ಭಾರತದ ಆಕ್ರಮಣಕಾರಿ ಆಟಕ್ಕೆ ಸಿಲುಕಿದ ವಿಂಡೀಸ್‌ಗೆ ಇನ್ನಿಂಗ್ಸ್ ಸೋಲು

ಸಂಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಭಾರತ ತಂಡ ಆಲ್ರೌಂಡ್ ಆಟದಿಂದ ವಿಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿಯೇ ದಾಖಲೆ ರನ್ ಅಂತರದಲ್ಲಿ ಜಯ ಪಡೆಯಿತು. ಕೇವಲ ಮೂರೇ ದಿನದಲ್ಲಿ ಮುಕ್ತಾಯ ಕಂಡ ಪಂದ್ಯದಲ್ಲಿ ಕೆರಿಬಿಯನ್ನರು ದಯನೀಯ ಸೋಲನುಭವಿಸಿದರು

ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿದ್ದ ವೆಸ್ಟ್‌ ಇಂಡೀಸ್ ನಿರೀಕ್ಷೆಯಂತೆಯೇ ಭಾರತದ ಎದುರು ದಯನೀಯ ಸೋಲುಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಚೈನಾಮನ್ ಕುಲದೀಪ್ ಯಾದವ್ (೫೭ಕ್ಕೆ ೫) ಸ್ಪಿನ್ ಜಾದೂಗೆ ಸಿಲುಕಿದ ವೆಸ್ಟ್‌ ಇಂಡೀಸ್, ಇನ್ನಿಂಗ್ಸ್ ಮತ್ತು ೨೭೨ ರನ್ ಅಂತರದಿಂದ ಸೋಲಪ್ಪಿತು. ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ ಭಾರತ ತಂಡ ಗೆಲುವಿನ ನಗೆಬೀರಿತು. ಆಫ್ಘಾನಿಸ್ತಾನ ವಿರುದ್ಧ ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ೨೬೨ ರನ್ ಮತ್ತು ಇನ್ನಿಂಗ್ಸ್ ಗೆಲುವು ಕಂಡಿದ್ದ ಭಾರತ ತಂಡ, ಆನಂತರದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಿಸಿದ ಬಹುದೊಡ್ಡ ಗೆಲುವಿದು. ಎರಡನೇ ಪಂದ್ಯ ಅಕ್ಟೋಬರ್ ೧೨ರಿಂದ ಹೈದರಾಬಾದ್‌ನಲ್ಲಿ ಶುರುವಾಗಲಿದೆ,

೯ ವಿಕೆಟ್‌ಗೆ ೬೪೯ ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಭಾರತದ ವಿರುದ್ಧ ಎರಡನೇ ದಿನಾಂತ್ಯಕ್ಕೇ ವಿಂಡೀಸ್ ಪತನದ ಹಾದಿ ನಿಶ್ಚಿತವಾಗಿತ್ತು. ೯೪ ರನ್‌ಗಳಿಗೆ ೬ ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್, ಪಂದ್ಯದ ಮೂರನೇ ದಿನವಾದ ಶನಿವಾರದಂದು (ಅ.೬) ಆಟ ಮುಂದುವರಿಸಿ, ೪೮ ಓವರ್‌ಗಳಲ್ಲಿ ೧೮೧ ರನ್‌ಗಳಿಗೆ ಆಲೌಟ್ ಆಯಿತು. ರೋಸ್ಟನ್ ಚೇಸ್ (೫೩: ೭೯ ಎಸೆತ, ೮ ಬೌಂಡರಿ), ಕಿಮೊ ಪೌಲ್ (೪೭: ೪೯ ಎಸೆತ, ೭ ಬೌಂಡರಿ, ೨ ಸಿಕ್ಸರ್) ಕೊಂಚ ಪ್ರತಿರೋಧ ತೋರಿದರೂ, ಫಾಲೋಆನ್ ಸುಳಿಯಿಂದ ವಿಂಡೀಸ್ ಮೇಲೇಳಲಿಲ್ಲ. ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದ ರವೀಂದ್ರ ಜಡೇಜಾ, ವಿಂಡೀಸ್‌ನ ಕೊನೆಯ ಆಟಗಾರ ಶಾನೋನ್ ಗೇಬ್ರಿಯಲ್ ವಿಕೆಟ್ ಪಡೆಯುತ್ತಿದ್ದಂತೆ ವಿಂಡೀಸ್ ಮೊದಲ ಇನ್ನಿಂಗ್ಸ್‌ ಪತನ ಕಂಡಿತು.

ಕುಲದೀಪ್ ಅಪರೂಪದ ದಾಖಲೆ

ಇದನ್ನೂ ಓದಿ : ಭಾರತದ ತ್ರಿವಳಿ ಶತಕದ ಜೊತೆಗೆ ಶಿಸ್ತುಬದ್ಧ ಬೌಲಿಂಗ್‌ಗೆ ಬೆದರಿದ ವಿಂಡೀಸ್

ಎರಡನೇ ಇನ್ನಿಂಗ್ಸ್‌ಗೆ ಮುಂದಾದ ವಿಂಡೀಸ್, ಆರ್ ಅಶ್ವಿನ್ (೩೭ಕ್ಕೆ ೪) ಕೈಚಳಕದಲ್ಲಿ ನಿಯಮಿತವಾಗಿ ವಿಕೆಟ್‌ ಕಳೆದುಕೊಳ್ಳುತ್ತ ಸಾಗಿತಲ್ಲದೆ, ಅಂತಿಮವಾಗಿ ೪೬೮ ರನ್ ಹಿನ್ನಡೆಯೊಂದಿಗೆ ಎರಡನೇ ಹೋರಾಟಕ್ಕೆ ಮುಂದಾದ ವಿಂಡೀಸ್ ಮತ್ತೊಮ್ಮೆ ಸ್ಪಿನ್ ಸುಳಿಯಲ್ಲಿ ಸಿಲುಕಿತು. ಚೈನಾಮನ್ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಚಮತ್ಕಾರಿ ಸ್ಪಿನ್‌ಗೆ ತರಗೆಲೆಯಾದ ವಿಂಡೀಸ್, ಒತ್ತಡಕ್ಕೆ ಸಿಲುಕಿತು. ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಕೀರನ್ ಪೊವೆಲ್ (೮೩: ೯೩ ಎಸೆತ, ೮ ಬೌಂಡರಿ, ೪ ಸಿಕ್ಸರ್) ಸೇರಿದಂತೆ ಐದು ವಿಕೆಟ್‌ ಗಳಿಸಿದ ಕುಲದೀಪ್, ಮೂರೂ ಪ್ರಕಾರದ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆದ ಪ್ರಥಮ ಬೌಲರ್ ಎನಿಸಿಕೊಂಡರು.

ಮೇಲಿನ ಮತ್ತು ಕೆಳ ಕ್ರಮಾಂಕಿತ ಆಟಗಾರರನ್ನು ಕಾಡಿದ ಕುಲದೀಪ್ ಯಾದವ್, ವಿಂಡೀಸ್ ಚೇತರಿಸಿಕೊಳ್ಳಲು ಬಿಡಲೇ ಇಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ರೋಸ್ಟನ್ ಚೇಸ್ (೨೦) ಕೂಡ ಕುಲದೀಪ್‌ಗೆ ಬಲಿಯಾದರು. ಒಟ್ಟಾರೆಯಾಗಿ, ಪಂದ್ಯದ ಮೊದಲ ಎರಡು ದಿನಗಳಲ್ಲೇ ಭಾರತ, ಗೆಲುವು ಸಾಧಿಸುವುದು ಖಾತ್ರಿಯಾಗಿತ್ತು. ಹದಿನೆಂಟರ ಹರೆಯದ ಪೃಥ್ವಿ ಶಾ ಜೊತೆಗೆ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರ ತ್ರಿವಳಿ ಶತಕದಲ್ಲಿ ನಲುಗಿದ ವಿಂಡೀಸ್, ಬಳಿಕ ಸ್ಪಿನ್ ಸುಳಿಗೆ ಸಿಲುಕಿ ಸೋಲಪ್ಪಿತು.

View this post on Instagram

#Repost @indiancricketteam (@get_repost) ・・・ 5 and counting for @kuldeep_18 😎👏🏻💥 #TeamIndia #INDvWI#kuldeepyadav five wicket haul for kuldeep @rishabpant #rishabhpantWon the cup #finals #asiacupfinals2018 #indvsban #winner #jaspritbumrah #bumrah😍 #dhonism @indiancricketteam #fielding #rayadu #ipl #indiavspak #CricketMeriJaan #asiacup2018 #kingkohli #rohitians #practice #indiavspak #indiavshongkong #CricketMeriJaan #asiacup2018 #kingkohli #rohitians #practice #indiavspak #indiavshongkong #CricketMeriJaan #asiacup2018 #kingkohli #rohitians #practice #indiavspak #indiavshongkong #CricketMeriJaan #asiacup2018 #kingkohli #rohitians #practice #indiavspak #indiavshongkong #followusnow #follow4followback #likesforlikesback #followers #zahir #mahi #dhonism😍 #mahi #khaleelahmed

A post shared by sports tak (@sports_takofficial) on

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್: ೧೪೯.೫ ಓವರ್‌ಗಳಲ್ಲಿ ೬೪೯/೯ (ಡಿ) (ಪೃಥ್ವಿ ಶಾ ೧೩೪, ಚೇತೇಶ್ವರ ಪೂಜಾರ ೮೬, ವಿರಾಟ್ ಕೊಹ್ಲಿ ೧೩೯, ರಿಷಭ್ ಪಂತ್ ೯೨, ರವೀಂದ್ರ ಜಡೇಜಾ ೧೦೦*; ಆರ್ ಅಶ್ವಿನ್ ೨೧೭ಕ್ಕೆ ೪) ವಿಂಡೀಸ್: ೧೮೧ ಮತ್ತು ೧೯೬ (ಕೀರನ್ ಪೊವೆಲ್ ೮೩, ರೋಸ್ಟನ್ ಚೇಸ್ ೨೦; ಕುಲದೀಪ್ ಯಾದವ್ ೫೭ಕ್ಕೆ ೫); ಫಲಿತಾಂಶ: ಭಾರತಕ್ಕೆ ಇನ್ನಿಂಗ್ಸ್ ಹಾಗೂ ೨೭೨ ರನ್ ಗೆಲುವು ಪಂದ್ಯಶ್ರೇಷ್ಠ: ಪೃಥ್ವಿ ಶಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More