ವಿಶ್ವ ಜೂನಿಯರ್ ಕುಸ್ತಿಯಲ್ಲಿ ಎರಡು ಪದಕ ಗೆದ್ದು ದಾಖಲೆ ಬರೆದ ಸಾಜನ್ ಭನ್ವಾಲ್

ಸ್ಲೊವೇಕಿಯಾದ ಟ್ರಾನ್ವಾದಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಸಾಜನ್ ಭನ್ವಾಲ್ ಹೊಸ ದಾಖಲೆ ಬರೆದರು. ಪುರುಷರ ೭೭ ಕೆಜಿ ಗ್ರೀಕೊ ರೋಮನ್ ವಿಭಾಗದಲ್ಲಿ ಸಾಜನ್ ಒಂದರ ಹಿಂದೊಂದರಂತೆ ಎರಡು ಪದಕ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿದರು

ಕುಸ್ತಿ ಕ್ರೀಡೆಯಲ್ಲಿ ಭಾರತ ಮತ್ತೊಮ್ಮೆ ಪಾರಮ್ಯ ಮೆರೆದಿದೆ. ಸೋನಿಪತ್‌ ಸಮೀಪದ ಹಳ್ಳಿಯೊಂದರಿಂದ ಬಂದ ಜಗಜಟ್ಟಿ ಸಾಜನ್ ಭನ್ವಾಲ್, ೨೦ರ ಹರೆಯದ ಸಾಜನ್, ೭೭ ಕೆಜಿ ವಿಭಾಗದ ಫೈನಲ್‌ನಲ್ಲಿ ರಷ್ಯಾದ ಇಸ್ಲಾಮ್ ಒಪಿಯೆವ್ ವಿರುದ್ಧ ೦-೮ ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತರಾದರು. ಈ ಪದಕದೊಂದಿಗೆ ಸಾಜನ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಪದಕ ಸಾಧನೆ ಮಾಡಿದರು.

ರಷ್ಯಾ ಕುಸ್ತಿಪಟು ಇಸ್ಲಾಮ್ ವಿರುದ್ಧದ ಹಣಾಹಣಿಯಲ್ಲಿ ಕುಸ್ತಿ ಮಟ್ಟುಗಳ ತಾಂತ್ರಿಕತೆಯಲ್ಲಿ ಸಾಜನ್ ಸಪ್ಪೆ ಎನಿಸಿದರು. ಮೊದಲ ಸುತ್ತಿನ ೯೦ ಸೆಕೆಂಡುಗಳ ಸ್ಪರ್ಧೆಯಲ್ಲಿ ಸಾಜನ್ ಅವರನ್ನು ಅನಾಮತ್ತು ಕೆಳಕ್ಕೆ ಕೆಡವಿದ ಇಸ್ಲಾಮ್, ತಾಂತ್ರಿಕ ಮಟ್ಟಿನಲ್ಲಿಯೂ ಮೇಲುಗೈ ಮೆರೆದರೆಂದು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್‌ನ ಅಧಿಕೃತ ವೆಬ್‌ ತಾಣ ವರದಿ ಮಾಡಿದೆ.

ಸಾಜನ್ ವಿರುದ್ಧ ಆಕರ್ಷಕ ಪ್ರದರ್ಶನ ನೀಡಿದ ಇಸ್ಲಾಮ್, ಹೆಚ್ಚುವರಿ ೬ ಪಾಯಿಂಟ್ಸ್‌ಗಳನ್ನು ಗಳಿಸಿದರು.. ನಿಂತ ಭಂಗಿಯಲ್ಲಿನ ಕಾದಾಟದಲ್ಲಿ ಒಂದು ಹಂತದಲ್ಲಿ ಸಮಬಲ ಪೈಪೋಟಿ ವ್ಯಕ್ತವಾದರೂ, ಸಾಜನ್ ಅವರನ್ನು ಈ ಬಾರಿಯೂ ನೆಲಕ್ಕೆ ಕೆಡವಿದ ಓಪಿಯೆವ್ ೮ನೇ ಅಂಕ ಗಳಿಸಿ ಚಿನ್ನದ ಪದಕ ಪಡೆದರು.

ಇದನ್ನೂ ಓದಿ : ಕುಸ್ತಿಯಲ್ಲಿ ಭಾರತದ ಹ್ಯಾಟ್ರಿಕ್‌ ಸ್ವರ್ಣಕ್ಕೆ ನೆರವಾದ ಬಜರಂಗ್ ಪುನಿಯಾ
View this post on Instagram

#новостиборьбы Ислам Опиев (77кг) - победитель Первенства Мира-2018 по греко-римской борьбе среди юниоров! 🔸Итоги финальных схваток в в/к до 55, 63, 77, 87, 130кг (18 сентября, Трнава, Словакия) 🔹До 55кг: 1.Поуя Мохаммад Насерпоур (Иран) 2.Тигран Минасян (Армения) 3.Виджай Виджай (Индия) 3.Эмин Сефершаев (Россия) 🔹До 63кг: 1.Эрбол Бакиров (Кыргызстан) 2.Хассан Ахмед Мохамед (Египет) 3.Азамат Каиров (Россия) 3.Криштиан Истван Ванща (Венгрия) 🔹До 77кг: 1.Ислам Опиев (Россия) 2.Саджан Саджан (Индия) 3.Акжол Махмудов (Кыргызстан) 3.Пер Андерс Куре (Норвегия) 🔹До 87кг: 1.Мохаммадхади Абдолла Сарави (Иран) 2.Рамон Райнер Бецчарт (Швейцария) 3.Назаршах Фатуллаев (Азербайджан) 3.Илья Ермоленко (Россия) 🔹До 130кг: 1.Амин Мохаммадзаман Мирзазаде (Иран) 2.Давид Овасапян (Армения) 3.Кохитон Майкл Шультс (США) 3.Франц Ричтер (Германия) ♦️Финальные схватки в в/к до 60, 67, 72, 82, 97 кг состоятся завтра в 19:00 Ссылка на трансляцию в описании профиля⬆️ 🤼‍♂️ #wrestlingnews The results of the final matches of the Junior GR World Championship (in 55, 63, 77, 87, 130 kg) (September 18, Trnava, Slovakia) 🔹U55 kg: 1.Pouya Mohammad NASERPOUR (IRI) 2.Tigran MINASYAN (ARM) 3.Vijay VIJAY (IND) 3.Emin SEFERSHAEV (RUS) 🔹U63 kg: 1.Erbol BAKIROV (KGZ) 2.Hassan Hassan Ahmed MOHAMED (EGY) 3.Azamat KAIROV (RUS) 3.Krisztian Istvan VANCZA (HUN) 🔹U77 kg: 1.Islam OPIEV (RUS) 2.Sajan SAJAN (IND) 3.Akzhol MAKHMUDOV (KGZ) 3.Per Anders KURE (NOR) 🔹U87 kg: 1.Mohammadhadi Abdollah SARAVI (IRI) 2.Ramon Rainer BETSCHART (SUI) 3.Nazarshah FATULLAYEV (AZE) 3.Ilia ERMOLENKO (RUS) 🔹U130 kg: 1.Amin Mohammadzaman MIRZAZADEH (IRI) 2.David OVASAPYAN (ARM) 3.Cohlton Michael SCHULTZ (USA) 3.Franz RICHTER (GER) ♦️The final matches U60, 67, 72, 82, 97kg will held tomorrow at 19:00 Link in bio⬆️ #wrestgram ⚫ ⚫ ⚫ #wrestling #unitedworldwrestling #вольнаяборьба #грекоримскаяборьба #борцы #grecoromanwrestling #freestylewrestling #womenswrestling #женскаяборьба #прогиб #suplex #борьба #uww #фсбр #takedown #beachwrestling #пляжнаяборьба #бросок #броски #trnava2018 #slovakia #junuors #трнава2018 #словакия #worldchampionship #первенствомира

A post shared by wrest.gram (@wrest.gram) on

ಹರ್ಯಾಣ ಮೂಲದ ಸಾಜನ್, ಇದೇ ಜುಲೈ ತಿಂಗಳಿನಲ್ಲಿ ನಡೆದ ಜೂನಿಯರ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಉಕ್ರೇನ್‌ನ ಡಿಮಿಟ್ರೊ ಗಾರ್ಡುಬೆಯಿ ವಿರುದದ್ಧ ಸಾಜನ್ ಜಯಭೇರಿ ಬಾರಿಸಿದ್ದರು. ಫಿನ್ಲ್ಯಾಂಡ್‌ನಲ್ಲಿ ನಡೆದ ೨೦೧೭ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿಯೂ ಸಾಜನ್ ಕಂಚು ಪದಕ ಗೆದ್ದ ಸಾಧನೆ ಮಾಡಿದ್ದರು.

ಇನ್ನು, ಪುರುಷರ ೫೫ ಕೆಜಿ ವಿಭಾಗದ ಗ್ರೀಕೊ ರೋಮನ್ ವಿಭಾಗದ ಮತ್ತೊಂದು ಕುಸ್ತಿ ಸ್ಪರ್ಧೆಯಲ್ಲಿ ಟರ್ಕಿ ಕುಸ್ತಿಪಟು ಚಿಯಾಟ್ ಅಹ್ಮೆಟ್ ವಿರುದ್ಧ ೧೬-೮ರಿಂದ ಗೆಲುವು ಸಾಧಿಸಿದ ಭಾರತದ ಮತ್ತೋರ್ವ ಕುಸ್ತಿಮಲ್ಲ ವಿಜಯ್ ಕಂಚಿನ ಪದಕಕ್ಕೆ ತೃಪ್ತರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More