ಜಪಾನ್ ರೇಸ್‌ನಲ್ಲೂ ಮಿಂಚು ಹರಿಸಿದ ಹ್ಯಾಮಿಲ್ಟನ್‌ಗೆ ಮತ್ತೊಂದು ಗೆಲುವು

೨೦೧೮ನೇ ಸಾಲಿನ ಫಾರ್ಮುಲಾ ಒನ್ ಪ್ರಶಸ್ತಿ ಫೇವರಿಟ್‌ಗಳಲ್ಲಿ ಒಬ್ಬರಾಗಿದ್ದ ಜರ್ಮನ್ ಚಾಲಕ ಸೆಬಾಸ್ಟಿಯನ್ ವೆಟಲ್ (+೬೯.೯೭೩ ಸೆ.) ಆರನೇ ಸ್ಥಾನಕ್ಕೆ ಕುಸಿದರು. ಗೆಲುವಿನ ಮೇಲೆ ಗೆಲುವು ಸಾಧಿಸುತ್ತಿರುವ ಲೂಯಿಸ್ ಹ್ಯಾಮಿಲ್ಟನ್, ಜಪಾನ್ ಜಯದೊಂದಿಗೆ ವಿಶ್ವ ಕಿರೀಟದತ್ತ ದಾಪುಗಾಲಿಟ್ಟಿದ್ದಾರೆ

ಕಳೆದ ವಾರ ರಷ್ಯನ್ ಗ್ರ್ಯಾನ್ ಪ್ರೀ ಗೆದ್ದು ಬೀಗಿದ್ದ ಫಾರ್ಮುಲಾ ಒನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಮತ್ತೊಂದು ಗೆಲುವಿನ ದಾಖಲೆ ಬರೆದರು. ಜಪಾನ್ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಮಿಂಚು ಹರಿಸಿದ ಹ್ಯಾಮಿಲ್ಟನ್ ಮೊದಲಿಗರಾಗಿ, ಆ ಮೂಲಕ ವಿಶ್ವ ಚಾಂಪಿಯನ್‌ ಶಿಪ್ ಉಳಿಸಿಕೊಳ್ಳುವುದನ್ನು ಇನ್ನಷ್ಟು ಖಾತ್ರಿಪಡಿಸಿದರು.

ಭಾನುವಾರ (ಅ. ೭) ಸುಜುಕಾ ಸರ್ಕೀಟ್‌ನಲ್ಲಿ ಭಾನುವಾರ ನಡೆದ ೫೩ ಲ್ಯಾಪ್‌ಗಳ ರೇಸ್‌ನಲ್ಲಿ ಮೊದಲ ಸ್ಥಾನದಿಂದ ರೇಸ್ ಆರಂಭಿಸಿದ ಈ ಬ್ರಟನ್ ಚಾಲಕ ೧ ಗಂಟೆ, ೨೭ ನಿಮಿಷ, ೧೭.೦೬೨ ಸೆ.ಗಳಲ್ಲಿ ಗುರಿಮುಟ್ಟಿದರು. ೨೦೧೮ನೇ ಸಾಲಿನ ಒಟ್ಟಾರೆ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಪ್ರತಿಸ್ಪರ್ಧಿ ಸೆಬಾಸ್ಟಿಯನ್ ವೆಟಲ್ ಅವರಿಗಿಂತ ೬೭ ಪಾಯಿಂಟ್ಸ್ ಮುನ್ನಡೆ ಕಾಯ್ದುಕೊಂಡರು.

ಐದನೇ ಬಾರಿಗೆ ಫಾರ್ಮುಲಾ ನಂ ೧ ವಿಶ್ವ ಚಾಂಪಿಯನ್ ಆಗುವತ್ತ ಹ್ಯಾಮಿಲ್ಟನ್ ಮತ್ತೊಂದು ಹೆಜ್ಜೆ ಮುಂದಿರಿಸಿದರು. ಅಂದಹಾಗೆ, ಭಾನುವಾರದ ರೇಸ್‌ನಲ್ಲಿ ಇನ್ನುಳಿದಂತೆ ಮರ್ಸಿಡೆಸ್ ತಂಡದವರೇ ಆದ ವಲ್ಟೇರಿ ಬೋಟಾಸ್ (+೧೨.೯೧೯ ಸೆ.) ದ್ವಿತೀಯ ಸ್ಥಾನ ಗಳಿಸಿದರು. ಅಂತೆಯೇ, ರೆಡ್ ಬುಲ್ ಚಾಲಕ ಮ್ಯಾಕ್ಸ್ ವೆರ್ಸ್ಟಪ್ಟನ್ (+೪೧೪.೨೯೫ ಸೆ.) ಮೂರನೇ ಸ್ಥಾನ ಗಳಿಸಿದರು.

ಇದನ್ನೂ ಓದಿ : ಫಾರ್ಮುಲಾ ಪ್ರಶಸ್ತಿ ರೇಸ್‌ನಲ್ಲಿ ವೆಟಲ್ ಹಿಂದಿಕ್ಕಿ ಮುನ್ನಡೆ ಸಾಧಿಸಿದ ಹ್ಯಾಮಿಲ್ಟನ್

ಫಾರ್ಮುಲಾ ಒನ್ ರೇಸ್‌ನಲ್ಲಿ ಅತಿಹೆಚ್ಚು ಬಾರಿ ವಿಶ್ವ ಚಾಂಪಿಯನ್ ಆದ ಜರ್ಮನಿಯ ಮೈಕಲ್ ಶುಮಾಕರ್ ದಾಖಲೆ ಹತ್ತಿಕ್ಕಲು ಹ್ಯಾಮಿಲ್ಟನ್ ಗುರಿ ಹೊತ್ತಂತಿದ್ದಾರೆ. ಫ್ರಾನ್ಸ್‌ನ ಪರ್ವತ ಶ್ರೇಣಿಯಲ್ಲಿ ಸ್ಕೀಯಿಂಗ್ ಸಾಹಸದ ವೇಳೆ ಅಪಘಾತಕ್ಕೆ ಗುರಿಯಾಗಿ ತಲೆಗೆ ಮಾರಣಾಂತಿಕ ಪೆಟ್ಟುತಿಂದ ಹ್ಯಾಮಿಲ್ಟನ್ ಸ್ಮರಣಶಕ್ತಿ ಕಳೆದುಕೊಂಡಿದ್ದಾರೆ. ಏಳು ಬಾರಿ ವಿಶ್ವ ಫಾರ್ಮುಲಾ ಒನ್ ಚಾಂಪಿಯನ್ ಎನಿಸಿದ ಶುಮಾಕರ್ ನಂತರದಲ್ಲಿ ಹ್ಯಾಮಿಲ್ಟನ್ ಫಾರ್ಮುಲಾ ಒನ್ ರೇಸ್‌ನಲ್ಲಿ ಅತಿಹೆಚ್ಚು ಬಾರಿ ವಿಶ್ವ ಚಾಂಪಿಯನ್ ಆಗುವತ್ತ ದಾಪುಗಾಲಿಟ್ಟಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More