ಅಲನ್ ಡೊನಾಲ್ಡ್ ವಿಕೆಟ್ ಸಾಧನೆ ಸರಿಗಟ್ಟಿದ ಆಫ್‌ ಸ್ಪಿನ್ನರ್ ಆರ್ ಅಶ್ವಿನ್

ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಕ್ರಿಕೆಟಿಗರ ದಾಖಲೆಗೆ ಅಶ್ವಿನ್ ಸೇರ್ಪಡೆಯಾಗಿದ್ದಾರೆ. ಪೃಥ್ವಿ ಶಾ, ಕೊಹ್ಲಿ, ಜಡೇಜಾ ನಂತರ ಈಗ ಆಫ್ ಸ್ಪಿನ್ನರ್ ಅಶ್ವಿನ್ ಸರದಿ. ೩ನೇ ದಿನದಂದು ಅವರು ಡೊನಾಲ್ಡ್ ದಾಖಲೆ ಹತ್ತಿಕ್ಕಿದರು

ಭಾರತ ಕ್ರಿಕೆಟ್ ತಂಡದ ಆಫ್‌ ಸ್ಪಿನ್ನರ್ ಆರ್ ಅಶ್ವಿನ್ ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದರು. ದಕ್ಷಿಣ ಆಫ್ರಿಕಾದ ವೇಗಿ ಅಲನ್ ಡೊನಾಲ್ಡ್ (೩೨೭) ಅತಿ ಹೆಚ್ಚು ಟೆಸ್ಟ್ ವಿಕೆಟ್ ಸಾಧನೆಯನ್ನು ಅಶ್ವಿನ್ ಹತ್ತಿಕ್ಕಿದರು. ವಿಂಡೀಸ್ ವಿರುದ್ಧ ನಡೆಯುತ್ತಿರುವ ಈ ಮೊದಲ ಪಂದ್ಯಕ್ಕೂ ಮುನ್ನ ೩೨೭ ವಿಕೆಟ್ ಗಳಿಸಿದ್ದ ಅಶ್ವಿನ್, ಮೊದಲ ಇನ್ನಿಂಗ್ಸ್‌ನಲ್ಲಿ ೩೭ಕ್ಕೆ ೪ ವಿಕೆಟ್ ಗಳಿಸಿದ್ದಲ್ಲದೆ, ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೊಂದು ವಿಕೆಟ್ ಗಳಿಸುವ ಮೂಲಕ ಡೊನಾಲ್ಡ್ ದಾಖಲೆಯನ್ನು ಹತ್ತಿಕ್ಕಿದರು.

ಮೊದಲ ಇನ್ನಿಂಗ್ಸ್‌ ನಲ್ಲಿ ಅಶ್ವಿನ್, ಶಾಯಿ ಹೋಪ್ (೧೦), ರೋಸ್ಟನ್ ಚೇಸ್ (೫೩), ಶೆರ್ಮಾನ್ ಲೆವಿಸ್ (೦) ಮತ್ತು ಶಾನಾನ್ ಗೇಬ್ರಿಯಲ್ (೧) ವಿಕೆಟ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ ಇಂಡೀಸ್ ನಾಯಕ ಕಾರ್ಲೋಸ್ ಬ್ರಾಥ್‌ವೇಟ್ (೧೦) ವಿಕೆಟ್ ಪಡೆಯುತ್ತಿದ್ದಂತೆ ನ್ಯೂಜಿಲೆಂಡ್ ವೇಗಿಯ ವಿಕೆಟ್ ಸಾಧನೆಯನ್ನು ಹಿಂದಿಕ್ಕಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ವಿಶ್ವದ ೨೪ನೇ ಬೌಲರ್ ಎನಿಸಿಕೊಂಡ ಅಶ್ವಿನ್, ಭಾರತದ ಪರ ಗರಿಷ್ಠ ವಿಕೆಟ್ ಗಳಿಸಿದ ನಾಲ್ಕನೇ ಬೌಲರ್ ಎಂಬ ದಾಖಲೆಯನ್ನೂ ಬರೆದರು. ಅಂದಹಾಗೆ ಅನಿಲ್ ಕುಂಬ್ಳೆ (೬೧೯), ಕಪಿಲ್ ದೇವ್ (೪೩೪), ಹರ್ಭಜನ್ ಸಿಂಗ್ (೪೧೭) ಭಾರತದ ಪರ ಗರಿಷ್ಠ ವಿಕೆಟ್ ಗಳಿಸಿದವರು.

ಇದನ್ನೂ ಓದಿ : ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಪುಟ ಸೇರಿದ ಪೃಥ್ವಿ ಶಾ

ಗರಿಷ್ಠ ವಿಕೆಟ್ ಪಡೆದ ಸ್ಪಿನ್ನರ್‌ಗಳು

ಮುತ್ತಯ್ಯ ಮುರಳೀಧರನ್, ಶ್ರೀಲಂಕಾ : ೮೦೦ ವಿಕೆಟ್

ಶೇನ್ ವಾರ್ನ್, ಆಸ್ಟ್ರೇಲಿಯಾ : ೭೦೮ ವಿಕೆಟ್

ಅನಿಲ್ ಕುಂಬ್ಳೆ, ಭಾರತ : ೬೧೯ ವಿಕೆಟ್

ರಂಗನಾ ಹೆರಾತ್, ಶ್ರೀಲಂಕಾ : ೪೩೦ ವಿಕೆಟ್

ಹರ್ಭಜನ್ ಸಿಂಗ್, ಭಾರತ : ೪೧೭ ವಿಕೆಟ್

ಡೇನಿಯಲ್ ವೆಟೋರಿ, ನ್ಯೂಜಿಲೆಂಡ್ : ೩೬೨ ವಿಕೆಟ್

ಆರ್ ಅಶ್ವಿನ್, ಭಾರತ : ೩೩೨* ವಿಕೆಟ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More