ರೋಚಕ ಸೆಣಸಾಟದಲ್ಲಿ ಒಕುಹಾರಗೆ ಮಣಿದ ಸೈನಾ ನೆಹ್ವಾಲ್ ನಿರ್ಗಮನ

ಜಪಾನ್ ಆಟಗಾರ್ತಿ ಒಡ್ಡಿದ ಕಠಿಣ ಪ್ರತಿರೋಧವನ್ನು ಮೆಟ್ಟಿನಿಲ್ಲಲು ವಿಫಲವಾದ ಸೈನಾ ನೆಹ್ವಾಲ್, ಕೊರಿಯಾ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್‌ನಲ್ಲಿ ದಯನೀಯ ಸೋಲುಂಡರು. ನೊಜೊಮಿ ಒಕುಹಾರ ವಿರುದ್ಧ ೨೧-೧೫, ೧೫-೨೧, ೨೦-೨೨-೧೫ರಿಂದ ಸೈನಾ ಪರಾಭವಗೊಂಡರು

ಓಪನ್‌ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಶ್ವದ ಮಾಜಿ ನಂ ೧ ಆಟಗಾರ್ತಿ ಸೈನಾ ನೆಹ್ವಾಲ್ ಗೆಲುವಿನ ಓಟಕ್ಕೆ ತೆರೆಬಿದ್ದಿದೆ. ಉಪಾಂತ್ಯಕ್ಕೆ ಲಗ್ಗೆ ಹಾಕುವ ಅವಕಾಶವನ್ನು ತಾನಾಗಿಯೇ ಕಳೆದುಕೊಂಡ ಸೈನಾ, ಒತ್ತಡಕ್ಕೆ ಸಿಲುಕಿ ಸೋಲಪ್ಪಿದರು. ಇದರೊಂದಿಗೆ ಸಿಯೋಲ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಏಕಾಂಗಿಯಾಗಿ ಭಾರತದ ಸವಾಲು ಮುಂದುವರೆಸಿದ್ದ ಆಕೆಯ ಹೋರಾಟಕ್ಕೆ ತೆರೆಬಿದ್ದಿತು. ಪಂದ್ಯದ ನಿರ್ಣಾಯಕ ಹಂತದಲ್ಲಿ ನಾಲ್ಕು ಮ್ಯಾಚ್ ಪಾಯಿಂಟ್ಸ್‌ಗಳನ್ನು ಕಲೆಹಾಕಿದ ಒಕುಹಾರ ಸೋಲಿನ ದವಡೆಯಿಂದ ಪುಟಿದೆದ್ದು ನಿಂತರು.

ಎಸ್ ಕೆ ಹ್ಯಾಂಡ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ (ಸೆ ೨೮) ನಡೆದ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಸೈನಾ ಮಣಿಸುವ ಒಕುಹಾರ ಹವಣಿಕೆ ಈ ಬಾರಿ ಕಡೇ ಘಳಿಗೆಯಲ್ಲಿ ಫಲ ಕೊಟ್ಟಿತು. ಇಲ್ಲೀವರೆಗಿನ ಒಟ್ಟಾರೆ ಮುಖಾಮುಖಿಯಲ್ಲಿ ಸೈನಾ ೬-೩ರಿಂದ ಜಪಾನ್ ಆಟಗಾರ್ತಿ ಒಕುಹಾರ ವಿರುದ್ಧ ಮೇಲುಗೈ ಸಾಧಿಸಿದ್ದರಾದರೂ, ಇತ್ತೀಚಿನ ಎರಡು ಪಂದ್ಯಗಳಲ್ಲಿ ಮಾಜಿ ವಿಶ್ವ ಚಾಂಪಿಯನ್ ಒಕುಹಾರ ಭಾರತೀಯ ಆಟಗಾರ್ತಿಯ ಎದುರು ಗೆಲುವು ಸಾಧಿಸಿದ್ದರು. ಈ ಗೆಲುವಿನೊಂದಿಗೆ ಆಕೆ ಹ್ಯಾಟ್ರಿಕ್ ಜಯ ಸಾಧಿಸಿದರು.

ಇದನ್ನೂ ಓದಿ : ಇದೇ ಡಿಸೆಂಬರ್ ತಿಂಗಳಲ್ಲಿ ಸೈನಾ ನೆಹ್ವಾಲ್, ಪರುಪಳ್ಳಿ ಕಶ್ಯಪ್ ಕಲ್ಯಾಣ 

ಹೀಗಾಗಿ, ಪ್ರಸ್ತುತ ಟೂರ್ನಿಯಲ್ಲಿ ಸೈನಾ ಕೊಂಚ ದುಗುಡದಿಂದ ಕೂಡಿದ್ದರಾದರೂ, ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಅದಕ್ಕೆ ತಕ್ಕಂತೆ ಮೊದಲ ಗೇಮ್ ಅನ್ನು ಜಯಿಸಿದ ಸೈನಾ ಎರಡನೇ ಗೇಮ್‌ನಲ್ಲಿ ಕೆಲವೊಂದು ಸ್ವಪ್ರಮಾದದಿಂದ ಪಂದ್ಯ ಮೂರನೇ ಗೇಮ್‌ಗೆ ವಿಸ್ತರಿಸಲು ಅವಕಾಶ ಕಲ್ಪಿಸಿದರು. ಮೊದಲ ಗೇಮ್‌ನಲ್ಲಿನ ಹಿನ್ನಡೆಯಿಂದ ಕಂಗೆಟ್ಟ ನೊಜೊಮಿ ಒಕುಹಾರ, ಮೂರನೇ ಗೇಮ್‌ನಲ್ಲಿ ಪ್ರಬಲವಾಗಿ ತಿರುಗಿಬಿದ್ದು ೧-೧ ಸಮಾಂತರ ಸಾಧಿಸಿದರು.

ಮೊದಲ ಎರಡೂ ಗೇಮ್ ಸಮಬಲ ಸಾಧಿಸಿದ ನಂತರದಲ್ಲಿ ಸಹಜವಾಗಿಯೇ ಇಬ್ಬರು ಆಟಗಾರ್ತಿಯರಲ್ಲೂ ಒತ್ತಡ ಮನೆಮಾಡಿತ್ತು. ನಿರ್ಣಾಯಕವಾಗಿದ್ದ ಗೇಮ್‌ನಲ್ಲಿ ಸೈನಾ ಆರಂಭದಿಂದಲೂ ಆಕ್ರಮಣಕಾರಿ ಆಟದೊಂದಿಗೇ ಸಾಗಿದರು. ಇತ್ತ, ಒಕುಹಾರ ಕೂಡ ಪಟ್ಟು ಸಡಿಲಿಸುವ ಸುಳಿವು ನೀಡಲಿಲ್ಲ. ವಾಸ್ತವವಾಗಿ, ಒಂದು ಹಂತದಲ್ಲಿ ಒಕುಹಾರ ಸೋಲಿನ ಅಂಚಿಗೆ ಸರಿದಿದ್ದರು. ಗೆಲುವಿಗೆ ಕೇವಲ ಒಂದೇ ಒಂದು ಪಾಯಿಂಟ್ಸ್ ಅಷ್ಟೇ ಸೈನಾಗೆ ಅಗತ್ಯವಿತ್ತು. ೨೦-೧೬ರಿಂದ ಜಯದ ಅಂಚಿನಲ್ಲಿದ್ದ ಸೈನಾ ಆನಂತರದಲ್ಲಿ ಕೊಂಚ ಮೈಮರೆತದ್ದರ ಫಲವಾಗಿ ಒಕುಹಾರ ಪುಟಿದೇಳುವಂತಾಯಿತು.

ಸಿಡಿಲಬ್ಬರದ ಸ್ಮ್ಯಾಶ್‌ ಒಂದನ್ನು ಸಿಡಿಸಿದ ಒಕುಹಾರ ೧೭-೨೦ಕ್ಕೆ ಅಂತರ ಹೆಚ್ಚಿಸಿದರೆ, ಬಳಿಕ ಸೈನಾ, ಬಾರಿಸಿದ ಶಟಲ್ ವೈಡ್‌ ಆಗಿ ಆಕೆ ಮತ್ತೊಂದು ಪಾಯಿಂಟ್ಸ್ ಅನ್ನು ಧಾರೆ ಎರೆದರು. ಏತನ್ಮಧ್ಯೆ, ಸೈನಾ ಬಾರಿಸಿದ ಮತ್ತೊಂದು ಶಾಟ್ ನೆಟ್‌ಗೆ ಬಡಿದು ಒಕುಹಾರ ಕ್ರಮೇಣ ಜಯದ ಸನಿಹ ಸಾಗಿದರು. ಮೂರು ಮ್ಯಾಚ್ ಪಾಯಿಂಟ್ಸ್ ಕಳೆದುಕೊಂಡ ಸೈನಾ, ಮತ್ತೊಂದನ್ನು ಕಳೆದುಕೊಳ್ಳುತ್ತಲೇ ಸೈನಾ ೨೦-೨೦ ಸಮಬಲ ಸಾಧಿಸಿದರು. ಆನಂತರದಲ್ಲಿ ಎರಡು ಪಾಯಿಂಟ್ಸ್‌ಗಳನ್ನು ಸುನಾಯಾಸವಾಗಿ ಹೆಕ್ಕಿದ ಒಕುಹಾರ, ಸೈನಾಗಿಂತಲೂ ತಾನು ಬಲಶಾಲಿ ಎಂಬುದನ್ನು ನಿರೂಪಿಸಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More