ಏಷ್ಯಾಕಪ್ ವಿಡಿಯೋ | ೧೬೨ ರನ್‌ಗಳಿಗೆ ಪಾಕ್ ಇನ್ನಿಂಗ್ಸ್‌ಗೆ ಇತಿಶ್ರೀ ಹಾಡಿದ ಭಾರತದ ಬೌಲರ್‌ಗಳು

ತೀವ್ರ ಕುತೂಹಲ ಕೆರಳಿಸಿರುವ ಭಾರತ ಮತ್ತು ಪಾಕಿಸ್ತಾನ ನಡುವಣದ ಏಷ್ಯಾಕಪ್ ಪಂದ್ಯಾವಳಿಯ ಮೊದಲ ಇನ್ನಿಂಗ್ಸ್‌ಗೆ ತೆರೆಬಿದ್ದಿದೆ. ಭಾರತದ ಬೌಲರ್‌ಗಳ ಸಂಘಟಿತ ದಾಳಿಗೆ ತರಗೆಲೆಯಾದ ಪಾಕಿಸ್ತಾನ ೧೬೨ ರನ್‌ಗಳಿಗೆ ಆಲೌಟ್ ಆಗಿದ್ದು, ಪಂದ್ಯಕ್ಕೆ ತಿರುವು ನೀಡಿದ ಕೆಲವು ವಿಡಿಯೋ ಚಿತ್ರಣಗಳಿವು

ಅಮೋಘ ಬೌಲಿಂಗ್ ಪ್ರದರ್ಶಿಸಿದ ಭಾರತದ ಬೌಲರ್‌ಗಳು ಪಾಕಿಸ್ತಾನವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಮೊದಲ ೧೦ ಓವರ್‌ಗಳಲ್ಲಿ ಕೇವಲ ೨ ವಿಕೆಟ್‌ಗೆ ೨೫ ರನ್ ಗಳಿಸಿದ ಪಾಕಿಸ್ತಾನ ಆನಂತರ ಶೊಯೆಬ್ ಮಲಿಕ್ (೪೩) ಮತ್ತು ಬಾಬರ್ ಆಜಮ್ (೪೭) ಅವರಿಂದ ಕೊಂಚ ಚೇತರಿಕೆ ಕಂಡರೂ, ನಿರ್ಣಾಯಕ ಘಟ್ಟದಲ್ಲಿ ಕೇದಾರ್ ಜಾಧವ್ (೨೩ಕ್ಕೆ ೩) ನಡೆಸಿದ ಸ್ಪಿನ್ ಜಾದೂವಿನಲ್ಲಿ ಪಾಕ್ ಇನ್ನಿಂಗ್ಸ್ ಇನ್ನಷ್ಟು ತಳ ಕಚ್ಚಿತು.

ಬುಧವಾರ (ಸೆ ೧೯) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯ ಐದನೇ ಪಂದ್ಯದಲ್ಲಿ ಮೊದಲ ಐದು ಓವರ್‌ಗಳಲ್ಲೇ ಆರಂಭಿಕರಾದ ಇಮಾಮ್ ಉಲ್ ಹಕ್ (೨) ಮತ್ತು ಫಕಾರ್ ಜಮಾನ್ (೦) ವಿಕೆಟ್ ಎಗರಿಸಿ ಪಾಕ್ ಪತನಕ್ಕೆ ಮುನ್ನುಡಿ ಬರೆದ ಭುವನೇಶ್ವರ್ ಕುಮಾರ್ (೧೫ಕ್ಕೆ ೩) ಕೂಡ ಭಾರತದ ಕೈ ಮೇಲಾಗುವಂತೆ ಮಾಡಿದರು. ಜಸ್ಪ್ರೀತ್ ಬುಮ್ರಾ (೨೩ಕ್ಕೆ ೨), ಕುಲದೀಪ್ ಯಾದವ್ (೩೭ಕ್ಕೆ ೧) ಅದ್ವಿತೀಯ ಪ್ರದರ್ಶನ ನೀಡಿದರು.

ಬ್ಯಾಟಿಂಗ್‌ಗಿಂತಲೂ ಬೌಲಿಂಗ್‌ನಲ್ಲೇ ಅತ್ಯಂತ ಬಲಶಾಲಿ ಎಂದು ಈ ಹಿಂದಿನ ಹಲವಾರು ಪಂದ್ಯಗಳಲ್ಲಿ ನಿರೂಪಿಸಿರುವ ಪಾಕಿಸ್ತಾನ ಬೌಲಿಂಗ್‌ಗೆ ಭಾರತದ ಬೌಲರ್‌ಗಳು ಅಕ್ಷರಶಃ ಅಗ್ನಿಪರೀಕ್ಷೆ ತಂದೊಡ್ಡಿದ್ದು, ಇಂಡೋ-ಪಾಕ್ ಕ್ರಿಕೆಟ್ ಪಂದ್ಯದ ಮೊದಲ ವಿಶೇಷವೆನಿಸಿಕೊಂಡಿತು. 43.1 ಓವರ್‌ಗಳಿಗೇ ಇನ್ನಿಂಗ್ಸ್ ಮುಗಿಸಿದ ಪಾಕ್, ಪಂದ್ಯದಲ್ಲಿ ಪುಟಿದೇಳಲು ಪವಾಡವನ್ನೇ ಸೃಷ್ಟಿಸುವ ವಾತಾವರಣವನ್ನು ಭಾರತ ಸೃಷ್ಟಿಸಿತು.

ಇದನ್ನೂ ಓದಿ : ಇಂಡೋ-ಪಾಕ್ ಕ್ರಿಕೆಟ್ ಕಾದಾಟದ ರೋಚಕ ಕ್ಷಣಗಳ ಐತಿಹಾಸಿಕ ಹಿನ್ನೋಟ 

ಭುವನೇಶ್ವರ್ ಕುಮಾರ್ ಮಾರಕ ಸ್ಪೆಲ್

ನಿರ್ಣಾಯಕ ಘಟ್ಟದಲ್ಲಿ ಪಂದ್ಯಕ್ಕೆ ತಿರುವು ನೀಡಿದ ಕೇದಾರ್ ಜಾಧವ್

ಗಾಯಗೊಂಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ

ಪಂದ್ಯಕ್ಕೂ ಮುನ್ನ ಮೊಳಗಿದ ರಾಷ್ಟ್ರಗೀತೆ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More