ. ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ

ಸನತ್ ಜಯಸೂರ್ಯ

೧೯೯೦ರಿಂದ ೨೦೦೮ರವರೆಗೆ ಒಟ್ಟು ೨೫ ಪಂದ್ಯಗಳನ್ನಾಡಿದ ಎಡಗೈ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಏಷ್ಯಾ ಕಪ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ಮೊದಲಿಗರು. ೨೪ ಇನ್ನಿಂಗ್ಸ್‌ಗಳಲ್ಲಿ ೫೩ರ ಬ್ಯಾಟಿಂಗ್ ಸರಾಸರಿಯಲ್ಲಿ ಸನತ್ ಗಳಿಸಿರುವುದು ೧,೨೨೦ ರನ್‌ಗಳನ್ನು. ಟೂರ್ನಿಯಲ್ಲಿ ಅವರು ಗಳಿಸಿದ ಗರಿಷ್ಠ ಸ್ಕೋರ್ ೧೩೦. ಇನ್ನು, ಏಷ್ಯಾ ಕಪ್‌ನಲ್ಲಿ ಆರು ಶತಕ ಸಿಡಿಸಿರುವ ಜಯಸೂರ್ಯ, ೩ ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. ೧೩೯ ಬೌಂಡರಿ, ೨೩ ಸಿಕ್ಸರ್ ಸಿಡಿಸಿರುವ ಜಯಸೂರ್ಯ ಬ್ಯಾಟಿಂಗ್ ಸ್ಟ್ರೈಕ್ ರೇಟ್ ೧೦೨.೫.

ಇನ್ನಿಂಗ್ಸ್: ೨೪ | ಗಳಿಸಿದ ರನ್: ೧೨೨೦ | ಆವರೇಜ್: ೫೩ | ಗರಿಷ್ಠ: ೧೩೦ | ಶತಕ: ೬ | ಅರ್ಧಶತಕ: ೩ | ಸ್ಟ್ರೈಕ್ ರೇಟ್: ೧೦೨.೫

ಕುಮಾರ್ ಸಂಗಕ್ಕಾರ

ಶ್ರೀಲಂಕಾದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಕೂಡ ಎಡಗೈ ಆಟಗಾರನೇ. ೨೦೦೪ರಿಂದ ೨೦೧೪ರವರೆಗೆ ಅಂದರೆ, ಒಟ್ಟು ಹತ್ತು ವರ್ಷಗಳ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಗರಿಷ್ಠ ರನ್ ಗಳಿಸಿದ ಎರಡನೇ ಆಟಗಾರನೆನಿಸಿದ್ದಾರೆ. ೨೩ ಇನ್ನಿಂಗ್ಸ್‌ಗಳಲ್ಲಿ ೪೯ರ ಆವರೇಜ್‌ನಲ್ಲಿ ೧,೦೭೫ ರನ್ ಗಳಿಸಿದ್ದಾರೆ. ಗರಿಷ್ಠ ೧೨೧ ರನ್ ಗಳಿಸಿರುವ ಸಂಗಕ್ಕಾರ ಏಷ್ಯಾಕಪ್‌ನಲ್ಲಿ ನಾಲ್ಕು ಶತಕ ಮತ್ತು ಎಂಟು ಅರ್ಧಶತಕ ಗಳಿಸಿದ್ದಾರೆ.

ಇನ್ನಿಂಗ್ಸ್: ೨೪ | ಗಳಿಸಿದ ರನ್: ೧೦೭೫ | ಆವರೇಜ್: ೪೯ | ಗರಿಷ್ಠ: ೧೨೧ | ಶತಕ: ೪ | ಅರ್ಧಶತಕ:

ಇದನ್ನೂ ಓದಿ : ಏಷ್ಯಾ ಕಪ್ ಕ್ರಿಕೆಟ್: ಉದ್ಘಾಟನಾ ಪಂದ್ಯದಲ್ಲಿ ಮಾಲಿಂಗಗೆ ದಾಖಲೆ ಬರೆಯುವ ತುಡಿತ

ಸಚಿನ್ ತೆಂಡೂಲ್ಕರ್

ವಿಶ್ವ ಬ್ಯಾಟಿಂಗ್‌ನ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಏಷ್ಯಾ ಕಪ್‌ನಲ್ಲಿ ಗರಿಷ್ಠ ರನ್ ಗಳಿಸಿದವರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ೨೧ ಏಷ್ಯಾಕಪ್ ಇನ್ನಿಂಗ್ಸ್‌ಗಳಲ್ಲಿ ಸಚಿನ್ ೫೧ರ ಬ್ಯಾಟಿಂಗ್ ಸರಾಸರಿಯಲ್ಲಿ ಗಳಿಸಿರುವುದು ೯೭೧ ರನ್‌ಗಳನ್ನು. ಇನ್ನು, ಏಷ್ಯಾಕಪ್‌ನಲ್ಲಿ ಈ ಮಾಸ್ಟರ್ ಬ್ಲಾಸ್ಟರ್ ಎರಡು ಶತಕ ದಾಖಲಿಸಿದ್ದು, ಏಳು ಅರ್ಧಶತಕ ಗಳಿಸಿದ್ದಾರೆ. ೧೯೯೦-೯೧ ಮತ್ತು ೧೯೯೫ರ ವಿಜೇತ ತಂಡದ ಸದಸ್ಯ ಸಚಿನ್‌, ೨೦೧೦ರ ಆವೃತ್ತಿಯಿಂದ ವಿಶ್ರಾಂತಿ ಪಡೆದಿದ್ದರು.

ಇನ್ನಿಂಗ್ಸ್: ೨೧ | ಗಳಿಸಿದ ರನ್: ೯೭೧ ಆವರೇಜ್: ೫೧ | ಗರಿಷ್ಠ: ೧೧೪ | ಶತಕ: ೨ | ಅರ್ಧಶತಕ:

ವಿರಾಟ್ ಕೊಹ್ಲಿ

ದಿಗ್ಗಜರ ಸಾಲಿನಲ್ಲಿ ದಿಢೀರ್ ಸ್ಥಾನ ಪಡೆದ ಆಟಗಾರ ವಿರಾಟ್ ಕೊಹ್ಲಿ. ೨೦೧೦ರಿಂದ ೨೦೧೬ರವರೆಗೆ ಕೇವಲ ೧೪ ಏಷ್ಯಾಕಪ್ ಇನ್ನಿಂಗ್ಸ್‌ಗಳಲ್ಲಿ ಈ ದೆಹಲಿ ಬ್ಯಾಟ್ಸ್‌ಮನ್ ೭೬೬ ರನ್ ಕಲೆಹಾಕಿದ್ದಾರೆ. ಟೂರ್ನಿಯಲ್ಲಿನ ಕೊಹ್ಲಿಯ ಸರಾಸರಿ ೬೪. ಟಾಪ್ ಫೈವ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿಯ ಸರಾಸರಿ ಗಮನೀಯವಾದುದು. ಇನ್ನು, ೯೯.೬ ಸ್ಟ್ರೈಕ್ ರೇಟ್ ಹೊಂದಿರುವ ಕೊಹ್ಲಿ, ಇದುವರೆಗೆ ೩ ಶತಕ ಮತ್ತು ೨ ಅರ್ಧಶತಕ ದಾಖಲಿಸಿದ್ದಾರೆ. ಪ್ರಸ್ತುತ ಆವೃತ್ತಿಯಿಂದ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ.

ಇನ್ನಿಂಗ್ಸ್: ೧೪ | ಗಳಿಸಿದ ರನ್: ೭೬೬ ಆವರೇಜ್: ೬೪ |ಸ್ಟ್ರೈಕ್ ರೇಟ್: ೯೯.೬ | ಶತಕ: ೩ | ಅರ್ಧಶತಕ:

ಅರ್ಜುನ್ ರಣತುಂಗ

ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅರ್ಜುನ್ ರಣತುಂಗ ಐದನೇ ಸ್ಥಾನ ಪಡೆದಿದ್ದಾರೆ. ೧೯ ಏಷ್ಯಾಕಪ್ ಇನ್ನಿಂಗ್ಸ್‌ಗಳಲ್ಲಿ ರಣತುಂಗ ೭೪೧ ರನ್ ಗಳಿಸಿದ್ದಾರೆ. ಗರಿಷ್ಠ ಅಜೇಯ ೧೩೧ ರನ್ ಮಾಡಿರುವ ರಣತುಂಗ ಬ್ಯಾಟಿಂಗ್ ಸರಾಸರಿ ೫೭. ೧೯೮೬ ಮತ್ತು ೧೯೯೭ರ ಏಷ್ಯಾಕಪ್ ವಿಜೇತ ತಂಡದ ಸದಸ್ಯ ರಣತುಂಗ ಈ ಎರಡೂ ಆವೃತ್ತಿಯ ಫೈನಲ್‌ಗಳಲ್ಲಿ ಅರ್ಧಶತಕ ದಾಖಲಿಸಿದ ಸಾಧಕ. ಇನ್ನು, ಒಂದು ಶತಕ ಮತ್ತು ಆರು ಅರ್ಧಶತಕಗಳನ್ನು ರಣತುಂಗ ಏಷ್ಯಾಕಪ್‌ನಲ್ಲಿ ಸಿಡಿಸಿದ್ದಾರೆ.

ಇನ್ನಿಂಗ್ಸ್: ೧೯ | ಗಳಿಸಿದ ರನ್: ೭೪೧ ಆವರೇಜ್: ೫೭ | ಗರಿಷ್ಠ: ೧೩೧* | ಶತಕ: ೧ | ಅರ್ಧಶತಕ:

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More