ಚೀನಾ ಓಪನ್ ಬ್ಯಾಡ್ಮಿಂಟನ್‌ನಲ್ಲೂ ಮೊಮೊಟಾಗೆ ಮಣಿದ ಕಿಡಾಂಬಿ ಶ್ರೀಕಾಂತ್

ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಿಡಾಂಬಿ ಶ್ರೀಕಾಂತ್ ಸವಾಲಿಗೆ ತೆರೆಬಿದ್ದಿದೆ. ಶುಕ್ರವಾರ (ಸೆ.೨೧) ನಡೆದ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ವಿಭಾಗದಲ್ಲಿ ಶ್ರೀಕಾಂತ್, ಜಪಾನ್ ಆಟಗಾರ ಕೆಂಟೊ ಮೊಮೊಟಾ ವಿರುದ್ಧ ೯-೨೧, ೧೧-೨೧ರಿಂದ ಸೋಲನುಭವಿಸಿದರು

ಒಂದು ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಆಟಗಾರರಾದ ಕಿಡಾಂಬಿ ಶ್ರೀಕಾಂತ್ ಮತ್ತು ಪಿ ವಿ ಸಿಂಧು ಸವಾಲು ಅಂತ್ಯ ಕಂಡಿದೆ. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಪ್ರಯಾಸದ ಗೆಲುವು ಕಂಡಿದ್ದ ಕಿಡಾಂಬಿ ಮತ್ತು ಸಿಂಧು ಪೈಕಿ ಎಂಟರ ಘಟ್ಟದ ಪಂದ್ಯದಲ್ಲಿ ಶ್ರೀಕಾಂತ್ ನೇರ ಗೇಮ್‌ಗಳಲ್ಲಿ ಸೋಲನುಭವಿಸಿದರು.

ಮೊದಲು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಜಪಾನ್ ಆಟಗಾರ ಶ್ರೀಕಾಂತ್ ಎದುರು ಶ್ರೀಕಾಂತ್ ಮತ್ತೊಮ್ಮೆ ಹಿನ್ನಡೆ ಅನುಭವಿಸಿದರು. ಎಂಟನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್, ಹಾಲಿ ವಿಶ್ವ ಚಾಂಪಿಯನ್ ಮೊಮೊಟಾ ವಿರುದ್ಧ ನೀರಸ ಆಟವಾಡಿ, ೯-೨೧, ೧೧-೨೧ರ ಎರಡು ನೇರ ಗೇಮ್‌ಗಳಲ್ಲಿ ಸೋಲನುಭವಿಸಿದರು.

ಎಡಗೈ ಆಟಗಾರನ ಆಕ್ರಮಣಕಾರಿ ಆಟ ಹೇಗಿತ್ತೆಂದರೆ, ಕೇವಲ ೨೮ ನಿಮಿಷಗಳಲ್ಲೇ ಪಂದ್ಯ ಪರ್ಯವಸಾನ ಕಂಡಿತು. ವಾಸ್ತವವಾಗಿ, ದಿನದ ಹಿಂದಷ್ಟೇ ನಡೆದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಥಾಯ್ಲೆಂಡ್ ಆಟಗಾರ ಸುಪ್ಪನ್ಯು ಎದುರು ೨೧-೧೨, ೧೫-೨೧, ೨೪-೨೨ರ ಮೂರು ಗೇಮ್‌ಗಳ ಕಠಿಣ ಆಟದಲ್ಲಿ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ ತಲುಪಿದ್ದರು. ಆದರೆ, ಜಪಾನ್ ಆಟಗಾರನ ಅದ್ವಿತೀಯ ಆಟದೆದುರು ಶ್ರೀಕಾಂತ್ ಮತ್ತೊಮ್ಮೆ ಮಂಕಾದರು.

ಇದನ್ನೂ ಓದಿ : ಚೀನಾ ಓಪನ್‌ ಬ್ಯಾಡ್ಮಿಂಟನ್: ಚಿಂತೆ ಹೆಚ್ಚಿಸಿದ ಕಿಡಾಂಬಿ ಶ್ರೀಕಾಂತ್ ಅಸ್ಥಿರ ಆಟ

ಮೊದಲ ಗೇಮ್‌ನಲ್ಲಿ ೪-೫ರಿಂದ ಕೇವಲ ಒಂದು ಪಾಯಿಂಟ್ಸ್ ಅಂತರದಿಂದ ಮಾತ್ರ ಹಿನ್ನಡೆಯಲ್ಲಿದ್ದ ಶ್ರೀಕಾಂತ್, ಆನಂತರದಲ್ಲಿ ಮೊಮೊಟಾ ಎದುರು ಕಳಾಹೀನ ಪ್ರದರ್ಶನ ನೀಡಿದರು. ಸತತ ಒಂದರ ಹಿಂದೊಂದರಂತೆ ಐದು ಪಾಯಿಂಟ್ಸ್ ಕಲೆಹಾಕಿದ ಮೊಮೊಟಾ, ವಿರಾಮದ ಹೊತ್ತಿಗೆ ೧೧-೬ ಮೇಲುಗೈ ಸಾಧಿಸಿದರು. ಆನಂತರದಲ್ಲಿ ಶ್ರೀಕಾಂತ್ ಗಳಿಸಿದ್ದು ಕೇವಲ ೪ ಪಾಯಿಂಟ್ಸ್‌ಗಳಷ್ಟೆ.

ಇತ್ತ, ಎರಡನೇ ಗೇಮ್‌ನಲ್ಲಂತೂ ಮೊಮೊಟಾ ಇದೇ ಆರ್ಭಟದಲ್ಲಿ ಶ್ರೀಕಾಂತ್ ಆಟದಲ್ಲಿ ಅಸ್ಥಿರತೆ ಮೂಡಿಸಿದರು. ತೀವ್ರ ಒತ್ತಡಕ್ಕೆ ಸಿಲುಕಿದ ಶ್ರೀಕಾಂತ್ ಆಟದಲ್ಲಿ ಚಾಣಾಕ್ಷತೆ ಏನೂ ಇರಲಿಲ್ಲ. ವಿಶ್ವ ಚಾಂಪಿಯನ್‌ಗೆ ತಕ್ಕಂತೆ ಆಡಿದ ಮೊಮೊಟ, ಅರ್ಧ ತಾಸಿನ ಅಂತರದಲ್ಲೇ ಪಂದ್ಯವನ್ನು ಕೈವಶ ಮಾಡಿಕೊಂಡು ಮುನ್ನಡೆ ಗಳಿಸಿದರು. ಮೊಮೊಟಾ ವಿರುದ್ಧದ ಈ ಸೋಲಿನೊಂದಿಗೆ ಶ್ರೀಕಾಂತ್ ಒಟ್ಟಾರೆ ಮುಖಾಮುಖಿಯಲ್ಲಿ ೪-೫ ಅಂತರ ಕಾಯ್ದುಕೊಂಡಂತಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More