ನಾನು ‘ಡಾನ್ ಆಫ್ ಕ್ರಿಕೆಟ್’ ಎಂದ ಶೋಯೆಬ್ ಅಖ್ತರ್‌ ಕಿಚಾಯಿಸಿದ ಟ್ವೀಟಿಗರು

ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ತನ್ನನ್ನು ತಾನು ‘ಡಾನ್ ಆಫ್ ಕ್ರಿಕೆಟ್’ ಎಂದು ಕರೆದುಕೊಂಡದ್ದಕ್ಕೆ ಟ್ವಿಟರ್‌ನಲ್ಲಿ ಕುಚೋದ್ಯಕ್ಕೆ ಒಳಗಾಗಿದ್ದಾರೆ. ೨೦೧೩ರ ಐಸಿಸಿ ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಅಖ್ತರ್ ಬೌಲಿಂಗ್‌ ಅನ್ನು ದಂಡಿಸಿದ ಪರಿ ಮರೆತುಹೋಯಿತೇ ಎಂದು ಪ್ರಶ್ನಿಸಿದ್ದಾರೆ

ಪಾಕಿಸ್ತಾನ ಮಾತ್ರವಲ್ಲ, ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಶೋಯೆಬ್ ಅಖ್ತರ್ ಒಬ್ಬರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ. ವೇಗದ ಬೌಲಿಂಗ್‌ನಿಂದ ವಿಶ್ವ ಬ್ಯಾಟ್ಸ್‌ಮನ್‌ಗಳ ಪಾಲಿಗೆ ದುಃಸ್ವಪ್ನವಾಗಿದ್ದ ಶೋಯೆಬ್, ಕೆಲವೊಮ್ಮೆ ಅತಿರೇಕದ ವರ್ತನೆ ಮತ್ತು ಅತಿರೇಕದ ಮಾತುಗಳಿಂದ ಟೀಕೆಗೂ ಗುರಿಯಾಗಿದ್ದುಂಟು. ಅಂಥದ್ದೇ ಮಾತಿನಿಂದ ಅವರೀಗ ಟೀಕೆಗೆ ಗುರಿಯಾಗಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಶನಿವಾರ (ಅ.೭) ಅಖ್ತರ್ ತನ್ನನ್ನು ತಾನು ‘ಡಾನ್ ಆಫ್ ಕ್ರಿಕೆಟ್’ ಎಂದು ಬಣ್ಣಿಸಿಕೊಂಡಿದ್ದರು. ತನ್ನ ಬೌಲಿಂಗ್‌ಗೆ ಬೆದರಿ ವಿಕೆಟ್ ಕಳೆದುಕೊಂಡ ಬ್ಯಾಟ್ಸ್‌ಮನ್‌ಗಳ ಫೋಟೊಗಳಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಲ್ಲದೆ, “ನನ್ನನ್ನು ಡಾನ್ ಆಫ್ ಕ್ರಿಕೆಟ್’ ಎಂದು ಅವರು ಕರೆದರೂ, ನಾನು ಎಂದೂ ಜನತೆಯನ್ನು ನೋಯಿಸಲು ಇಚ್ಛಿಸಿದವನಲ್ಲ. ಆದರೆ, ನಾನು ಅಂಗಣದಲ್ಲಿ ಇದ್ದ ಪ್ರತಿಯೊಂದು ಸಂದರ್ಭದಲ್ಲೂ ನನ್ನ ದೇಶ, ಜನತೆ ಹಾಗೂ ಜಗತ್ತಿನ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ನೀಡಲು ಬಯಸುತ್ತಿದ್ದೆ,’’ ಎಂದು ಅಖ್ತರ್ ಟ್ವೀಟಿಸಿದ್ದರು.

ಶೋಯೆಬ್ ಟ್ವೀಟ್‌ಗೆ ಒಡನೆಯೇ ಜನತೆ ಪ್ರತಿ ಟ್ವೀಟ್ ಹಾಕಲು ಶುರುಮಾಡಿದರು. ಜೊತೆಗೆ, ದಕ್ಷಿಣ ಆಫ್ರಿಕಾದಲ್ಲಿ ನಡೆದ ೨೦೦೩ರ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ೭೫ ಎಸೆತಗಳಲ್ಲಿ ೯೮ ರನ್ ಗಳಿಸಿದ್ದನ್ನು ಹಾಗೂ ಪಂದ್ಯದಲ್ಲಿ ಭಾರತ ತಂಡ ೬ ವಿಕೆಟ್ ಗೆಲುವು ಸಾಧಿಸಿದ್ದನ್ನು ನೆನಪಿಸಿದರು.

ಇದನ್ನೂ ಓದಿ : ಅದು ಕೊಹ್ಲಿಯಿಂದಲ್ಲದೆ ಮಿಕ್ಕವರಿಂದ ಸಾಧ್ಯವಿಲ್ಲ ಬಿಡಿ ಎಂದ ಅಖ್ತರ್!

ಅಖ್ತರ್ ೧೯೯೭ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರೆ, ೧೯೯೮ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದೊಂದಿಗೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ೨೦೦೩ರ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶೋಯೆಬ್ ಗಂಟೆಗೆ ೧೬೧.೩ ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದು ಈಗಲೂ ವಿಶ್ವದಾಖಲೆಯಾಗಿ ಉಳಿದಿದ್ದು, ಇಲ್ಲೀವರೆಗೆ ಯಾವ ಬೌಲರ್‌ಗೂ ಈ ದಾಖಲೆಯನ್ನು ದಾಟಲು ಸಾಧ್ಯವಾಗಿಲ್ಲ.

ಬಲಗೈ ವೇಗಿಯಾಗಿದ್ದ ಅಖ್ತರ್, ಟೆಸ್ಟ್ ಕ್ರಿಕೆಟ್‌ನಲ್ಲಿ ೧೧ ರನ್‌ಗಳಿಗೆ ಆರು ವಿಕೆಟ್ ಶ್ರೇಷ್ಠ ಸಾಧನೆಯೊಂದಿಗೆ ಒಟ್ಟು ೧೭೮ ವಿಕೆಟ್ ಗಳಿಸಿದ್ದಾರೆ. ಇನ್ನು, ಏಕದಿನ ಪಂದ್ಯಗಳಲ್ಲಿ ೨೪೭ ವಿಕೆಟ್ ಗಳಿಸಿದ್ದಾರೆ. ಪಾಕ್ ಪರ ಹದಿನೈದು ಟಿ೨೦ ಪಂದ್ಯಗಳನ್ನೂ ಆಡಿರುವ ಅಖ್ತರ್, ೧೯ ವಿಕೆಟ್ ಪಡೆದಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More