ಲೇವರ್ ಕಪ್ | ಫೆಡರರ್-ಜೊಕೊ ಸೋಲಿನ ಮಧ್ಯೆಯೂ ಯೂರೋಪ್ ತಂಡಕ್ಕೆ ಮುನ್ನಡೆ

ಟೆನಿಸ್ ಲೋಕದ ದಿಗ್ಗಜ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಚ್ ಜೋಡಿ ಅನುಭವಿಸಿದ ಆಘಾತಕಾರಿ ಸೋಲಿನ ಮಧ್ಯೆಯೂ, ಯೂರೋಪ್ ತಂಡ ಲೇವರ್ ಕಪ್ ಪಂದ್ಯಾವಳಿಯಲ್ಲಿ ವಿಶ್ವ ತಂಡದ ವಿರುದ್ಧ ೩-೧ ಮುನ್ನಡೆ ಗಳಿಸಿತು. ಜೊಕೊ-ಫೆಡರರ್ ಸೋಲು ಪ್ರೇಕ್ಷಕರನ್ನು ಚಕಿತಗೊಳಿಸಿತು

ಶುಕ್ರವಾರ (ಸೆ.೨೧) ಶುರುವಾದ ಲೇವರ್ ಕಪ್ ಪಂದ್ಯಾವಳಿಯ ಕೇಂದ್ರಬಿಂದುವಾಗಿದ್ದ ನೊವಾಕ್ ಜೊಕೊವಿಚ್ ಮತ್ತು ರೋಜರ್ ಫೆಡರರ್ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. ಜಾಕ್ ಸಾಕ್ ಮತ್ತು ಕೆವಿನ್ ಆ್ಯಂಡರ್ಸನ್ ಜೋಡಿಯ ಎದುರು ನಡೆದ ಪಂದ್ಯದಲ್ಲಿ ವಿಶ್ವದ ಎರಡನೇ ಮತ್ತು ಮೂರನೇ ಶ್ರೇಯಾಂಕಿತ ಆಟಗಾರರಾದ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಚ್ ವಿರುದ್ಧ ೬-೭ (೫), ೬-೩ (೧೦/೬) ಅಂತರದಿಂದ ಜಾಕ್ ಜೋಡಿ ಜಯ ಸಾಧಿಸಿತು.

ಮೊದಲ ಮೂರು ಸಿಂಗಲ್ಸ್ ಪಂದ್ಯಗಳಲ್ಲಿ ಯೂರೋಪ್ ತಂಡ ಮುನ್ನಡೆ ಸಾಧಿಸಿ ಪ್ರಭುತ್ವ ಸಾಧಿಸಿತ್ತು. ಹೀಗಾಗಿ, ವಿಶ್ವ ದಿಗ್ಗಜರ ಆಟಕ್ಕಾಗಿ ಪ್ರತಿಯೊಬ್ಬರೂ ಎದುರು ನೋಡುವಂತಾಯಿತು. ಅದೂ ಅಲ್ಲದೆ, ಮೊದಲ ಬಾರಿಗೆ ಫೆಡರರ್ ಮತ್ತು ಜೊಕೊವಿಚ್ ಜತೆಗೂಡಿ ಆಡುತ್ತಿದ್ದುದು ಕೂಡ ಅಭಿಮಾನಿಗಳಲ್ಲಿ ಪುಳಕ ಉಂಟುಮಾಡಿತ್ತು.

ಅದಕ್ಕೆ ತಕ್ಕಂತೆ ಮೊದಲ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ವಶಕ್ಕೆ ಪಡೆದ ಫೆಡರರ್ ಮತ್ತು ಜೊಕೊ ಜೋಡಿ ಶುಭಾರಂಭದ ಸೂಚನೆ ನೀಡಿತು. ಆದರೆ, ಎರಡನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ನೀಡಿದ ಜಾಕ್ ಮತ್ತು ಕೆವಿನ್ ಜೋಡಿ ಅಮೋಘ ಆಟವಾಡಿತು. ಐದು ಭರ್ಜರಿ ಏಸ್‌ಗಳನ್ನು ಸಿಡಿಸಿದ ಕೆವಿನ್ ಜೋಡಿ, ೪-೪ರಿಂದ ಸಮಬಲ ಸಾಧಿಸಿತು. ಇದೇ ವೇಳೆ ಫೆಡರರ್ ಎಸಗಿದ ಡಬಲ್ ಫಾಲ್ಟ್‌ ೧೦ ಪಾಯಿಂಟ್ಸ್‌ಗಳ ಟೈಬ್ರೇಕರ್‌ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಇದನ್ನೂ ಓದಿ : ವಿಮಾನ ನಿಲ್ದಾಣದ ರನ್‌ ವೇನಲ್ಲಿ ಕುಣಿದು ಕುಪ್ಪಳಿಸಿದ ಕೃಷ್ಣಸುಂದರಿ ಸೆರೆನಾ! 

ಇದಕ್ಕೂ ಮುನ್ನ ಮೂರು ಪ್ರತ್ಯೇಕ ಸಿಂಗಲ್ಸ್ ಪಂದ್ಯಗಳಲ್ಲಿ ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೊವ್, ಬ್ರಿಟನ್‌ನ ಕೈಲ್ ಎಡ್ಮುಂಡ್ ಮತ್ತು ಬೆಲ್ಜಿಯಂನ ಡೇವಿಡ್ ಗಫಿನ್ ಗೆಲುವು ಸಾಧಿಸಿ ಟೀಂ ಯೂರೋಪ್‌ಗೆ ಮುನ್ನಡೆ ತಂದಿತ್ತಿದ್ದರು. ಅಮೆರಿಕದ ಫ್ರಾನ್ಸೆಸ್ ಟಿಯಾಫೊ ವಿರುದ್ಧ ಡಿಮಿಟ್ರೊವ್ ೬-೧. ೬-೪ ಸೆಟ್‌ಗಳಲ್ಲಿ ಗೆದ್ದರೆ, ಎಡ್ಮುಂಡ್ ೬-೪, ೫-೭ (೧೦/೬)ರಿಂದ ಜಯಿಸಿದರು.ಇನ್ನು, ಮೂರನೇ ಸಿಂಗಲ್ಸ್‌ನಲ್ಲಿ ಅರ್ಜೆಂಟೀನಾ ಆಟಗಾರ ಡೀಗೊ ಶ್ವಾರ್ಟ್ಜ್‌ಮನ್ ವಿರುದ್ಧ ೬-೪, ೪-೬ (೧೧/೯)ರಿಂದ ಜಯಿಸಿದರು.

ಅಂದಹಾಗೆ, ಭಾನುವಾರ ನಡೆಯಲಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಾಯಿಂಟ್ಸ್ ಗಳಿಸುವ ತಂಡವು ಚಾಂಪಿಯನ್ ಆಗಲು ಬೇಕಾದ ೧೩ ಪಾಯಿಂಟ್ಸ್‌ಗಳನ್ನು ಕಲೆಹಾಕಿದಂತಾಗುತ್ತದೆ. ಕಳೆದ ವರ್ಷ ಪರಾಗ್ವೆಯಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲಿ ಟೀಂ ಯೂರೋಪ್ ೧೫-೯ರಿಂದ ವಿಶ್ವ ತಂಡವನ್ನು ಹಣಿದು ಚಾಂಪಿಯನ್ ಆಗಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More