ಏಷ್ಯಾ ಕಪ್ | ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಪರೀಕ್ಷೆ

ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್‌ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಭಾರತ ತಂಡಕ್ಕೀಗ ಆಫ್ಘಾನಿಸ್ತಾನ ಸವಾಲು ಎದುರಾಗಿದೆ. ಆಫ್ಘನ್ ಪಂದ್ಯವನ್ನು ಮಧ್ಯಮ ಕ್ರಮಾಂಕದ ಪರೀಕ್ಷೆಯನ್ನಾಗಿ ಭಾರತ ತೆಗೆದುಕೊಂಡಿದೆ. ಜೊತೆಗೆ ಅಪಾಯಕಾರಿಗಳಾದ ಆಫ್ಘನ್ನರನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ

ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯ ಇದುವರೆಗಿನ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕ ಇನ್ನೂ ನೈಜ ಪರೀಕ್ಷೆಗೆ ಗುರಿಯಾಗಿಲ್ಲ. ಕಳೆದ ನಾಲ್ಕೂ ಪಂದ್ಯಗಳಲ್ಲಿ ಭಾರತ ತಂಡ ಬೌಲರ್‌ಗಳ ಹಾಗೂ ಆರಂಭಿಕರ ಪ್ರಚಂಡ ಪ್ರದರ್ಶನದೊಂದಿಗೆ ಜಯಭೇರಿ ಬಾರಿಸಿದೆ. ಗುಂಪು ಹಂತದಲ್ಲಿ ಅಜೇಯವಾದ ಭಾರತ ತಂಡ, ಸೂಪರ್ ಫೋರ್ ಹಂತದ ಎರಡೂ ಪಂದ್ಯಗಳನ್ನು ಗೆದ್ದಿದ್ದು, ಮೂರನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ.

ಮಂಗಳವಾರ (ಸೆ.೨೫) ನಡೆಯಲಿರುವ ಸೂಪರ್ ಫೋರ್ ಹಂತದ ಕಡೇ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು ಎದುರುಗೊಳ್ಳುತ್ತಿರುವ ಭಾರತ ತಂಡ, ಮಧ್ಯಮ ಕ್ರಮಾಂಕವನ್ನು ಕಣಕ್ಕಿಳಿಸಲು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ತುಸು ಪ್ರಯಾಸದಿಂದ ಗೆಲುವು ಸಾಧಿಸಿದ ಬಳಿಕ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಏಕಪಕ್ಷೀಯ ಪ್ರದರ್ಶನದೊಂದಿಗೆ ಜಯಭೇರಿ ಬಾರಿಸಿದೆ.

ಶುಕ್ರವಾರ (ಸೆ.೨೮) ನಡೆಯಲಿರುವ ಫೈನಲ್‌ಗೂ ಮುನ್ನ ನಡೆಯುತ್ತಿರುವ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಪರೀಕ್ಷೆಗೆ ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಶಿಖರ್ ಧವನ್ (೩೨೭), ನಾಯಕ ರೋಹಿತ್ ಶರ್ಮಾ (೨೬೯) ಪ್ರಚಂಡ ಬ್ಯಾಟಿಂಗ್ ನಡೆಸಿದ್ದರೆ, ಭಾರತದ ಪರ ಗರಿಷ್ಠ ಮೊತ್ತ ಕಲೆಹಾಕಿದ ಮೂರನೇ ಬ್ಯಾಟ್ಸ್‌ಮನ್ ಅಂಬಟಿ ರಾಯುಡು (೧೧೬). ರಾಯುಡು ಮೂರಂಕಿ ದಾಟಲು ಪ್ರಮುಖ ಕಾರಣ ಅವರು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವುದೇ ಆಗಿದೆ.

ಮನೀಶ್ ಪಾಂಡೆಗೆ ಸ್ಥಾನ?

ಇಡೀ ಟೂರ್ನಿಯಲ್ಲಿ ಭಾರತದ ಮಧ್ಯಮ ಕ್ರಮಾಂಕದ ಸಾಮರ್ಥ್ಯ ನಿರೂಪಿಸಲು ಅವಕಾಶವೇ ಸಿಕ್ಕಿಲ್ಲ. ಮುಖ್ಯವಾಗಿ, ಮಾಜಿ ನಾಯಕ ಎಂ ಎಸ್ ಧೋನಿ, ಕೇದಾರ್ ಜಾಧವ್ ಮತ್ತು ಕನ್ನಡಿಗ ಮನೀಶ್ ಪಾಂಡೆಯಂಥವರು ಅವಕಾಶಕ್ಕಾಗಿ ಕಾದಿದ್ದಾರೆ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಕ್ರಮವಾಗಿ ೨೮೪ ಮತ್ತು ೩೨೧ ಎಸೆತಗಳನ್ನು ಎದುರಿಸಿದ್ದರೆ, ದಿನೇಶ್ ಕಾರ್ತಿಕ್ (೭೮ ಎಸೆತ), ಧೋನಿ (೪೦ ಎಸೆತ) ಮತ್ತು ಕೇದಾರ್ ಜಾಧವ್ ೨೭ ಎಸೆತಗಳನ್ನೆಷ್ಟೇ ಎದುರಿಸಿದ್ದಾರೆ. ಇದೊಂದು ಅಂಕಿ ಅಂಶ ಸಾಕು ಮಧ್ಯಮ ಕ್ರಮಾಂಕದ ಆಟಗಾರರಿಗೆ ಸರಿಯಾದ ಅವಕಾಶವೇ ಸಿಕ್ಕಿಲ್ಲ ಎನ್ನಲು.

ಆಫ್ಘನ್ ಸವಾಲು

ಇದನ್ನೂ ಓದಿ : ಸಿಕ್ಕ ಅವಕಾಶ ಕಮ್ಮಿ ಎಂದ ಕನ್ನಡಿಗ ಮನೀಶ್ ಪಾಂಡೆಗೆ ಇನ್ನಷ್ಟು ನೀಡುವ ತುಡಿತ

ಸೀಮಿತ ಓವರ್‌ಗಳ ಸರಣಿಯಲ್ಲಿ ಸಾಕಷ್ಟು ಸುಧಾರಿಸಿರುವ ಆಫ್ಘನ್ನರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಅಣಿಯಾಗಿದೆ. ಬಾಂಗ್ಲಾದೇಶ ವಿರುದ್ಧ ಕೂದಲೆಳೆಯ ಅಂತರದಿಂದ ಸೋಲನುಭವಿಸಿದ ಆಫ್ಘಾನಿಸ್ತಾನದಲ್ಲಿ ಸ್ಟಾರ್ ಸ್ಪಿನ್ನರ್‌ಗಳಾದ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಅಪಾಯಕಾರಿಗಳು. ಭಾರತದ ಬ್ಯಾಟಿಂಗ್‌ಗೆ ಈ ಇಬ್ಬರೂ ಕಂಟಕರಾಗುವಷ್ಟು ಸಮರ್ಥರಿದ್ದಾರೆ.

ಇನ್ನು, ಬ್ಯಾಟಿಂಗ್‌ನಲ್ಲಿಯೂ ವಿಜೃಂಭಿಸಬಲ್ಲ ಚಾಲಾಕಿ ಆಟಗಾರ ರಶೀದ್ ಖಾನ್. ಮಧ್ಯಮ ಇಲ್ಲವೇ ಕೆಳ ಕ್ರಮಾಂಕದಲ್ಲಿ ನಿರ್ಣಾಯಕ ಘಟ್ಟದಲ್ಲಿ ತಂಡವನ್ನು ಆದರಿಸುವ ರಶೀದ್ ಖಾನ್, ಆಲ್ರೌಂಡ್ ಆಟದಿಂದ ಭಾರತಕ್ಕೆ ಮುಳುವಾಗಬಲ್ಲವರು. ಮೊಹಮದ್ ಶೆಹಜಾದ್, ಮೊಹಮದ್ ನಬಿ ನಾಯಕ ಅಫ್ಘನ್ ಕೂಡ ಉತ್ತಮ ಲಯದಲ್ಲಿದ್ದು, ಒಟ್ಟಾರೆ ಇಂಡೋ-ಆಫ್ಘನ್ ನಡುವಣದ ಈ ಪಂದ್ಯ ಕೂಡ ಕ್ರಿಕೆಟ್ ಪ್ರೇಮಿಗಳಲ್ಲಿ ಕೌತುಕ ಕೆರಳಿಸಿದೆ.

View this post on Instagram

Pakistani people are abusing/taunting Rashid cause of his celebrations after taking a wicket but forgets attitude of Shaheen Afridi and Hassan Ali, Disgusting. • Dear Pakistanis Teach some lessons to your Hassan Ali AND Shaheen Afrid. I respect all the Pakistani players but what these two did are something to keep in mind.👍 We didn't won the match but once again our Blue Tigers won the hearts❤ AND those people who were saying that Afghanistan🇦🇫 team can just win against low teams? "EHEM EHEM" let me remind you what YOUR captain Sarfaraz Said, "We were shaken today,” "to chase 250 in these conditions against the Afghanistan spinners who I think are the best in the world, you have to bat really well.” We proved that we are a strong team they way my boys played👏❤ I'm so proud of them💙 btw now don't say our Pak team is low too! Lol *jokes apart* anyways! This one is for you haters!😁👍 #Enjoy💃 @rashid.khan19 @hashmatshahidi50 we love youuu!👏❤ #AfgVsPak #Asiacup2018 🏆

A post shared by Afghan Cricketers Fans💙 (@afghan_cricketers) on

ತಂಡಗಳು ಇಂತಿವೆ

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂ ಎಸ್ ಧೋನಿ (ವಿಕೆಟ್‌ಕೀಪರ್), ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹಮದ್, ದೀಪಕ್ ಚಾಹರ್, ಸಿದ್ಧಾರ್ಥ್ ಕೌಲ್.

ಆಫ್ಘಾನಿಸ್ತಾನ: ಮೊಹಮದ್ ಶೆಹಜಾದ್, ಇಹ್ಸಾನುಲ್ಲಾ ಜಮತ್, ಜಾವೇದ್ ಅಹ್ಮದಿ, ರಹಮತ್ ಶಾ, ಅಸ್ಘರ್ ಸ್ಟಾನಿಕ್ ಜಾಯ್, ಹಶ್ಮತ್ ಶಾಹಿದಿ, ಮೊಹಮದ್ ನಬಿ, ಗುಲ್ಬದಿನ್ ನಾಯಿಬ್, ರಶೀದ್ ಖಾನ್, ನಜೀಬುಲ್ಲಾ ಜರ್ದಾನ್, ಮುಜೀಬ್ ಉರ್ ರೆಹಮಾನ್, ಅಫ್ತಾಬ್ ಆಲಮ್, ಸಮೀವುಲ್ಲಾ ಶೆನ್ವಾರಿ, ಮುನೀರ್ ಅಹಮದ್, ಸಯೆದ್ ಅಹ್ಮದ್ ಶೆರ್ಜಾದ್, ಅಶ್ರಫ್ ಮತ್ತು ಮೊಹಮದ್ ವಫಾದರ್.

ಪಂದ್ಯ ಆರಂಭ: ಸಂಜೆ ೫.೦೦ | ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More