ವನಿತೆಯರ ಟಿ೨೦ ವಿಶ್ವಕಪ್‌ | ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ಸಾರಥ್ಯ

ಕೆರಿಬಿಯನ್ ನಾಡಿನಲ್ಲಿ ಇದೇ ನ.೯ರಿಂದ ೨೪ರವರೆಗೆ ನಡೆಯಲಿರುವ ವಿಶ್ವ ವನಿತಾ ಟಿ೨೦ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆಲ್ರೌಂಡರ್ ಹರ್ಮನ್‌ಪ್ರೀತ್ ಕೌರ್ ನಾಯಕತ್ವ ಉಳಿಸಿಕೊಂಡಿದ್ದರೆ, ಕನ್ನಡತಿ ವೇದಾ ಕೃಷ್ಣಮೂರ್ತಿ, ಮಿಥಾಲಿ ರಾಜ್‌, ಸ್ಮೃತಿ ಮಂಧಾನರಂಥ ಪ್ರಮುಖರಿದ್ದಾರೆ

ಕಳೆದ ಬಾರಿ ಕೂದಲೆಳೆಯ ಅಂತರದಿಂದ ಪ್ರಶಸ್ತಿ ವಂಚಿತವಾದ ಭಾರತ ವನಿತಾ ಕ್ರಿಕೆಟ್ ತಂಡ, ಕೆರಿಬಿಯನ್ ನೆಲದಲ್ಲಿ ಚರಿತ್ರೆ ಬರೆಯಲು ತುಡಿಯುತ್ತಿದೆ. ಶುಕ್ರವಾರ (ಸೆ ೨೮) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವನಿತಾ ಆಯ್ಕೆಸಮಿತಿ ಮಹತ್ವದ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸಿದೆ. ಆರನೇ ಆವೃತ್ತಿಯಲ್ಲಿ ಯಶಸ್ವಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ ಹರ್ಮನ್‌ಪ್ರೀತ್ ಕೌರ್ ತಂಡ.

ಆಯ್ಕೆಮಾಡಿರುವ ತಂಡದಲ್ಲಿ ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್, ಸ್ಮೃತಿ ಮಂಧಾನ ಮತ್ತು ಕನ್ನಡತಿ ವೇದಾ ಕೃಷ್ಣಮೂರ್ತಿ ಅತ್ಯಂತ ಅನುಭವಿ ಆಟಗಾರ್ತಿಯರಾಗಿದ್ದಾರೆ. ಭಾರತ ತಂಡ ಬಿ ಗುಂಪಿನಲ್ಲಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್. ಪಾಕಿಸ್ತಾನ ಹಾಗೂ ಐರ್ಲೆಂಡ್ ತಂಡಗಳ ವಿರುದ್ಧ ಸೆಣಸಲಿದೆ.

ನವೆಂಬರ್ ೯ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ಕಾದಾಟದೊಂದಿಗೆ ೧೦ ತಂಡಗಳು ಭಾಗವಹಿಸಲಿರುವ ಈ ವನಿತಾ ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಭಾರತ ಪಂದ್ಯಗಳಷ್ಟೇ ಅಲ್ಲದೆ, ಬಹುತೇಕ ಪಂದ್ಯಗಳು ಗಯಾನದಲ್ಲಿಯೇ ನಡೆಯಲಿದೆ.

ಇದನ್ನೂ ಓದಿ : ೨೦೦ ವಿಕೆಟ್ ಇತಿಹಾಸ ಬರೆದ ಜೂಲನ್; ಮಿಥಾಲಿ ಪಡೆಗೆ ಸರಣಿ ಸಂಭ್ರಮ

ಪ್ರಕಟಿತ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಮಿಥಾಲಿ ರಾಜ್, ಜೆಮಿಮಾ ರಾಡ್ರಿಗಸ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ತಾನ್ಯ ಭಾಟಿಯಾ (ವಿಕೆಟ್‌ ಕೀಪರ್), ಪೂನಮ್ ಯಾದವ್, ರಾಧಾ ಯಾದವ್, ಅನುಜಾ ಪಾಟೀಲ್, ಏಕ್ತಾ ಬಿಸ್ತ್, ಹೇಮಲತಾ, ಮಾನ್ಸಿ ಜೋಶಿ, ಪೂಜಾ ವಸ್ತ್ರಾಕರ್ ಹಾಗೂ ಅರುಂಧತಿ ರೆಡ್ಡಿ

ಹರ್ಮನ್ ಪಡೆ ಆಡಲಿರುವ ಪಂದ್ಯಗಳ ವೇಳಾಪಟ್ಟಿ

  • ದಿನಾಂಕ: ನವೆಂಬರ್ ೯ | ಸ್ಥಳ: ಗಯಾನ | ತಂಡ: ನ್ಯೂಜಿಲೆಂಡ್
  • ದಿನಾಂಕ: ನವೆಂಬರ್ ೧೧ | ಸ್ಥಳ: ಗಯಾನ | ತಂಡ: ಪಾಕಿಸ್ತಾನ
  • ದಿನಾಂಕ: ನವೆಂಬರ್ ೧೫ | ಸ್ಥಳ: ಗಯಾನ | ತಂಡ: ಐರ್ಲೆಂಡ್
  • ದಿನಾಂಕ: ನವೆಂಬರ್ ೧೭ | ಸ್ಥಳ: ಗಯಾನ | ತಂಡ: ಆಸ್ಟ್ರೇಲಿಯಾ
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More