ಚೀನಾ ಓಪನ್ ಟೆನಿಸ್ | ಒಸಾಕಗೆ ಆಘಾತ ನೀಡಿದ ಸೆವಾಸ್ಟೋವಾ ಫೈನಲ್‌ಗೆ

ಯುಎಸ್ ಓಪನ್ ಚಾಂಪಿಯನ್ ನವೊಮಿ ಒಸಾಕ ಸವಾಲು ಚೀನಾ ಓಪನ್‌ನಲ್ಲಿ ಪರಿಸಮಾಪ್ತಿ ಕಂಡಿದೆ. ಜಯದ ನಾಗಾಲೋಟದಲ್ಲಿ ಸಾಗಿದ್ದ ಜಪಾನ್ ಆಟಗಾರ್ತಿ ಒಸಾಕಗೆ ಸೆಮಿಫೈನಲ್‌ನಲ್ಲಿ ಸೋಲುಣಿಸಿದ ಲಾಟ್ವಿಯಾ ಆಟಗಾರ್ತಿ ಅನಸ್ಟಾಸಿಯಾ ಸೆವಾಸ್ಟೋವಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದರು

ವೃತ್ತಿಬದುಕಿನ ಮತ್ತೊಂದು ಬಹುದೊಡ್ಡ ಗೆಲುವು ದಾಖಲಿಸಿದ ಅನಸ್ಟಾಸಿಯಾ ಸೆವಾಸ್ಟೊವಾ, ಡಬ್ಲ್ಯೂಟಿಎ ಪ್ರಮುಖ ಟೂರ್ನಿಯೊಂದರಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತು ತಲುಪಿದ ಸಾಧನೆ ಮಾಡಿದರು. ವಿಶ್ವದ ಎಂಟನೇ ಶ್ರೇಯಾಂಕಿತ ಆಟಗಾರ್ತಿ ನವೊಮಿ ಒಸಾಕ ಎದುರು ಆಕರ್ಷಕ ಆಟವಾಡಿದ ಲಾಟ್ವಿಯಾದ ಸೆವಾಸ್ಟೋವಾ ೬-೪, ೬-೪ ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಶ್ರೇಯಾಂಕರಹಿತ ಆಟಗಾರ್ತಿ ಸೆವಾಸ್ಟೋವಾ ಎದುರು ಒಸಾಕ ಫೇವರಿಟ್ ಎನಿಸಿದ್ದರೂ, ಶನಿವಾರ (ಅ. ೬) ನಡೆದ ಅಂತಿಮ ಸುತ್ತಿನಲ್ಲಿ ದಿಟ್ಟತೆಯಿಂದ ಸೆಣಸಿದರು. ಒಂದು ತಾಸು ೩೧ ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಒಸಾಕ ಲಾಟ್ವಿಯಾ ಆಟಗಾರ್ತಿಯ ಎದುರು ಮನಮೋಹಕ ಗೆಲುವು ಸಾಧಿಸಿದರು.

ಪ್ರಸಕ್ತ ಋತುವಿನ ಪ್ರಮುಖ ಮೂರು ಟೂರ್ನಿಗಳಲ್ಲಿ ಫೈನಲ್ ತಲುಪಿದ ಮೊಟ್ಟಮೊದಲ ಆಟಗಾರ್ತಿ ಎನಿಸಿಕೊಳ್ಳುವ ಅವಕಾಶವನ್ನು ಒಸಾಕ ಕೇವಲ ಒಂದು ಪಂದ್ಯದ ಅಂತರದಿಂದ ಕೈಚೆಲ್ಲಿದರು. ಇನ್ನು, ಒಸಾಕ ವಿರುದ್ಧ ಸೆವಾಸ್ಟೋವಾ ಈ ಋತುವಿನಲ್ಲಿ ಎರಡನೇ ಗೆಲುವು ಸಾಧಿಸಿದ್ದು ವಿಶೇಷ. ಫೆಬ್ರವರಿಯಲ್ಲಿ ನಡೆದ ದೋಹಾ ಓಪನ್‌ನಲ್ಲಿ ಜಪಾನ್ ಆಟಗಾರ್ತಿಯನ್ನು ೬-೪, ೬-೧ ನೇರ ಸೆಟ್‌ಗಳಲ್ಲಿ ಸೆವಾಸ್ಟೋವಾ ಮಣಿಸಿದ್ದರು.

ಇದನ್ನೂ ಓದಿ : ಚೀನಾ ಓಪನ್ ಟೆನಿಸ್ | ರೋಚಕ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಒಸಾಕ

ಶುರುವಿನಿಂದಲೂ ಆಕ್ರಮಣಕಾರಿ ಆಟವಾಡಿದ ಸೆವಾಸ್ಟೋವಾ ಎದುರು ಒಸಾಕ ಕೂಡ ತಿರುಗಿಬಿದ್ದರು. ಇದರ ಪರಿಣಾಮ ೩-೩ ಸಮಬಲ ಸಾಧಿಸಿದ ಇಬ್ಬರೂ ಆಟಗಾರ್ತಿಯರ ಪೈಕಿ ಸೆವಾಸ್ಟೋವಾ ಆನಂತರದಲ್ಲಿ ಕೇವಲ ಒಂದು ಗೇಮ್ ಮಾತ್ರ ಬಿಟ್ಟುಕೊಟ್ಟು ಮೊದಲ ಸೆಟ್ ಅನ್ನು ವಶಕ್ಕೆ ಪಡೆದರು. ಮೊದಲ ಸೆಟ್ ಗೆದ್ದು ಸುಲಭ ಜಯದ ನಿರೀಕ್ಷೆಯಲ್ಲಿದ್ದ ಒಸಾಕಗೆ ಈ ಸೆಟ್‌ ಹಿನ್ನಡೆ ತೀವ್ರ ನಿರಾಸೆ ತರಿಸಿತು.

ಇನ್ನು, ಎರಡನೇ ಸೆಟ್‌ ವೇಳೆ ಕೆಳ ಬೆನ್ನುನೋವಿಗಾಗಿ ಚಿಕಿತ್ಸೆ ಪಡೆದ ಒಸಾಕ, ಎರಡನೇ ಸರ್ವ್ ವೇಳೆ ಇನ್ನಷ್ಟು ಚಡಪಡಿಸಿದರು. ಕೇವಲ ಶೇ. ೩೫ರಷ್ಟು ಪಾಯಿಂಟ್ಸ್ ಮಾತ್ರ ಕಲೆಹಾಕಿದ ಒಸಾಕ, ಸೋಲಿನತ್ತ ಸಾಗಿದ್ದು ನಿಚ್ಚಳವಾಗಿತ್ತು. ಆಟ ಸಾಗುತ್ತಿದ್ದಂತೆ ೨೦ರ ಹರೆಯದ ಒಸಾಕ ಡಬಲ್ ಫಾಲ್ಟ್‌ನೊಂದಿಗೆ ಲಾಟ್ವಿಯಾ ಆಟಗಾರ್ತಿಗೆ ಇನ್ನಷ್ಟು ಮುನ್ನಡೆ ತಂದಿತ್ತರು. ಉತ್ತಮ ಲಯದಲ್ಲಿದ್ದ ಸೆವಾಸ್ಟೋವಾ ಆಕ್ರಮಣಕಾರಿ ಸರ್ವ್‌ ಮತ್ತು ಕರಾರುವಾಕ್ ಶಾಟ್‌ಗಳಿಂದ ಒಸಾಕ ಗೆಲುವಿನ ಹಾದಿಯನ್ನು ತಪ್ಪಿಸಿದರು.

ವೋಜ್ನಿಯಾಕಿ ಜತೆ ಸೆಣಸಾಟ?

ಒಸಾಕ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸೆವಾಸ್ಟೋವಾ ಭಾನುವಾರ (ಅ ೭) ನಡೆಯಲಿರುವ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕರೋಲಿನ್ ವೋಜ್ನಿಯಾಕಿ ವಿರುದ್ಧ ಸೆಣಸುವ ಸಾಧ್ಯತೆ ಇತ್ತು. ವನಿತೆಯರ ಎರಡನೇ ಸಿಂಗಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ ಚೀನಿ ಆಟಗಾರ್ತಿ ಕಿಯಾಂಗ್ ವಾಂಗ್ ವಿರುದ್ಧದ ಸೆಣಸಾಟದಲ್ಲಿ ಆಕ್ರಮಣಕಾರಿ ಆಟವಾಡಿದ ವೋಜ್ನಿಯಾಕಿ ಮೊದಲ ಸೆಟ್ ಅನ್ನು ೬-೧ರಿಂದ ಗೆದ್ದುಕೊಂಡರು. ಇನ್ನು, ಎರಡನೇ ಸೆಟ್‌ನಲ್ಲಿಯೂ ೧-೦ ಮುನ್ನಡೆ ಪಡೆದಿದ್ದ ವೋಜ್ನಿಯಾಕಿ ಫೈನಲ್ ತಲುಪುವ ಹಾದಿಯನ್ನು ಸುಗಮ ಮಾಡಿಕೊಂಡಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More