ಕೊರಿಯಾ ಓಪನ್ ಬ್ಯಾಡ್ಮಿಂಟನ್| ಪ್ರೀಕ್ವಾರ್ಟರ್‌ಫೈನಲ್‌ಗೆ ಸೈನಾ ನೆಹ್ವಾಲ್

ಇದೇ ವರ್ಷಾಂತ್ಯದಲ್ಲಿ ಸಪ್ತಪದಿ ತುಳಿಯಲು ಸಜ್ಜಾಗಿರುವ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹದಿನಾರರ ಸುತ್ತು ತಲುಪಿದ್ದಾರೆ. ಆದರೆ, ಭಾರತದ ಮಿಕ್ಕ ಸ್ಪರ್ಧಿಗಳು ೬೦೦,೦೦೦ ಡಾಲರ್ ಮೊತ್ತದ ಟೂರ್ನಿಯಲ್ಲಿ ಮುನ್ನಡೆ ಸಾಧಿಸಲು ವಿಫಲವಾದರು

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸೈನಾ ನೆಹ್ವಾಲ್, ಕೊರಿಯಾ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಬುಧವಾರ (ಸೆ ೨೬) ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಹೈದರಾಬಾದ್ ಆಟಗಾರ್ತಿ ಸೈನಾ ನೆಹ್ವಾಲ್, ಕೊರಿಯಾ ಆಟಗಾರ್ತಿ ಕಿಮ್ ಹ್ಯೊ ಮಿನ್ ವಿರುದ್ಧ ಅಬ್ಬರದ ಆಟವಾಡಿ ೨೧-೧೨, ೨೧-೧೧ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

ವಿಶ್ವದ ಮಾಜಿ ನಂ ೧ ಆಟಗಾರ್ತಿ ಹಾಗೂ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ ಸೈನಾ ನೆಹ್ವಾಲ್, ಇತ್ತೀಚೆಗಷ್ಟೇ ಮುಕ್ತಾಯ ಕಂಡ ಏಷ್ಯಾಡ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಐದನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ಮುಂದಿನ ಸುತ್ತಿನಲ್ಲಿ ಅರ್ಹತಾ ಆಟಗಾರ್ತಿ ಕಿಮ್ ಗಾ ಯುನ್ ವಿರುದ್ಧ ಕಾದಾಡಲಿದ್ದಾರೆ. ಎರಡೂ ಗೇಮ್‌ಗಳಲ್ಲಿ ಏಕಪಕ್ಷೀಯ ಆಟವಾಡಿದ ಸೈನಾ, ಪ್ರತಿಸ್ಪರ್ಧಿ ಯಾವ ಹಂತದಲ್ಲಿಯೂ ಚೇತರಿಸಿಕೊಳ್ಳಲು ಬಿಡಲಿಲ್ಲ.

ಸೈನಾ, ತನ್ನ ಪ್ರತಿಸ್ಪರ್ಧಿಯ ಎದುರು ಅಷ್ಟೇನೂ ಪ್ರಯಾಸಪಡಲಿಲ್ಲ. ಶುರುವಿನಿಂದಲೇ ಆಕ್ರಮಣಕಾರಿ ಆಟವಾಡಿದ ಸೈನಾ, ೬-೨ ಮುನ್ನಡೆ ಪಡೆದರು. ಇನ್ನುಮ, ವಿರಾಮದ ಹೊತ್ತಿಗೆ ೧೨-೩ ಮುನ್ನಡೆ ಸಾಧಿಸಿದ ಸೈನಾ, ಇದೇ ಅಬ್ಬರದ ಆಟದೊಂದಿಗೆ ಮೊದಲ ಗೇಮ್ ಅನ್ನು ಕೈವಶ ಮಾಡಿಕೊಂಡರು. ಇನ್ನು, ದ್ವಿತೀಯ ಗೇಮ್‌ನಲ್ಲಿ ೫-೨ ಮುನ್ನಡೆ ಸಾಧಿಸಿದ ಸೈನಾ, ಕಿಮ್ ಪುಟಿದೇಳುವ ಯತ್ನವನ್ನು ಹೊಸಕಿದರು.

ಇದನ್ನೂ ಓದಿ : ಇದೇ ಡಿಸೆಂಬರ್ ತಿಂಗಳಲ್ಲಿ ಸೈನಾ ನೆಹ್ವಾಲ್, ಪರುಪಳ್ಳಿ ಕಶ್ಯಪ್ ಕಲ್ಯಾಣ 

ಆದರೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ಸವಾಲು ಮೊದಲ ಸುತ್ತಿಗೇ ಪರ್ಯವಸಾನ ಕಂಡಿತು. ಡೆನ್ಮಾರ್ಕ್ ಆಟಗಾರ ಆ್ಯಂಡರ್ಸ್ ಆಂಟನ್ಸನ್ ವಿರುದ್ಧದ ಮೂರು ಗೇಮ್‌ಗಳ ರೋಚಕ ಸೆಣಸಾಟದಲ್ಲಿ ಸಮೀರ್ ವರ್ಮಾ ೨೧-೧೫, ೧೬-೨೧, ೭-೨೧ರಿಂದ ಪರಾಭವಗೊಂಡರು. ಇನ್ನು, ವನಿತೆಯರ ಮತ್ತೊಂದು ಸಿಂಗಲ್ಸ್ ಸೆಣಸಾಟದಲ್ಲಿ ಯುವ ಆಟಗಾರ್ತಿ ವೈಷ್ಣವಿ ಅಮೆರಿಕ ಆಟಗಾರ್ತಿ ಬೀವೆನ್ ಝಾಂಗ್ ವಿರುದ್ಧ ೧೦-೨೧, ೯-೨೧ರಿಂದ ಸೋಲನುಭವಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More